Affordable Bikes: ಕೇವಲ 80 ಸಾವಿರದೊಳಗೆ ಸಿಗುವ ಉತ್ತಮ ಸೌಕರ್ಯದ ಬೈಕ್‌ಗಳು

ಭಾರತದಲ್ಲಿ ದ್ವಿಚಕ್ರ ವಾಹನ ಮಾರುಕಟ್ಟೆಯು ಬಹಳ ಬೇಡಿಕೆಯಿರುವ ವಿಭಾಗವಾಗಿದೆ. ಅದರಲ್ಲೂ ಕೈಗೆಟುಕುವ ಬೆಲೆಯ ಬೈಕ್ (Affordable Bikes), ಸ್ಕೂಟರ್‌ಗಳಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಹಾಗಾಗಿಯೇ ಕಂಪನಿಗಳು ಪೈಪೋಟಿಯ ಮೇಲೆ ಎಂಟ್ರಿ ಲೆವಲ್ ದ್ವಿಚಕ್ರ ವಾಹನಗಳನ್ನು ಮಾರುಕಟ್ಟೆಗೆ ಇಳಿಸಿ ಗ್ರಾಹಕರನ್ನು ಸೆಳೆಯಲು ಪ್ರತಿ ವರ್ಷ ಅಗ್ಗದ ಬೆಲೆಗೆ ಹಲವು ಫೀಚರ್‌ಗಳನ್ನು ಕೂಡ ನೀಡುತ್ತಿದ್ದಾರೆ.

ಹಾಗೆಯೇ ಮೋಟಾರ್‌ಸೈಕಲ್ ವಿಭಾಗವು ಅನೇಕ ಕಂಪನಿಗಳಿಂದ ಹಲವಾರು ಪರ್ಯಾಯ ಮಾದರಿಗಳನ್ನು ಕೂಡ ಹೊಂದಿದೆ. ಈ ವಿಭಾಗದಲ್ಲಿ ಗ್ರಾಹಕರು ಪ್ರಮುಖವಾಗಿ ನಿರೀಕ್ಷಿಸುವ ಅವಶ್ಯಕತೆಗಳೆಂದರೆ ಸೇವಾ ವೆಚ್ಚಗಳು ಮತ್ತು ಹೆಚ್ಚಿನ ಮೈಲೇಜ್ ಆಗಿದೆ. ಉಳಿದಂತೆ ನಿತ್ಯ ಬಳಕೆಗೆ ಯಾವ ರೀತಿ ಹೊಂದಿಕೊಳ್ಳಲಿದೆ ಹಾಗೂ ಪ್ರಯಾಣ ಸೌಕರ್ಯವನ್ನು ನೋಡುತ್ತಾರೆ. ಆದರೆ ಅಗ್ಗದ ಬೆಲೆಗೆ ಗಟ್ಟಿಮುಟ್ಟಾದ ನಿರ್ಮಾಣ ಗುಣಮಟ್ಟವನ್ನು ನೀಡುವುದು ಕೂಡ ವಾಹನ ತಯಾರಕರಕಾ ಕಂಪನಿಗಳಿಗೆ ಸವಾಲಿನ ಕೆಲಸಾವಾಗಿದೆ.

Affordable bikes with Best comfortable under Rs. 80 thousand

ಆದರೂ ಕೂಡ ಕಂಪನಿಗಳು ಈಗಿನ ಪೈಪೋಟಿಯಲ್ಲಿ ಗ್ರಾಹಕರಿಗೆ ಬೆಲೆಗೆ ತಕ್ಕ ಉತ್ಪನ್ನಗಳನ್ನು ನೀಡುತ್ತಿದ್ದಾರೆ. ಮೂರು ಜನರನ್ನು ಹೊತ್ತೊಯ್ಯುವಷ್ಟು ಉದ್ದದ ಆಸನ, ತುಸು ಭಾರ ಹೆಚ್ಚಾದರೂ ಹೊತ್ತೊಯ್ಯುವಷ್ಟು ಸಾಮರ್ಥ್ಯ, ಆಧೂನಿಕ ಫೀಚರ್‌ಗಳನ್ನು ಒಳಗೊಂಡ ಮಾದರಿಗಳು ಕೇವಲ 80 ಸಾವಿರ ರೂ. ಒಳಗೆ ನೀಡುತ್ತಿದ್ದಾರೆ. ಅಂತಹ ಟಾಪ್ 5 ಮೋಟಾರ್‌ ಸೈಕಲ್‌ಗಳನ್ನು ಬಜಾಜ್, ಹೋಂಡಾ, ಹೀರೋ ಕಂಪನಿಗಳು ನೀಡುತ್ತಿವೆ. ಆ ಮಾದರಿಗಳನ್ನು ಈ ಲೇಖನದಲ್ಲಿ ನೋಡೋಣ.

ಹೋಂಡಾ ಸಿಡಿ 110 ಡ್ರೀಮ್ ಡಿಲಕ್ಸ್:
ಹೋಂಡಾ CD 110 Dream Deluxe ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆ ಹಾಗೂ ಕಡಿಮೆ ನಿರ್ವಹಣೆಯಿರುವ ಪ್ರಯಾಣಿಕ ಮೋಟಾರ್‌ಸೈಕಲ್ ಆಗಿದೆ. ಇದು ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಎರಡರ ಬೆಲೆಗಳು ರೂ. 71,113 ರಿಂದ ಪ್ರಾರಂಭವಾಗುತ್ತವೆ (ಎಕ್ಸ್ ಶೋ ರೂಂ, ದೆಹಲಿ). 8.67bhp ಮತ್ತು 9.30Nm ಟಾರ್ಕ್ ಅನ್ನು ಉತ್ಪಾದಿಸುವ 109.51cc BS6 ಎಂಜಿನ್‌ ಅನ್ನು ಹೊಂದಿದೆ.

Affordable bikes with Best comfortable under Rs. 80 thousand

ಹೀರೋ ಸೂಪರ್ ಸ್ಪ್ಲೆಂಡರ್
ಹೀರೋ ಸ್ಪ್ಲೆಂಡರ್ ಈ ವಿಭಾಗದ ಪ್ರಮುಖ ದ್ವಿಚಕ್ರ ವಾಹನವಾಗಿದೆ. ಸೂಪರ್ ಸ್ಪ್ಲೆಂಡರ್ CD110 Dream Deluxe ಗಿಂತ ಸ್ವಲ್ಪ ಎತ್ತರದಲ್ಲಿ ಕುಳಿತುಕೊಳ್ಳಬಹುದು. ಇದರ ಬೆಲೆಗಳನ್ನು ನೋಡುವುದಾದರೆ ರೂ. 79,118 ರಿಂದ (ಎಕ್ಸ್ ಶೋ ರೂಂ, ದೆಹಲಿ) ಪ್ರಾರಂಭವಾಗುತ್ತದೆ. ಡಿಸ್ಕ್ ಬ್ರೇಕ್ ರೂಪಾಂತರದೊಂದಿಗೆ ರೂ. 83,248 (ಎಕ್ಸ್ ಶೋ ರೂಂ, ದೆಹಲಿ) ರವರೆಗೆ ಹೆಚ್ಚಾಗುತ್ತದೆ. ಈ ಮೋಟಾರ್‌ ಸೈಕಲ್ ಭಾರತದಲ್ಲಿ ಅತಿ ಹೆಚ್ಚು ಮಾರಾಟ ಕಾಣುವ ಮಾದರಿಯಾಗಿದೆ.

ಬಜಾಜ್ CT 125X:
ಇದರ ಗಟ್ಟಿಮುಟ್ಟಾದ ನಿರ್ಮಾಣ ಗುಣಮಟ್ಟವು ಈ ವಿಭಾಗದಲ್ಲಿ ಉತ್ತಮ ಮೋಟಾರ್‌ ಸೈಕಲ್ ಎನಿಸಿಕೊಂಡಿದೆ. ಇದು ಬಜಾಜ್‌ನ 124.4cc, ಸಿಂಗಲ್-ಸಿಲಿಂಡರ್ ಏರ್ ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಿದ್ದು, 10.7bhp ಮತ್ತು 11Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಬೇಸ್ ಡ್ರಮ್ ರೂಪಾಂತರವು ರೂ. 72,077 (ಎಕ್ಸ್ ಶೋ ರೂಂ, ದೆಹಲಿ) ನಿಂದ ಪ್ರಾರಂಭವಾಗುತ್ತದೆ. ಉತ್ತಮ ಕಾರ್ಯಕ್ಷಮತೆಯ ಎಂಜಿನ್ ಮತ್ತು ವಿಶಾಲವಾದ ಆಸನದೊಂದಿಗೆ ಬರುತ್ತದೆ.

Affordable bikes with Best comfortable under Rs. 80 thousand

ಬಜಾಜ್ ಪ್ಲಾಟಿನಾ 100:
ಬಜಾಜ್ ಪ್ಲಾಟಿನಾ ಡೊಮಿನೋಸ್ ಪಿಜ್ಜಾದ ಪ್ರಮುಖ ಬೈಕ್ ಆಗಿದೆ. ಇದು ವಾಣಿಜ್ಯ ಫ್ಲೀಟ್‌ನ ಭಾಗವಾಗಿರುವುದರಿಂದ, ವಿನ್ಯಾಸವನ್ನು ಸಹ ಹೆಚ್ಚು ಹೊಂದಿಕೊಳ್ಳುವಂತೆ ಮಾಡಲಾಗಿದೆ. ಇದು 102cc BS6 ಎಂಜಿನ್‌ನೊಂದಿಗೆ ಕೇವಲ 7.79bhp ಮತ್ತು 8.34Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪ್ಲಾಟಿನಾ 100 ಬೆಲೆಗಳು ರೂ. 65,856 ರಿಂದ ಪ್ರಾರಂಭವಾಗುತ್ತವೆ. ಹೆಚ್ಚಿನ ಕಾರ್ಯಕ್ಷಮತೆ ಬೇಕಾದರೆ ನೀವು ಪ್ಲಾಟಿನಾ 110 ಅಥವಾ ಪ್ಲಾಟಿನಾ 110 ಎಬಿಎಸ್ ಅನ್ನು ಆಯ್ಕೆ ಮಾಡಬಹುದು. ಕ್ರಮವಾಗಿ ಇವುಗಳ ಬೆಲೆಯು ರೂ. 68,544 ಮತ್ತು ರೂ. 72,224 (ಎರಡೂ ಎಕ್ಸ್ ಶೋ ರೂಂ, ದೆಹಲಿ) ಇದೆ.

ಟಿವಿಎಸ್ ರೇಡಿಯನ್:
ಪ್ಲಾಟಿನಾದ ಪ್ರತಿಸ್ಪರ್ಧಿ TVS ರೇಡಿಯನ್, ಇದರ ಬೆಲೆಗಳು ರೂ. 60,925 ರಿಂದ ಪ್ರಾರಂಭವಾಗುತ್ತವೆ. ಹೊಸ ಡಿಜಿ ಡಿಸ್ಕ್ ರೂಪಾಂತರ ಬೇಕಾದರೆ ಇದು ರೂ. 78,834 (ಎರಡೂ ಎಕ್ಸ್ ಶೋರೂಂ, ದೆಹಲಿ) ವರೆಗೆ ಹೋಗುತ್ತದೆ. ರೇಡಿಯನ್‌ನ ಸೀಟ್ ಸಾಕಷ್ಟು ಉದ್ದವಾಗಿದ್ದು ಇಬ್ಬರಿಗೆ ಆರಾಮದಾಯಕ ಪ್ರಯಾಣ ನೀಡುತ್ತದೆ. ಜೊತೆಗೆ TVS ವೈಶಿಷ್ಟ್ಯ-ಸಮೃದ್ಧ ಉತ್ಪನ್ನಗಳನ್ನು ನೀಡುತ್ತಿದೆ, ಹಾಗೆಯೇ ರೇಡಿಯನ್ ಅನ್ನು ಹೊಸ ಫೀಚರ್‌ಗಳೊಂದಿಗೆ ತಂದಿದೆ.

Article Published On: Wednesday, April 19, 2023, 15:25 [IST]
English summary
Affordable bikes with best comfort under 80k
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+