Electric Scooter ಮಾಲೀಕರಿಗೆ ಭರ್ಜರಿ ಸಿಹಿಸುದ್ದಿ... ಹಣ ಹಿಂತಿರುಗಿಸಲಿವೆ ಓಲಾ, ಎಥರ್, ಟಿವಿಎಸ್, ಹೀರೋ

ಭಾರತದಲ್ಲಿ ಎಲ್ಲರಿಗೂ ತಿಳಿದಿರುವಂತೆ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆಗಾಗಿ FAME ಸ್ಕೀಮ್ ಮೂಲಕ ಇವಿ ಕಂಪನಿಗಳನ್ನು ಪ್ರೋತ್ಸಾಹಿಸಿ ಹಣಕಾಸಿನ ನೆರವು ನೀಡುತ್ತಿದೆ. ಇದೀಗ ಇದನ್ನು ಉಲ್ಲಂಘಿಸಿರುವುದು ಬೆಳಕಿಗೆ ಬಂದಿದ್ದು, ಸರ್ಕಾರದ ಕಠಿಣ ನಿರ್ಧಾರದಿಂದ ತಮ್ಮ ಗ್ರಾಹಕರಿಗೆ ಹಣ ಹಿಂತಿರುಗಿಸುತ್ತಿದ್ದಾರೆ.

ಮೊದಲಿಗೆ FAME ಕುರಿತು ತಿಳಿದುಕೊಳ್ಳೋಣ FAME (Faster Adoption and Manufacture of Hybrid and Electric Vehicles) ಅಂದರೆ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ತ್ವರಿತ ಅಳವಡಿಕೆ ಮತ್ತು ಉತ್ಪಾದನೆಯಾಗಿದೆ. ಈ ಯೋಜನೆಯು ದೇಶದಲ್ಲಿ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳ ಪ್ರಚಾರಕ್ಕಾಗಿ ಒಂದು ಪ್ರೋತ್ಸಾಹಕ ಯೋಜನೆಯಾಗಿದೆ. ಎಲೆಕ್ಟ್ರಿಕ್ ಚಲನಶೀಲತೆಯನ್ನು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

Electric Scooter

ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ಮತ್ತು ಎಲೆಕ್ಟ್ರಿಕ್ ವಾಹನಗಳ ಮೂಲಸೌಕರ್ಯ ಒದಗಿಸುವ ಕಂಪನಿಗಳಿಗೆ ಸಬ್ಸಿಡಿಗಳ ರೂಪದಲ್ಲಿ ಪ್ರೋತ್ಸಾಹವನ್ನು ನೀಡಲಾಗುತ್ತದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಹೈಬ್ರಿಡ್ ವಾಹನಗಳು ಸೇರಿದಂತೆ ಪರಿಸರ ಸ್ನೇಹಿ ವಾಹನಗಳ ಉತ್ಪಾದನೆ ಮತ್ತು ಪ್ರಚಾರವನ್ನು ಉತ್ತೇಜಿಸಲು 2015 ರಲ್ಲಿ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವಾಲಯವು FAME ಅನ್ನು ಪ್ರಾರಂಭಿಸಿತು.

ಈ ವೇಗದ ಅಡಾಪ್ಷನ್ ಮತ್ತು ಎಲೆಕ್ಟ್ರಿಕ್ ವೆಹಿಕಲ್ಸ್ (FAME) ಯೋಜನೆಯಡಿಯಲ್ಲಿ ಇವಿ ತಯಾರಕರು ಸರ್ಕಾರದ ಧನ ಸಹಾಯವನ್ನು ಪಡೆಯುತ್ತಾರೆ. ಆದರೂ ಇವಿ ಕಂಪನಿಗಳು ಚಾರ್ಜರ್‌ಗಳಿಗೆ ಶುಲ್ಕ ವಿಧಿಸಿದ ಕುರಿತು ತಿಳಿದು, ಕೇಂದ್ರ ಸರ್ಕಾರವು ದೇಶದ ಪ್ರಮುಖ ಇವಿ ತಯಾರಕರಿಗೆ ಸಬ್ಸಿಡಿಗಳನ್ನು ತಡೆಹಿಡಿಯಲು ಮುಂದಾಗಿರುವ ಕಾರಣ ಇವಿ ಕಂಪನಿಗಳು ತಮ್ಮ ಗ್ರಾಹಕರಿಗೆ ಹಣ ಹಿಂದಿರುಗಿಸಲು ಮುಂದಾಗಿದ್ದಾರೆ.

Electric Scooter

ವರದಿಯೊಂದರ ಪ್ರಕಾರ, ಹಲವಾರು EV ಕಂಪನಿಗಳು ತಮ್ಮ ಗ್ರಾಹಕರಿಗೆ ಪೋರ್ಟಬಲ್ ಚಾರ್ಜರ್‌ಗಳಿಗಾಗಿ ಪ್ರತ್ಯೇಕವಾಗಿ ಶುಲ್ಕ ವಿಧಿಸುತ್ತಿವೆ. ಇದು FAME ಸ್ಕೀಮ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಂತಾಗಿದ್ದು, EV ತಯಾರಕರು ಮತ್ತೊಮ್ಮೆ ಸರ್ಕಾರವು ನೀಡುವ FAME II ಪ್ರೋತ್ಸಾಹಕಗಳಿಗೆ ಅರ್ಹರಾಗುವುದಿಲ್ಲ. ಇದರಿಂದ ಎಚ್ಚೆತ್ತ ಓಲಾ ಎಲೆಕ್ಟ್ರಿಕ್, ಚಾರ್ಜರ್‌ಗೆ ವಿಧಿಸಿದ ಹಣವನ್ನು ಮರುಪಾವತಿಸಲು ಮೊದಲು ನಿರ್ಧರಿಸಿದೆ.

ಓಲಾ ಎಲೆಕ್ಟ್ರಿಕ್ ನಂತರ ಎಥರ್ ಎನರ್ಜಿ, ಟಿವಿಎಸ್ ಮತ್ತು ಹೀರೋ ಕಂಪನಿಗಳು ಕೂಡ ಹಣ ಹಿಂತಿರುಗಿಸಲು ಮುಂದಾಗಿವೆ. ನಮಗಿರುವ ಮಾಹಿತಿಯ ಪ್ರಕಾರ ಮೇಲೆ ತಿಳಿಸಿರುವ ಕಂಪನಿಗಳು ತಮ್ಮ ಗ್ರಾಹಕರಿಗೆ ಸುಮಾರು 290 ಕೋಟಿ ರೂ. ಹಿಂದಿರುಗಿಸಲಿವೆ. ಮರುಪಾವತಿಯನ್ನು ನಿರ್ಧರಿಸಿದ ನಂತರ, EV ತಯಾರಕರು ಮತ್ತೊಮ್ಮೆ ಸರ್ಕಾರವು ನೀಡುವ FAME II ಪ್ರೋತ್ಸಾಹಕಗಳಿಗೆ ಅರ್ಹವಾಗಲಿವೆ.

Electric Scooter

ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸುವಾಗ ಹೋಮ್ ಚಾರ್ಜರ್‌ಗಳಿಗೆ ಪ್ರತ್ಯೇಕವಾಗಿ ಶುಲ್ಕ ಪಾವತಿಸಿದ ಗ್ರಾಹಕರಿಗೆ ಮಾತ್ರ ಮರುಪಾವತಿ ಸಿಗಲಿದೆ. ಇವಿ ವಾಹನಗಳನ್ನು ದೊಡ್ಡ ಮಟ್ಟದಲ್ಲಿ ಉತ್ತೇಜಿಸಲು ಸರ್ಕಾರ ಬಯಸುತ್ತಿರುವುದರಿಂದ ಈ ತನಿಖೆಯು ಸ್ವಲ್ಪ ಸಮಯದವರೆಗೆ ನಡೆಯುವ ಹೆಚ್ಚಿನ ಅವಕಾಶವಿದೆ ಎಂದೇ ಹೇಳಬಹುದು. ಏನೇ ಆಗಲಿ ಇದು ಎಲೆಕ್ಟ್ರಿಕ್ ವಾಹನ ಬಳಕೆದಾದರರಿಗೆ ಶುಭ ಸುದ್ದಿಯಾಗಿದೆ.

ಮೂಲಸೌಕರ್ಯಗಳನ್ನು ಸೃಷ್ಟಿಸಲು ಮತ್ತು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಸರ್ಕಾರವು 14,000 ಕೋಟಿ ರೂ. ಹೂಡಿಕೆ ಮಾಡುವ ಗುರಿಯನ್ನು ಹೊಂದಿದೆ. ಹಾಗಾಗಿ ಎಲೆಕ್ಟ್ರಿಕ್ ಕಂಪನಿಗಳು ಇದರಿಂದ ಬರುವ ಪ್ರಯೋಜನಗಳನ್ನು ಅಷ್ಟು ಸುಲಭವಾಗಿ ಕೈಬಿಡಲು ಸಾಧ್ಯವಿಲ್ಲ. ಒಟ್ಟಾರೆಯಾಗಿ ದೇಶದ ಪ್ರಮುಖ ಕಂಪನಿಗಳ ಈ ನಿರ್ಧಾರವು ಮಾರಾಟವನ್ನು ಹೆಚ್ಚಿಸುವ ಸಾಧ್ಯತೆಯ ಇದೆ.

Article Published On: Thursday, May 4, 2023, 18:39 [IST]
English summary
Ev companies refund money to customers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+