ರಾಪಿಡೊದಂತಹ ಬೈಕ್ ಟ್ಯಾಕ್ಸಿ ಸೇವೆಗಳ ವಿರುದ್ಧ ಸರ್ಕಾರ ಕಿಡಿ... ವಾಣಿಜ್ಯ ಸೇವೆಗೆ ಬಳಸದಂತೆ ಆದೇಶ
ರಾಪಿಡೋದಂತಹ ಬೈಕ್ ಟ್ಯಾಕ್ಸಿ ಆಪರೇಟರ್‌ಗಳು ದೆಹಲಿ ರಸ್ತೆಗಳಲ್ಲಿ ಮೋಟಾರು ವಾಹನ ಕಾನೂನುಗಳನ್ನು ಉಲ್ಲಂಘಿಸುತ್ತಿವೆ. ಇವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ದೆಹಲಿ ಸರ್ಕಾರ ಕ್ಯಾಬ್ ಅಗ್ರಿಗೇಟರ್‌ಗಳಿಗಾಗಿ ಹೊಸ ನೀತಿಯನ್ನು ತರಲು ಹೊರಟಿದೆ ಎಂದು ದೆಹಲಿ ಸಾರಿಗೆ ಸಚಿವರು ಹೇಳಿದ್ದಾರೆ.
ಭಾರತದಲ್ಲಿ Rapido ಬೈಕ್ ಟ್ಯಾಕ್ಸಿಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಇದು ಮೋಟಾರು ವಾಹನ ಕಾಯ್ದೆಗೆ ವಿರುದ್ಧವಾಗಿದೆ. ವಾಣಿಜ್ಯ ಉದ್ದೇಶಗಳಿಗಾಗಿ ಬೈಕ್‌ಗಳನ್ನು ಬಳಸುವುದು ಮೋಟಾರು ವಾಹನ ಕಾಯ್ದೆ 1988 ಅನ್ನು ಉಲ್ಲಂಘಿಸಿದಂತಾಗುತ್ತದೆ. ಈ ಕಂಪನಿಗಳಿಗೆ 1 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ಸಾರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಅಂದರೆ ವೈಯಕ್ತಿಕ ಬಳಕೆಗಾಗಿ ವಾಹನಗಳನ್ನು ಖರೀದಿಸಿ ಕ್ಯಾಬ್ ಸೇವೆಯಾಗಿ ಅದರಿಂದ ಹಣ ಗಳಿಸುವುದು ಕಾನೂನುಬಾಹಿರವಾಗಿದೆ.

ಕಳೆದ 10 ವರ್ಷಗಳಲ್ಲಿ ಕ್ಯಾಬ್ ಉದ್ಯಮದಲ್ಲಿ ಭಾರತವು ದೊಡ್ಡ ಕ್ರಾಂತಿಯನ್ನು ಕಂಡಿದೆ. ಇದು ಅನೌಪಚಾರಿಕ ವಲಯವಾಗಿದ್ದಾಗ, ಓಲಾ ಮತ್ತು ಉಬರ್‌ನಂತಹ ಕಾರ್ಪೊರೇಟ್ ಸಂಸ್ಥೆಗಳು ತಂತ್ರಜ್ಞಾನದೊಂದಿಗೆ ಈ ಕ್ಷೇತ್ರವನ್ನು ಬೆಳೆಯುವಂತೆ ಮಾಡಿದ್ದರು. ಗ್ರಾಹಕರು ಮತ್ತು ಕ್ಯಾಬ್ ಮಾಲೀಕರ ನಡುವೆ ಸೇತುವೆಯನ್ನು ನಿರ್ಮಿಸಿದರು. ಈ ಮೂಲಕ ಜನರು ಸುಲಭವಾಗಿ ಕ್ಯಾಬ್‌ಗಳನ್ನು ಬುಕ್ ಮಾಡಲು ಮತ್ತು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಚಲಿಸಲು ಅನುವು ಮಾಡಿಕೊಡುತ್ತದೆ.
ಈ ಕ್ಯಾಬ್ ಸೇವೆಯು ಭಾರತದ ಪ್ರಮುಖ ನಗರಗಳಲ್ಲಿ ಪ್ರಮುಖ ಮೂಲಭೂತ ಅವಶ್ಯಕತೆಯಾಗಿದೆ. ಈ ಸಂದರ್ಭದಲ್ಲಿ ಕೆಲವು ಕಂಪನಿಗಳು ಈ ಕ್ಯಾಬ್ ಸೇವೆಗಿಂತ ಕಡಿಮೆ ಬೆಲೆಯಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ಯಶಸ್ವಿಯಾಗಿ ನಡೆಸುತ್ತಿವೆ. Rapido ನಂತಹ ಕಂಪನಿಗಳು ಇದನ್ನು ಉತ್ತಮವಾಗಿ ನಿರ್ವಹಿಸಿವೆ. ಆದರೆ ವೈಯಕ್ತಿಕ ಬಳಕೆಗಾಗಿ ವಾಹನಗಳನ್ನು ನೋಂದಾಯಿಸುವುದು ಮತ್ತು ಕ್ಯಾಬ್ ಸೇವೆಯಾಗಿ ಅದರಿಂದ ಗಳಿಸುವುದು ಕಾನೂನುಬಾಹಿರವಾಗಿದೆ ಎಂಬುದು ಇಲ್ಲಿ ಒತ್ತಿ ಹೇಳಲಾಗುತ್ತಿದೆ.

ಈ ಸಂದರ್ಭದಲ್ಲಿ ದೆಹಲಿ ಸರ್ಕಾರ ಇತ್ತೀಚೆಗೆ ರಾಜ್ಯದಲ್ಲಿ ಬೈಕ್ ಕ್ಯಾಬ್ ಸೇವೆಗಳ ಚಾಲನೆಗೆ ಸಂಬಂಧಿಸಿದಂತೆ ಎಚ್ಚರಿಕೆಯ ನೋಟಿಸ್ ಕಳುಹಿಸಿತ್ತು. ಆದರೆ ಅದರ ನಂತರವೂ ದೆಹಲಿಯಲ್ಲಿ ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಯುತ್ತಿದೆ. ಹಾಗಾಗಿ ರಾಜ್ಯ ಸಾರಿಗೆ ಸಚಿವ ಕೈಲಾಶ್ ಕೆಲತ್ ಕ್ಯಾಬ್ ಚಾಲಕರಿಗಾಗಿ ಹೊಸ ನೀತಿಯನ್ನು ರಚಿಸಲು ನಿರ್ಧರಿಸಿದ್ದಾರೆ. ತಮ್ಮ ಹೊಸ ನೀತಿಯನ್ನು ಕಟ್ಟನಿಟ್ಟಾಗಿ ಜಾರಿಗೆ ತಂದು, ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿನ ಅವರ ಪೋಸ್ಟ್‌ಗಳಲ್ಲಿ, 2, 3 ಮತ್ತು 4 ಚಕ್ರಗಳ ಅಗ್ರಿಗೇಟರ್ ನೀತಿಯನ್ನು ತ್ವರಿತವಾಗಿ ಸಿದ್ಧಪಡಿಸಲಾಗುತ್ತಿದೆ. ದೆಹಲಿಯಲ್ಲಿ ಅಗ್ರಿಗೇಟರ್ ಆಗಿ ಕಾರ್ಯನಿರ್ವಹಿಸಲು ಪರವಾನಗಿ ಪಡೆಯುವ ಪ್ರಕ್ರಿಯೆಯು ಹೊಸ ನೀತಿಯ ಅಡಿಯಲ್ಲಿ ಜಾರಿಗೆ ಬರಲಿದೆ. 2 ಚಕ್ರದ ವಾಹನಗಳು (ಬೈಕ್, ಸ್ಕೂಟರ್‌ಗಳು) ಸಾರಿಗೆಯೇತರ ವಾಹನ ಎಂದು ನೋಂದಾಯಿಸಲಾಗಿದೆ. ಪ್ರಯಾಣಿಕರನ್ನು ಕರೆದೊಯ್ಯುವುದು ಕಾನೂನುಬಾಹಿರ ಎಂಸು ಸೂಕ್ಷ್ಮವಾಗಿ ವಿವರಿಸಲಾಗಿದೆ.

ಇವುಗಳನ್ನು ವಾಣಿಜ್ಯ ಬಳಕೆಗೆ ಬಳಸುವುದು ಮೋಟಾರು ವಾಹನ ಕಾಯ್ದೆಯಡಿ ಕಾನೂನುಬಾಹಿರವಾಗಿದೆ. ಇದನ್ನು ಕಡೆಗಣಿಸಿ ವರ್ತಿಸುವ ದ್ವಿಚಕ್ರ ವಾಹನ ಮಾಲೀಕರಿಗೆ 5 ಸಾವಿರ ರೂ. ದಂಡ, ಮತ್ತದೇ ತಪ್ಪಿಗೆ 10 ಸಾವಿರ ರೂ. ದಂಡ ಹಾಗೂ 1 ವರ್ಷ ಜೈಲು ಶಿಕ್ಷೆ ಹಾಗೂ 3 ತಿಂಗಳವರೆಗೆ ಚಾಲನಾ ಪರವಾನಿಗೆ ಅಮಾನತುಗೊಳಿಸಲಾಗುವುದು. ಇವು ಕೇವಲ ಆರಂಭಿಕ ದಂಡ ಹಾಗೂ ಶಿಕ್ಷಾ ವಿಧಾನಗಳಾಗಿವೆ, ಮುಂದಿನ ದಿನಗಳಲ್ಲಿ ಹಾಗೇ ಮುಂದುವರಿದರೆ ಇನ್ನೂ ಕಠಿಣ ನಿಯಮಗಳನ್ನು ತರಲಾಗುವುದು.
ಬೈಕ್ ಟ್ಯಾಕ್ಸಿಗಳ ಮೇಲೆ ಕ್ರಮ ಕೈಗೊಂಡಿರುವ ರಾಜ್ಯಗಳ ಸಾಲಿಗೆ ಇದೀಗ ದೆಹಲಿ ಸೇರಿದೆ. ಈ ಹಿಂದೆ ಮಹಾರಾಷ್ಟ್ರ ರಾಜ್ಯ ಸರ್ಕಾರ Rapido ಗೆ ಪರವಾನಗಿ ನೀಡಲು ನಿರ್ಧರಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಮೋಟಾರು ವಾಹನ ಕಾಯ್ದೆಯಲ್ಲಿ ಇಲ್ಲದ ಕೆಲಸವನ್ನು ಮಾಡದಂತೆ ರಾಜ್ಯ ಸರ್ಕಾರಗಳಿಗೆ ತಡೆ ನೀಡಿದೆ. ಇದೀಗ ದೆಹಲಿ ಸರ್ಕಾರವೂ ಬಹುತೇಕ ಅದೇ ಪ್ರಯತ್ನಕ್ಕೆ ಕೈ ಹಾಕಿದೆ. Rapido ಸೇವೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ಗಳಲ್ಲಿ ತಿಳಿಸಿ.


Click it and Unblock the Notifications