Ather: ಬೆಂಗಳೂರಿನಲ್ಲಿ ಕಂಡುಬಂತು ಹೊಸ ಎಥರ್ ಸ್ಕೂಟರ್, ಇದೇ ಟಿವಿಎಸ್ ಐಕ್ಯೂಬ್ ಎದುರಾಳಿ?
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬೆಂಗಳೂರಿನ ಎಥರ್ ಎನರ್ಜಿ (Ather Energy) ವಿವಿಧ 450 ಸರಣಿ ಇ-ಸ್ಕೂಟರ್ ಮಾರಾಟದ ಮೂಲಕ ತನ್ನದೆಯಾದ ಛಾಪು ಮೂಡಿಸಿದೆ. ಇನ್ನಷ್ಟು ಗ್ರಾಹಕರಿಗೆ ಹತ್ತಿರವಾಗಲು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ವೊಂದನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಇತ್ತೀಚೆಗೆ, ಬೆಂಗಳೂರಿನಲ್ಲಿ ನೂತನ ಎಥರ್ ಎಲೆಕ್ಟ್ರಿಕ್ ಸ್ಕೂಟರ್ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದ್ದು, ಆ ಸ್ಪೈ ಚಿತ್ರಗಳು ಆನ್‌ಲೈನ್ ನಲ್ಲಿ ಸೋರಿಕೆಯಾಗಿವೆ. ಹೊಸ ಇ-ಸ್ಕೂಟರ್‌ಗೆ ಟಿವಿಎಸ್ ಐಕ್ಯೂಬ್ (TVS iQube) ಹಾಗೂ ಬಜಾಜ್ ಚೇತಕ್ (Bajaj Chetak) ಸ್ಕೂಟರ್‌ಗಳು ಪ್ರಬಲ ಪ್ರತಿಸ್ಪರ್ಧಿಯಾಗಲಿವೆ ಎಂದು ಹೇಳಲಾಗಿದೆ. ಈಗಿರುವ ಎಥರ್ ಸ್ಕೂಟರ್‌ಗಳಿಗೆ ಹೋಲಿಸಿದರೆ, ಮುಂಬರುವ ನೂತನ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚು ಅತ್ಯಾಧುನಿಕವಾಗಿರಲಿದೆ.

ವಿನ್ಯಾಸದ ದೃಷ್ಟಿಯಿಂದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಆಕರ್ಷಣೀಯವಾಗಿರಲಿದ್ದು, ಅದನ್ನು ಸ್ಪೈ ಚಿತ್ರದಲ್ಲೂ ನೋಡಬಹುದು. ದೊಡ್ಡದಾದ ಫ್ಲೋರ್‌ಬೋರ್ಡ್, ಸಿಂಗಲ್ - ಪೀಸ್ ಸೀಟ್, ಸಿಂಗಲ್ ಪೀಸ್ ಗ್ರಾಬ್-ರೈಲ್ ಅನ್ನು ಹೊಂದಿದೆ. ಈ ಸ್ಕೂಟರ್ ಎಡಭಾಗದಲ್ಲಿ ಮಡಚಬಹುದಾದ ಪಿಲಿಯನ್ ಫುಟ್‌ರೆಸ್ಟ್ ಇದೆ. ಜೊತೆಗೆ ನವೀನ ಎಲ್‌ಇಡಿ ಹೆಡ್‌ಲೈಟ್ ಹಾಗೂ ಟೈಲ್‌ಲೈಟ್ ಒಳಗೊಂಡಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್, ಬಹುತೇಕ 450ಎಕ್ಸ್ ಇ-ಸ್ಕೂಟರ್‌ಗೆ ಹೋಲಿಕೆಯಾಗುವ ಡಿಜಿಟಲ್ ಕನ್ಸೋಲ್ ಹೊಂದಿದ್ದು, 12 ಇಂಚಿನ ಅಲಾಯ್ ವೀಲ್, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಪಡೆದಿರುವುದನ್ನು ಕಾಣಬಹುದು. ನೂತನ ಎಥರ್ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಪ್ಯಾಕ್ ಹಾಗೂ ಮೋಟಾರ್ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಸಂಪೂರ್ಣ ಚಾರ್ಜ್ ನಲ್ಲಿ 100 ಕಿಲೋಮೀಟರ್ ನಿಂದ 150 ಕಿಲೋಮೀಟರ್ ರೇಂಜ್ ನೀಡಬಹುದು ಎಂದು ಅಂದಾಜಿಸಲಾಗಿದೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಎಥರ್ ಸ್ಕೂಟರ್‌ಗಳ ಬಗ್ಗೆ ತಿಳಿಯೋಣ. ಕಂಪನಿಯ ಆರಂಭಿಕ ಮಾದರಿ 450ಎಸ್ ಇ-ಸ್ಕೂಟರ್, ರೂ.1,29,999 ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಇದು, 2.9 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ಫುಲ್ ಚಾರ್ಜ್ ನಲ್ಲಿ 115 km ರೇಂಜ್ ಕೊಡುತ್ತದೆ.
ಈ ಎಥರ್ 450ಎಸ್ ಎಲೆಕ್ಟ್ರಿಕ್ ಸ್ಕೂಟರ್, 90 kmph ಟಾಪ್ ಸ್ವೀಡ್ ಹೊಂದಿದೆ. ಕೇವಲ 3.9 ಸೆಕೆಂಡುಗಳಲ್ಲಿ 0 ರಿಂದ 40 kmph ವೇಗವನ್ನು ಪಡೆಯಲಿದ್ದು, ಸ್ಮಾರ್ಟ್ಇಕೋ, ಇಕೋ, ರೈಡ್, ಸ್ಪೋರ್ಟ್ ಎಂಬ ರೈಡಿಂಗ್ ಮೋಡ್ ಒಳಗೊಂಡಿದೆ. ಎರಡು ತುದಿಗಳಲ್ಲಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿರುವುದು ವಿಶೇಷವಾಗಿದೆ.

ಪ್ರೀಮಿಯಂ ಮಾದರಿಯಾಗಿ ಗುರುತಿಸಿಕೊಂಡಿರುವ ಎಥರ್ 450ಎಕ್ಸ್, 2.9kWh ಬ್ಯಾಟರಿ ಹಾಗೂ 3.7kWh ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಅದಕ್ಕೆ ತಕ್ಕಂತೆ ಕ್ರಮವಾಗಿ ರೂ.1,38,000 ದಿಂದ ರೂ.1,44,921 ಬೆಲೆಯಿದೆ. ಸಂಪೂರ್ಣ ಚಾರ್ಜ್ ನಲ್ಲಿ 115 km ರಿಂದ 145 km ರೇಂಜ್ ನೀಡುವ ಸಾಮರ್ಥ್ಯ ಒಳಗೊಂಡಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಫುಲ್ ಚಾರ್ಜ್ ಆಗಲು ಸುಮಾರು ಐದು ಗಂಟೆ ಬೇಕಾಗಲಿದ್ದು, ಮುಂಭಾಗ ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಎರಡು ತುದಿಯಲ್ಲಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದ್ದು, 12 - ಇಂಚಿನ ಅಲಾಯ್ ವೀಲ್ಸ್ ಪಡೆದಿದೆ. ಇನ್ನು, ದೀಪಾವಳಿ ಹಬ್ಬವಿದ್ದ ಹಿನ್ನೆಲೆ, ಈ ನವೆಂಬರ್ ತಿಂಗಳು ಎಥರ್ ಸೇಲ್ಸ್ ವೃದ್ಧಿಸಿದೆ ಎನ್ನಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Source: Bikewale


Click it and Unblock the Notifications








