ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ

2023 ರ ಮೊದಲ ತಿಂಗಳು ಆಟೋ ಎಕ್ಸ್‌ಪೋ ನಡೆಯುವುದರೊಂದಿಗೆ ಅಬ್ಬರದಿಂದ ಪ್ರಾರಂಭವಾಯಿತು. ಜೊತೆಗೆ ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೊರ್ 650 ಸೇರಿದಂತೆ ಕೆಲವು ಪ್ರಮುಖ ಲಾಂಚ್‌ಗಳು ಸಹ ಇದ್ದವು. ಈ ತಿಂಗಳು ಕೂಡ ಆ ವೇಗವು ಮುಂದುವರಿಯುವಂತೆ ತೋರುತ್ತಿದೆ ಒಂದಷ್ಟು ದ್ವಿಚಕ್ರ ವಾಹನಗಳ ಬಿಡುಗಡೆಗಳನ್ನು ನಿರೀಕ್ಷಿಸಲಾಗಿದೆ.

ಯಮಹಾ MT-15 V2:
ಯಮಹಾ ತನ್ನ ಜನಪ್ರಿಯ ಸ್ಟ್ರೀಟ್‌ಫೈಟರ್ MT-15 V2 ನ BS6 ಹಂತದ 2-ಕಾಂಪ್ಲೈಂಟ್ ಆವೃತ್ತಿಯನ್ನು ಇದೇ ತಿಂಗಳು ಪರಿಚಯಿಸಲು ಸಜ್ಜಾಗುತ್ತಿದೆ. ಮುಂಬರುವ ಹೊರಸೂಸುವಿಕೆ ಮಾನದಂಡಗಳಿಗೆ ಅಗತ್ಯವಾದ ಬಿಟ್‌ಗಳ ಸೇರ್ಪಡೆಯೊಂದಿಗೆ, ಯಮಹಾ ಖರೀದಿದಾರರಿಗೆ ಬಹಳ ಕಡಿಮೆ ಕಾಯುವ ಅವಧಿಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಎಂಜಿನ್ ವಿಭಾಗದಲ್ಲಿ ಹೆಚ್ಚಿನ ಬದಲಾವಣೆಯ ಅಗತ್ಯವಿಲ್ಲದಿದ್ದರೂ, OBD ಸಂವೇದಕ (ಆನ್‌ಬೋರ್ಡ್ ಡಯಾಗ್ನೋಸ್ಟಿಕ್‌ಗೆ ಚಿಕ್ಕದಾಗಿ) ಮಾಲೀಕರಿಗೆ ಟ್ರ್ಯಾಕ್ ಮಾಡಲು ಹೆಚ್ಚಿನ ಪ್ಯಾರಾಮೀಟರ್‌ಗಳನ್ನು ಅನ್‌ಲಾಕ್ ಮಾಡಲಿದೆ.

ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ

ಮ್ಯಾಟರ್ ಎಲೆಕ್ಟ್ರಿಕ್ ಬೈಕ್:
ಮ್ಯಾಟರ್‌ನ ಮೊದಲ ಎಲೆಕ್ಟ್ರಿಕ್ ಬೈಕ್ ಅನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಅನಾವರಣಗೊಳಿಸಲಾಯಿತು. ಕಳೆದ ತಿಂಗಳು ಆಟೋ ಎಕ್ಸ್‌ಪೋದಲ್ಲೂ ಪ್ರದರ್ಶಿಸಲಾಯಿತು. ಇದೀಗ ಕಂಪನಿಯು ಈ ತಿಂಗಳು ಎಲೆಕ್ಟ್ರಿಕ್ ಬೈಕ್ ಅನ್ನು ಮಾರುಕಟ್ಟೆಗೆ ತರಲಿದೆ ಎಂದು ಹೇಳಲಾಗುತ್ತಿದೆ. ಇದು ಲಿಕ್ವಿಡ್ ಕೂಲ್ಡ್ ಬ್ಯಾಟರಿ ಪ್ಯಾಕ್ ಮತ್ತು ಮೋಟಾರ್ ಎರಡನ್ನೂ ಹೊಂದಿರುವ ಭಾರತದ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಆಗಿದೆ. ರೂಪಾಂತರವನ್ನು ಅವಲಂಬಿಸಿ 125-150 ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದು, 150cc ಪೆಟ್ರೋಲ್-ಚಾಲಿತ ಬೈಕ್‌ಗೆ ಸಮನಾಗಿರುತ್ತದೆ.

ಮ್ಯಾಟರ್ ಎಲೆಕ್ಟ್ರಿಕ್ ಬೈಕ್‌ನ ಬೆಲೆ ಸುಮಾರು 1.75 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಇರಬಹುದು. ಇದು Tork Kratos ಗೆ ಹೆಚ್ಚು ಪ್ರೀಮಿಯಂ ಪರ್ಯಾಯವಾಗಿದೆ. ಇದನ್ನು ಈ ಹಿಂದೆ ನಮ್ಮ ಡ್ರೈವ್‌ಸ್ಪಾರ್ಕ್ ಕನ್ನಡದಲ್ಲಿ ವಿಡಿಯೋ ಮಾಡಿ ವಿವರಿಸಲಾಗಿದ್ದು, ಆಸಕ್ತಿಯುಳ್ಳವರು ಈ ಬೈಕ್ ಕುರಿತ ವಿಡಿಯೋ ವೀಕ್ಷಿಸಿ ಬೈಕ್ ಬಗ್ಗೆ ತಿಳಿದುಕೊಳ್ಳಬಹುದು. ಈ ಬೈಕ್ ಗೇರ್‌ಬಾಕ್ಸ್‌ನೊಂದಿಗೆ ಬರುವ ಮೊದಲ ಎಲೆಕ್ಟ್ರಿಕ್ ಬೈಕ್ ಅಂತಲೂ ಖ್ಯಾತಿ ಪಡೆದುಕೊಂಡಿದೆ.

ಬೆಂಗಳೂರು ಮೂಲದ EV ಸ್ಟಾರ್ಟ್ಅಪ್ ಕಂಪನಿಯಾದ ರಿವರ್ ಇವಿ, ಪ್ರಸ್ತುತ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಂಪನಿಯು ತಮ್ಮ ಹೊಸ ಉತ್ಪನ್ನವನ್ನು "SUV ಆಫ್ ಸ್ಕೂಟರ್ಸ್" ಎಂದು ಕರೆಯುತ್ತಿದ್ದಾರೆ. ಇದನ್ನು ಫೆಬ್ರವರಿ 22 ರಂದು ಬಿಡುಗಡೆ ಮಾಡಲು ಯೋಜಿಸಲಾಗಿದೆ. ಈ ಸ್ಕೂಟರ್ ನೋಟವು ನಿಮಗೆ ಯಮಹಾ ನಿಯೋವನ್ನು ನೆನಪಿಸುತ್ತದೆ. ಡ್ಯುಯಲ್ LED ಹೆಡ್‌ಲೈಟ್‌ಗಳು ಬಹಳ ಮುದ್ದಾಗಿ ಕಾಣುತ್ತವೆ.

ರಿವರ್ ಎಲೆಕ್ಟ್ರಿಕ್ ಸ್ಕೂಟರ್ ಸಹ ಯೋಗ್ಯವಾಗಿ ಸಜ್ಜುಗೊಂಡಿದೆ. ಏಪ್ರನ್-ಇಂಟಿಗ್ರೇಟೆಡ್ ಕ್ರ್ಯಾಶ್ ಗಾರ್ಡ್‌ಗಳು, ಟೆಲಿಸ್ಕೋಪಿಕ್ ಫೋರ್ಕ್, ಮುಂಭಾಗದ ಡಿಸ್ಕ್ ಬ್ರೇಕ್‌ನೊಂದಿಗೆ ದೊಡ್ಡ ಅಲಾಯ್ ವೀಲ್‌ಗಳನ್ನು ಪಡೆದಿದೆ. ಮಿಡ್-ಮೌಂಟೆಡ್ ಮೋಟಾರ್ ಮತ್ತು ಬೆಲ್ಟ್ ಡ್ರೈವ್‌ನೊಂದಿಗೆ, ಇದು 110cc ಪೆಟ್ರೋಲ್ ಚಾಲಿತ ಸ್ಕೂಟರ್‌ಗೆ ಸಮಾನವಾದ ಕಾರ್ಯಕ್ಷಮತೆಯನ್ನು ನೀಡುತ್ತದೆ. ಜೊತೆಗೆ ಬೆಲೆ ಕೂಡ ಅಗ್ಗವಾಗಿರಲಿ ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕಿರುವ ಓಲಾ, ಎಥರ್ ಎಲೆಕ್ಟ್ರಿಕ್ ಸ್ಕೂಟರ್‌ಗಳೊಂದಿಗೆ ಸ್ಪರ್ಧಿಸಲಿದೆ.

ಇವುಗಳ ಹೊರತಾಗಿ, ಯಮಹಾ ಈ ತಿಂಗಳು FZ-X ನ ನವೀಕರಿಸಿದ ಆವೃತ್ತಿಯನ್ನು ಸಹ ಬಿಡುಗಡೆ ಮಾಡಬಹುದು. ಇದು ಕೆಲವು ಹೊಸ ಬಣ್ಣದ ಆಯ್ಕೆಯೊಂದಿಗೆ ಡ್ಯುಯಲ್-ಚಾನೆಲ್ ABS ನೊಂದಿಗೆ ಬರಬಹುದು. FZ-X ಜೊತೆಗೆ Yamaha FZ-X25 ಅನ್ನು ತರಬಹುದು. ಇವು ಫೆಬ್ರವರಿಯಲ್ಲಿನ ಪ್ರಮುಖ ಬಿಡುಗಡೆಗಳೆಂದು ನಿರೀಕ್ಷಿಸಲಾಗಿದ್ದು, ದ್ವಿಚಕ್ರ ವಾಹನ ಖರೀದಿಸಲು ನೋಡುತ್ತಿರುವವರು ಇವುಗಳ ಬಿಡುಗಡೆ ನಂತರ ಒಮ್ಮೆ ಟೆಸ್ಟ್ ರೈಡ್ ಮಾಡಿ ಖರೀದಿಗೆ ಮುಂದಾಗಬಹುದು.

Most Read Articles

Kannada
English summary
Buying a two wheeler check out the major releases of this month
Story first published: Wednesday, February 1, 2023, 18:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X