Auto Expo 2023: ಬಹುನಿರೀಕ್ಷಿತ ಸುಜುಕಿ ಜಿಕ್ಸರ್ 250 ಎಫ್‌ಎಫ್‌ವಿ ಫ್ಲೆಕ್ಸ್ ಫ್ಯುಯೆಲ್ ಪ್ರದರ್ಶನ

ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ವಿವಿಧ ದ್ವಿಚಕ್ರ ವಾಹನ ತಯಾರಕ ಕಂಪನಿಗಳು, ಅನೇಕ ಬೈಕ್ ಹಾಗೂ ಸ್ಕೂಟರ್‌ಗಳನ್ನು ಪ್ರದರ್ಶನ ಹಾಗೂ ಬಿಡುಗಡೆ ಮಾಡಿವೆ. 'ಸುಜುಕಿ' ಜಿಕ್ಸರ್ 250 ಎಫ್‌ಎಫ್‌ವಿ ಫ್ಲೆಕ್ಸ್ ಫ್ಯುಯೆಲ್ ಮೋಟಾರ್‌ಸೈಕಲ್ ಅನ್ನು ಪ್ರದರ್ಶಿಸಿದೆ. ಇಲ್ಲಿ ಸುಜುಕಿಯ ಹೊಸ ಮೋಟಾರ್‌ಸೈಕಲ್ ಬಗ್ಗೆ ಹೆಚ್ಚಿನ ವಿವರ ತಿಳಿಯೋಣ.

ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಬಹುತೇಕ ಎಲ್ಲಾ ಬೈಕ್‌ಗಳು ಮತ್ತು ಸ್ಕೂಟರ್‌ಗಳು ಪೆಟ್ರೋಲ್‌ ಎಂಜಿನ್ ಮೂಲಕ ಚಲಿಸುತ್ತವೆ. ಅಲ್ಲದೆ, ಕೆಲವು ಕಂಪನಿಗಳು ಫ್ಲೆಕ್ಸ್ ಫ್ಯುಯೆಲ್ (ಪೆಟ್ರೋಲ್ ಮತ್ತು ಎಥೆನಾಲ್) ವಾಹನಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿವೆ. ಇದರ ಭಾಗವಾಗಿ 'ಸುಜುಕಿ' ಜಿಕ್ಸರ್ 250 ಫ್ಲೆಕ್ಸ್ ಫ್ಯುಯೆಲ್ ಬೈಕ್ ಅನ್ನು ಅನಾವರಣ ಮಾಡಿದೆ,. ಈ ಫ್ಲೆಕ್ಸ್ ಫ್ಯುಯೆಲ್ ಮೋಟಾರ್‌ಸೈಕಲ್ ಎಥೆನಾಲ್ ಆಧಾರಿತ ಫ್ಯುಯೆಲ್ ಮೂಲಕ ಚಲಿಸುತ್ತದೆ (E20 ರಿಂದ E85).

Auto Expo 2023: ಬಹುನಿರೀಕ್ಷಿತ ಸುಜುಕಿ ಜಿಕ್ಸರ್ 250 ಎಫ್‌ಎಫ್‌ವಿ ಫ್ಲೆಕ್ಸ್ ಫ್ಯುಯೆಲ್ ಪ್ರದರ್ಶನ

ಫ್ಲೆಕ್ಸ್ ಫ್ಯುಯೆಲ್ ಮತ್ತು ಎಥೆನಾಲ್ ಆಧಾರಿತ ಫ್ಯುಯೆಲ್ ವಿಚಾರಕ್ಕೆ ಬಂದಾಗ, ಸಾಮಾನ್ಯವಾಗಿ ಎರಡು ಅಂಕೆಗಳ ಸಂಖ್ಯೆಗೆ ಮೊದಲು 'E' ಎಂದು ಸೂಚಿಸಲಾಗುತ್ತದೆ. ಇಲ್ಲಿ ಆ ಸಂಖ್ಯೆಗಳು ಫ್ಯುಯೆಲ್ ಶೇಕಡವನ್ನು ತೋರಿಸುತ್ತವೆ. ಉದಾಹರಣೆ: E20 ಫ್ಯುಯೆಲ್ ಎಂದರೇ ಅದು ಶೇಕಡ 20 ರಷ್ಟು ಎಥೆನಾಲ್ ಫ್ಯುಯೆಲ್ ಹೊಂದಿರುತ್ತದೆ. ಅದೇ ವೇಳೆ, E80 ಎಂದರೇ ಶೇಕಡ 80 ರಷ್ಟು ಪೆಟ್ರೋಲ್ ಇರುತ್ತದೆ. ಫ್ಲೆಕ್ಸ್ ಫ್ಯುಯೆಲ್ ವಾಹನಗಳು ಶೇಕಡ 100 ರಷ್ಟು ಪೆಟ್ರೋಲ್ ಬಳಸುವುದಿಲ್ಲ. ಇದರಲ್ಲಿ ಎಥೆನಾಲ್ ಅನ್ನು ಸಹ ಉಪಯೋಗಿಸಲಾಗುತ್ತದೆ.

ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡಿರುವ ಹೊಸ ಸುಜುಕಿ ಜಿಕ್ಸರ್ 250 FFV ಫ್ಲೆಕ್ಸ್ ಫ್ಯುಯೆಲ್ ಮೋಟಾರ್‌ಸೈಕಲ್, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಪೆಟ್ರೋಲ್ ಚಾಲಿತ ಸುಜುಕಿ ಜಿಕ್ಸರ್ 250 ಮೋಟಾರ್‌ಸೈಕಲ್‌ಗೆ ಹೋಲುತ್ತದೆ ಎಂದು ಹೇಳಬಹುದು. ಜೊತೆಗೆ ಸುಜುಕಿ ಜಿಕ್ಸರ್ 250 FFV ಫ್ಲೆಕ್ಸ್ ಫ್ಯುಯೆಲ್ ಮೋಟಾರ್‌ಸೈಕಲ್ ಉತ್ತಮ ಮೈಲೇಜ್ ನೀಡಲು ಹಾಗೂ ಫ್ಲೆಕ್ಸ್ ಫ್ಯೂಯೆಲ್ ಜೊತೆ ಹೊಂದಿಕೊಳ್ಳಲು ಮಾಡಿಫೈಗೊಳಿಸಿದ ಪವರ್‌ಟ್ರೇನ್ ಯುನಿಟ್ ನೊಂದಿಗೆ ಖರೀದಿಗೆ ಲಭ್ಯವಾಗಬಹುದು.

Auto Expo 2023: ಬಹುನಿರೀಕ್ಷಿತ ಸುಜುಕಿ ಜಿಕ್ಸರ್ 250 ಎಫ್‌ಎಫ್‌ವಿ ಫ್ಲೆಕ್ಸ್ ಫ್ಯುಯೆಲ್ ಪ್ರದರ್ಶನ

ಸುಜುಕಿ ಮೋಟಾರ್‌ಸೈಕಲ್‌ಗಳ ಪ್ರಕಾರ, ಈ ಮಾಡಿಫೈ ಮಾಡಿದ ಹೊಸ ಜಿಕ್ಸರ್ 250 FFV ಫ್ಲೆಕ್ಸ್ ಫ್ಯುಯೆಲ್ ಬೈಕ್ 249ಸಿಸಿ, ಸಿಂಗಲ್-ಸಿಲಿಂಡರ್, ಆಯಿಲ್-ಕೂಲ್ಡ್ ಎಂಜಿನ್ ಹೊಂದಿದ್ದು, 9,300 rpmನಲ್ಲಿ 26.14 bhp ಗರಿಷ್ಠ ಪವರ್ ಮತ್ತು 7,300 rpmನಲ್ಲಿ 22.2Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಸುಜುಕಿ ಜಿಕ್ಸರ್ 250 FFV ಮೋಟಾರ್‌ಸೈಕಲ್ ನಲ್ಲಿಯೂ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಮಾದರಿಯಂತೆ ಬಳಕೆ ಮಾಡಲಾಗಿದೆ.

ನೂತನ ಸುಜುಕಿ ಜಿಕ್ಸರ್ 250 FFV ಫ್ಲೆಕ್ಸ್ ಫ್ಯುಯೆಲ್ ಮೋಟಾರ್‌ಸೈಕಲ್ ಸುತ್ತಳತೆ ಬಗ್ಗೆ ಹೇಳುವುದಾದರೆ, 2,010 ಎಂಎಂ ಉದ್ದ, 805 ಎಂಎಂ ಅಗಲ, 1,035 ಎಂಎಂ ಎತ್ತರ ಮತ್ತು 1,340 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ. ಅಲ್ಲದೆ, 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ ಹೊಂದಿದ್ದು, ಬರೋಬ್ಬರಿ 156 ಕೆಜಿ ತೂಕವಿದೆ ಎಂದು ಹೇಳಬಹುದು. ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಿರುವ ಈ ಹೊಸ ಸುಜುಕಿ ಜಿಕ್ಸರ್ 250 FFV ಲುಕ್ ಎಲ್ಲರನ್ನು ಆಕರ್ಷಿಸಿದೆ ಎಂದರೆ ತಪ್ಪಾಗುವುದಿಲ್ಲ.

Auto Expo 2023: ಬಹುನಿರೀಕ್ಷಿತ ಸುಜುಕಿ ಜಿಕ್ಸರ್ 250 ಎಫ್‌ಎಫ್‌ವಿ ಫ್ಲೆಕ್ಸ್ ಫ್ಯುಯೆಲ್ ಪ್ರದರ್ಶನ

ಸುಜುಕಿ ಜಿಕ್ಸರ್ 250 ಎಫ್‌ಎಫ್‌ವಿ ಫ್ಲೆಕ್ಸ್ ಫ್ಯುಯೆಲ್ ಮೋಟಾರ್‌ಸೈಕಲ್, ಯಾಂತ್ರಿಕವಾಗಿ ಸ್ಟ್ಯಾಂಡರ್ಡ್ ಮೋಟಾರ್‌ಸೈಕಲ್‌ನಂತೆಯೇ ಇರುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವಾಗಿದೆ. ಆಟೋ ಎಕ್ಸ್‌ಪೋದಲ್ಲಿ ಅನಾವರಗೊಂಡ ಇತರೇ ಫ್ಲೆಕ್ಸ್ ಫ್ಯುಯೆಲ್ ಮೋಟಾರ್‌ಸೈಕಲ್‌ಗಳಂತೆ, ಸುಜುಕಿ ತನ್ನ ಫ್ಲೆಕ್ಸ್ ಫ್ಯುಯೆಲ್ ಮೋಟಾರ್‌ಸೈಕಲ್‌ನ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯ ಅಂಕಿಅಂಶವನ್ನು ಇನ್ನೂ ಬಹಿರಂಗಪಡಿಸಿಲ್ಲ. ಮುಂಬರುವ ದಿನಗಳಲ್ಲಿ ಮಾರುಕಟ್ಟೆಗೆ ಬರಲಿದ್ದು, ಬೆಲೆ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಮಾಹಿತಿ ಸಿಗಲಿದೆ.

ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಸುಜುಕಿ ಜಿಕ್ಸರ್ 250 ಸ್ಟ್ರೀಟ್ ಬೈಕ್, ಭಾರತದಲ್ಲಿ 1,77,973 ಆರಂಭಿಕ ಬೆಲೆ ಹೊಂದಿದ್ದು, 1 ರೂಪಾಂತರ ಮತ್ತು 2 ಬಣ್ಣ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 249ಸಿಸಿ BS6 ಎಂಜಿನ್‌ ಹೊಂದಿದ್ದು, 26.13 bhp ಪವರ್ ಮತ್ತು 22.2 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಫ್ರಂಟ್ ಮತ್ತು ರೇರ್ ಎರಡೂ ಡಿಸ್ಕ್ ಬ್ರೇಕ್‌ ಹೊಂದಿದ್ದು, ಆಂಟಿ-ಲಾಕಿಂಗ್ ಬ್ರೇಕಿಂಗ್ ಸಿಸ್ಟಮ್‌ ಅನ್ನು ಪಡೆದುಕೊಂಡಿದೆ. 12 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದೆ.

More from DriveSpark

Article Published On: Saturday, January 14, 2023, 10:29 [IST]
English summary
Auto expo 2023 suzuki gixxer 250 ffv flex fuel showcased details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+