ಗರಿಷ್ಠ ಮೈಲೇಜ್‌ನೊಂದಿಗೆ ತೀರಾ ಕಡಿಮೆ ಬೆಲೆಯಲ್ಲಿ ಸಿಗುವ ಪ್ರಮುಖ ಬೈಕ್‌ಗಳಿವು!
ಭಾರತದಲ್ಲಿ ಪ್ರತಿಯೊಬ್ಬರು ಹೆಚ್ಚಿನ ಮೈಲೇಜ್‌ನೊಂದಿಗೆ ಅತ್ಯಂತ ಕೈಗೆಟುಕುವ ಬೆಲೆಯ ಬೈಕ್‌ಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ಅದಕ್ಕೆ ತಕ್ಕಂತೆ ವಿವಿಧ ಮೋಟಾರ್‌ಸೈಕಲ್‌ಗಳನ್ನು ಪ್ರಮುಖ ಕಂಪನಿಗಳು ಬಿಡುಗಡೆ ಮಾಡುತ್ತಿರುತ್ತವೆ. ಇಲ್ಲಿ ರೂ.70,000ದೊಳಗೆ ಖರೀದಿಗೆ ಲಭ್ಯವಿರುವ ಹೀರೋ, ಟಿವಿಎಸ್ ಹಾಗೂ ಬಜಾಜ್ ಕಂಪನಿಯ ಟಾಪ್ 5 ಬೈಕ್‌ಗಳ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡಿದ್ದೇವೆ.
ದೇಶದ ನಂಬರ್ 1 ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಹೀರೋ ಮೋಟೊಕಾರ್ಪ್, 2013ರಲ್ಲಿ ಮೊದಲ ಬಾರಿಗೆ HF ಡಿಲಕ್ಸ್ ಬೈಕ್‌ನ್ನು ಬಿಡುಗಡೆ ಮಾಡಿತ್ತು. ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಪ್ರಸ್ತುತ ರೂ.55,021 (ಎಕ್ಸ್ ಶೋರೂಂ) ದರವನ್ನು ಹೊಂದಿದೆ. ಇದರ 97.2ಸಿಸಿ ಎಂಜಿನ್, 7.8 bhp ಗರಿಷ್ಠ ಪವರ್, 8.05 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 4 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.

ಈ ಹೀರೊ HF ಡಿಲಕ್ಸ್ ಬೈಕ್, ಬರೋಬ್ಬರಿ 112 ಕೆಜಿ ತೂಕವಿದ್ದು, 9.6 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಪಡೆದಿದೆ. 65 kmpl ಮೈಲೇಜ್ ನೀಡಲಿದೆ. ಹಲವು ಆಕರ್ಷಕ ಬಣ್ಣಗಳ ಆಯ್ಕೆ ಹಾಗೂ ನಾಲ್ಕು ರೂಪಾಂತರಗಳಲ್ಲಿ ಗ್ರಾಹಕರಿಗೆ ಲಭ್ಯವಿದ್ದು, ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್, ರೇರ್ ಡ್ಯುಯಲ್ ಸ್ಪ್ರಿಂಗ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಅಲ್ಲದೆ, ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್ ಅನ್ನು ಪಡೆದಿದೆ.
ಬಜಾಜ್ ಕಂಪನಿಯ 'CT 110' ಕೈಗೆಟುಕುವ ರೂ.59,041 (ಎಕ್ಸ್ ಶೋರೂಂ) ದರದಲ್ಲಿ ಸಿಗಲಿದೆ. ಬೆಲೆಗೆ ತಕ್ಕಂತೆ ಗರಿಷ್ಠ ಅಂದರೆ, 70 kmpl ಮೈಲೇಜ್ ನೀಡಲಿದೆ. 115.45 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಪಡೆದಿದ್ದು, 8.48 bhp ಗರಿಷ್ಠ ಪವರ್ ಹಾಗೂ 9.81 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಹೊಂದಿದೆ.
ನೂತನ ಬಜಾಜ್ CT 110 ಬೈಕ್ 118 ಕೆಜಿ ತೂಕವನ್ನು ಹೊಂದಿದ್ದು, 10.5 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಹೊಂದಿದೆ. ನಾಲ್ಕು ಡ್ಯೂಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಅವುಗಳೆಂದರೆ, ಬ್ಲೂ ವಿಥ್ ಬ್ಲಾಕ್, ರೆಡ್ ವಿತ್ ಬ್ಲಾಕ್, ಗ್ರೀನ್ ವಿತ್ ಗೋಲ್ಡನ್ ಅಂಡ್ ರೆಡ್. ಅಲ್ಲದೆ, ಈ ಬೈಕ್ ಗ್ರಾಹಕರನ್ನು ಆಕರ್ಷಿಸುವ ವಿನ್ಯಾಸವನ್ನು ಹೊಂದಿದೆ.
ಭಾರತದ ಬಹುತೇಕ ಗ್ರಾಹಕರು ಬಜಾಜ್ ಕಂಪನಿಯ ಪ್ಲಾಟಿನಾ 110 ಬೈಕ್ ನ್ನು ಇಷ್ಟಪಟ್ಟು ಖರೀದಿಸುತ್ತಾರೆ. ಇದು ಬೇಡಿಕೆಯಲ್ಲಿರುವ ಪ್ರಯಾಣಿಕ ಮೋಟಾರ್‌ಸೈಕಲ್ ಆಗಿದ್ದು, ರೂ.67,673 (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 70 kmpl ಮೈಲೇಜ್ ನೀಡಲಿದ್ದು, ಇದು 115.45 ಸಿಸಿ ಎಂಜಿನ್ ಹೊಂದಿದ್ದು, 8.48 bhp ಪವರ್, 9.81 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.
ಟಿವಿಎಸ್ ಮೋಟಾರ್ ಕಂಪನಿ ದೇಶೀಯ ಮಾರುಕಟ್ಟೆಯಲ್ಲಿ 'ಸ್ಪೋರ್ಟ್' ಬೈಕ್‌ನ್ನು ರೂ.61,601 (ಎಕ್ಸ್ ಶೋರೂಂ) ದರದಲ್ಲಿ ಮಾರಾಟ ಮಾಡುತ್ತಿದ್ದು, 70 kmpl ಮೈಲೇಜ್ ನೀಡಲಿದೆ. 109.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8.18 bhp ಪವರ್, 8.7 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4-ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. ಫ್ರಂಟ್ ಹಾಗೂ ರೇರ್ ಡ್ರಮ್ ಬ್ರೇಕ್ ಅನ್ನು ಹೊಂದಿದೆ.
ಬಜಾಜ್ ಪ್ಲಾಟಿನಾ 100 ಅತ್ಯಂತ ಕಡಿಮೆ ಬೆಲೆಯಲ್ಲಿ ಗರಿಷ್ಠ ಮೈಲೇಜ್ ನೀಡುತ್ತದೆ. ರೂ.52,734 (ಎಕ್ಸ್ ಶೋರೂಂ) ದರದಲ್ಲಿ ಸಿಗಲಿದ್ದು, 72 kmpl ಇಂಧನ ದಕ್ಷತೆಯನ್ನು ಹೊಂದಿದೆ. 102 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. 7.79 bhp ಪವರ್ ಹಾಗೂ 8.34 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4-ಸ್ವೀಡ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಪಡೆದಿದೆ.


Click it and Unblock the Notifications