ಮೊದಲ ಸ್ಥಾನದಲ್ಲಿ Hero: ಎಲ್ಲ ದಾಖಲೆಗಳು ಪುಡಿ, ಪುಡಿ
ಭಾರತದ ಪ್ರಮುಖ ದ್ವಿಚಕ್ರ ವಾಹನ ಕಂಪನಿಗಳ ಮಾರ್ಚ್ ತಿಂಗಳ ಮಾರಾಟ ವರದಿ ಪ್ರಕಟವಾಗಿದೆ. ಎಂದಿನಂತೆ ಹೆಚ್ಚಿನ ಸಂಖ್ಯೆಯಲ್ಲಿ ಬೈಕ್, ಸ್ಕೂಟರ್‌ಗಳನ್ನು ಸೇಲ್ ಮಾಡಿ, ಹೀರೋ ಮೋಟೊಕಾರ್ಪ್ ಮೊದಲ ಸ್ಥಾನದಲ್ಲಿದೆ. ಜಪಾನ್ ವಾಹನ ತಯಾರಕ ಸುಜುಕಿಯ ಮಾರಾಟ ಸುಧಾರಣೆ ಕಂಡಿದ್ದು, ರಾಯಲ್ ಎನ್‌ಫೀಲ್ಡ್ ಕೊನೆಯ ಸ್ಥಾನದಲ್ಲಿದೆ.
ಮೊದಲಿಗೆ ದೇಶದ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಹೀರೋ ಮೋಟೊಕಾರ್ಪ್ (Hero MotoCorp) ಬಗ್ಗೆ ಮಾತನಾಡೋಣ. ಕಂಪನಿಯು ಕಳೆದ ಮಾರ್ಚ್ (2023) ತಿಂಗಳಲ್ಲಿ ಬರೋಬ್ಬರಿ 5,02,730 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿ, ದಾಖಲೆ ನಿರ್ಮಿಸಿದೆ. ಫೆಬ್ರವರಿಯಲ್ಲಿ 3,82,317 ಯುನಿಟ್ ಸೇಲ್ ಮಾಡಿತ್ತು. ಅದಕ್ಕೆ ಹೋಲಿಸಿದರೆ ತಿಂಗಳಿಂದ ತಿಂಗಳಿಗೆ (MoM) ಶೇಕಡ 31.5% ಪ್ರಗತಿ ಸಾಧಿಸಿದೆ.

ಅದೇಕೋ ಟಿವಿಎಸ್ ಮೋಟಾರ್ ಕಂಪನಿಯು ಹಲವು ವರ್ಷಗಳಿಂದ ದ್ವಿಚಕ್ರ ವಾಹನ ಮಾರಾಟದಲ್ಲಿ ಎರಡನೇ ಸ್ಥಾನ ಮುಂದುವರಿದಿದೆ. ಕಳೆದ ಮಾರ್ಚ್ ತಿಂಗಳಲ್ಲಿ 2,40,780 ಯುನಿಟ್ ಮಾರಾಟ ಮಾಡಿದ್ದು, ಮಾಸಿಕ ಶೇಕಡ 39% ಬೆಳೆವಣಿಗೆ ಸಾಧಿಸಿದೆ. ಫೆಬ್ರವರಿಯಲ್ಲಿ 1,73,198 ಯುನಿಟ್ ಸೇಲ್ ಮಾಡಿತ್ತು. ಅಲ್ಲದೆ, ವರ್ಷದಿಂದ ವರ್ಷಕ್ಕೆ (22.4%) ಉತ್ತಮ ಬೆಳವಣಿಗೆ ಸಾಧಿಸಿದ್ದು 2022ರ ಮಾರ್ಚ್ ನಲ್ಲಿ 1,96,596 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾತ್ರ ಮಾರಿತ್ತು.
ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಕಂಪನಿಯ ಬಹುನೀರಿಕ್ಷಿತ 'ಆಕ್ಟಿವಾ' ಸ್ಕೂಟರ್ ಅನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸುತ್ತಿದ್ದರೂ ಮಾರ್ಚ್ (2023) ತಿಂಗಳ ಮಾರಾಟದಲ್ಲಿ ಕುಸಿತ ದಾಖಲಿಸಿದೆ. ಕೇವಲ 1,97,512 ಯುನಿಟ್ ದ್ವಿಚಕ್ರ ವಾಹನ ಮಾರಾಟ ಮಾಡಿದ್ದು, ಫೆಬ್ರವರಿಗೆ (2,27,064 ಯುನಿಟ್) ಹೋಲಿಸಿದರೆ, ಶೇಕಡ 13% ಇಳಿಕೆ ಕಂಡಿದೆ. 2022ರ ಮಾರ್ಚ್ ನಲ್ಲಿ 3,09,549 ಯುನಿಟ್ ಸೇಲ್ ಮಾಡಿತ್ತು. ಅದಕ್ಕೆ ಹೋಲಿಸಿದರೆ, ಶೇಕಡ 36.2% ಕುಸಿತವಾಗಿದೆ.
ದೇಶೀಯ ಕಂಪನಿ ಬಜಾಜ್ ಆಟೋ ಬೆಳವಣಿಗೆಯನ್ನು ನೋಡಿದರೆ, ಕೆಲವೇ ದಿನಗಳಲ್ಲಿ ದ್ವಿಚಕ್ರ ವಾಹನ ಮಾರಾಟದಲ್ಲಿ ಹೋಂಡಾ ಕಂಪನಿಗೆ ಹಿಂದಿಟ್ಟರೂ ಆಶ್ಚರ್ಯಪಡುವ ಅಗತ್ಯವಿಲ್ಲ. ಕಳೆದ ಮಾರ್ಚ್ ತಿಂಗಳಲ್ಲಿ ಬಜಾಜ್, 1,52,287 ಯುನಿಟ್ ದ್ವಿಚಕ್ರ ವಾಹನಗಳನ್ನು ಸೇಲ್ ಮಾಡಿದ್ದು, ಫೆಬ್ರವರಿಗೆ (1,20,335 ಯುನಿಟ್) ಹೋಲಿಸಿದರೆ, ತಿಂಗಳಿಂದ ತಿಂಗಳಿಗೆ (MoM) ಶೇಕಡ 26.5% ಪ್ರಗತಿ ಸಾಧಿಸಿದೆ. ಕಂಪನಿಯ ಪಲ್ಸರ್ NS160 ಹಾಗೂ NS200 ಬೈಕ್ ಗಳ ಅಧಿಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿರವುದರಿಂದ ಇದು ಸಾಧ್ಯವಾಗಿದೆ.
ಜಪಾನ್ ಮೂಲದ ಸುಜುಕಿ, ಕಳೆದ ಮಾರ್ಚ್ ತಿಂಗಳು 73,069 ಯುನಿಟ್ ದ್ವಿಚಕ್ರ ವಾಹನ ಮಾರಾಟ ಮಾಡಿದ್ದು, ಫೆಬ್ರವರಿಗೆ (58,992 ಯುನಿಟ್) ಹೋಲಿಸಿದರೆ ಶೇಕಡ 23.9% ಪ್ರಗತಿಯನ್ನು ದಾಖಲಿಸಿದೆ. ವರ್ಷದಿಂದ ವರ್ಷಕ್ಕೆ (44%) ಉತ್ತಮ ಬೆಳವಣಿಯನೇ ಸಾಧಿಸಿದ್ದು, 2022ರ ಮಾರ್ಚ್ ತಿಂಗಳಲ್ಲಿ 50,734 ಯುನಿಟ್ ದ್ವಿಚಕ್ರ ವಾಹನಗಳನ್ನು ಸೇಲ್ ಮಾಡಿತ್ತು. ಅಲ್ಲದೆ, ತನ್ನೆಲ್ಲ ಮಾದರಿಗಳನ್ನು ದೇಶದಲ್ಲಿ ಜಾರಿಯಾಗಿರುವ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಿದೆ.
ಯುವಕರ ಹಾಟ್ ಫೆವರೇಟ್ ಬೈಕ್ ತಯಾರಿಸುವ 'ರಾಯಲ್ ಎನ್‌ಫೀಲ್ಡ್' ತಿಂಗಳ ಮಾರಾಟದಲ್ಲಿ ಕೊಂಚ ಮಟ್ಟಿಗೆ ಹಿನ್ನೆಡೆ ಅನುಭವಿಸಿದೆ. ಕಳೆದ ಮಾರ್ಚ್ ತಿಂಗಳಲ್ಲಿ 59,884 ಯುನಿಟ್ ದ್ವಿಚಕ್ರ ವಾಹನ ಸೇಲ್ ಮಾಡಿದೆ. ಫೆಬ್ರವರಿಗೆ ಹೋಲಿಸಿದರೆ (64,436) ಶೇಕಡ 7% ಇಳಿಕೆ ಕಂಡಿದೆ. ಆದರೆ, 2022ರ ಮಾರ್ಚ್ ನಲ್ಲಿ 58,447 ಯುನಿಟ್ ಮಾರಾಟ ಮಾಡಿ, ವರ್ಷದಿಂದ ವರ್ಷಕ್ಕೆ ಶೇಕಡ 2.4 ಪ್ರಗತಿ ಸಾಧಿಸಿದೆ.
ಕಳೆದ ಮಾರ್ಚ್ ತಿಂಗಳ ಮಾರಾಟ ವರದಿಯನ್ನು ಗಮನಿಸಿದಾಗ ಪ್ರತಿ ಬಾರಿಯಂತೆ ಹೀರೋ ಮೋಟೊಕಾರ್ಪ್ ಮೊದಲ ಸ್ಥಾನದಲ್ಲಿ ಮುಂದುವರಿದೆ. ಬಜಾಜ್ ಆಟೋ ವೇಗವನ್ನು ಗಮನಿಸಿದರೆ, ಕೆಲವೇ ದಿನಗಳಲ್ಲಿ ಹೋಂಡಾ ಕಂಪನಿಯನ್ನು ನಂತರದ ಸ್ಥಾನಕ್ಕೆ ತಳ್ಳಬಹುದು. ರಾಯಲ್ ಎನ್‌ಫೀಲ್ಡ್ ಫೆಬ್ರವರಿಗೆ ಹೋಲಿಸಿದರೆ ತನ್ನ ಮಾರಾಟವನ್ನು ಸರಿದೂಗಿಸಿಕೊಂಡಿದೆ. ಜಪಾನ್ ಮೂಲದ ಸುಜುಕಿ ಮಾತ್ರ ಉತ್ತಮ ಪ್ರಗತಿ ಕಂಡಿದೆ.


Click it and Unblock the Notifications