ವರ್ಷಾಂತ್ಯಕ್ಕೆ ಕೆಲವೇ ದಿನಗಳು ಬಾಕಿ: 2023 ರಲ್ಲಿ ಎಂಟ್ರಿಕೊಟ್ಟು ಸದ್ದು ಮಾಡಿದ ಬೈಕ್‌ಗಳಿವು!
ಭಾರತದಲ್ಲಿ ದ್ವಿಚಕ್ರ ವಾಹನ ವಿಭಾಗವು ಭಾರೀ ಡಿಮ್ಯಾಂಡ್ ಪಡೆದಿದೆ. ಈ ವರ್ಷ ಹಲವು ಹೊಸ ಮೋಟಾರ್‌ಸೈಕಲ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟರೆ, ಇನ್ನೂ ಕೆಲವು ಮಾದರಿಗಳು ಹಲವು ಅಪ್‌ಡೇಟ್‌ಗಳನ್ನು ಪಡೆದು ಬಿಡುಗಡೆಯಾದವು. ಹಾಗಾದ್ರೆ ಭಾರತದಲ್ಲಿ 2023 ರಲ್ಲಿ ಬಹು ನಿರೀಕ್ಷೆಗಳೊಂದಿಗೆ ಬಿಡುಗಡೆಯಾದ ಟಾಪ್ ಬೈಕ್‌ಗಳನ್ನು ಇಲ್ಲಿ ನೋಡೋಣ.
ರಾಯಲ್ ಎನ್‌ಫೀಲ್ಡ್ ಬುಲೆಟ್ 350: ಆಗಸ್ಟ್ 30 ರಂದು ಬಹುನಿರೀಕ್ಷಿತ Royal Enfield Bullet 350 ಅನ್ನು ಕಂಪನಿ ಬಿಡುಗಡೆ ಮಾಡಿತು. ಎಕ್ಸ್ ಶೋರೂಂ ಪ್ರಕಾರ ಈ ಬೈಕ್‌ನ ಬೆಲೆಯು ರೂ. 1,73,562 ದಿಂದ ಪ್ರಾರಂಭವಾಗುತ್ತದೆ. ಇದರ 349 ಸಿಸಿ ಎಂಜಿನ್ 20.2 bhp ಪವರ್ ಹಾಗೂ 27 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಟಿವಿಎಸ್ ಅಪಾಚಿ ಆರ್‌ಟಿಆರ್ 310: TVS Apache RTR 310 ಅನ್ನು ಸೆಪ್ಟಂಬರ್ 6 ರಂದು ಕಂಪನಿ ಬಿಡುಗಡೆ ಮಾಡಿತು. ಇದರ ಎಕ್ಸ್ ಶೋರೂಂ ಬೆಲೆಯು 2,42,990 ರೂ. ನಿಂದ ಆರಂಭವಾಗುತ್ತದೆ. ಇದರ 312.12 ಸಿಸಿ ಎಂಜಿನ್ 35.8 bhp ಪವರ್ ಹಾಗೂ 28.7 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಅಪ್ರಿಲಿಯಾ ಆರ್‌ಎಸ್457: ಇದೇ ತಿಂಗಳು ಗೋವಾದಲ್ಲಿ ನಡೆದ 2023 ಐಬಿಡಬ್ಲ್ಯುನಲ್ಲಿ Aprilia RS457 ಅನ್ನು ರೂ. 4,10,000 ಎಕ್ಸ್ ಶೋರಂ ಬೆಲೆಯೊಂದಿಗೆ ಬಿಡುಗಡೆ ಮಾಡಲಾಯಿತು. ಇದರ 457 ಸಿಸಿ ಎಂಜಿನ್ 47bhp ಪವರ್ ಮತ್ತು 44Nm ಪೀಕ್ ಟಾರ್ಕ್ ಅನ್ನು ಹೊರಹಾಕಬಲ್ಲದು.

ಹೋಂಡಾ ಸಿಬಿ 300ಆರ್: ಅಕ್ಟೋಬರ್‌ನಲ್ಲಿ ಬಿಡುಗಡೆಯಾದ Honda CB 300R, ಕಂಪನಿಯ ಬಹುನಿರೀಕ್ಷಿತ ಬೈಕ್ ಆಗಿದೆ. ಇದರ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 2,40,042 ನಿಂದ ಆರಂಭವಾಗುತ್ತದೆ. ಇದರ 286 ಸಿಸಿ ಎಂಜಿನ್ 30.7bhp ಪವರ್ ಹಾಗೂ 27.5Nm ಟಾರ್ಕ್ ಅನ್ನು ಹೊರಹಾಕಬಲ್ಲ ಸಾಮರ್ಥ್ಯವನ್ನು ಹೊಂದಿದೆ.
ಹೋಂಡಾ ಶೈನ್100: ಹೋಂಡಾ ತನ್ನ ಬಹುಬೇಡಿಕೆಯ Honda Shine 100 ಮಾದರಿಯ ಹೊಸ ಆವೃತ್ತಿಯನ್ನು ಮೇ ತಿಂಗಳಿನಲ್ಲಿ ಬಿಡುಗಡೆ ಮಾಡಿತು. ಇದರ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 65,012 ನಿಂದ ಪ್ರಾರಂಭವಾಗುತ್ತದೆ. ಇದರ 98.98 ಸಿಸಿ ಎಂಜಿನ್ 7.28bhp ಪವರ್ ಹಾಗೂ 8.05Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೀರೋ ಕರೀಜ್ಮಾ ಎಕ್ಸ್‌ಎಮ್‌ಆರ್: Hero Karizma XMR ಅನ್ನು ಕಳೆದ ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 1,79,900 ರಿಂದ ಪ್ರಾರಂಭವಾಗುತ್ತದೆ. ಇದರ 210 ಸಿಸಿ ಎಂಜಿನ್ 25.15 bhp ಪವರ್ ಹಾಗೂ 20.4Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಬಜಾಜ್ ಪಲ್ಸಾರ್ NS200: Bajaj Pulsar NS200 ಹೊಸ ಅಪ್‌ಡೇಟೆಡ್ ಮಾಡಲ್ ಅನ್ನು ಮಾರ್ಚ್‌ನಲ್ಲಿ ಬಿಡುಗಡೆ ಮಾಡಲಾಯಿತು. ಇದರ ಬೆಲೆಯು ರೂ. 1,42,055 ರಿಂದ ಪ್ರಾರಂಭವಾಗುತ್ತದೆ. ಇದರ 199.5 ಸಿಸಿ ಎಂಜಿನ್ 24.13bhp ಪವರ್ ಹಾಗೂ 18.74Nm ಪೀಕ್ ಟಾರ್ಕ್ ಅನ್ನು ಹೊರಹಾಕಬಲ್ಲದು.

ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್: Hero Super Splendor XTech ಅನ್ನು ಕೂಡ ಮಾರ್ಚ್‌ನಲ್ಲಿ ಬಿಡುಗಡೆ ಮಾಡಲಾಯಿತು. ಇದರ ಬೆಲಯು 85,149 ರಿಂದ ಪ್ರಾರಂಭವಾಗುತ್ತದೆ. ಇದರ 124.7 ಸಿಸಿ ಎಂಜಿನ್ 10.72 bhp ಪವರ್ ಹಾಗೂ 10.6 Nm ಟಾರ್ಕ್ ಅನ್ನು ಹೊರಹಾಕಬಲ್ಲದು.
ರಾಯಲ್ ಎನ್‌ಫಿಲ್ಡ್ ಸೂಪರ್ ಮೀಟಿಯೋರ್ 650: Royal Enfield Super Meteor 650 ಅನ್ನು ವರ್ಷದ ಆರಂಭದಲ್ಲಿ ಜನವರಿಯಲ್ಲಿ ಬಿಡುಗಡೆ ಮಾಡಲಾಯಿತು. ಇದರ ಬೆಲೆಯು ರೂ. 3,60,899 ರಿಂದ ಪ್ರಾರಂಭವಾಗುತ್ತದೆ. ಇದರ 648 ಸಿಸಿ ಎಂಜಿನ್ 46.3bhp ಪವರ್ ಹಾಗೂ 52Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.


Click it and Unblock the Notifications








