Ather 450X: ಕಡಿಮೆ ಬೆಲೆಯಲ್ಲಿ ಎಥರ್ 450X ಎಲೆಕ್ಟ್ರಿಕ್ ಸ್ಕೂಟರ್ ಬೇಸ್ ವೆರಿಯೆಂಟ್ ಬಿಡುಗಡೆ

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ದ್ವಿಚಕ್ರ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಇದರಿಂದ ಹಲವು ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆಯನ್ನು ಪ್ರಾರಂಭಿಸಿದ್ದಾರೆ. ಇದರಿಂದ ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ ಹೆಚ್ಚು ಪೈಪೋಟಿ ನಡೆಯುತ್ತಿದೆ.

ಎಥರ್ ಎನರ್ಜಿ ಭಾರತದಲ್ಲಿ ಎಥರ್ 450X ಎಲೆಕ್ಟ್ರಿಕ್ ಸ್ಕೂಟರ್‌ನ ಹೊಸ ಬೇಸ್ ವೆರಿಯೆಂಟ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಎಥರ್ 450X ಸ್ಕೂಟರ್‌ನ ಹೊಸ ಬೇಸ್ ವೆರಿಯೆಂಟ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.98,183 ಆಗಿದೆ. ಇದರರ್ಥ ಹೊಸ ಎಥರ್ 450X ಬೇಸ್ ವೆರಿಯೆಂಟ್ ಪ್ರೊ ಪ್ಯಾಕ್ ಹೊಂದಿರುವ ಅಥರ್ 450X ಗಿಂತ ರೂ 30,000 ಅಗ್ಗವಾಗಿದೆ.

Ather 450X Base Variant

ಹೆಚ್ಚು ಆಸಕ್ತಿಕರ ವಿಷಯವೆಂದರೆ, ಎಥರ್ ಎನರ್ಜಿ ಕಂಪನಿಯ, ಎಥರ್ 450X ಬೇಸ್ ರೂಪಾಂತರವನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಯಾವುದೇ ಪ್ರಮುಖ ತಾಂತ್ರಿಕ ಬದಲಾವಣೆಗಳನ್ನು ಮಾಡಿಲ್ಲ. ಹೊಸ ಎಥರ್ 450X ಬೇಸ್ ವೆರಿಯೆಂಟ್ ಅದೇ 6.4kW ಎಲೆಕ್ಟ್ರಿಕ್ ಮೋಟಾರ್ ಮತ್ತು 3.7kW ನಿಕಲ್ ಕೋಬಾಲ್ಟ್-ಆಧಾರಿತ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಥರ್ 450X ಎಲೆಕ್ಟ್ರಿಕ್ ಸ್ಕೂಟರ್‌ನ ಸ್ಟ್ಯಾಂಡರ್ಡ್ ರೂಪಾಂತರವಾಗಿ ಮುಂದುವರಿಯುತ್ತದೆ.

ಎಥರ್ 450X ಎಲೆಕ್ಟ್ರಿಕ್ ಸ್ಕೂಟರ್‌ನ ಸ್ಟ್ಯಾಂಡರ್ಡ್ ರೂಪಂತರಕ್ಕೆ ಹೋಲಿಸಿದರೆ ಎಥರ್ 450X ಬೆಸ್ ವೆರಿಯೆಂಟ್ ನಲ್ಲಿ ಕೆಲವು ವೈಶಿಷ್ಟ್ಯಗಳನ್ನು ಕಳೆದುಕೊಂಡಿದೆ. ಇದು ವರ್ಸಿಂಗ್ ಫಂಕ್ಷನ್, ಬ್ಲೂಟೂತ್ ಮತ್ತು 4G LTE ಕನೆಕ್ಟಿವಿಟಿ, ಹಿಲ್-ಹೋಲ್ಡ್ ಅಸಿಸ್ಟ್, ನ್ಯಾವಿಗೇಷನ್ ಮತ್ತು ರೈಡ್ ಮೋಡ್‌ಗಳಾಗಿವೆ. ಇದು ಹೆಚ್ಚು ಪ್ರಯೋಜನಕಾರಿಯಾಗಿದ್ದ ಫೀಚರ್ಸ್ ಗಳಾಗಿವೆ.

ಎಥರ್ 450X ಎಲೆಕ್ಟ್ರಿಕ್ ಸ್ಕೂಟರ್ ರೈಡ್ ಮೋಡ್‌ಗಳ ಬಗ್ಗೆ ಹೇಳುವುದಾದರೆ. ಸಿಂಗಲ್ ರೈಡ್ ಮೋಡ್‌ನೊಂದಿಗೆ ಬರುತ್ತದೆ ಮತ್ತು ಇದು ಕ್ಲೈಮ್ ಮಾಡಲಾದ ರೇಂಜ್ ಅಂಕಿಅಂಶಗಳ ಮೇಲೆ ಸಣ್ಣ ಪರಿಣಾಮವನ್ನು ಬೀರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಅದರ ಹೊರತಾಗಿ, ಎಥರ್ 450X ಬೇಸ್ ವೆರಿಯೆಂಟ್ OTA ನವೀಕರಣಗಳನ್ನು ಪಡೆಕೊಳ್ಳುವುದಿಲ್ಲ ಅಥವಾ ಎಥರ್ ಫಾಸ್ಟ್ ಚಾರ್ಜಿಂಗ್ ನೆಟ್‌ವರ್ಕ್‌ಗೆ ಹೊಂದಿಕೆಯಾಗುವುದಿಲ್ಲ.

ಎಥರ್ 450X ಬೇಸ್ ರೂಪಾಂತರವು ನಿಧಾನವಾದ ಹೋಮ್ ಚಾರ್ಜರ್‌ನೊಂದಿಗೆ ಬರುತ್ತದೆ ಮತ್ತು 7-ಇಂಚಿನ ಟಚ್‌ಸ್ಕ್ರೀನ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಈಗ ಗ್ರೇಸ್ಕೇಲ್ ಕಲರ್ ಇಂಟರ್‌ಫೇಸ್‌ನೊಂದಿಗೆ ಬರುತ್ತದೆ. ನಿಧಾನಗತಿಯ ಹೋಮ್ ಚಾರ್ಜರ್‌ಗಳಲ್ಲಿ, ಎಥರ್ 450X ತನ್ನ ಬ್ಯಾಟರಿ ಪ್ಯಾಕ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 15 ಗಂಟೆಗಳು ಮತ್ತು 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಇದನ್ನು ಪ್ರೊ ಪ್ಯಾಕ್‌ನೊಂದಿಗಿನ ಎಥರ್ 450X ಅದರ ಬ್ಯಾಟರಿ ಪ್ಯಾಕ್ ಅನ್ನು ಕೇವಲ 5 ಗಂಟೆ 40 ನಿಮಿಷಗಳಲ್ಲಿ ಚಾರ್ಜ ಮಾಡುತ್ತದೆ. ವಾರಂಟಿಯ ವಿಷಯದಲ್ಲಿ, ಎಥರ್ 450X ರೇಂಜ್ , ಎಲೆಕ್ಟ್ರಿಕ್ ಸ್ಕೂಟರ್‌ಗಳು ವಾಹನ, ಬ್ಯಾಟರಿ ಪ್ಯಾಕ್ ಮತ್ತು ಚಾರ್ಜರ್‌ಗಾಗಿ 3 ವರ್ಷ / 30,000km ವಾರಂಟಿಯೊಂದಿಗೆ ಬರುತ್ತವೆ. ಇನ್ನು ಪ್ರೊ ಪ್ಯಾಕ್ ರೂಪಾಂತರವು ಬ್ಯಾಟರಿ ಪ್ಯಾಕ್‌ಗಾಗಿ 5 ವರ್ಷ / 60,000 ಕಿಮೀ ವಾರಂಟಿಯೊಂದಿಗೆ ಬರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

More from DriveSpark

Article Published On: Friday, April 14, 2023, 13:32 [IST]
English summary
Ather 450x base variant launched price features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+