ನಂಬರ್ 1 ಸ್ಥಾನದಲ್ಲಿ ಹೀರೋ ಸ್ಪ್ಲೆಂಡರ್: ಅದರ ವೇಗಕ್ಕೆ ಸರಿ ಸಾಟಿಯೇ ಇಲ್ಲ.. ಅಂಕಿಅಂಶ ಪ್ರಕಟ

ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ 'ಹೀರೋ ಸ್ಪ್ಲೆಂಡರ್' ತನ್ನ ಪ್ರಾಬಲ್ಯವನ್ನು ಮುಂದಿವರಿಸಿದ್ದು, ಹೋಂಡಾ ಆಕ್ಟಿವಾ ಮತ್ತು ಬಜಾಜ್ ಪಲ್ಸರ್ ನಂತರದ ಸ್ಥಾನದಲ್ಲಿವೆ. 2023ರ ಫೆಬ್ರವರಿಯಲ್ಲಿ ಮಾರಾಟವಾದ ಟಾಪ್ ಹತ್ತು ದ್ವಿಚಕ್ರ ವಾಹಗಳ ಬಗ್ಗೆ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ.

ದೇಶದಲ್ಲಿ ಅತಿಹೆಚ್ಚು ಮಾರಾಟವಾಗುವ ದ್ವಿಚಕ್ರ ವಾಹನ ಯಾವುದೆಂದು ಕೇಳಿದರೇ, ತಕ್ಷಣ ಬರುವ ಉತ್ತರ 'ಹೀರೋ ಸ್ಪ್ಲೆಂಡರ್' ಎಂದು. ಕಳೆದ ಫೆಬ್ರವರಿ ತಿಂಗಳಲ್ಲಿ ಬರೋಬ್ಬರಿ 288,605 ಯುನಿಟ್ ಮಾರಾಟ ಮಾಡಿದೆ. ವರ್ಷದಿಂದ ವರ್ಷಕ್ಕೆ 48.97% (94,874 ಯುನಿಟ್ ಹೆಚ್ಚು) ಬೆಳವಣಿಗೆ ಸಾಧಿಸಿದೆ. 2022ರ ಫೆಬ್ರವರಿಯಲ್ಲಿ 193,731 ಯುನಿಟ್ ಸ್ಪ್ಲೆಂಡರ್ ಬೈಕ್ ಮಾರಾಟ ಮಾಡಲು ಕಂಪನಿ ಯಶಸ್ವಿಯಾಗಿತ್ತು. ಸದ್ಯ, ಮಾರುಕಟ್ಟೆಗೆ ಬಿಡುಗಡೆಯಾಗಿರುವ ಹೋಂಡಾ ಶೈನ್ 100 ಇದರ ಪ್ರತಿಸ್ಪರ್ಧಿಯಾಗಿದೆ.

ನಂಬರ್ 1 ಸ್ಥಾನದಲ್ಲಿ ಹೀರೋ ಸ್ಪ್ಲೆಂಡರ್: ಅದರ ವೇಗಕ್ಕೆ ಸರಿ ಸಾಟಿಯೇ ಇಲ್ಲ.. ಅಂಕಿಅಂಶ ಪ್ರಕಟ

ಇತ್ತೀಚೆಗೆ ಹೀರೋ, ಸ್ಪ್ಲೆಂಡರ್‌ XTECನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಅವುಗಳೆಂದರೆ, ಫ್ರಂಟ್ ಡ್ರಮ್ ಬ್ರೇಕ್ ಆವೃತ್ತಿ ಬೆಲೆ ರೂ.83,368 ಇದ್ದು, ಫ್ರಂಟ್ ಡಿಸ್ಕ್ ಬ್ರೇಕ್ ಆವೃತ್ತಿ ರೂ.87,268, ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗಲಿದೆ. ಇದು 124.7 ಸಿಸಿ, ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಫ್ಯುಯೆಲ್ ಇಂಜೆಕ್ಟ್ದ್ ಎಂಜಿನ್ ಹೊಂದಿದ್ದು, 10.7 bhp ಪವರ್, 10.6 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ.

ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುವ ಜನಪ್ರಿಯ ಸ್ಕೂಟರ್ ಗಳಲ್ಲಿ ಹೋಂಡಾ ಆಕ್ಟಿವಾ ಯಾವಾಗಲು ಮುಂದಿರುತ್ತದೆ. ಕಳೆದ ಫೆಬ್ರವರಿ ತಿಂಗಳಲ್ಲಿ ಹೋಂಡಾ ಕಂಪನಿಯು 174,503 ಯುನಿಟ್ ಆಕ್ಟಿವಾ ಸ್ಕೂಟರ್ ಗಳನ್ನೂ ಸೇಲ್ ಮಾಡಿದೆ. ಶೇಕಡ 20.08% (29,186 ಯುನಿಟ್) ಪ್ರಗತಿ ಸಾಧಿಸಿದೆ. 2022ರ ಫೆಬ್ರವರಿಯಲ್ಲಿ 145,317 ಯುನಿಟ್ ಮಾರಾಟ ಮಾಡಿತ್ತು. ಕಳೆದ ಜನವರಿಯಲ್ಲಿ ಹೋಂಡಾ ನವೀಕರಿಸಿದ ಆಕ್ಟಿವಾ 6Gಯನ್ನು ಬಿಡುಗಡೆ ಮಾಡಿತ್ತು. ರೂಪಾಂತರಗಳಿಗೆ ಅನುಗುಣವಾಗಿ ರೂ.75,655 ರಿಂದ ರೂ.81,656 ಬೆಲೆಯನ್ನು ಹೊಂದಿದೆ.

ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುವ ಟೂ ವಿಲರ್ಸ್: ಸ್ಪ್ಲೆಂಡರ್ ಬೈಕೇ Boss

ಸ್ಪೋರ್ಟ್ ಬೈಕ್, ಲೈನ್-ಅಪ್ ನಲ್ಲಿ ಬಜಾಜ್ ಪಲ್ಸರ್ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ಕಂಪನಿಯು 80,106 ಯುನಿಟ್ ಪಲ್ಸರ್ ಸರಣಿ ಬೈಕ್ ಗಳನ್ನು ಮಾರಾಟ ಮಾಡಿ ಉತ್ತಮ ಪ್ರಗತಿ ಕಂಡಿದ್ದು, ಶೇಕಡ 45.78% (25,155 ಯುನಿಟ್) ಬೆಳವಣಿಗೆ ಸಾಧಿಸಿದೆ. 2022ರ ಫೆಬ್ರವರಿಯಲ್ಲಿ 54,951 ಯುನಿಟ್ ಸೇಲ್ ಮಾಡಿತ್ತು. ಕೆಲ ದಿನಗಳ ಹಿಂದೆ, ಕಂಪನಿಯು ಪಲ್ಸರ್ 220F, ನವೀಕರಿಸಿದ ಪಲ್ಸರ್ NS160 ಹಾಗೂ ಪಲ್ಸರ್ NS200 ಅನ್ನು ಬಿಡುಗಡೆ ಮಾಡಿತ್ತು.

ಹೀರೋ ಕಂಪನಿ HF ಡಿಲಕ್ಸ್ ನಾಲ್ಕನೇ ಸ್ಥಾನದಲ್ಲಿದೆ. ಆದರೂ ಮಾರಾಟದಲ್ಲಿ ಕುಸಿತ ದಾಖಲಿಸಿದ್ದು, ಕಳೆದ ಫೆಬ್ರವರಿಯಲ್ಲಿ 56,290 ಯುನಿಟ್ ಮಾತ್ರ ಮಾರಾಟ ಮಾಡಿದ್ದು, 25.86% ಇಳಿಕೆಯಾಗಿದೆ. 2022ರ ಫೆಬ್ರವರಿಯಲ್ಲಿ 75,927 ಯುನಿಟ್ ಸೇಲ್ ಮಾಡಿತ್ತು. ಆದರೆ, ಟಿವಿಎಸ್ ಕಂಪನಿ ಮಾತ್ರ ಜುಪಿಟರ್ ಸ್ಕೂಟರ್ ಮಾರಾಟದಲ್ಲಿ ಯಶಸ್ವಿಯಾಗಿದ್ದು, ಕಳೆದ ತಿಂಗಳು 53,891 ಯುನಿಟ್ ಸೇಲ್ ಮಾಡಿದ್ದು, ಶೇಕಡ 14.44% (6,799 ಯುನಿಟ್‌ಗಳು) ಪ್ರಗತಿ ಸಾಧಿಸಿದೆ. 2022ರಲ್ಲಿ 47,092 ಯುನಿಟ್ ಸ್ಕೂಟರ್ ಮಾರಾಟವಾಗಿದ್ದವು.

ಭಾರತದಲ್ಲಿ ಅತಿಹೆಚ್ಚು ಮಾರಾಟವಾಗುವ ಟೂ ವಿಲರ್ಸ್: ಸ್ಪ್ಲೆಂಡರ್ ಬೈಕೇ Boss

ಜಪಾನಿನ ಪ್ರಮುಖ ವಾಹನ ತಯಾರಕ ಸುಜುಕಿ, ತನ್ನ ಆಕ್ಸೆಸ್ ಸ್ಕೂಟರ್ ಮಾರಾಟದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದೆ. ಕಳೆದ ಫೆಬ್ರವರಿಯಲ್ಲಿ 37,512 ಯೂನಿಟ್‌ ಸ್ಕೂಟರ್‌ ಸೇಲ್ ಮಾಡಿದ್ದು, ವರ್ಷದಿಂದ ವರ್ಷಕ್ಕೆ ಶೇಕಡ 7.15% ಬೆಳೆವಣಿಗೆ ಕಂಡಿದೆ. 2022ರ ಫೆಬ್ರವರಿಯಲ್ಲಿ 37,512 ಯುನಿಟ್ ಮಾರಾಟ ಮಾಡಿತ್ತು. ಹೋಂಡಾ ಕಂಪನಿ ಹೋದ ತಿಂಗಳು 35,594 ಶೈನ್ ಬೈಕ್ ಮಾರಾಟ ಮಾಡಲು ಯಶಸ್ವಿಯಾಗಿದ್ದು, 56.43% ನಷ್ಟ ಅನುಭವಿಸಿದೆ. 2022ರ ಫೆಬ್ರವರಿಯಲ್ಲಿ 81,700 ಯುನಿಟ್ ಸೇಲ್ ಮಾಡಿತ್ತು.

ನಂತರದ ಎಲ್ಲ ಸ್ಥಾನವನ್ನು ಟಿವಿಎಸ್ ಕಂಪನಿಯೇ ಆವರಿಸಿಕೊಂಡಿದ್ದು, XL 100ರ 35,346 ಯುನಿಟ್, ಅಪಾಚೆ ಸರಣಿಯ 34,935 ಯುನಿಟ್ ಬೈಕ್ ಹಾಗೂ ರೈಡರ್ ಸರಣಿಯ 30,346 ಯುನಿಟ್ ಬೈಕ್ ಮಾರಾಟ ಮಾಡದೆ. ಒಟ್ಟಾರೆ, ಸ್ಪ್ಲೆಂಡರ್ ಬೈಕ್ ಗಳು ಭಾರತದ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿ ಇದ್ದು, ಅದಕ್ಕೆ ಹಿಂದಿಡಲು ಯಾವ ಕಂಪನಿಗೂ ಸಾಧ್ಯವಾಗಿಲ್ಲ. ಇನ್ನು, ಸ್ಕೂಟರ್ ವಿಭಾಗದಲ್ಲಿ ಎಂದಿನಂದಂತೆ ಆಕ್ಟಿವಾ ಮುಂದಿದೆ.

Article Published On: Tuesday, March 21, 2023, 8:30 [IST]
English summary
Bestselling two wheelers in india feb 2023 details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+