Electric Two Wheelers: ಸರ್ಕಾರದಿಂದ ಬಿಗ್ ಶಾಕ್, ಪಾತಾಳ ಮುಟ್ಟಿದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟ!

ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು (electric two-wheelers) ನಿಧಾನವಾಗಿ ಮುನ್ನೆಲೆಗೆ ಬರುತ್ತಿವೆ. ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಆದರೆ, ವಿವಿಧ ಕಾರಣಗಳಿಗೆ ಕಳೆದ ಜೂನ್ ತಿಂಗಳಲ್ಲಿ (2023) ಎಲೆಕ್ಟ್ರಿಕ್ ಟೂ ವೀಲರ್ ಮಾರಾಟ ಪಾತಾಳ ಮುಟ್ಟಿದೆ. ಆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಸರ್ಕಾರಿ ಸ್ವಾಮ್ಯದ 'ವಾಹನ್' ಪೋರ್ಟಲ್ ಪ್ರಕಾರ, ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಜೂನ್ (2023)ನಲ್ಲಿ 45,734 ಯುನಿಟ್ ವೆಹಿಕಲ್ ಮಾರಾಟ ಮಾಡಲು ಮಾತ್ರ ಶಕ್ತವಾಗಿವೆ. ಮೇ ತಿಂಗಳಿಗೆ ಹೋಲಿಸಿದರೆ (105,338 ಯುನಿಟ್) ತಿಂಗಳಿನಿಂದ ತಿಂಗಳಿಗೆ ಶೇಕಡ 56.58% ಕುಸಿತ ದಾಖಲಿಸಿವೆ.

Electric Two Wheelers: ಸರ್ಕಾರದಿಂದ ಬಿಗ್ ಶಾಕ್, ಪಾತಾಳ ಮುಟ್ಟಿದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟ!

ಇದಕ್ಕೆ ಮುಖ್ಯ ಕಾರಣ, ಜೂನ್ 1ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರ 40% ಇದ್ದ FAME ಸಬ್ಸಿಡಿಯನ್ನು 15% ಇಳಿಸಿ, ಆದೇಶಿಸಿರುವುದು. ಇದರಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆ ದಿಢೀರನೇ ಹೆಚ್ಚಳವಾಗಿದ್ದು, ಖರೀದಿದಾರರು ಇವುಗಳನ್ನು ಖರೀದಿಸಲು ಹಿಂದೆಡೇಟು ಹಾಕಿರುವುದು. ಪರಿಣಾಮ, ಜೂನ್ ತಿಂಗಳಲ್ಲಿ ಹೆಚ್ಚಳವಾಗಬೇಕಿದ್ದ ಮಾರಾಟ ಪ್ರಮಾಣ ಕುಸಿತ ಕಂಡಿದೆ.

ಅದು, ಒಂದು ವರ್ಷದ ಹಿಂದಿನ ಅಂದರೆ 2022ರ ಜೂನ್ ಸೇಲ್ಸ್ (44,380 ಯುನಿಟ್) ಆಸುಪಾಸಿಗೆ ಬಂದು ನಿಂತಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಮೊದಲ ಬಾರಿಗೆ 50 ಸಾವಿರಕ್ಕೂ ಹೆಚ್ಚು ಯುನಿಟ್ ಎಲೆಕ್ಟ್ರಿಕ್ ಟೂ ವೀಲರ್ ಮಾರಾಟ ಮಾಡಿ, ಓಲಾ ಸೇರಿದಂತೆ ಇತರೆ ಕಂಪನಿಗಳು ದೊಡ್ಡ ದಾಖಲೆ ನಿರ್ಮಾಣ ಮಾಡಿದ್ದವು. ಅಕ್ಟೋಬರ್ ತಿಂಗಳಲ್ಲಿ (ಹಬ್ಬಗಳ ಸೀಸನ್) 75,000ಕ್ಕೂ ಅಧಿಕ ಯುನಿಟ್ ಸೇಲ್ ಮಾಡಲಾಗಿತ್ತು.

ಈ ರೆಕಾರ್ಡ್ ಅನ್ನು ಮಾರ್ಚ್ 2023ರಲ್ಲಿ 86,283 ಯುನಿಟ್ ಮಾರಾಟ ಮಾಡಿ, ಅಳಿಸಲಾಗಿತ್ತು. ಆದರೆ, ಸಬ್ಸಿಡಿ ಪರಿಷ್ಕರಣೆ ಮಾಡಿದ ಹಿನ್ನೆಲೆ, ಓಲಾದಂತಹ ಪ್ರಮುಖ ಎಲೆಕ್ಟ್ರಿಕ್ ಕಂಪನಿಗಳು ಭಾರಿ ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಂಪನಿಯು ಜೂನ್ ತಿಂಗಳಲ್ಲಿ 17,552 ಯುನಿಟ್ ಸ್ಕೂಟರ್ ಸೇಲ್ ಮಾಡಿ, ಮೇ ತಿಂಗಳಿಗೆ ಹೋಲಿಸಿದರೆ (28,629 ಯುನಿಟ್) ಶೇಕಡ 39% ಕುಸಿತ ಕಂಡಿದೆ.

ಸಬ್ಸಿಡಿ ಪರಿಷ್ಕರಣೆಗೊಂಡು ಓಲಾ ಸ್ಕೂಟರ್ ದರಗಳು ಹೆಚ್ಚಳವಾಗಿರುವುದರಿಂದ ಪ್ರಸ್ತುತ ಎಸ್1 ಏರ್ ರೂ.1.10 ಲಕ್ಷ, ಎಸ್1 ರೂ.1.30 ಲಕ್ಷ ಹಾಗೂ ಎಸ್1 ಪ್ರೊ ರೂ.1.40 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಟಾಪ್ ಎಂಡ್ ಮಾದರಿ ಓಲಾ ಎಸ್1 ಪ್ರೊ 181 km, ಎಸ್1 ಸ್ಕೂಟರ್ 141 km ಹಾಗೂ ಎಸ್1 ಏರ್ 125 km ರೇಂಜ್ ನೀಡುತ್ತದೆ.

ಮೇ ತಿಂಗಳಿಗೆ ಹೋಲಿಸಿದರೆ (20,397 ಯುನಿಟ್) ಟಿವಿಎಸ್ ಕಂಪನಿ ಕೂಡ ತನ್ನ ಐಕ್ಯೂಬ್ ಮಾರಾಟದಲ್ಲಿ ಭಾರೀ ಕುಸಿತ ಕಂಡಿದೆ. ಕೇವಲ ಜೂನ್ ತಿಂಗಳಲ್ಲಿ 7,791 ಯುನಿಟ್ ಸೇಲ್ ಮಾಡಿ, ಮಾರಾಟ ಪ್ರಮಾಣದಲ್ಲಿ ಶೇಕಡ 62% ಇಳಿಕೆ ದಾಖಲಿಸಿದೆ. ಸಬ್ಸಿಡಿ ಪರಿಷ್ಕರಣೆಗೊಂಡು ದರ ಹೆಚ್ಚಳವಾಗಿರುವುದರಿಂದ ದೆಹಲಿಯಲ್ಲಿ ಐಕ್ಯೂಬ್ ರೂ.1,23,184 ಹಾಗೂ ಐಕ್ಯೂಬ್ ಎಸ್ ರೂಪಾಂತರ ರೂ.1,38,289 ಬೆಲೆಯನ್ನು ಪಡೆದಿದೆ.

ಎಥರ್ ಎನರ್ಜಿ ಕೂಡ ತನ್ನ ಸ್ಕೂಟರ್ ಮಾರಾಟದಲ್ಲಿ ಇಳಿಕೆ ಕಂಡಿದೆ. ಜೂನ್ ತಿಂಗಳಲ್ಲಿ (2023) 4,540 ಯುನಿಟ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಮೇ ತಿಂಗಳಿಗೆ ಹೋಲಿಸಿದರೆ (15,407 ಯುನಿಟ್) 49% ಕುಸಿತ ಕಂಡಿದೆ. ಇದಕ್ಕೆ ಬಜಾಬ್ ಕಂಪನಿ ಹೊರತಾಗಿಲ್ಲ. ಮೇ ತಿಂಗಳಲ್ಲಿ 9,965 ಯುನಿಟ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡಿದ್ದ ಕಂಪನಿ, ಜೂನ್ ತಿಂಗಳಲ್ಲಿ 2,966 ಯುನಿಟ್ ಸೇಲ್ ಮಾಡಿ, 54% ಇಳಿಕೆ ಕಂಡಿದೆ.

Article Published On: Monday, July 3, 2023, 15:41 [IST]
English summary
Electric two wheeler sales witness significant drop june 23
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+