ಭಾರತದ ಯುವ ರೇಸರ್‌ಗಳ ಕನಸನ್ನು ಈಡೇರಿಸಲಿದೆ ಆಟಮ್ GP 1... ಮಿನಿ ರೇಸಿಂಗ್‌ಗೆ ಸಜ್ಜಾಗಿ
CRA ಮೋಟಾರ್‌ಸ್ಪೋರ್ಟ್ಸ್ 2,75,000 ರೂ. (ಎಕ್ಸ್ ಶೋ ರೂಂ) ಬೆಲೆಯ Atom GP 1 ಮಿನಿ ರೇಸಿಂಗ್ ಬೈಕ್ ಅನ್ನು ಬಿಡುಗಡೆ ಮಾಡಿದ್ದು, ಪ್ರಸ್ತುತ ವರ್ಷಕ್ಕೆ 250 ಘಟಕಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುವುದಾಗಿ ತಿಳಿಸಿದೆ. ಈ ಮೂಲಕ ಯುವ ಭಾರತೀಯ ರೇಸರ್‌ಗಳಿಗೆ ತಮ್ಮ ರೇಸಿಂಗ್ ಅನ್ನು ಪ್ರಾರಂಭಿಸಲು ಸುಲಭಗೊಳಿಸಿದೆ.
10 ರಿಂದ 17 ವರ್ಷದೊಳಗಿನ ರೇಸರ್‌ಗಳನ್ನು ಗುರಿಯಾಗಿಸಿಕೊಂಡು ಈ ಬೈಕ್ ಅನ್ನು ಬಿಡುಗಡೆ ಮಾಡಲಾಗಿದೆ. ಆಟಮ್ GP1 ಮಿನಿ GP ಮೋಟಾರ್ ಸೈಕಲ್ ಕಿಟ್‌ನಂತೆ ವಿಶಿಷ್ಟ ವರ್ಗವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಇದು ಯುವ ಸವಾರರಿಗೆ ಖಂಡಿತ ವಿಶೇಷ ಅನುಭವವನ್ನು ನೀಡಲಿದೆ.

ದೊಡ್ಡ ಬೈಕ್‌ಗಳಿಗೆ ಪರಿವರ್ತನೆಯಾಗುವ ಮೊದಲು ಟ್ರ್ಯಾಕ್‌ನ ಶಕ್ತಿ ಮತ್ತು ಜವಾಬ್ದಾರಿಗಳೊಂದಿಗೆ ತಮ್ಮನ್ನು ತಾವು ಪರಿಚಿತರಾಗಲು ಮಕ್ಕಳಿಗೆ ಇದು ಆದರ್ಶ ಮೋಟಾರ್‌ಸೈಕಲ್ ಆಗಿ ಕಾರ್ಯನಿರ್ವಹಿಸುತ್ತದೆ. Atom GP1 ಸಾರ್ವಜನಿಕ ರಸ್ತೆಗಳಿಗೆ ಉದ್ದೇಶಿಸಿಲ್ಲ. ಬದಲಾಗಿ ಕೇವಲ ಟ್ರ್ಯಾಕ್‌ಗಾಗಿ ಪ್ರತ್ಯೇಕವಾಗಿ ನಿರ್ಮಿಸಲಾಗಿದೆ ಎಂಬುದನ್ನು ಗಮನಿಸಬೇಕಾಗಿದೆ.
ಬೈಕ್ ಅನ್ನು ಸಣ್ಣ ಕಾರ್ಟಿಂಗ್ ಟ್ರ್ಯಾಕ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು, 10 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ಮಾತ್ರ ಇದನ್ನು ತರಬೇತಿ ಮತ್ತು ರೇಸಿಂಗ್ ಉದ್ದೇಶಗಳಿಗಾಗಿ ಬಳಸಲು ಅರ್ಹರಾಗಿರುತ್ತಾರೆ. ಆಟಮ್ GP 1 ನ ದೇಹವು ಫೈಬರ್ ಗ್ಲಾಸ್‌ನಿಂದ ಮಾಡಲ್ಪಟ್ಟಿದ್ದು, ಇದು 5-ಸ್ಪೀಡ್ ಗೇರ್‌ಬಾಕ್ಸ್ ಮತ್ತು ರೇಸ್-ಟ್ಯೂನ್ಡ್ ಎಕ್ಸಾಸ್ಟ್ ಸಿಸ್ಟಮ್‌ನೊಂದಿಗೆ ಬರುತ್ತದೆ.
ಎಂಜಿನ್ ಬಗ್ಗೆ ಹೇಳುವುದಾದರೆ 159cc ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಕಾರ್ಬ್ಯುರೇಟೆಡ್ 4 ಸ್ಟ್ರೋಕ್ ಎಂಜಿನ್‌ನಿಂದ ಚಾಲಿತವಾಗಿದೆ. ಈ ಎಂಜಿನ್ ಪವರ್ ಬಗ್ಗೆ ಹೇಳುವುದಾದರೆ 15.05PS ಪವರ್ ಮತ್ತು 13.85Nm ಟಾರ್ಕ್ ಅನ್ನು ಹೊರಹಾಕುತ್ತದೆ. ಹಾಗೆಯೇ 105kmph ಟಾಪ್ ಸ್ಪೀಡ್ ಅನ್ನು ಹೊಂದಿದೆ.
ಬ್ರೇಕಿಂಗ್ ವಿಷಯದಲ್ಲಿ, ಬೈಕು ಮುಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಹೊಂದಿದ್ದರೆ, ಹಿಂಭಾಗದಲ್ಲಿ ಪೆಟಲ್ ಡಿಸ್ಕ್ ಅನ್ನು ಹೊಂದಿದೆ. ಆಟಮ್ GP1 ರೇಸ್ ಕಾಂಪೌಂಡ್ TVS ರೆಮೊರಾ ಟೈರ್‌ಗಳೊಂದಿಗೆ TVS NTorq ನಿಂದ ಎರವಲು ಪಡೆದ 12-ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದ್ದು, ತುಂಬಾ ಸ್ಪೋರ್ಟಿಯಾಗಿ ಕಾಣುತ್ತದೆ.
2025 ರ ವೇಳೆಗೆ CRA ಮೋಟಾರ್‌ಸ್ಪೋರ್ಟ್ಸ್ ಪ್ರಪಂಚದಾದ್ಯಂತದ ವಿವಿಧ ದೇಶಗಳಲ್ಲಿ 5 ಸುತ್ತಿನ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಶಿಪ್‌ಗಳನ್ನು ನಡೆಸಲು ಯೋಜಿಸುತ್ತಿದೆ, ಇದು ಯುರೋಪ್, ಏಷ್ಯಾ ಮತ್ತು USA ನಿಂದ ಭಾಗವಹಿಸುವವರೊಂದಿಗೆ ವಿಶ್ವಾದ್ಯಂತ ರೇಸಿಂಗ್ ಸರಣಿಗೆ ಕಾರಣವಾಗುತ್ತದೆ ಎಂದು ಹೇಳಿಕೊಂಡಿದೆ.
CRA ಮೋಟಾರ್‌ಸ್ಪೋರ್ಟ್ಸ್ ಸದ್ಯ 2023 ರಲ್ಲಿ ನಾಲ್ಕು ರಾಷ್ಟ್ರೀಯ ಮಟ್ಟದ ಸುತ್ತುಗಳೊಂದಿಗೆ ಆಟಮ್ GP ಸರಣಿಯನ್ನು ಪ್ರಾರಂಭಿಸಲು ಯೋಜಿಸುತ್ತಿರುವುದಾಗಿ ಘೋಷಿಸಿದೆ. ಮೊದಲೇ ಹೇಳಿದಂತೆ ಅವರು 2024 ರಲ್ಲಿ 5 ಸುತ್ತಿನ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಶಿಪ್‌ನ ಯೋಜನೆಗಳನ್ನು ಹೊಂದಿದ್ದಾರೆ. ಇದು ಐದು ವಿಭಿನ್ನ ದೇಶಗಳ ಭಾಗವಹಿಸುವವರೊಂದಿಗೆ ಏಷ್ಯಾ ಮಟ್ಟದ ಫೈನಲ್ಸ್ ಸುತ್ತಿನಲ್ಲಿ ಕೊನೆಗೊಳ್ಳುತ್ತದೆ.
Atom GP ಸರಣಿಯಲ್ಲಿ ಭಾಗವಹಿಸುವವರು 10 ರಿಂದ 17 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು. ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಶಿಪ್‌ಗಾಗಿ, ಗ್ರಿಡ್‌ನಲ್ಲಿ ಕನಿಷ್ಠ ಎಂಟು ರೈಡರ್‌ಗಳು ಮತ್ತು ಗರಿಷ್ಠ 15 ರೈಡರ್‌ಗಳು ಇರುತ್ತಾರೆ. ಪ್ರತಿ ಸುತ್ತಿನಲ್ಲಿ ತಲಾ 10 ನಿಮಿಷಗಳ ಎರಡು ಅಭ್ಯಾಸ ಅವಧಿಗಳು, 10 ನಿಮಿಷಗಳ ಅರ್ಹತಾ ಅವಧಿ ಮತ್ತು ಎಂಟು ಮತ್ತು ಹತ್ತು ಲ್ಯಾಪ್‌ಗಳ ಎರಡು ರೇಸ್‌ಗಳನ್ನು ಒಳಗೊಂಡಿರುತ್ತದೆ.
CRA ಮೋಟಾರ್‌ಸ್ಪೋರ್ಟ್ಸ್ ಬೆಂಗಳೂರು, ಅಹಮದಾಬಾದ್, ಕೇರಳ, ಹೈದರಾಬಾದ್, ಯುಎಇ ಮತ್ತು ಮಲೇಷ್ಯಾದಲ್ಲಿ ಕಾರ್ಟಿಂಗ್ ಟ್ರ್ಯಾಕ್‌ಗಳ ಬಗ್ಗೆ ತರಬೇತಿಯನ್ನು ನೀಡುತ್ತದೆ. 2023 ರ ಅಂತ್ಯದ ವೇಳೆಗೆ ಪ್ರತಿ ಸ್ಥಳಕ್ಕೆ ಕನಿಷ್ಠ ಮೂರು ಆಟಮ್ ಜಿಪಿ ಮೋಟಾರ್‌ಸೈಕಲ್‌ಗಳನ್ನು ಹೊಂದುವ ಗುರಿಯನ್ನು ಹೊಂದಿದೆ.


Click it and Unblock the Notifications