Ather: ಬೆಂಗಳೂರಿನ ಎಥರ್‌ನಿಂದ 450 ಅಪೆಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಹಿರಂಗ, ಇದೇ ವೇಗದ ಟೂ ವೀಲರ್!

ಬೆಂಗಳೂರು ಮೂಲದ ಎಥರ್ ಎನರ್ಜಿ (Ather Energy) ತನ್ನ 450 ಸರಣಿ ಎಲೆಕ್ಟ್ರಿಕ್ ಮಾರಾಟದೊಂದಿಗೆ ದೇಶಾದ್ಯಂತ ಖ್ಯಾತಿ ಗಳಿಸಿದೆ. ಇದೀಗ, ಮತ್ತಷ್ಟು ಹೊಸ ಗ್ರಾಹಕರನ್ನು ಆಕರ್ಷಿಸಲು ವಿವಿಧ ಮಾದರಿ ಹೊಸ ಸ್ಕೂಟರ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಕೆಲವೇ ತಿಂಗಳಲ್ಲಿ ಎರಡು ನವೀನ ಇ-ಸ್ಕೂಟರ್‌ಗಳ ಬಿಡುಗಡೆಗೆ ಸಿದ್ದತೆಯನ್ನು ನಡೆಸುತ್ತಿದೆ.

ಎಥರ್ ಎನರ್ಜಿ ಸಿಇಒ ತರುಣ್ ಮೆಹ್ತಾ (Tarun Mehta) ಅವರು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಎಥರ್‌ 450 ಅಪೆಕ್ಸ್ (Ather 450 Apex) ಅನ್ನು ಬಹಿರಂಗಪಡಿಸಿದ್ದಾರೆ. ಇದು ಕೂಡ 450 ಎಲೆಕ್ಟ್ರಿಕ್ ಸ್ಕೂಟರ್ ಸರಣಿಯಲ್ಲಿ ಮುಂದಿವರಿಯಲಿದೆ. ತರುಣ್ ಮೆಹ್ತಾ ಈ ಸ್ಕೂಟರ್‌ನ್ನು '450 ಪ್ಲಾಟ್‌ಫಾರ್ಮ್‌ನ ಅತ್ಯುತ್ತಮ ಮಾದರಿ' ಎಂದು ಕರೆದಿದ್ದಾರೆ. 450 ಅಪೆಕ್ಸ್ ಮುಂಬರುವ ದಿನಗಳಲ್ಲಿ ಎಥರ್ ಕಂಪನಿಯ ವೇಗದ ಎಲೆಕ್ಟ್ರಿಕ್ ಸ್ಕೂಟರ್‌ ಆಗಿ ಹೊರಹೊಮ್ಮಲಿದೆ.

Ather: ಬೆಂಗಳೂರಿನ ಎಥರ್‌ನಿಂದ 450 ಅಪೆಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಹಿರಂಗ, ಇದೇ ವೇಗದ ಟೂ ವೀಲರ್!

ಎಥರ್ ಎನರ್ಜಿ, ತನ್ನ ನೂತನ 450 ಅಪೆಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಮುಂದಿನ ವರ್ಷ ಬಿಡುಗಡೆಗೊಳಿಸಲಿದ್ದು, ತನ್ನ ಕಮ್ಯುನಿಟಿ ಸದಸ್ಯರಿಗೆ ಈ ಸ್ಕೂಟರ್ ಟೆಸ್ಟ್ ರೈಡ್ ಮಾಡಲು ಆಹ್ವಾನಿಸಿತ್ತು. ಹೊಸ ಎಲೆಕ್ಟ್ರಿಕ್ ಸ್ಕೂಟರ್, 450 ಸರಣಿ ಮಾದರಿಗಳಲ್ಲಿ ಅತ್ಯತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ. ಜೊತೆಗೆ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವುದರಿಂದ ಕೊಂಚ ಹೆಚ್ಚಿನ ಬೆಲೆಯನ್ನು ಪಡೆದಿರಬಹುದು ಎಂದು ವರದಿಯಾಗಿದೆ.

ಎಥರ್ 450 ಅಪೆಕ್ಸ್‌ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಯಕ್ಷಮತೆಯ ಅಂಕಿಅಂಶ ಹಾಗೂ ವಿನ್ಯಾಸದ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಇತ್ತೀಚೆಗೆ ಸಿಇಒ ತರುಣ್ ಮೆಹ್ತಾ, ಮುಂದಿನ ವರ್ಷಾರಂಭದಲ್ಲಿ 'ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್' ಪರಿಚಯಿಸುವ ಕಂಪನಿಯ ಯೋಜನೆ ಬಗ್ಗೆ ವಿವರಗಳನ್ನು ದೃಢಪಡಿಸಿದ್ದರು. ಹೊಸ ಎಲೆಕ್ಟ್ರಿಕ್ ಸ್ಕೂಟರ್, 450 ಸರಣಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಿಂತ ದೊಡ್ಡದಾಗಿರಲಿದೆ. ಭರ್ಜರಿ ವೈಶಿಷ್ಟ್ಯಗಳನ್ನು ಹೊಂದುವ ಮೂಲಕ ಕೈಗೆಟುಕುವ ಬೆಲೆಗೆ ಖರೀದಿಗೆ ಸಿಗಲಿದೆ ಎಂದು ತಿಳಿದುಬಂದಿದೆ.

Ather: ಬೆಂಗಳೂರಿನ ಎಥರ್‌ನಿಂದ 450 ಅಪೆಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಹಿರಂಗ, ಇದೇ ವೇಗದ ಟೂ ವೀಲರ್!

ಈ ನೂತನ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯ ಎಂಟ್ರಿ ಲೆವೆಲ್ ಮಾದರಿಯಾಗಿರಲಿದ್ದು, ಕೆಲವೇ ದಿನಗಳ ಹಿಂದೆ, ಇದೇ ಸ್ಕೂಟರ್ ಪ್ರಾಯೋಗಿಕ ಸಂಚಾರ ನಡೆಸಿತು ಎನ್ನಲಾಗಿದೆ. ಟೆಸ್ಟ್ ವೇಳೆ ಕಂಡುಬಂದ ಹೊಸ ಇ-ಸ್ಕೂಟರ್, ದೊಡ್ಡದಾದ ಫ್ಲೋರ್‌ಬೋರ್ಡ್, ಸಿಂಗಲ್-ಪೀಸ್ ಸೀಟ್, ಸಿಂಗಲ್ ಪೀಸ್ ಗ್ರಾಬ್-ರೈಲ್, ನವೀನ ಎಲ್‌ಇಡಿ ಹೆಡ್‌ಲೈಟ್, ಟೈಲ್‌ಲೈಟ್, 12-ಇಂಚಿನ ಅಲಾಯ್ ವೀಲ್ಸ್ ಹೊಂದಿತ್ತು.

ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಎಥರ್ 450 ಸರಣಿ ಇ-ಸ್ಕೂಟರ್ ಬಗ್ಗೆ ತಿಳಿಯೋಣ. ಮೊದಲಿಗೆ ಕಂಪನಿಯ ಎಂಟ್ರಿ ಲೆವೆಲ್ '450ಎಸ್' ಇ-ಸ್ಕೂಟರ್ ರೂ.1,29,999 ಎಕ್ಸ್ ಶೋರೂಂ ಬೆಲೆಗೆ ಬಿಡುಗಡೆಯಾಗಿತ್ತು. 2.9 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 115 km ರೇಂಜ್ ನೀಡುತ್ತದೆ. 90 kmph ಟಾಪ್ ಸ್ವೀಡ್ ಹೊಂದಿದೆ.

ಮತ್ತೊಂದು, 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದು 2.9 kWh ಮತ್ತು 3.7 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದ್ದು, ಕ್ರಮವಾಗಿ ರೂ.1,38,000 ಮತ್ತು ರೂ.1,44,921 ಬೆಲೆಯನ್ನು ಹೊಂದಿತ್ತು. ಸಂಪೂರ್ಣ ಚಾರ್ಜ್ ನಲ್ಲಿ 115 km - 145 km ರೇಂಜ್ ನೀಡಲಿದ್ದು, ಡಿಸ್ಕ್ ಬ್ರೇಕ್ ಆಯ್ಕೆಯೊಂದಿಗೆ ಗ್ರಾಹಕರಿಗೆ ಸಿಗುತ್ತದೆ.

ಇನ್ನು, ಎಥರ್ ಮುಂದಿನ ವರ್ಷ ಎರಡು ಅತ್ಯಾಕರ್ಷಕ ಸ್ಕೂಟರ್ ಬಿಡುಗಡೆಗೆ ಸಿದ್ಧತೆ ನಡೆಸಿರುವುದು ಅದರ ಅಭಿಮಾನಿಗಳಿಗೆ ಖುಷಿ ತಂದಿದೆ. ನೂತನ ಸ್ಕೂಟರ್ ಗಳು ಅತ್ಯುತ್ತಮ ಕಾರ್ಯಕ್ಷಮತೆ, ಅತ್ಯಾಧುನಿಕ ವೈಶಿಷ್ಟ್ಯ ಹಾಗೂ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಇವು, ಒಲಾ, ಟಿವಿಎಸ್, ಹೀರೋ ಹಾಗೂ ಸಿಂಪಲ್ ಎನರ್ಜಿ ಕಂಪನಿ ಸ್ಕೂಟರ್ ಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, November 30, 2023, 13:27 [IST]
English summary
Bengaluru new ather 450 apex teased fastest electric scooter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+