ಹೆಲ್ಮೆಟ್ ಧರಿಸಿ ಬಂದ್ರೂ ಪತ್ತೆಹಚ್ಚಿದ ಅಭಿಮಾನಿಗಳು... ವಿಡಿಯೋ ವೈರಲ್

ವಿಂಟೇಜ್ ಬೈಕ್‌ಗಳಿಂದ ಹಿಡಿದು ಇತ್ತೀಚಿಗಿನ ಸೂಪರ್ ಬೈಕ್‌ಗಳು ಮತ್ತು ಕಡಿಮೆ ಪವರ್ ಹೊಂದಿರುವ ದ್ವಿಚಕ್ರ ವಾಹನಗಳು ಸೇರಿದಂತೆ ಎಲ್ಲಾ ರೀತಿಯ ಮೋಟಾರ್‌ಸೈಕಲ್‌ಗಳನ್ನು ಇಷ್ಟಪಡುವ ಏಕೈಕ ಸೆಲೆಬ್ರಿಟಿ ಎಂದರೆ ಮಹೇಂದ್ರ ಸಿಂಗ್ ಧೋನಿ. ಆಗಾಗ್ಗೆ ಹೆಲ್ಮೆಟ್ ಧರಿಸಿ ರಸ್ತೆಯಲ್ಲಿ ಕಾಣಿಸುವ ಕ್ಯಾಪ್ಟನ್ ಕೂಲ್ ಈ ಬಾರಿ ಜಾರ್ಖಂಡ್‌ನಲ್ಲಿ ಟಿವಿಎಸ್ ಅಪಾಚೆ RR310 ನಲ್ಲಿ ಕಾಣಿಸಿಕೊಂಡರು.

ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮೊದಲ ಬಾರಿಗೆ ಟಿವಿಎಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಧೋನಿ ಟಿವಿಎಸ್ ಅಪಾಚೆ RR310 ಅನ್ನು AGV ಹೆಲ್ಮೆಟ್‌ನೊಂದಿಗೆ ಸವಾರಿ ಮಾಡುತ್ತ ಕಾಣಿಸಿಕೊಂಡಿದ್ದಾರೆ. ಈ AGV ಹೆಲ್ಮೆಟ್ ದುಬಾರಿ ಬೆಲೆಯದ್ದಾಗಿದ್ದು, ಬಹುಶಃ ಭಾರತದಲ್ಲಿ ಮೋಟಾರ್‌ಸೈಕಲ್‌ನ ಅರ್ಧದಷ್ಟು ಬೆಲೆಯನ್ನು ಹೊಂದಿರುತ್ತದೆ. ಇನ್ನೂ ಧೋನಿಯನ್ನು ಕಂಡು ಅಚ್ಚರಿಗೊಂಡ ಅಭಿಮಾನಿಗಳು ವಿಡಿಯೋ ಮಾಡಿದ್ದಾರೆ. ತುಂಬಾ ಹೊತ್ತು ಇದ್ದರೇ ಅಭಿಮಾನಿಗಳ ಜಮಾವಣೆ ಹೆಚ್ಚಾಗುತ್ತದೆ ಎಂದು ಕ್ಯಾಪ್ಟನ್ ಕೂಲ್ ಹೊರಟುಬಿಡುತ್ತಾರೆ.

ಹೆಲ್ಮೆಟ್ ಧರಿಸಿ ಬಂದ್ರೂ ಪತ್ತೆಹಚ್ಚಿದ ಅಭಿಮಾನಿಗಳು... ವಿಡಿಯೋ ವೈರಲ್

TVS Apache RR310 ಭಾರತದಲ್ಲಿ BMW ಮತ್ತು TVS ನಡುವಿನ ಜಂಟಿ ಉದ್ಯಮದಲ್ಲಿ ಹೊರಬಂದ ಮೊದಲ ಉತ್ಪನ್ನವಾಗಿದೆ. ಅದೇ 313cc, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಚಾಸಿಸ್‌ನಲ್ಲಿ ರಿವರ್ಸ್-ಇನ್‌ಲೈನ್ಡ್ ಎಂಜಿನ್‌ನಂತೆ ಅಳವಡಿಸಲಾಗಿದೆ. 6-ಸ್ಪೀಡ್ ಟ್ರಾನ್ಸ್‌ಮಿಷನ್ ಜೊತೆಗೆ ಬರುವ ಈ ಬೈಕ್ ಕೇವಲ 7. 17 ಸೆಕೆಂಡ್‌ಗಳಲ್ಲಿ 0- 100 ಕಿ.ಮೀ/ ಗಂ ವೇಗವನ್ನು ತಲುಪುತ್ತದೆ. ಈ ಮೂಲಕ ಟ್ರ್ಯಾಕ್‌ಗೆ ಸೂಕ್ತವಾಗಿ ಹೊಂದಿಕೊಂಡು ರೈಡಿಂಗ್ ಅನುಭವ ಹೆಚ್ಚಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಸಂಪೂರ್ಣ ಫೇರ್ಡ್ ಬೈಕ್ ಆಗಿ ಬಿಡುಗಡೆಯಾದಾಗಿನಿಂದ ದೇಶದಲ್ಲಿ ಸಾಕಷ್ಟು ಗಮನ ಸೆಳೆದಿದೆ. ಇದು ಟ್ರ್ಯಾಕ್-ಫೋಕಸ್ಡ್ ಮೋಟಾರ್‌ಸೈಕಲ್ ಜೊತೆಗೆ ಭಾರತದಲ್ಲಿ ಟಿವಿಎಸ್‌ನ ಪ್ರಮುಖ ಉತ್ಪನ್ನವಾಗಿದೆ. ಇದನ್ನು ಚೂಪಾದ ಮತ್ತು ಆಕ್ರಮಣಕಾರಿಯಾಗಿ ಕಾಣುವಂತೆ ವಿನ್ಯಾಸಗೊಳಿಸಲಾಗಿದೆ. ಅಪಾಚೆ RR310 ವಿನ್ಯಾಸವು ಶಾರ್ಕ್‌ನಿಂದ ಪ್ರೇರಿತವಾಗಿದ್ದು, ಇದು ಅಸಾಧಾರಣವಾದ ಶಾರ್ಪ್ ಡಿಸೈನ್ ಪಡೆದಿದೆ. ಅಪಾಚೆ RR310 ಅನ್ನು BMW G310R ಮತ್ತು BMW GS310 ಮಾದರಿಯಲ್ಲೇ ಉತ್ಪಾದಿಸಲಾಗುತ್ತದೆ.

ಧೋನಿಗೆ ಬೈಕ್, ಕಾರ್ ಕ್ರೇಜ್
ಇತ್ತೀಚೆಗಷ್ಟೇ ರಾಂಚಿಯಲ್ಲಿ ಕ್ರಿಕೆಟ್ ಆಟವಾಡಲು ಬಂದಿದ್ದ ಹಾರ್ದಿಕ್ ಪಾಂಡ್ಯ, ಬಿಎಂಡಬ್ಲ್ಯು ಆರ್71 ಕಾರಿನಲ್ಲಿ ಧೋನಿ ಜೊತೆಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದರು. ಧೋನಿ ಅವರು ಯಮಹಾ ಆರ್‌ಡಿ350 ನ ಕೆಲವು ಮಾದರಿಗಳನ್ನು ಹೊಂದಿದ್ದಾರೆ, ಇದು ತಮ್ಮ ನೆಚ್ಚಿನ ಬೈಕ್ ಎಂದು ಹೇಳಿಕೊಳ್ಳುತ್ತಾರೆ. ಇದರ ಜೊತೆಗೆ ಅವರ ಗ್ಯಾರೇಜ್‌ನಲ್ಲಿರುವ 2-ಸ್ಟ್ರೋಕ್ ಬೈಕ್‌ಗಳಾದ ಯಮಹಾ RX100, ಸುಜುಕಿ ಶೋಗನ್, ನಾರ್ಟನ್, ಜಾವಾ ಮತ್ತು BSA ನಿಂದ ವಿಂಟೇಜ್ ಮೋಟಾರ್‌ಸೈಕಲ್‌ಗಳು ಸೇರಿದಂತೆ ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಿವೆ.

ಹಳೆಯ ಮೋಟಾರ್‌ಸೈಕಲ್‌ಗಳ ಜೊತೆಗೆ ಮಾಜಿ ಕ್ಯಾಪ್ಟನ್ ಧೋನಿ ಕವಾಸಕಿ ನಿಂಜಾ H2, ಕವಾಸಕಿ ನಿಂಜಾ ZX- 14R, ಹಾರ್ಲೆ ಡೇವಿಡ್‌ಸನ್ ಫ್ಯಾಟ್ ಬಾಯ್ ಮತ್ತು ಅಪರೂಪದ ಅಲ್ಟ್ರಾ ಕಾನ್ಫೆಡರೇಟ್ X132 ಹೆಲ್‌ಕ್ಯಾಟ್‌ನಂತಹ ಕೆಲವು ಆಧುನಿಕ ಮೋಟಾರ್‌ಸೈಕಲ್‌ಗಳನ್ನು ಸಹ ಹೊಂದಿದ್ದಾರೆ. ಕ್ರಿಕೆಟ್ ಅಭ್ಯಾಸದ ವೇಳೆ ಮನೆಗೆ ತನ್ನ ಮೋಟಾರ್‌ ಸೈಕಲ್‌ನಲ್ಲಿ ಹೋಗುತ್ತಿರುವಾಗ ಆಗಾಗ್ಗೆ ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅವರು ಒಬ್ಬಂಟಿಯಾಗಿರುವಾಗ ಮಾತ್ರ ಅಪರೂಪವಾಗಿ ಕಾರ್‌ಗಳನ್ನು ಬಳಸುತ್ತಾರೆ.

ಇನ್ನು ಅವರ ಗ್ಯಾರೆಜ್ ಬಗ್ಗೆ ಹೇಳುವುದಾದರೆ ಮಹೇಂದ್ರ ಸಿಂಗ್ ಧೋನಿ ಅದ್ಬುತವಾಗಿ ತಮ್ಮ ಗ್ಯಾರೇಜ್ ಅನ್ನು ಡಿಸೈನ್ ಮಾಡಿಸಿದ್ದು, ಗಾಜಿನಿಂದ ಮಾಡಿದ ಮೆಗಾ ಗ್ಯಾರೇಜ್ ಅನ್ನು ಹೊಂದಿದ್ದಾರೆ. ಅದು ಅವರ ಬಹುತೇಕ ಎಲ್ಲಾ ಮೋಟಾರ್‌ಸೈಕಲ್‌ಗಳನ್ನು ಹೊಂದಿದೆ. ಅವರ ಗ್ಯಾರೇಜ್‌ನಲ್ಲಿ ಇರಿಸಲಾಗಿರುವ ಮೋಟಾರ್‌ಸೈಕಲ್‌ಗಳ ನಿಖರವಾದ ಸಂಖ್ಯೆ ತಿಳಿದಿಲ್ಲ, ಆದರೆ ಅವರು ಹಳೆಯ ಬೈಕುಗಳ ದೊಡ್ಡ ಸಂಗ್ರಹವನ್ನು ಒಳಗೊಂಡಂತೆ 150 ಕ್ಕೂ ಹೆಚ್ಚು ಮೋಟಾರ್‌ಸೈಕಲ್‌ಗಳನ್ನು ಹೊಂದಿದ್ದಾರೆಂದು ಈ ಹಿಂದೆ ವರದಿಯಾಗಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Monday, February 6, 2023, 13:20 [IST]
English summary
Dhoni spotted with apache rr310 in ranchi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+