Auto Expo 2023: ಐಷಾರಾಮಿ ಬೆನೆಲ್ಲಿ ಲಿಯೊನ್ಸಿನೊ 800 ಬೈಕ್ ಪ್ರದರ್ಶನ

ಬಹುನೀರಿಕ್ಷಿತ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಇಟಲಿ ಮೂಲದ 'ಬೆನೆಲ್ಲಿ' ಲಿಯೊನ್ಸಿನೊ 800 ಬೈಕ್ ಅನ್ನು ಪ್ರದರ್ಶಿಸಿದೆ. ಇದು ನೋಡಲು ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಲಿಯೊನ್ಸಿನೊ 500 ರೀತಿ ಕಾಣುತ್ತದೆ. ಇದು ಆಕರ್ಷಕವಾಗಿದ್ದು, ಇದರ ಎಂಜಿನ್ ಕಾರ್ಯಕ್ಷಮತೆ ಗ್ರಾಹಕರಿಗೆ ಖಂಡಿತ ಇಷ್ಟವಾಗುತ್ತದೆ.

ಬೆನೆಲ್ಲಿ ಲಿಯೊನ್ಸಿನೊ 800 ಎಂಜಿನ್ ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, ಇದು ಟ್ವಿನ್-ಸಿಲಿಂಡರ್ 754 ಸಿಸಿ ವಾಟರ್ ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಲಿದ್ದು, 8,500 rpm ನಲ್ಲಿ 75 bhp ಗರಿಷ್ಠ ಪವರ್ ಮತ್ತು 6,500 rpm ನಲ್ಲಿ 67Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದರ ಅತ್ಯುನ್ನತವಾದ ಈ ಕಾರ್ಯಕ್ಷಮತೆ ಈ ಬೈಕ್ ಕೊಳ್ಳಲು ಗ್ರಾಹಕರನ್ನು ಪ್ರೇರಿಪಿಸುತ್ತದೆ.

Auto Expo 2023: ಐಷಾರಾಮಿ ಬೆನೆಲ್ಲಿ ಲಿಯೊನ್ಸಿನೊ 800 ಬೈಕ್ ಪ್ರದರ್ಶನ

ಬೆನೆಲ್ಲಿ ಲಿಯೊನ್ಸಿನೊ 800 ಟ್ರೆಸ್ಟಲ್ ಸ್ಟೀಲ್ ಟ್ಯೂಬ್ ಚಾಸಿಸ್ ಜೊತೆಗೆ 50 ಎಂಎಂ ಅಪ್-ಸೈಡ್ ಫೋರ್ಕ್‌ಗಳು ಮತ್ತು ರೇರ್ ಮೊನೊಶಾಕ್ ಜೊತೆಗೆ ಪ್ರಿಲೋಡ್, ರೀಬೌಂಡ್ ಅಡ್ಜಸ್ಟ್ಮೆಂಟ್ ಅನ್ನು ಹೊಂದಿದೆ. ಈ ಹೊಸ ಬೆನೆಲ್ಲಿ ಲಿಯೊನ್ಸಿನೊ 800 ಬ್ರೇಕಿಂಗ್ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಫ್ರಂಟ್ 4-ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ ಡ್ಯುಯಲ್ 320 ಎಂಎಂ ಡಿಸ್ಕ್ ಬ್ರೇಕ್‌, ರೇರ್ 2-ಪಿಸ್ಟನ್ ಕ್ಯಾಲಿಪರ್‌ನೊಂದಿಗೆ 260 ಎಂಎಂ ಡಿಸ್ಕ್ ಬ್ರೇಕ್ ಅನ್ನು ಪಡೆದುಕೊಂಡಿದೆ. ಜೊತೆಗೆ ಡ್ಯುಯಲ್-ಚಾನೆಲ್ ABS ಅನ್ನು ಹೊಂದಿದೆ.

ಬೆನೆಲ್ಲಿ ಲಿಯೊನ್ಸಿನೊ ಮುಂಭಾಗ 120/70, ಮತ್ತು ಹಿಂಭಾಗ 180/55 ಅಳತೆಯ ಪಿರೆಲ್ಲಿ MT60 ಟೈರ್‌ಗಳನ್ನು ಹೊಂದಿದೆ. ಜೊತೆಗೆ 17-ಇಂಚಿನ ಅಲಾಯ್ ವೀಲ್ಸ್ ಗಳನ್ನು ಪಡೆದುಕೊಂಡಿದೆ. ಫುಲ್ TFT ಡಿಸ್ಪ್ಲೇಯನ್ನು ಹೊಂದಿದ್ದು, ಇದು ಸವಾರರಿಗೆ ಪ್ರಯಾಣಿಸುವಾಗ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒದಗಿಸುತ್ತದೆ. ಓವಲ್-ಆಕಾರದ ಫುಲ್ - LED ಹೆಡ್‌ಲ್ಯಾಂಪ್ ಅನ್ನು ಹೊಂದಿದ್ದು, 15-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಪಡೆದುಕೊಂಡಿದ್ದು, ಹಿಂಭಾಗದಲ್ಲಿ ಫುಲ್ ಎಲ್ಇಡಿ ಲೈಟಿಂಗ್ ಸೆಟಪ್ ಅನ್ನು ಹೊಂದಿದೆ.

Auto Expo 2023: ಐಷಾರಾಮಿ ಬೆನೆಲ್ಲಿ ಲಿಯೊನ್ಸಿನೊ 800 ಬೈಕ್ ಪ್ರದರ್ಶನ

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಬೆನೆಲ್ಲಿ ಲಿಯೊನ್ಸಿನೊ 500 ಬೈಕ್ 5,54,876 ರೂ. ಆರಂಭಿಕ ಬೆಲೆಯನ್ನು ಹೊಂದಿದೆ. ಇದು ಕೇವಲ 1 ರೂಪಾಂತರ ಮತ್ತು 2 ಬಣ್ಣಗಳಲ್ಲಿ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದ್ದು, 500 ಸಿಸಿ BS6 ಎಂಜಿನ್‌ ಹೊಂದಿದ್ದು, ಇದು 46.8 bhp ಗರಿಷ್ಠ ಪವರ್ ಮತ್ತು 46 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಫ್ರಂಟ್ ಮತ್ತು ರೇರ್ ಡಿಸ್ಕ್ ಬ್ರೇಕ್‌ಗಳೊಂದಿಗೆ, ಬೆನೆಲ್ಲಿ ಲಿಯೊನ್ಸಿನೊ 500 ಆಂಟಿ-ಲಾಕಿಂಗ್ ಬ್ರೇಕಿಂಗ್ ಸಿಸ್ಟಮ್‌ ಅನ್ನು ಹೊಂದಿದೆ.

ಈ ಬೆನೆಲ್ಲಿ ಲಿಯೊನ್ಸಿನೊ 500 ಬೈಕ್ 207 ಕೆಜಿ ತೂಕವಿದ್ದು, 12.7 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ. ರೌಂಡ್ ಹೆಡ್‌ಲೈಟ್, ಲಯನ್ ಆಫ್ ಪೆಸಾರೊ ಮೋಟಿಫ್‌ನೊಂದಿಗೆ ಡ್ಯುಯಲ್-ಟೋನ್ ಫ್ರಂಟ್ ಫೆಂಡರ್, ಟಕ್ ಮತ್ತು ರೋಲ್ ವಿನ್ಯಾಸದೊಂದಿಗೆ ಸಿಂಗಲ್-ಪೀಸ್ ಸೀಟ್ ಮತ್ತು ಹಿಂಭಾಗದ ಫೆಂಡರ್ ಮೌಂಟೆಡ್ ನಂಬರ್ ಪ್ಲೇಟ್ ನಂತಹ ಸ್ಟೈಲಿಂಗ್ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದು 207kg ತೂಕವಿದ್ದು, ಫುಲ್-LED ಲೈಟಿಂಗ್ ಮತ್ತು ಡ್ಯೂಯಲ್-ಪಾಡ್ LCD ಇನ್ಸ್ರುಮೆಂಟಲ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

Auto Expo 2023: ಐಷಾರಾಮಿ ಬೆನೆಲ್ಲಿ ಲಿಯೊನ್ಸಿನೊ 800 ಬೈಕ್ ಪ್ರದರ್ಶನ

ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಬೆನೆಲ್ಲಿ ಲಿಯೊನ್ಸಿನೊ 800 ಬೈಕಿನ ಜೊತೆಗೆ ಮತ್ತೊಂದು ವಿದೇಶಿ ಕಂಪನಿ ಹಂಗೇರಿಯ ಮೂಲದ 'ಕೀವೇ' SR250 ನಿಯೋ-ರೆಟ್ರೊ ಬೈಕ್‌ನ್ನು ರೂ.1.49 ಲಕ್ಷಕ್ಕೆ ಬಿಡುಗಡೆ ಮಾಡಿದೆ. ನೂತನ ಕೀವೇ ಎಸ್‌ಆರ್ 250 ಮೋಟಾರ್‌ಸೈಕಲ್ ಭಾರತದಲ್ಲಿ ಟಿವಿಎಸ್ ರೋನಿನ್, ರಾಯಲ್ ಎನ್‌ಫೀಲ್ಡ್ ಹಂಟರ್ 350 ಮತ್ತು ಕವಾಸಕಿ ಡಬ್ಲ್ಯು 175ನಂತಹ ರೆಟ್ರೋ ಶೈಲಿಯ ಮೋಟಾರ್‌ಸೈಕಲ್‌ಗಳಿಗೆ ಭಾರೀ ಪೈಪೋಟಿ ನೀಡಲಿದೆ. 223 ಸಿಸಿ, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಪೆಟ್ರೋಲ್ ಎಂಜಿನ್‌ ಹೊಂದಿದೆ.

ಬೆನೆಲ್ಲಿ ಲಿಯೊನ್ಸಿನೊ 800 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ಈ ಆವೃತ್ತಿಯು ಅತ್ಯುತ್ತಮ ಲುಕ್ ಹೊಂದಿರುವ ಬೈಕುಗಳಲ್ಲಿ ಒಂದಾಗಿದೆ. ಅದರ ವಿನ್ಯಾಸ ಹಾಗೂ ಪವರ್ ಫುಲ್ ಡ್ಯೂಯಲ್ ಎಂಜಿನ್‌ ಕಾರ್ಯಕ್ಷಮತೆಯನ್ನು ಆಟೋಮೊಬೈಲ್ ಪ್ರಿಯರು ಖಂಡಿತ ಲೈಕ್ ಮಾಡುತ್ತಾರೆ ಎಂದು ಹೇಳಬಹುದು. ಮುಂಬರುವ ದಿನಗಳಲ್ಲಿ ಕಂಪನಿಯು ಈ ಬೈಕ್ ಬೆಲೆಯನ್ನು ಬಹಿರಂಗಪಡಿಸುವ ಸಾಧ್ಯತೆಯಿದ್ದು, ಇದು ಒಂದಷ್ಟು ದುಬಾರಿಯಾಗಿದ್ದು, ಐಷಾರಾಮಿ ಬೈಕ್ ಹೊಂದಲು ಇಷ್ಟಪಡುವವರೂ ಈ ಬೈಕ್ ಅನ್ನು ಖರೀದಿಬಹುದು.

More from DriveSpark

Article Published On: Friday, January 13, 2023, 8:20 [IST]
English summary
Auto expo 2023 luxury benelli leoncino 800 bike showcased details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+