Bajaj Chetak: ಕಡಿಮೆ ಬೆಲೆಗೆ ಬರುತ್ತೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್.. ಇಲ್ಲಿದೆ ಮಾಹಿತಿ

ಭಾರತದಲ್ಲಿ ಬಜಾಜ್ (Bajaj) ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಖ್ಯಾತಿಗಳಿಸಿದೆ. ಕೆಲವೇ ವರ್ಷಗಳ ಹಿಂದೆ, ಎಲೆಕ್ಟ್ರಿಕ್ ಮಾರುಕಟ್ಟೆಯನ್ನು ಪ್ರವೇಶಿಸಿ, ಚೇತಕ್ (Chetak) ಇ-ಸ್ಕೂಟರ್ ಬಿಡುಗಡೆ ಮಾಡಿತ್ತು. ಆದರೆ, ನೀರಿಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಆಗಸ್ಟ್‌ನಲ್ಲಿ ಬೆಲೆ ಇಳಿಸಿದ ಹಿನ್ನೆಲೆ, ಅದರ ಮಾರಾಟ ಕೊಂಚ ಸುಧಾರಿಸಿತ್ತು.

ಬಜಾಜ್, ಹೇಗಾದರೂ ಮಾಡಿ ಚೇತಕ್ ಸೇಲ್ಸ್ ಹಿಮ್ಮಡಿಗೊಳಿಸಬೇಕೆಂದು ತೀರ್ಮಾನ ಮಾಡಿದ್ದು, ಆ ಕೆಲಸದಲ್ಲಿ ನಿರತವಾಗಿದೆ. ಇದೀಗ, ಅಗ್ಗದ ಬೆಲೆಯ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅಭಿವೃದ್ಧಿಪಡಿಸುತ್ತಿದೆ. ಕೆಲವೇ ದಿನಗಳ ಹಿಂದೆ, ಚೇತಕ್ ಹೊಸ ರೂಪಾಂತರ ರಸ್ತೆಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದ್ದು, ಆ ಸ್ಪೈ ಚಿತ್ರಗಳು ಇಂಟರ್ನೆಟ್ ನಲ್ಲಿ ಸೋರಿಕೆಯಾಗಿದ್ದವು.

Bajaj Chetak: ಕಡಿಮೆ ಬೆಲೆಗೆ ಬರುತ್ತೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್.. ಇಲ್ಲಿದೆ ಮಾಹಿತಿ

ಆ ಫೋಟೋದಲ್ಲಿ ಹಿಂಭಾಗದ ವೀಲ್ಸ್ ಅನ್ನು ಪ್ಲಾಸ್ಟಿಕ್ ಕವರ್ ನಿಂದ ಮುಚ್ಚಿರುವುದನ್ನು ಕಾಣಬಹುದು. ನೂತನ ವೇರಿಯೆಂಟ್, ಹಬ್ ಮೌಂಟೆಡ್ (hub - mounted) ಎಲೆಕ್ಟ್ರಿಕ್ ಮೋಟಾರ್ ಸಹಾಯದಿಂದ ಕಾರ್ಯನಿರ್ವಹಿಸಬಹುದು ಎಂದು ಅಂದಾಜಿಸಲಾಗಿದೆ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಚೇತಕ್ ಮಿಡ್ - ಮೌಂಟೆಡ್ (mid - mounted) ಮೋಟಾರ್ ನೆರವಿನಿಂದ ಚಲಿಸುತ್ತದೆ.

ಮುಂಬರುವ ಬಜಾಜ್ ಚೇತಕ್ ಹೊಸ ರೂಪಾಂತರ ಮತ್ತಷ್ಟು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರಬಹುದು ಎಂದು ಹೇಳಲಾಗಿದೆ. ಬಹುತೇಕ ರೂ.1 ಲಕ್ಷ ಬೆಲೆ ಆಸುಪಾಸಿನಲ್ಲಿ ಖರೀದಿಗೆ ಸಿಗಬಹುದು. ಇದು, ಚೇತಕ್ ಮಾರಾಟವನ್ನು ಇನ್ನಷ್ಟು ವೃದ್ಧಿಸಿಕೊಳ್ಳಲು ನೆರವಾಗುತ್ತದೆ. ಪ್ರಸ್ತುತ, ಭಾರತದ ಮಾರುಕಟ್ಟೆಯಲ್ಲಿ ಸಿಗುವ ಬಜಾಜ್ ಚೇತಕ್ ರೂ.1.30 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

Bajaj Chetak: ಕಡಿಮೆ ಬೆಲೆಗೆ ಬರುತ್ತೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್.. ಇಲ್ಲಿದೆ ಮಾಹಿತಿ

ಹೋದ ತಿಂಗಳು (ಆಗಸ್ಟ್) ಬಜಾಜ್ ಕಂಪನಿ ತನ್ನ ಮಾರಾಟ ಪ್ರಮಾಣವನ್ನು ಸುಧಾರಿಸಲು ಇದ್ದಕ್ಕಿದಂತೆ ಚೇತಕ್ ಬೆಲೆಯನ್ನು ಇಳಿಕೆ ಮಾಡಿತ್ತು. ಅದು ಕೂಡ ಸರಿ ಸುಮಾರು ರೂ.14,000. ಈಗ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಬಜಾಜ್ ಚೇತಕ್ ಸ್ಕೂಟರ್ ಬಗ್ಗೆ ಒಂದಷ್ಟು ತಿಳಿಯೋಣ. ಇದು, ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ.

ಈ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್, ಇಕೋ ಮೋಡ್ ನಲ್ಲಿ 90 ಕಿಲೋಮೀಟರ್ ಹಾಗೂ ಸ್ಪೋರ್ಟ್ ಮೋಡ್ ನಲ್ಲಿ 80 ರೇಂಜ್ ನೀಡುತ್ತದೆ. ಚೇತಕ್ ಇ-ಸ್ಕೂಟರ್ ತನ್ನ ನೋಟದಿಂದಲೇ ಪ್ರತಿಯೊಬ್ಬರನ್ನು ಸೆಳೆಯಲಿದ್ದು, ಇದರ ಬಾಡಿಯನ್ನು ಕಂಪನಿಯು ಉಕ್ಕಿನಿಂದ ನಿರ್ಮಾಣ ಮಾಡಿದೆ. ಎಲ್ಇಡಿ ಲೈಟಿಂಗ್‌, ಡೇಟೈಮ್ ರನ್ನಿಂಗ್ ಲ್ಯಾಂಪ್ ಪಡೆಯುವ ಮೂಲಕ ಚೇತಕ್ ಹೆಚ್ಚು ಆಕರ್ಷಣೀವಾಗಿದೆ.

ಇದರಲ್ಲಿ ಉಪಯೋಗಿಸಿರುವ ಎಲೆಕ್ಟ್ರಿಕ್ ಮೋಟಾರ್, 20 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಒಳಗೊಂಡಿದೆ. ಮ್ಯಾಟ್ ಕೋರ್ಸ್ ಗ್ರೇ, ಮ್ಯಾಟ್ ಕೆರಿಬಿಯನ್ ಬ್ಲೂ ಮತ್ತು ಸ್ಯಾಟಿನ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದ್ದು, ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಅವುಗಳೆಂದರೇ, ಇನ್ಸ್ಟ್ರುಮೆಂಟ್ ಕ್ಲಸ್ಟರ್, ರೋಲ್ ಓವರ್ ಡಿಟೆಕ್ಷನ್‌, ಸ್ಮಾರ್ಟ್ ಕೀ, USB ಚಾರ್ಜರ್, 4ಜಿ ಕನೆಕ್ಟಿವಿಟಿ ಫೀಚರ್ಸ್ ಒಳಗೊಂಡಿದೆ.

ಇನ್ನು, ಬಜಾಜ್ ಕಂಪನಿ ಕಡಿಮೆ ಬೆಲೆಯ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿದ್ದು, ಅದರ ಗ್ರಾಹಕರಿಗೆ ಸಖತ್ ಖುಷಿ ಕೊಟ್ಟಿದೆ. ಇದು, ಕೆಲವೊಂದು ಆಕರ್ಷಕ ವೈಶಿಷ್ಟ್ಯದಿಂದ ಮಾರುಕಟ್ಟೆಗೆ ಬರುವ ಸಾಧ್ಯತೆಯಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಬಹುದು. ಈ ಚೇತಕ್ ಸ್ಕೂಟರ್ ಗೆ ಓಲಾ, ಸಿಂಪಲ್ ಒನ್, ಟಿವಿಎಸ್ ಐಕ್ಯೂಬ್, ಎಥರ್ ಸ್ಕೂಟರ್ ಪ್ರಬಲ ಪತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, September 28, 2023, 16:21 [IST]
English summary
Bajaj auto working affordable chetak e scooter details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+