Ather: ನಮ್ಮ ಬೆಂಗಳೂರಿನ ಎಥರ್‌ನಿಂದ ಅಗ್ಗದ ಬೆಲೆಗೆ 3 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ, ಎದುರಾಳಿಗೆ ನಡುಕ!
ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದಿನದಿಂದ ದಿನಕ್ಕೆ ಭಾರೀ ಜನಪ್ರಿಯತೆಯನ್ನು ಗಳಿಸುತ್ತಿವೆ. ಬೆಂಗಳೂರಿನ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಎಥರ್ ಎನರ್ಜಿ (Ather Energy) ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು '450' ಸರಣಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅಗ್ಗದ ಬೆಲೆಗೆ ಬಿಡುಗಡೆಗೊಳಿಸಿದೆ.
ಈ ಮೊದಲೇ ಘೋಷಣೆ ಮಾಡಿದ್ದಂತೆ ಎಥರ್ ಕಂಪನಿಯು ನೂತನ 450ಎಸ್ ಹಾಗೂ ಸದ್ಯ, ಖರೀದಿಗೆ ಲಭ್ಯವಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ನ ಎರಡು ಹೊಸ ರೂಪಾಂತರಗಳನ್ನು ಲಾಂಚ್ ಮಾಡಿದೆ. ಇವು, ಬ್ಯಾಟರಿ ಪ್ಯಾಕ್, ರೇಂಜ್ ವಿಚಾರದಲ್ಲಿ ಭಿನ್ನತೆ ಹೊಂದಿವೆ. ಬೆಲೆ ಬಗ್ಗೆ ಹೇಳುವುದಾದರೆ, ಎಥರ್ 450ಎಸ್ ರೂ.1,29,999 ಹಾಗೂ 450ಎಕ್ಸ್ (2.9kWh ಬ್ಯಾಟರಿ) ರೂ.1,38,000, 450ಎಕ್ಸ್ (3.7kWh) ರೂ.1,44,921 (ಎಕ್ಸ್ ಶೋರೂಂ, ಬೆಂಗಳೂರು) ಬೆಲೆಯಲ್ಲಿ ಖರೀದಿಗೆ ಲಭ್ಯವಿವೆ.

ಪ್ರಸ್ತುತ, ಬಿಡುಗಡೆಗೊಂಡಿರುವ ಎಥರ್ 450 ಸರಣಿ ಎಲೆಕ್ಟ್ರಿಕ್ ಸ್ಕೂಟರ್‌ಗಳು, ಬಹುತೇಕ ಹಿಂದಿನ ಮಾದರಿಗೆ ಹೋಲಿಕೆಯಾಗುವಂತಹ ವಿನ್ಯಾಸವನ್ನು ಹೊಂದಿವೆ. ಶಾರ್ಪ್ ಫ್ರಂಟ್ ಎಂಡ್, ಆಕರ್ಷಕ LED ಹೆಡ್‌ಲೈಟ್ ಅನ್ನು ಪಡೆದಿದೆ. ಜೊತೆಗೆ ಹ್ಯಾಂಡಲ್‌ಬಾರ್ ಕೌಲ್‌ನಲ್ಲಿ ಟರ್ನ್ ಇಂಡಿಕೇಟರ್ ಅನ್ನು ಹೊಂದಿದ್ದು, ಸೈಡ್ ಲುಕ್ ಕೂಡ ಅತ್ಯುತ್ತಮವಾಗಿದೆ. ಇದು ನಗರ ಪ್ರದೇಶ ಯುವ ಗ್ರಾಹಕರನ್ನು ಸೆಳೆಯುತ್ತದೆ.
ವೈಶಿಷ್ಟ್ಯದ ವಿಚಾರವಾಗಿ ಹೇಳುವುದಾದರೆ, ಎಥರ್ 450 ಸರಣಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬೇರೆ-ಬೇರೆ ರೀತಿಯ ಫೀಚರ್ಸ್ ಹೊಂದಿವೆ. ಅದರಲ್ಲೂ ಹೊಚ್ಚ ಹೊಸ 450ಎಸ್ ಎಲೆಕ್ಟ್ರಿಕ್ ಸ್ಕೂಟರ್ 7 ಇಂಚಿನ ಡೀಪ್‌ವ್ಯೂ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನುಳಿದಂತೆ 450ಎಕ್ಸ್ ನೂತನ ರೂಪಾಂತರಗಳು ಹಳೆಯ 7 ಇಂಚಿನ TFT ಟಚ್‌ಸ್ಕ್ರೀನ್ ಅನ್ನು ಪಡೆದಿವೆ.

ಗ್ರಾಹಕರು, ಹೆಚ್ಚುವರಿಯಾಗಿ ರೂ.20,000 ಪಾವತಿಸುವ ಮೂಲಕ ಈ ಸ್ಕೂಟರ್‌ಗಳನ್ನು 'ಪ್ರೊ ಪ್ಯಾಕ್' ಆಯ್ಕೆಯೊಂದಿಗೆ ಖರೀದಿಸಬಹುದು. ಇದು, 450ಎಸ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಸ್ಮಾರ್ಟ್ಇಕೋ, ಇಕೋ, ರೈಡ್, ಸ್ಪೋರ್ಟ್ ಹಾಗೂ 450ಎಕ್ಸ್ ಇ - ಸ್ಕೂಟರ್‌ನಲ್ಲಿ ಸ್ಮಾರ್ಟ್ಇಕೋ, ಇಕೋ, ರೈಡ್, ಸ್ಪೋರ್ಟ್ ಹಾಗೂ ವಾರ್ಪ್ ಎಂಬ ರೈಡಿಂಗ್ ಮೋಡ್ ಬಳಸಲು ಅನುವು ಮಾಡಿಕೊಡುತ್ತದೆ.
ಇದರೊಟ್ಟಿಗೆ, ಗೈಡ್ -ಮಿ-ಹೋಮ್ ಲೈಟ್ಸ್, ಕೋಸ್ಟಿಂಗ್ ರೆಜೆನ್, ನ್ಯಾವಿಗೇಷನ್, ಟೋ/ ಥೆಫ್ಟ್ ನೋಟಿಫಿಕೇಶನ್, ರೈಡ್ ಸ್ಟೇಟಸ್, ಇಂಟರ್-ಸಿಟಿ ಪಾರ್ಕಿಂಗ್ ಬಗ್ಗೆಯು ಮಾಹಿತಿ ಒದಗಿಸುತ್ತದೆ. ಎಥರ್ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಪ್ಯಾಕ್ ಅನುಗುಣವಾಗಿ ಸಂಪೂರ್ಣ ಚಾರ್ಜಿನಲ್ಲಿ 115 km ರಿಂದ 145 km ರೇಂಜ್ ನೀಡುತ್ತದೆ.

ನೂತನ ಎಥರ್ 450ಎಸ್ ಎಲೆಕ್ಟ್ರಿಕ್ ಸ್ಕೂಟರ್, 2.9 kWh ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದ್ದು, ಫುಲ್ ಚಾರ್ಜಿನಲ್ಲಿ 115 km (IDC) ರೇಂಜ್ ಕೊಡುತ್ತದೆ. ಕೇವಲ 3.9 ಸೆಕೆಂಡುಗಳಲ್ಲಿ 0 - 40 ವೇಗವನ್ನು ಪಡೆಯಲಿದ್ದು, 90 km/h ಟಾಪ್ ಸ್ವೀಡ್ ಹೊಂದಿದೆ. 450ಎಸ್ ಹಾಗೂ 450ಎಕ್ಸ್ (2.9kWh) ಸ್ಕೂಟರ್ ಬ್ಯಾಟರಿ ಪ್ಯಾಕ್, 8 ಗಂಟೆ 36 ನಿಮಿಷದಲ್ಲಿ ಚಾರ್ಜ್ ಆಗುತ್ತದೆ.
ಎಥರ್ 450ಎಕ್ಸ್ (3.7kWh) ಎಲೆಕ್ಟ್ರಿಕ್ ಸ್ಕೂಟರ್, 5 ಗಂಟೆ 45 ನಿಮಿಷದಲ್ಲಿ ಚಾರ್ಜ್ ಆಗುತ್ತದೆ. ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಸ್, ರೇರ್, ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಎರಡು ತುದಿಯಲ್ಲಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. 12-ಇಂಚಿನ ಅಲಾಯ್ ವೀಲ್ಸ್, ಫ್ರಂಟ್ 90/90, ರೇರ್ 100/80 ಅಳತೆಯ ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದ್ದು, ಬಹುತೇಕ ಅಕ್ಟೋಬರ್ ತಿಂಗಳಲ್ಲಿ ವಿತರಣೆಯಾಗಲಿದೆ.
ಇನ್ನು, ಎಥರ್ ಬಿಡುಗಡೆಗೊಳಿಸುವ ಈ ಮೂರು ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಭಾರತದಲ್ಲಿ ಪ್ರಬಲ ಪ್ರತಿಸ್ಪರ್ಧಿಗಳೇ ಇವೆ. ಓಲಾ, ಟಿವಿಎಸ್, ಹೀರೋ ಹಾಗೂ ಬಜಾಜ್ ಕಂಪನಿಗಳ ಪೈಪೋಟಿಯನ್ನು ಎದುರಿಸಬೇಕು. ಆದರೂ, ಈ ಬಾರಿ ಲಾಂಚ್ ಆಗಿರುವ ಸ್ಕೂಟರ್ ಗಳು ಗ್ರಾಹಕರಿಗೆ ಇಷ್ಟವಾಗುವ ವೈಶಿಷ್ಟ್ಯಗಳನ್ನು ಹೊಂದಿದ್ದು, ಮುಂಬರುವ ಹಬ್ಬದ ಖತುವಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








