ಗ್ರ್ಯಾಂಡ್ ರೀ-ಎಂಟ್ರಿ ಕೊಡಲಿದೆ ಬಜಾಜ್ ಪಲ್ಸರ್ 220F: ಬೆಲೆ ಎಷ್ಟಿರಬಹುದು?
ಭಾರತದಲ್ಲಿ ಬಜಾಜ್ ಕಂಪನಿ ತಯಾರಿಸುವ ಪಲ್ಸರ್ ಬೈಕ್‌ಗಳನ್ನು ಪ್ರತಿಯೊಬ್ಬರು ಇಷ್ಟಪಟ್ಟು ಖರೀದಿಸುತ್ತಾರೆ. ಅಷ್ಟರಮಟ್ಟಿಗೆ ಅವು ಜನಪ್ರಿಯತೆಯನ್ನು ಗಳಿಸಿವೆ. ಬಜಾಜ್ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ಶೀಘ್ರದಲ್ಲೇ ಯುವಕರ ಹಾಟ್ ಫೆವರೇಟ್ ಪಲ್ಸರ್ 220ಎಫ್ ಬೈಕ್‌ನ್ನು ರೀ-ಲಾಂಚ್ ಮಾಡಲಿದೆ ಎಂದು ವರದಿಯಾಗಿದೆ.
ಬಜಾಜ್ ಪಲ್ಸರ್ 220F ಶೀಘ್ರದಲ್ಲೇ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ಮೂಲಗಳಿಂದ ದೃಢಪಟ್ಟಿದೆ. ಆದರೆ, ಕಂಪನಿ ಕಡೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ. ನೂತನ ಬೈಕ್ ಮಾದರಿಗಳು ಈಗಾಗಲೇ ಡೀಲರ್‌ಶಿಪ್‌ಗಳನ್ನು ತಲುಪಲು ಆರಂಭವಾಗಿವೆ. ಕೆಲವೇ ವಾರಗಳಲ್ಲಿ ಈ ಬೈಕ್ ಗ್ರಾಹಕರಿಗೆ ಖರೀದಿಗೆ ಸಿಗುವ ಸಾಧ್ಯತೆ ಇದೆ. ಈ ಬಜಾಜ್ ಪಲ್ಸರ್ 220F ಕೆಲವೊಂದು ಆಕರ್ಷಕ ವೈಶಿಷ್ಟ್ಯಗಳನ್ನು ಹೆಚ್ಚುವರಿಯಾಗಿ ಪಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಹೊಸ ಹೊಚ್ಚ ಬಜಾಜ್ ಪಲ್ಸರ್ 220F ಬೆಲೆ ಕುರಿತಂತೆ ಯಾವುದೇ ವಿವರಗಳು ಈವರೆಗೆ ಬಹಿರಂಗಗೊಂಡಿಲ್ಲ. ಆದರೆ, ರೂ.1.35 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಬಹುದು ಎಂದು ಹೇಳಲಾಗಿದೆ. ಇದು ದೇಶಿಯ ಮಾರುಕಟ್ಟೆಯಲ್ಲಿ ಪ್ರಸ್ತುತ ಗ್ರಾಹಕರಿಗೆ ಸಿಗುವ ಪಲ್ಸರ್ NS200 ಹಾಗೂ ಪಲ್ಸರ್ N250ಕ್ಕಿಂತ ತುಂಬಾ ಕಡಿಮೆ ಬೆಲೆಯನ್ನು ಹೊಂದಿರಲಿದೆ. ನ್ಯೂ ಜನರೇಷನ್ ಪಲ್ಸರ್ ಬೈಕ್‌ಗಳಿಗೆ ಮಾರುಕಟ್ಟೆಗೆ ಜಾಗ ಮಾಡಿಕೊಡಲು ಈ ಪಲ್ಸರ್ 220F ಬೈಕ್‌ನ್ನು ಕಂಪನಿಯು ಮಾರಾಟದಿಂದ ಸ್ಥಗಿತಗೊಳಿಸಿತು.
ಭಾರತೀಯ ಮಾರುಕಟ್ಟೆಯಲ್ಲಿ ಈ ಹಿಂದೆ ಖರೀದಿಗೆ ಲಭ್ಯವಿದ್ದ ಬಜಾಜ್ ಪಲ್ಸರ್ 220F ಬೈಕ್‌ನ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು ಮಾರಾಟದಿಂದ ಸ್ಗಗಿತವಾದಲೇ BS6 ಎಂಜಿನ್ ಸಹಾಯದಿಂದ ಕಾರ್ಯ ನಿರ್ವಹಿಸುತ್ತಿತ್ತು. ಈ ಪಲ್ಸರ್ 220F, ಏರ್/ಆಯಿಲ್ -ಕೋಲ್ಡ್ 220 ಸಿಸಿ ಫ್ಯುಯೆಲ್-ಇಂಜೆಕ್ಟ್ದ್ ಮೋಟಾರ್ ಹೊಂದಿದ್ದು, 8,500 rpmನಲ್ಲಿ 20.9 hp ಗರಿಷ್ಠ ಪವರ್ ಹಾಗೂ 7,000 rpmನಲ್ಲಿ 18.5Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.
ಸದ್ಯ ದೇಶದಲ್ಲಿ ಖರೀದಿಗೆ ದೊರೆಯುವ ಬಜಾಜ್ ಪಲ್ಸರ್ NS200 ಬಗ್ಗೆ ಹೇಳುವುದಾದರೆ, ಇದು ರೂ.1,85,733 ಬೆಲೆಯಲ್ಲಿ ಗ್ರಾಹಕರಿಗೆ ದೊರೆಯಲಿದೆ. 199.5 ಸಿಸಿ BS6 ಎಂಜಿನ್ ಮೂಲಕ ಕಾರ್ಯನಿರ್ವಹಿಸಲಿದ್ದು, 24.13 bhp ಗರಿಷ್ಠ ಪವರ್ ಹಾಗೂ 18.74 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಬೈಕ್ 159.5 ಕೆಜಿ ತೂಕವಿದ್ದು, 12 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದೆ. ಇದರ ಕಾರ್ಯಕ್ಷಮತೆ ಗ್ರಾಹಕರಿಗೆ ಇಷ್ಟವಾಗುತ್ತದೆ.
ನೂತನ ಬಜಾಜ್ ಪಲ್ಸರ್ NS200 ಒಟ್ಟು ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಬರ್ನ್ಟ್ ರೆಡ್, ಪ್ಯೂಟರ್ ಗ್ರೇ, ಸ್ಯಾಟಿನ್ ಬ್ಲೂ ಮತ್ತು ಮೆಟಾಲಿಕ್ ಪರ್ಲ್ ವೈಟ್. ಈ ಬೈಕ್, ಫ್ರಂಟ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಹಾಗೂ ರೇರ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದ್ದು, ಫ್ರಂಟ್ 280 ಎಂಎಂ ಡಿಸ್ಕ್ ಬ್ರೇಕ್ ಮತ್ತು ರೇರ್ 230 ಎಂಎಂ ಡಿಸ್ಕ್ ಬ್ರೇಕ್ ಜೊತೆಗೆ ಆಂಟಿ-ಲಾಕಿಂಗ್ ಬ್ರೇಕಿಂಗ್ ಸಿಸ್ಟಮ್ (ABS) ಅನ್ನು ಪಡೆದುಕೊಂಡಿದೆ.
ಬಜಾಜ್ ಪಲ್ಸರ್ N250 ಬೈಕ್ ರೂ.1,86,176 ಬೆಲೆಯಲ್ಲಿ ಎರಡು ರೂಪಾಂತರ ಹಾಗೂ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಟಾಪ್ ಎಂಡ್ ರೂಪಾಂತರ ಮಾದರಿ ರೂ.1,99,475 ದರವನ್ನು ಹೊಂದಿದೆ. ಇದು 249 ಸಿಸಿ BS6 ಎಂಜಿನ್ ಹೊಂದಿದ್ದು, 24.1 bhp ಗರಿಷ್ಠ ಪವರ್ ಹಾಗೂ 21.5 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್, ಆಂಟಿ-ಲಾಕಿಂಗ್ ಬ್ರೇಕಿಂಗ್ ಸಿಸ್ಟಮ್ ಪಡೆದಿದ್ದು, 162 ಕೆಜಿ ತೂಕವಿದೆ. ಅಲ್ಲದೆ, 14 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದೆ.
ಈ ಬೈಕ್, ಅತ್ಯಾಕರ್ಷಕ ಎಲ್ಇಡಿ ಹೈಡ್ ಲೈಟ್, ಎಲ್ಇಡಿ DRL, ಸೆಮಿ ಡಿಜಿಟಲ್ ಕನ್ಸೋಲ್ ಹಾಗೂ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುಜುಕಿ ಜಿಕ್ಸರ್ 250 ಮತ್ತು ಯಮಹಾ ಎಫ್‌ಜೆಡ್ 25 ಬೈಕ್ ಗಳಿಗೆ ಭಾರೀ ಪೈಪೋಟಿ ನೀಡಲಿದೆ. ಸದ್ಯ, ಬಜಾಜ್ ಪಲ್ಸರ್ 220F ಕೂಡ ಮಾರುಕಟ್ಟೆಗೆ ಗ್ರ್ಯಾಂಡ್ ರೀ-ಎಂಟ್ರಿ ಕೊಡಲು ಸಿದ್ದವಾಗಿದ್ದು, ಬೆಲೆ ಕೂಡ ಕಡಿಮೆ ಇರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.


Click it and Unblock the Notifications








