Ather: ಆಗಸ್ಟ್ 11ಕ್ಕೆ ಬೆಂಗಳೂರಿನ ಎಥರ್‌ನಿಂದ 3 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ.. ಪ್ರತಿಸ್ಪರ್ಧಿಗಳಿಗೆ ನಡುಕ!
ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಎಥರ್ ಎನರ್ಜಿ (Ather Energy) ತನ್ನ 450ಎಕ್ಸ್ ಇ-ಸ್ಕೂಟರ್ ಮೂಲಕ ದೇಶಾದ್ಯಂತ ದೊಡ್ಡಮಟ್ಟದಲ್ಲಿ ಖ್ಯಾತಿಗಳಿಸಿದೆ. ಇದೀಗ, ಆಗಸ್ಟ್ 11ಕ್ಕೆ ಮೂರು ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಎಥರ್ ಎನರ್ಜಿ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹೊಸ ಟೀಸರ್ ಅನ್ನು ಬಿಡುಗಡೆ ಮಾಡಿದ್ದು, ಆಗಸ್ಟ್ 11 ರಂದು ಮೂರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಲಾಂಚ್ ಮಾಡಲಾಗುವುದು ಎಂದು ತಿಳಿಸಿದೆ. ಅದರಲ್ಲಿ ತನ್ನ ಕಡಿಮೆ ಬೆಲೆಯ ಹೊಸ 450ಎಸ್ ಸ್ಕೂಟರ್ ಇರಲಿದೆ ಎಂಬುದನ್ನು ದೃಢಪಡಿಸಿದೆ. ಸದ್ಯ, ಎಥರ್ ಎನರ್ಜಿ ದೇಶೀಯ ಮಾರುಕಟ್ಟೆಯಲ್ಲಿ 450ಎಕ್ಸ್ ಸ್ಕೂಟರ್ ಮಾರಾಟ ಮಾಡುತ್ತಿದೆ.

'ಪ್ರೋ ಪ್ಯಾಕ್' ಇಲ್ಲದೆ ಎಥರ್ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜ್ ಆಗಲು ಗರಿಷ್ಠ ಸಮಯ ತೆಗೆದುಕೊಳ್ಳುತ್ತದೆ ಎಂದು ಹಲವರ ಅಭಿಪ್ರಾಯವಾಗಿದೆ. ಅದನ್ನು ಮನಗಂಡಿರುವ ಕಂಪನಿಯು, ಚಾರ್ಜಿಂಗ್ ಅವಧಿಯನ್ನು ಇಳಿಸಲು ಬ್ಯಾಟರಿ ಗಾತ್ರವನ್ನು ಕಡಿಮೆಗೊಳಿಸಿ, ನವೀನ ವಿನ್ಯಾಸದೊಂದಿಗೆ ಅಪ್ಡೇಟ್ ಮಾಡಲಾದ ಎರಡು ನೂತನ 450ಎಕ್ಸ್ ಸ್ಕೂಟರ್ ಮಾದರಿಗಳನ್ನು ಬಿಡುಗಡೆಗೊಳಿಸುವ ಸಾಧ್ಯತೆಯಿದೆ.
ಆದರೆ, ಈ ಬಗ್ಗೆ ಎಥರ್ ಕಂಪನಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಲಾಂಚ್ ಗೆ ಸಿದ್ದಗೊಂಡಿರುವ ಎಥರ್ 450ಎಸ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದು ಹೆಚ್ಚುಕಮ್ಮಿ 450ಎಕ್ಸ್ ರೀತಿಯೇ ವಿನ್ಯಾಸವನ್ನು ಹೊಂದಿದೆ. LCD ಡಿಸ್ಪ್ಲೇಯೊಂದಿಗೆ ಖರೀದಿಗೆ ಲಭ್ಯವಾಗಲಿದೆ. ಆ ಕಾರಣಕ್ಕೆ ಗೂಗಲ್ ಮ್ಯಾಪ್ ಹಾಗೂ ಕನೆಕ್ಟೆಡ್ ಟೆಕ್ನಾಲಜಿ ವೈಶಿಷ್ಟ್ಯಗಳನ್ನು ಪಡೆದಿಲ್ಲದೇ ಇರಬಹುದು.
ಹೊಸ ಎಥರ್ 450ಎಸ್ ಎಲೆಕ್ಟ್ರಿಕ್ ಸ್ಕೂಟರ್, 450ಎಕ್ಸ್ ಸ್ಕೂಟರ್ ನಂತೆಯೇ ಮೋಟಾರ್ ಪಡೆದಿರುವ ಸಾಧ್ಯತೆಯಿದೆ. ಸಂಪೂರ್ಣ ಚಾರ್ಜ್ ಮಾಡಿದರೆ 115 ಕಿಲೋಮೀಟರ್ ರೇಂಜ್ ನೀಡಲಿದ್ದು, 90 kmph ಟಾಪ್ ಸ್ವೀಡ್ ಹೊಂದಿರಲಿದೆ. ಬೆಲೆ ವಿಚಾರವಾಗಿ ತಿಳಿಸುವುದಾದರೆ, ಕಂಪನಿಯು ಈ ಸ್ಕೂಟರ್, ರೂ.129,999 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ ಎಂದು ಘೋಷಣೆ ಮಾಡಿದೆ.
ಜೊತೆಗೆ ನವೀಕರಿಸಿದ 'ಎಥರ್ 450ಎಕ್ಸ್ ಇ-ಸ್ಕೂಟರ್'ನ ಎರಡು ಮಾದರಿಗಳು, 'ಪ್ರೋ ಪ್ಯಾಕ್'ನೊಂದಿಗೆ ಅಥವಾ ಅದು ಇಲ್ಲದೆಯೇ ಬಿಡುಗಡೆಯಾಗಬಹುದು. ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ, ಎಥರ್ ಕಂಪನಿಯ ಒಂದೇ ಒಂದು ಎಲೆಕ್ಟ್ರಿಕ್ ಸ್ಕೂಟರ್ 450ಎಕ್ಸ್ , ರೂ.1.45 ಲಕ್ಷದಿಂದ ರೂ.1.65 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಇದರಲ್ಲಿ 3.7 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದೆ.
ಎಥರ್ 450ಎಕ್ಸ್ ಇ-ಸ್ಕೂಟರ್ ಸಂಪೂರ್ಣ ಚಾರ್ಜಿನಲ್ಲಿ 146 ಕಿಲೋಮೀಟರ್ ರೇಂಜ್ ನೀಡಲಿದ್ದು, 90 kmph ಟಾಪ್ ಸ್ವೀಡ್ ಹೊಂದಿದೆ. ಮನೆಯ ವಿದ್ಯುತ್ ಬಳಕೆಯಲ್ಲಿ ಇದರ ಬ್ಯಾಟರಿ ಪ್ಯಾಕ್ ಪುಲ್ ಚಾರ್ಜ್ ಆಗಲು 4 ಗಂಟೆ 30 ನಿಮಿಷ ತೆಗೆದುಕೊಳ್ಳುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಕನ್ಸೋಲ್, 4G LTE ಕನೆಕ್ಟಿವಿಟಿ, ಬ್ಲೂಟೂತ್ ಕನೆಕ್ಟಿವಿಟಿ, ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಎಥರ್ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ದೇಶದಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಸ್ಪರ್ಧಿಗಳನ್ನು ಹೊಂದಿದೆ. ಓಲಾ, ಟಿವಿಎಸ್, ಹೀರೋ, ಸಿಂಪಲ್ ಎನರ್ಜಿ ಕಂಪನಿ ಸ್ಕೂಟರ್ ಗಳಿಗೆ ಪೈಪೋಟಿ ನೀಡಬೇಕಾಗಿದೆ. ಪ್ರಸ್ತುತ, ಕಂಪನಿಯು ಒಂದಲ್ಲ ಎರಡಲ್ಲ ಮೂರು ಸ್ಕೂಟರ್ ಗಳನ್ನು ಶುಕ್ರವಾರ ಲಾಂಚ್ ಮಾಡಲಿದೆ. ಬೆಲೆಯು ಕೈಗೆಟುಕುವಂತಿದ್ದು, ಭಾರತದ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








