ಹೋಂಡಾ ಶೈನ್ 100 - ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ಗಳಲ್ಲಿ ಯಾವುದು ಬೆಸ್ಟ್: ಇವುಗಳ ನಡುವಿನ ವ್ಯತ್ಯಾಸ

ಹೀರೋ ಸ್ಪ್ಲೆಂಡರ್ ಪ್ಲಸ್‌ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಬೈಕ್ ಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಹೀರೋ ಸ್ಪ್ಲೆಂಡರ್ ಪ್ಲಸ್‌ ಬೈಕಿಗೆ ಪೈಪೋಟಿ ನೀಡಲು ಹೋಂಡಾ ಮೋಟಾರ್‌ಸೈಕಲ್ ಇತ್ತೀಚೆಗೆ ತನ್ನ ಹೊಸ 100cc ಶೈನ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆಗೊಳಿಸಿತು. ಈ ಎರಡೂ ಬೈಕ್‌ಗಳ ನಡುವಿನ ವ್ಯತ್ಯಾಸಗಳ ಬಗ್ಗೆ ತಿಳಿಯೋಣ.

ಹೋಂಡಾ ಮೋಟಾರ್‌ಸೈಕಲ್ ಹೊಸದಾಗಿ ಬಿಡುಗಡೆಗೊಳಿಸಿದ ಶೈನ್ 100cc ಬೈಕ್ ಅನ್ನು ಒಂದೇ ರೂಪಾಂತರದಲ್ಲಿ ನೀಡಲಾಗುತ್ತಿದೆ. ಈ ಹೊಸ ಹೋಂಡಾ ಶೈನ್ 100cc ಬೈಕ್ ಬೆಲೆಯು ರೂ.64,900 ಗಳಾಗಿದೆ. ಇನ್ನು ಈ ಬೈಕಿನ ಪ್ರತಿಸ್ಪರ್ಧಿಯಾದ ಹೀರೋ ಸ್ಪ್ಲೆಂಡರ್ ಪ್ಲಸ್ ಬಹು ರೂಪಾಂತರಗಳಲ್ಲಿ ಲಭ್ಯವಿದೆ. ಈ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿನ ಆರಂಬಿಕ ಬೆಲೆಯು ರೂ.72,420 ಆಗಿದೆ.

ಹೋಂಡಾ ಶೈನ್ 100 - ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ಗಳಲ್ಲಿ ಯಾವುದು ಬೆಸ್ಟ್

ಇನ್ನು ಬ್ಲೂಟೂತ್ ಕನೆಕ್ಟಿವಿಟಿ, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್ ಆಫ್ ಮತ್ತು ಡಿಜಿಟಲ್ ಸ್ಪೀಡೋಮೀಟರ್‌ನೊಂದಿಗೆ ಪ್ಯಾಕ್ ಮಾಡಲಾದ ಇದರ ಸ್ಪ್ಲೆಂಡರ್ ಎಕ್ಸ್‌ಟೆಕ್ ರೂಪಾಂತರದ ಬೆಲೆಯು ರೂ.75,840 ಆಗಿದೆ. ಇನ್ನು ಹೋಂಡಾ ಶೈನ್ 100 ಸ್ಪ್ಲೆಂಡರ್‌ಗಿಂತ ಸುಮಾರು 7,500 ಕಡಿಮೆ ಬೆಲೆಯನ್ನು ಹೊಂದಿದೆ. ಇನ್ನು ಈ ಬೈಕಿನ ವಿತರಣೆಯು 2023ರ ಮೇ ತಿಂಗಳಿನಲ್ಲಿ ಪ್ರಾರಂಭವಾಗುತ್ತದೆ.

ಹೋಂಡಾದ ಹೊಸ ಶೈನ್ 100cc ತನ್ನ 100cc, ಸಿಂಗಲ್-ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 7.6 ಪಿಎಸ್ ಮತ್ತು 8.05 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಪಿಸ್ಟನ್-ಕೂಲಿಂಗ್ ಆಯಿಲ್ ಜೆಟ್ ಮತ್ತು ಆಫ್‌ಸೆಟ್ ಪಿಸ್ಟನ್ ಜೊತೆಗೆ ಆಟೋಮ್ಯಾಟಿಕ್ ಚಾಕ್ ಸಿಸ್ಟಮ್‌ನೊಂದಿಗೆ ಸ್ಟಾರ್ಟ್ ಸೊಲೆನಾಯ್ಡ್ ಅನ್ನು ಹೊಂದಿದೆ.

ಈ ಬೈಕ್ ಡೈಮಂಡ್ ಫ್ರೇಮ್ ಅನ್ನು ಒಳಗೊಳ್ಳುತ್ತದೆ ಮತ್ತು ಟೆಲಿಸ್ಕೋಪಿಕ್ ಫೋರ್ಕ್ ಮುಂಚೂಣಿಯಲ್ಲಿ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್‌ನೊಂದಿಗೆ ಬರುತ್ತದೆ. ಇದು ಸಂಯೋಜಿತ ಬ್ರೇಕಿಂಗ್ ಸಿಸ್ಟಮ್ ಜೊತೆಗೆ ಮುಂಭಾಗ ಮತ್ತು ಹಿಂಭಾಗದ ಆಕ್ಸಲ್‌ಗಳಲ್ಲಿ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ. ಮತ್ತೊಂದೆಡೆ, ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ 97.2cc ಫ್ಯುಯಲ್ ಇಂಜೆಕ್ಟೆಡ್ ಎಂಜಿನ್‌ ಅನ್ನು ಹೊಂದಿದೆ.

ಈ ಎಂಜಿನ್ 7.9 ಬಿಹೆಚ್‍ಪಿ ಪವರ್ ಮತ್ತು 8.05 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಬೈಕಿನ ಸಸ್ಪೆಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಆಕ್ಸಲ್‌ಗಳಲ್ಲಿ ಅಳವಡಿಸಲಾಗಿರುವ ಮುಂಭಾಗ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಯುನಿಟ್ ಅನ್ನು ಹೊಂದಿದೆ. ಇನ್ನು ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ ಮುಂಭಾಗ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ನೀಡಲಾಗಿದೆ.

ಹೋಂಡಾ ಶೈನ್ 100cc 1245mm ಉದ್ದದ ವೀಲ್‌ಬೇಸ್‌ ಅನ್ನು ಹೊಂದಿದ್ದರೆ, ಸೀಟ್ ಎತ್ತರವನ್ನು 786mm ನೀಡುತ್ತದೆ. ಇನ್ನುಇದು 168 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಈ ಬೈಕಿನ ಇಂಧನ ಟ್ಯಾಂಕ್ ಸಾಮರ್ಥ್ಯವು 9-ಲೀಟರ್ ಆಗಿದೆ. ಬೈಕ್ 99 ಕೆಜಿ ಕರ್ಬ್ ತೂಕವನ್ನು ಹೊಂದಿದೆ. ಇನ್ನು ಸ್ಪ್ಲೆಂಡರ್ ಪ್ಲಸ್‌ನ ವೀಲ್‌ಬೇಸ್, ಸೀಟ್ ಎತ್ತರ ಮತ್ತು ಗ್ರೌಂಡ್ ಕ್ಲಿಯರೆನ್ಸ್ ಶೈನ್ 100 ಬೈಕ್ ಗಿಂತ ಸ್ವಲ್ಪ ಕಡಿಮೆಯಾಗಿದೆ.

ಸ್ಪ್ಲೆಂಡರ್ ಪ್ಲಸ್ ಬೈಕ್ ವೀಲ್‌ಬೇಸ್ 1236 ಎಂಎಂ, ಸೀಟ್ ಎತ್ತರ 785 ಎಂಎಂ ಮತ್ತು ಗ್ರೌಂಡ್ ಕ್ಲಿಯರೆನ್ಸ್ 165 ಎಂಎಂ ಹೊಂದಿದೆ. ಅದರ ಇಂಧನ ಟ್ಯಾಂಕ್ 9.8-ಲೀಟರ್‌ಗಳಲ್ಲಿ ಸ್ವಲ್ಪ ದೊಡ್ಡದಾಗಿದೆ. ಹೊಸ ಹೋಂಡಾ 100 ಸಿಸಿ ಬೈಕ್‌ಗೆ ಹೋಲಿಸಿದರೆ, ಹೀರೋ ಸ್ಪ್ಲೆಂಡರ್ ಪ್ಲಸ್ 112 ಕೆಜಿ ಕರ್ಬ್ ತೂಕದೊಂದಿಗೆ ಭಾರವಾಗಿರುತ್ತದೆ. ಇನ್ನು ಹೀರೋ ಸ್ಪ್ಲೆಂಡರ್ ಪ್ಲಸ್ ಶೈನ್ 100 ಗಿಂತ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ.

Article Published On: Friday, March 17, 2023, 11:00 [IST]
English summary
Difference between new honda shine 100 vs hero splendor plus details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+