Ampere: ವಿದೇಶಕ್ಕೆ ಕಾಲಿಟ್ಟ ಭಾರತದ ಆಂಪಿಯರ್.. ಎಲೆಕ್ಟ್ರಿಕ್ ಸ್ಕೂಟರ್ ಬೆಲೆಗೆ ಹೊಸ ಮಾರುತಿ ಕಾರು ಬರುತ್ತದೆ!

ಭಾರತದ ಮತ್ತೊಂದು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಆಂಪಿಯರ್ (Ampere) ವಿದೇಶಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಭಾಗವಾಗಿರುವ ಆಂಪಿಯರ್, ಕೆಡಿಯಾ ಸಂಸ್ಥೆ (Kedia Organisation) ಸಹಕಾರದೊಂದಿಗೆ ನೇಪಾಳದಲ್ಲಿ ಹೊಸ ಶೋರೂಂ ಪ್ರಾರಂಭಿಸಿದೆ. ಆ ಬಗ್ಗೆ ಇಲ್ಲಿದೆ ವಿವರ.

ನೇಪಾಳದ ರಾಜಧಾನಿ ಕಠ್ಮಂಡುವಿನ ಟೆಕುದಲ್ಲಿ (Kathmandu - Teku) ನೂತನ ಶೋರೂಂ ಇದ್ದು, 'ಕೆಡಿಯಾ' ಆಂಪಿಯರ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಅಧಿಕೃತ ಮಾರಾಟ, ವಿತರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಮಾರಾಟದ ಬಳಿಕ ಸರ್ವಿಸ್ ಸೇರಿದಂತೆ ಇತರೆ ಸೇವೆಯನ್ನು ಒದಗಿಸಲಿದೆ. ಆಂಪಿಯರ್ ನೇಪಾಳದಾದ್ಯಂತ ಅನೇಕ ಔಟ್‌ಲೆಟ್‌ ಮತ್ತು ಡೀಲರ್‌ಶಿಪ್‌ಗಳನ್ನು ಪ್ರಾರಂಭಿಸಲು ಯೋಜಿಸಿದೆ.

Ampere: ವಿದೇಶಕ್ಕೆ ಕಾಲಿಟ್ಟ ಭಾರತದ ಆಂಪಿಯರ್.. ಎಲೆಕ್ಟ್ರಿಕ್ ಸ್ಕೂಟರ್ ಬೆಲೆಗೆ ಹೊಸ ಮಾರುತಿ ಕಾರು ಬರುತ್ತದೆ!

ಆಂಪಿಯರ್ ಕಂಪನಿ, ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಅಲ್ಲಿನ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುತ್ತದೆ ಎಂದು ನಂಬಿದೆ. ಹಿಮಾಲಯ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಬರುವ ನೇಪಾಳದ ರಸ್ತೆಗಳಲ್ಲಿ ಕಂಪನಿಯ ಸ್ಕೂಟರ್‌ಗಳು ಸುಲಭವಾಗಿ ಚಲಿಸಬಲ್ಲವು. ಜೊತೆಗೆ ಅಧಿಕಗೊಳ್ಳುತ್ತಿರುವ ಇಂಧನ ದರದ ಪರಿಣಾಮ ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಗ್ರಾಹಕರನ್ನು ಆಕರ್ಷಿಸಲಿವೆ ಎಂದು ಕಂಪನಿ ಹೇಳಿಕೊಂಡಿದೆ.

ನೇಪಾಳದಲ್ಲಿ ಖರೀದಿಗೆ ಸಿಗುವ ಆಂಪಿಯರ್ ಪ್ರೈಮಸ್ (Ampere Primus) ಎಲೆಕ್ಟ್ರಿಕ್ ಸ್ಕೂಟರ್, ರೂ.3.75 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಅದೇ ರೀತಿಯಲ್ಲಿ ಆಂಪಿಯರ್ ಮ್ಯಾಗ್ನಸ್ (Ampere Magnus) ದರ ರೂ.3 ಲಕ್ಷವಿದೆ. ಆಂಪಿಯರ್ ಪ್ರೈಮಸ್ ಇ-ಸ್ಕೂಟರ್ ಹೊಂದಿರುವ ಬೆಲೆಗಿಂತ ಕಡಿಮೆ ದರದಲ್ಲಿ ಭಾರತದದಲ್ಲಿ ಮಾರುತಿ ಸಜುಕಿ ಆಲ್ಟೊ 800 (Maruti Suzuki Alto 800) ಕಾರು (ರೂ.3.54 ಲಕ್ಷ ಎಕ್ಸ್ ಶೋರೂಂ) ಸಿಗುತ್ತದೆ.

Ampere: ವಿದೇಶಕ್ಕೆ ಕಾಲಿಟ್ಟ ಭಾರತದ ಆಂಪಿಯರ್.. ಎಲೆಕ್ಟ್ರಿಕ್ ಸ್ಕೂಟರ್ ಬೆಲೆಗೆ ಹೊಸ ಮಾರುತಿ ಕಾರು ಬರುತ್ತದೆ!

ವಿದೇಶಗಳಿಂದ ಆಮದು ಮಾಡಿಕೊಳ್ಳುವ ವಾಹನಗಳಿಗೆ ನೇಪಾಳ ಸರ್ಕಾರವು ಭಾರೀ ತೆರಿಗೆಯನ್ನು ವಿಧಿಸುತ್ತದೆ. ಆ ಕಾರಣಕ್ಕೆ ಭಾರತದ ದರಕ್ಕೆ ಹೋಲಿಕೆ ಮಾಡಿದರೆ, ಅಲ್ಲಿ ಖರೀದಿಗೆ ಸಿಗುವ ವಾಹನಗಳು 3 ಪಟ್ಟು ಹೆಚ್ಚಿನ ದರವನ್ನು ಹೊಂದಿವೆ. ಆಂಪಿಯರ್, ದೇಶದಲ್ಲಿ ನವೆಂಬರ್ ತಿಂಗಳು 4,410 ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟಗೊಳಿಸಿ, 2022ರ ಇದೇ ಅವಧಿಗೆ (4,172 ಯುನಿಟ್) ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇಕಡ 6% ಪ್ರಗತಿ ಸಾಧಿಸಿದೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಆಂಪಿಯರ್ ಪ್ರೈಮಸ್ ಇ-ಸ್ಕೂಟರ್ ರೂ.1.46 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್, ಸಂಪೂರ್ಣ ಚಾರ್ಜ್ ನಲ್ಲಿ 107 Km ರೇಂಜ್ ನೀಡಲಿದ್ದು, 77 Kmph ಟಾಪ್ ಸ್ವೀಡ್ ಹೊಂದಿದೆ. ಈ ಪ್ರೈಮಸ್ ಸ್ಕೂಟರ್ ಬ್ಯಾಟರಿ, ಮನೆಯ ವಿದ್ಯುತ್ ಬಳಕೆಯಲ್ಲಿ ಫುಲ್ ಚಾರ್ಜ್ ಆಗಲು 5 ಗಂಟೆಬೇಕು.

Ampere: ವಿದೇಶಕ್ಕೆ ಕಾಲಿಟ್ಟ ಭಾರತದ ಆಂಪಿಯರ್.. ಎಲೆಕ್ಟ್ರಿಕ್ ಸ್ಕೂಟರ್ ಬೆಲೆಗೆ ಹೊಸ ಮಾರುತಿ ಕಾರು ಬರುತ್ತದೆ!

ಆಂಪಿಯರ್ ಮ್ಯಾಗ್ನಸ್ (Ampere Magnus) ಬೆಂಗಳೂರಿನಲ್ಲಿ ರೂ.1,13,841 ಆನ್ - ರೋಡ್ ಬೆಲೆಯಲ್ಲಿ ಸಿಗಲಿದ್ದು, ಫುಲ್ ಚಾರ್ಜ್ ನಲ್ಲಿ 121 Km ರೇಂಜ್ ಕೊಡಲಿದೆ. 53 Kmph ಟಾಪ್ ಸ್ವೀಡ್ ಹೊಂದಿದೆ. 6 - 7 ಗಂಟೆಯಲ್ಲಿ ಈ ಸ್ಕೂಟರ್ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗುತ್ತದೆ. ಜೊತೆಗೆ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, December 5, 2023, 12:24 [IST]
English summary
Ampere enter nepal primus e scooter cost more than maruti alto car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+