Ather: ಬೆಂಗಳೂರಿನ ಎಥರ್‌ನಿಂದ ಗರಿಷ್ಠ ದೂರ ಕ್ರಮಿಸುವ ಹೊಸ ಎಲೆಕ್ಟ್ರಿಕ್ ಸ್ಕೂಟರ್, ಹೇಗಿರಲಿದೆ?

ದೇಶದಲ್ಲಿ ದಿನದಿಂದ ದಿನಕ್ಕೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಖ್ಯಾತಿಗಳಿಸುತ್ತಿವೆ. ಅದರಲ್ಲೂ ಬೆಂಗಳೂರು ಮೂಲದ ಕಂಪನಿಗಳ ಇ-ಸ್ಕೂಟರ್‌ಗಳೇ ಅಬ್ಬರಿಸುತ್ತಿವೆ. ಇದೀಗ, ಎಥರ್ ಎನರ್ಜಿ (Ather Energy), 450ಎಸ್ (450S) ಎಲೆಕ್ಟ್ರಿಕ್ ಸ್ಕೂಟರ್‌ನ ಹೊಸ ರೂಪಾಂತರ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಸದ್ಯ, ದೊರೆತ್ತಿರುವ ಮಾಹಿತಿ ಪ್ರಕಾರ, ಎಥರ್‌, ನೂತನ ವೇರಿಯೆಂಟ್ ತಯಾರಿಕೆ ಕಾರ್ಯದಲ್ಲಿ ನಿರತವಾಗಿದೆ ಎಂಬುದಕ್ಕೆ ಸೋರಿಕೆಯಾಗಿರುವ ದಾಖಲೆಗಳಿಂದ ವಿವರಗಳು ಸಿಕ್ಕಿವೆ. ಕಂಪನಿಯು 450ಎಸ್ ಹೆಚ್ಆರ್ (450S HR) ಸ್ಕೂಟರ್‌ನ್ನು ರೆಡಿ ಮಾಡುತ್ತಿದೆ. ಇದು ದೊಡ್ಡ ಬ್ಯಾಟರಿ ಪ್ಯಾಕ್ ಹೊಂದಿರುವ ಹೈ ರೇಂಜ್ (High Range) ಸ್ಕೂಟರ್‌ ಆಗಿರಬಹುದು ಎಂದು ಅಂದಾಜಿಸಲಾಗಿದೆ.

Ather: ಬೆಂಗಳೂರಿನ ಎಥರ್‌ನಿಂದ ಗರಿಷ್ಠ ದೂರ ಕ್ರಮಿಸುವ ಹೊಸ ಎಲೆಕ್ಟ್ರಿಕ್ ಸ್ಕೂಟರ್, ಹೇಗಿರಲಿದೆ?

ಪ್ರಸ್ತುತ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಎಥರ್‌ 450ಎಸ್ ಇ-ಸ್ಕೂಟರ್, 2.9 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಹೊಸ ಸ್ಕೂಟರ್, ಬೃಹತ್ ಗಾತ್ರದ 3.7 kWh ಬ್ಯಾಟರಿ ಪಡೆದಿರಲಿದೆ. ಸಂಪೂರ್ಣ ಚಾರ್ಜಿನಲ್ಲಿ 156 km ರೇಂಜ್ ನೀಡಬಹುದು ಎಂದು ಹೇಳಲಾಗಿದೆ. ಈಗ, ಗ್ರಾಹಕರಿಗೆ ಸಿಗುವ 450ಎಕ್ಸ್ ಫುಲ್ ಚಾರ್ಜಿನಲ್ಲಿ 146 km ರೇಂಜ್ ಕೊಡಲಿದೆ.

ಸೋರಿಕೆಯಾಗಿರುವ ಮಾಹಿತಿ ಪ್ರಕಾರ, ಎಥರ್ 450ಎಸ್ ಹೆಚ್ಆರ್ ಎಲೆಕ್ಟ್ರಿಕ್ ಸ್ಕೂಟರ್, ಸುಮಾರು 54 ಎಂಎಂ ಚಿಕ್ಕದಾಗಿರಲಿದೆ. 1,837 ಎಂಎಂ ಉದ್ದವನ್ನು ಹೊಂದಿರಲಿದ್ದು, 450ಎಸ್ ರೀತಿಯೇ ವೀಲ್‌ಬೇಸ್ ಪಡೆದಿರಲಿದೆ. ಬ್ಯಾಟರಿ ತೂಕ 22 ಕೆಜಿ ಇರಲಿದೆ. ಜೊತೆಗೆ 80 kmph ಟಾಪ್ ಸ್ವೀಡ್ ಹೊಂದಿರುವ ನಿರೀಕ್ಷೆಯಿದೆ. ಇತರೆ ಮಾದರಿಗೆ ಹೋಲಿಕೆ ಮಾಡಿದರೆ 10 kmph ಕಡಿಮೆ.

Ather: ಬೆಂಗಳೂರಿನ ಎಥರ್‌ನಿಂದ ಗರಿಷ್ಠ ದೂರ ಕ್ರಮಿಸುವ ಹೊಸ ಎಲೆಕ್ಟ್ರಿಕ್ ಸ್ಕೂಟರ್, ಹೇಗಿರಲಿದೆ?

ಹೊಸ 450ಎಸ್ ಹೆಚ್ಆರ್ ಎಲೆಕ್ಟ್ರಿಕ್ ಸ್ಕೂಟರ್ ಹಿಂದಿನ ಮಾದರಿಯಂತೆ ಬಹುತೇಕ ವಿನ್ಯಾಸವನ್ನು ಪಡೆದಿರಲಿದೆ. ಆದರೆ, ಟಚ್‌ಸ್ಕ್ರೀನ್ ಡಿಜಿಟಲ್ ಕನ್ಸೋಲ್ ಸೇರಿದಂತೆ ಕೆಲವೊಂದು ವೈಶಿಷ್ಟ್ಯಗಳನ್ನು ಪಡೆಯದೆಯೋ ಇರಬಹುದು. ಇದರೊಂದಿಗೆ 'ವಾರ್ಪ್' ರೈಡಿಂಗ್ ಮೋಡ್ ಅನ್ನು ಕಳೆದುಕೊಳ್ಳಬಹುದು. ಈ ಸ್ಕೂಟರ್, ರೂ.1.35 ಲಕ್ಷದಿಂದ ರೂ.1.40 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗಲಿದ್ದು, ಹಬ್ಬದ ಋತುವಿನಲ್ಲಿ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಸದ್ಯ, ಭಾರತದಲ್ಲಿ ಖರೀದಿಗೆ ಸಿಗುವ ಎಥರ್‌ ಎಲೆಕ್ಟ್ರಿಕ್ ಸ್ಕೂಟರ್ ಗಳ ಬಗ್ಗೆ ತಿಳಿಯೋಣ. ಎಂಟ್ರಿ ಲೆವೆಲ್ 450ಎಸ್ ಸ್ಕೂಟರ್, ರೂ.1,29,999 ಬೆಲೆಯಲ್ಲಿ ಸಿಗುತ್ತದೆ. ಇದು, 2.9 kWh ಸಾಮರ್ಥ್ಯದ ಬ್ಯಾಟರಿ ಒಳಗೊಂಡಿದ್ದು, 115 km ರೇಂಜ್ ನೀಡುತ್ತದೆ. 90 kmph ಟಾಪ್ ಸ್ವೀಡ್ ಪಡೆದಿದೆ. ಕೇವಲ 3.9 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಹೊಂದಲಿದೆ.

Ather: ಬೆಂಗಳೂರಿನ ಎಥರ್‌ನಿಂದ ಗರಿಷ್ಠ ದೂರ ಕ್ರಮಿಸುವ ಹೊಸ ಎಲೆಕ್ಟ್ರಿಕ್ ಸ್ಕೂಟರ್, ಹೇಗಿರಲಿದೆ?

ಎಥರ್ 450ಎಕ್ಸ್ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಸಿಗುತ್ತದೆ. ಅವುಗಳೆಂದರೆ, 2.9 kWh ಹಾಗೂ 3.7 kWh ಬ್ಯಾಟರಿ ಪ್ಯಾಕ್. ಕ್ರಮವಾಗಿ ರೂ.1,38,000 ಹಾಗೂ ರೂ.1,44,921 ದರವನ್ನು ಹೊಂದಿದ್ದು, 2.9 kWh ಬ್ಯಾಟರಿ ಪಡೆದಿರುವ ಸ್ಕೂಟರ್ 115 km ಹಾಗೂ 3.7 kWh ಬ್ಯಾಟರಿ ಪಡೆದಿರುವ ಸ್ಕೂಟರ್ 145 km ರೇಂಜ್ ನೀಡುತ್ತದೆ. 7 ಇಂಚಿನ TFT ಟಚ್‌ಸ್ಕ್ರೀನ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, September 27, 2023, 17:08 [IST]
English summary
Bangalore based ather company upcoming 450s e scooter details leaked
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+