ಭಾರತೀಯರ ಮೆಚ್ಚಿನ ಸಾರಥಿಯಾಗಿದ್ದ ಚೇತಕ್ ಸ್ಕೂಟರ್: ಎಲೆಕ್ಟ್ರಿಕ್ ರೂಪದಲ್ಲಿ ಹೊಸ ದಾಖಲೆ

80ರ ದಶಕದಲ್ಲಿ ಭಾರತೀಯರ ಪ್ರೀತಿಯ ಸಾರಥಿಯಾಗಿತ್ತು. ಹೆಚ್ಚಿನ ಜನರ ಮನೆಯಲ್ಲೂ ಸಾಮಾನ್ಯವಾಗಿದ್ದ ಸ್ಕೂಟರ್ ಇದಾಗಿದ್ದು, ಅಷ್ಟರಮಟ್ಟಿಗೆ ಬಜಾಜ್ ಚೇತಕ್ ಸ್ಕೂಟರ್ ಭಾರತೀಯರನ್ನು ಆವರಿಸಿಬಿಟ್ಟಿತ್ತು. 2005ರ ಈ ಜನಪ್ರಿಯ ಹಮಾರ ಬಜಾಜ್ ಸ್ಕೂಟರ್ ಸ್ಥಗಿತಗೊಂಡಿತು. ಮತ್ತೆ ವರ್ಷಗಳ ಹಿಂದೆ ಎಲೆಕ್ಟ್ರಿಕ್ ಅವತಾರದಲ್ಲಿ ಮತ್ತೆ ರಸ್ತೆಗಿಳಿಯಿತು.

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ (Bajaj Chetak Electric Scooter) ರೂಪದಲ್ಲಿ ಮರಳಿ ಬಂದು ಮಾರಾಟದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಇದೀಗ ಪುಣೆ ಮೂಲದ ಬಜಾಜ್ ಆಟೋದ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ 1,00,000-ಯೂನಿಟ್ ಮಾರಾಟದ ಮೈಲಿಗಲ್ಲನ್ನು ಸಾಧಿಸಿದೆ. 2020ರ ಜನವರಿ ತಿಂಗಳಿನಲ್ಲಿ ಬಿಡುಗಡೆಗೊಂಡ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ 2023ರ ನವೆಂಬರ್ ತಿಂಗಳ ಅಂತ್ಯದ ವೇಳೆಗೆ 1,04,200 ಯುನಿಟ್‌ಗಳು ಮಾರಾಟವಾಗಿವೆ.

Bajaj Chetak Electric Scooter

ವಾಹನ್ ಡೇಟಾದ ಪ್ರಕಾರ, ಬಜಾಜ್ ಆಟೋ ಕಳೆದ ಎರಡು ತಿಂಗಳುಗಳಲ್ಲಿ ಅಥರ್ ಎನರ್ಜಿ ಇ-ಸ್ಕೂಟರ್‌ಗಳಿಗಿಂತ ಹೆಚ್ಚು ಚೇತಕ್‌ಗಳನ್ನು ಮಾರಾಟ ಮಾಡಿದೆ. ಬಜಾಜ್ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಅದರ ವಿಶೇಷ ಚೇತಕ್ ಶೋರೂಮ್‌ಗಳ ಜಾಲವನ್ನು ವಿಸ್ತರಿಸಲು ನೋಡುತ್ತಿದೆ. ಭಾರತದಾದ್ಯಂತ 141 ನಗರಗಳಲ್ಲಿ ಹೊಂದಿರುವ ಚೇತಕ್ ನೆಟ್‌ವರ್ಕ್ ಅನ್ನು ಮಾರ್ಚ್ 2024 ರ ವೇಳೆಗೆ 250 ನಗರಗಳಿಗೆ ವಿಸ್ತರಿಸಲಾಗುತ್ತದೆ.

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್, ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಇಕೋ (Eco) ಮೋಡ್ ನಲ್ಲಿ 90 km ಹಾಗೂ ಸ್ಪೋರ್ಟ್ (Sports) ಮೋಡ್ ನಲ್ಲಿ 80 km ರೇಂಜ್ ನೀಡುತ್ತದೆ. ಬಜಾಜ್ ಚೇತಕ್ ಸ್ಕೂಟರ್, ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲು ಐದು ಗಂಟೆ ಸಾಕು. ಈ ಸ್ಕೂಟರ್, 3 - ಫೇಸ್ ಪರ್ಮನೇಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್ ಹೊಂದಿದ್ದು, 1,950 rpmನಲ್ಲಿ 20 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

Bajaj Chetak Electric Scooter

ಇದರ ಬಾಡಿ ಸಂಪೂರ್ಣ ಉಕ್ಕಿನಿಂದ (steel) ಕೂಡಿದೆ. ವಿನ್ಯಾಸದ ದೃಷ್ಟಿಯಿಂದ ಕೂಡ ಅತ್ಯುತ್ತಮವಾಗಿದ್ದು, LED ಲೈಟಿಂಗ್‌, ಮುಂಭಾಗ ಹಾರ್ಸ್‌ಶೂ ಆಕಾರದ ಡೇಟೈಮ್ ರನ್ನಿಂಗ್ ಲ್ಯಾಂಪ್ ಹೊಂದಿದೆ. ಈ ಬಜಾಜ್ ಚೇತಕ್ ಪಡೆದಿರುವ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುವುದಾದರೆ, ಈ ಸ್ಕೂಟರ್, ಇಕೋ ಹಾಗೂ ಸ್ಪೋರ್ಟ್ ರೈಡಿಂಗ್ ಮೋಡ್‌ಗಳೊಂದಿಗೆ ರಿವರ್ಸ್ ಮೋಡ್ ಅನ್ನು ಪಡೆದಿದೆ.

ಇದರೊಂದಿಗೆ ಹಿಲ್ ಹೋಲ್ಡ್ ಅಸಿಸ್ಟ್, ರೋಲ್ ಓವರ್ ಡಿಟೆಕ್ಷನ್‌, ಸ್ಮಾರ್ಟ್ ಕೀ, USB ಚಾರ್ಜರ್, 4G ಕನೆಕ್ಟಿವಿಟಿ, 18 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದರೊಟ್ಟಿಗೆ, ಆಂಡ್ರಾಯ್ಡ್ & ಐಒಎಸ್ ಫೋನ್ ಗಳಲ್ಲಿ 'ಮೈ ಚೇತಕ್' ಅಪ್ಲಿಕೇಶನ್ ಸಹ ಇದೆ. 'ಬಜಾಜ್ ಚೇತಕ್ ಪ್ರೀಮಿಯಂ ಎಡಿಷನ್ ಇ-ಸ್ಕೂಟರ್' ಮತ್ತಷ್ಟು ವೈಶಿಷ್ಟ್ಯಗಳನ್ನು ಪಡೆದುಕೊಳ್ಳುವ ಮೂಲಕ ಅತ್ಯಾಧುನಿಕವಾಗಿದೆ.

Bajaj Chetak Electric Scooter

ಆಕರ್ಷಕ ಬಣ್ಣದ LCD ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬಾಡಿ -ಕಲರ್ಡ್ ರೇರ್ ವ್ಯೂ ಮಿರರ್ಸ್, ಡ್ಯುಯಲ್ - ಟೋನ್ ಸೀಟ್, ವೀಲ್ ರಿಮ್‌ಗಳಲ್ಲಿ ಡೆಕಾಲ್ ಬ್ರ್ಯಾಂಡಿಂಗ್, ಪಿಲಿಯನ್ ಫುಟ್‌ರೆಸ್ಟ್ ಅನ್ನು ಹೊಂದಿದೆ. ಬಜಾಜ್ ಚೇತಕ್ ಪ್ರೀಮಿಯಂ ಎಡಿಷನ್ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಖರೀದಿಗೆ ಲಭ್ಯವಿದೆ. ಮುಖ್ಯವಾಗಿ, ಮ್ಯಾಟ್ ಕೋರ್ಸ್ ಗ್ರೇ, ಮ್ಯಾಟ್ ಕೆರಿಬಿಯನ್ ಬ್ಲೂ ಹಾಗೂ ಸ್ಯಾಟಿನ್ ಬ್ಲ್ಯಾಕ್ ಬಣ್ಣಗಳಲ್ಲಿ ಸಿಗುತ್ತದೆ.

ಈವೆರೆಗೆ ದೇಶೀಯ ಮಾರುಕಟ್ಟೆಯಲ್ಲಿ ಗರಿಷ್ಠ ಬೆಲೆಯನ್ನು ಹೊಂದಿದ್ದ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್, ಈ ದರ ಇಳಿಕೆಯೊಂದಿಗೆ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಿರುವುದು ಖುಷಿಯ ವಿಚಾರ. ಇನ್ನು ಬಜಾಜ್ ಚೇತಕ್ (Bajaj Chetak) ಎಲೆಕ್ಟ್ರಿಕ್ ಸ್ಕೂಟರ್ ಸಾಮಾನ್ಯ ಜನರ ಜೊತೆ ಸೆಲಬ್ರಿಟಿಗಳನ್ನು ಈ ಸ್ಕೂಟರ್ ಆಕರ್ಷಿಸಿದೆ. ಬಾಲಿವುಡ್ ನಿರ್ದೇಶಕಿ ಮತ್ತು ನಿರ್ಮಾಪಕಿ ಕಿರಣ್ ರಾವ್ ಅವರು ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಿದ್ದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.

More from DriveSpark

Article Published On: Wednesday, December 13, 2023, 15:57 [IST]
English summary
Bajaj chetak electric scooter sales cross 1 lakh units details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+