Ola, Ather: ವಿಜಯದಶಮಿ.. ನಮ್ಮ ಬೆಂಗಳೂರಿನ ಓಲಾ, ಎಥರ್ ಇ-ಸ್ಕೂಟರ್‌ಗಳಿಗೆ ಸೂಪರ್ ಆಫರ್
ದಸರಾ ಹಬ್ಬಕ್ಕೆ ವಿವಿಧ ಕಂಪನಿಗಳು, ಹೊಸ ವಾಹನಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಿಸುತ್ತಿವೆ. ಅದಕ್ಕೆ ಬೆಂಗಳೂರಿನ ಓಲಾ (Ola) ಹಾಗೂ ಎಥರ್ (Ather) ಕಂಪನಿಗಳು ಹೊರತಲ್ಲ. ಈ ಬಾರಿ ಸೂಪರ್ ಡಿಸ್ಕೌಂಟ್ ನೀಡುತ್ತಿವೆ.
ಮೊದಲಿಗೆ ಓಲಾ ಎಲೆಕ್ಟ್ರಿಕ್ (Ola Electric) ನೀಡಿರುವ ರಿಯಾಯಿತಿ ಪ್ರಯೋಜನಗಳ ಬಗ್ಗೆ ಮಾತನಾಡೋಣ. ಈ ಹಬ್ಬದ ಋತುವಿನಲ್ಲಿ ಗ್ರಾಹಕರು, ಕಂಪನಿ ಯಾವುದೇ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದರೂ ರೂ.24,500 ವರೆಗೆ ಪ್ರಯೋಜನಗಳು ದೊರೆಯಲಿದೆ. ಅದರಲ್ಲಿ ಟಾಪ್ ಎಂಡ್ ಮಾದರಿ ಎರಡನೇ ತಲೆಮಾರಿನ (2nd Gen) ಓಲಾ ಎಸ್1 ಪ್ರೊ (Ola S1 Pro) ಕೊಂಡುಕೊಂಡರೆ, ರೂ.7,000 ಮೌಲ್ಯದ 5-ವರ್ಷಗಳ ಬ್ಯಾಟರಿ ವಾರಂಟಿ ಸಿಗುತ್ತದೆ.

ಅದೇ ರೀತಿಯಲ್ಲಿ ಓಲಾ ಎಸ್1 ಏರ್ (Ola S1 Air) ವಾರಂಟಿಯನ್ನು ವಿಸ್ತರಿಸಲು (extending warranty) ಶೇಕಡ 50% ರಿಯಾಯಿತಿ ದೊರೆಯುತ್ತದೆ. ಕಂಪನಿಯು ಖರೀದಿದಾರರಿಗಾಗಿ ಭರ್ಜರಿಯಾಗಿ ರೂ.10,000 ಮೌಲ್ಯದ ವಿನಿಮಯ ಕೊಡುಗೆಯನ್ನು (exchange offer) ನೀಡುತ್ತಿದೆ. ಜೊತೆಗೆ, ಗ್ರಾಹಕರು ಹಳೆಯ ಪೆಟ್ರೋಲ್ ದ್ವಿಚಕ್ರ ವಾಹನಗಳನ್ನು ಎಕ್ಸ್ಚೇಂಜ್ ಮಾಡಿಕೊಳ್ಳಲು ಅವಕಾಶವಿದೆ. ಆದರೆ, ಷರತ್ತುಗಳು ಅನ್ವಯಿಸುತ್ತದೆ.
ಓಲಾದ ಪಾಲುದಾರ ಸಂಸ್ಥೆಯ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಇಎಂಐ ಆಫರ್ ಕೂಡ ಲಭ್ಯವಿದೆ. ಜೀರೋ ಡೌನ್ ಪೇಮೆಂಟ್, ಜೀರೋ ಪ್ರೊಸೆಸಿಂಗ್ ಫೀಸ್, ಶೇಕಡ 5.99% ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳು ಲಭ್ಯವಿವೆ. ಓಲಾ ಇ-ಸ್ಕೂಟರ್ ಖರೀದಿಸುವಂತೆ ಪ್ರೇರಿಪಿಸುವವರಿಗೆ (referrer) ರೂ.2,000 ಕ್ಯಾಶ್‌ಬ್ಯಾಕ್, ಫ್ರೀ ಓಲಾ ಕೇರ್ ಪ್ಲಸ್ ಸೌಲಭ್ಯ ಸಿಗಲಿದೆ. ಆ ರೀತಿಯಲ್ಲಿ ಸ್ಕೂಟರ್ ಕೊಂಡುಕೊಳ್ಳುವವರಿಗೆ (referees) ರೂ.1,000 ಕ್ಯಾಶ್‌ಬ್ಯಾಕ್ ಲಭ್ಯವಿದೆ.
ಹಬ್ಬಕ್ಕೆ ಎಥರ್ ಎನರ್ಜಿ (Ather Energy) ಕೂಡ ಸಖತ್ ಆಫರ್ ನೀಡುತ್ತಿದೆ. ಅದರ ಕೈಗೆಟುಕುವ ಬೆಲೆಯ 450ಎಸ್ ಇ - ಸ್ಕೂಟರ್ ರೂ.5,000 ವರೆಗೆ ಫ್ಲಾಟ್ ಬೆನಿಫಿಟ್ ಹೊಂದಿದೆ. ಇದರೊಂದಿಗೆ, ರೂ.1,500 ಕಾರ್ಪೊರೇಟ್ ಆಫರ್, ಹಳೆಯ ಸ್ಕೂಟರ್ ಎಕ್ಸ್ಚೇಂಜ್ ಗೆ ರೂ.40,000 ವರೆಗೆ ಬೋನಸ್ ಪಡೆದಿದ್ದು, ರೂ.86,050 ಎಕ್ಸ್ ಶೋರೂಂ ಬೆಲೆಯಲ್ಲಿ ಈ ಸ್ಕೂಟರ್ ಖರೀದಿಗೆ ಲಭ್ಯವಿದೆ.
ಎಥರ್ 450ಎಕ್ಸ್ (2.9 kWh) ಹಾಗೂ 450ಎಕ್ಸ್ (3.7 kWh) ಎಲೆಕ್ಟ್ರಿಕ್ ಸ್ಕೂಟರ್ ಪಡೆದುಕೊಂಡಿರುವ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ಇವೆರೆಡು ರೂ.1,500 ಕಾರ್ಪೊರೇಟ್ ಆಫರ್, ರೂ.40,000 ವರೆಗೆ ಎಕ್ಸ್ಚೇಂಜ್ ಆಫರ್ ಹೊಂದಿದ್ದು, ಕ್ರಮವಾಗಿ ರೂ.101,050 ಹಾಗೂ ರೂ.110,249, ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.
ಎಥರ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿಶೇಷತೆ ಬಗ್ಗೆ ಮಾತನಾಡುವುದಾದರೆ, 450ಎಸ್ ಸಂಪೂರ್ಣ ಚಾರ್ಜ್ ನಲ್ಲಿ 115 km ರೇಂಜ್ ಕೊಡುತ್ತದೆ. 3.9 ಸೆಕೆಂಡುಗಳಲ್ಲಿ 0 - 40 ವೇಗವನ್ನು ಪಡೆಯಲಿದ್ದು, 90 km/h ಟಾಪ್ ಸ್ವೀಡ್ ಹೊಂದಿದೆ. ಜೊತೆಗೆ 450ಎಕ್ಸ್ ಇ-ಸ್ಕೂಟರ್, ಫುಲ್ ಚಾರ್ಜ್ ನಲ್ಲಿ 115 km ರಿಂದ 145 km ರೇಂಜ್ ನೀಡಲಿದ್ದು, ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ಹೇಳುವುದಾದರೆ, ಎಸ್1ಎಕ್ಸ್ ಸಂಪೂರ್ಣ ಚಾರ್ಜ್ ನಲ್ಲಿ 151 km ವರೆಗೆ ರೇಂಜ್ ನೀಡಲಿದ್ದು, 90 kmph ಟಾಪ್ ಸ್ವೀಡ್ ಹೊಂದಿದೆ. ಓಲಾ ಎಸ್1 ಏರ್ 3 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದ್ದು, 151 km ರೇಂಜ್ ಕೊಡುತ್ತದೆ. ಟಾಪ್ ಎಂಡ್ ಮಾದರಿ ಓಲಾ ಎಸ್1 ಪ್ರೊ, ಸಂಪೂರ್ಣ ಚಾರ್ಜ್ ನಲ್ಲಿ 195 ಕಿಲೋಮೀಟರ್ ರೇಂಜ್ ನೀಡುತ್ತದೆ. 120 kmph ಟಾಪ್ ಸ್ವೀಡ್ ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications