ಆಕರ್ಷಕ ವಿನ್ಯಾಸದ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳು

ದೇಶದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೋಕಾರ್ಪ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಬಹುನಿರೀಕ್ಷಿತ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತು. ಈ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಯನ್ನು ಈಗಾಗಲೇ ಪ್ರಾರಂಭಿಸಿದೆ.

ಈ ಹೊಸ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್‌ಗೆ ಲಭ್ಯವಿದೆ. ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಬಯಸುವ ಗ್ರಾಹಕರು ರೂ.2,499 ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಬಳಕೆದಾರರು ತಮ್ಮ ವಿಡಾವನ್ನು ಕಾಯ್ದಿರಿಸಬಹುದು. ಇದು ಸಂಪೂರ್ಣವಾಗಿ ಮರುಪಾವತಿಸಲ್ಪಡುತ್ತದೆ ಅಥವಾ ಖರೀದಿಯ ಸಮಯದಲ್ಲಿ ಅಂತಿಮ ಬೆಲೆಗೆ ಅನುಗುಣವಾಗಿ ಸರಿಹೊಂದಿಸಲಾಗುತ್ತದೆ. ದೇಶದಾದ್ಯಂತ 200 ಕ್ಕೂ ಹೆಚ್ಚು ಸ್ಥಳಗಳಲ್ಲಿ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಾಗುವಂತೆ ಹೀರೋ ಕಂಪನಿಯು ಯೋಜಿಸಿದೆ.

ಆಕರ್ಷಕ ವಿನ್ಯಾಸದ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳು

ಇತ್ತೀಚೆಗೆ, ಹೀರೋ ವಿಡಾ ತಮ್ಮ ಎಕ್ಸ್ಪೀರಿಯೆನ್ಸ್ ಸೆಂಟರ್ ಅನ್ನು ಬೆಂಗಳೂರಿನಲ್ಲಿ ತೆರೆಯಿತು. ಇನ್ನು ವಿಡಾ ಎಲೆಕ್ಟ್ರಿಕ್ ಸ್ಕೂಟರ್‌ನ ವಿತರಣೆಗಳು ಬೆಂಗಳೂರಿನಲ್ಲಿ ಅಧಿಕೃತವಾಗಿ ಪ್ರಾರಂಭವಾಗಿವೆ. ಹೀರೋ ಮೋಟೋಕಾರ್ಪ್‌ನ ಅಧ್ಯಕ್ಷ ಮತ್ತು ಸಿಇಒ ಡಾ. ಪವನ್ ಮುಂಜಾಲ್ ಅವರು ಬೆಂಗಳೂರಿನ ಗ್ರಾಹಕರಿಗೆ ಮೊಟ್ಟಮೊದಲ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕಳೆದ ವರ್ಷದ ಅಂತ್ಯದಲ್ಲಿ ವಿತರಿಸಿದರು. ಇನ್ನು ಇತ್ತೀಚೆಗೆ ಹೀರೋ ಮೋಟೋಕಾರ್ಪ್‌ನ ಅಧ್ಯಕ್ಷ ಮತ್ತು ಸಿಇಒ, ಪವನ್ ಮುಂಜಾಲ್ ಅವರು ಹೊಚ್ಚ ಹೊಸ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಿತರಿಸಿದ್ದಾರೆ.

ರೂಪಾಂತರಗಳು ಮತ್ತು ಬ್ಯಾಟರಿ ಸಾಮರ್ಥ್ಯ: ಈ ಹೊಸ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ V1 Plus ಮತ್ತು V1 Pro ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಎರಡರ ನಡುವಿನ ಪ್ರಾಥಮಿಕ ವ್ಯತ್ಯಾಸವೆಂದರೆ ಅವುಗಳ ಸ್ಥಾಪಿಸಲಾದ ಬ್ಯಾಟರಿ ಸಾಮರ್ಥ್ಯ ಮತ್ತು ರೇಂಜ್ ನಲ್ಲಿ V1 Plus ರೂಪಾಂತರ 3.44 kWh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದರೆ, V1 Pro ರೂಪಾಂತರ 3.94 kWh ಹೊಂದಿದೆ.

ಇನ್ನು ಎರಡೂ ರೂಪಾಂತರಗಳು ಕ್ರಮವಾಗಿ 1.72 kWh ಮತ್ತು 1.97 kWh ಡ್ಯುಯಲ್ ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿವೆ. ಇನ್ನು ವಿ1 ಪ್ಲಸ್‌ರೂಪಾಂತರವು 143 ಕಿಮೀ ರೇಂಜ್ ಅನ್ನು ನೀಡಿದರೆ ವಿ1 ಪ್ರೊ ರೂಪಾಂತರವು 165 ಕಿಮೀ ರೇಂಜ್ ಅನ್ನು ನೀಡುತ್ತದೆ. ಈ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ 3.2 ಸೆಕೆಂಡುಗಳಲ್ಲಿ 0 ರಿಂದ 40 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಪ್ಲಸ್ ರೂಪಾಂತರವು ಅದನ್ನು 3.4 ಸೆಕೆಂಡುಗಳಲ್ಲಿ 0 ರಿಂದ 40 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಎರಡೂ ವಿಡಾ ರೂಪಾಂತರಗಳು 6 kW ಗರಿಷ್ಠ ಪವರ್ ಮತ್ತು 25 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಗ್ರೇಡೆಬಿಲಿಟಿ 20° ಆಗಿದ್ದರೆ ಗರಿಷ್ಠ ವೇಗ ಗಂಟೆಗೆ 80 ಕಿಮೀ ಆಗಿದೆ. ಎರಡೂ ರೂಪಾಂತರಗಳು ಇಕೋ, ರೈಡ್ ಮತ್ತು ಸ್ಪೋರ್ಟ್‌ನ ರೈಡಿಂಗ್ ಮೋಡ್‌ಗಳನ್ನು ಹೊಂದಿವೆ. ಪ್ರೊ ರೂಪಾಂತರವು ಹೆಚ್ಚುವರಿ ಕಸ್ಟಮ್ ರೈಡಿಂಗ್ ಮೋಡ್ ಅನ್ನು ಪಡೆಯುತ್ತದೆ. ಇದು 100 ಕ್ಕೂ ಹೆಚ್ಚು ಸಂಯೋಜನೆಗಳನ್ನು ನೀಡುತ್ತದೆ.

ಇನ್ನು ವಿಡಾ ಪ್ರೊ ರೂಪಾಂತರವು 125 ಕೆಜಿ ತೂಕವನ್ನು ಹೊಂದಿದೆ. ಇನ್ನು ಪ್ಲಸ್ ರೂಪಾಂತರಕ್ಕಿಂತ 1 ಕೆಜಿ ಹೆಚ್ಚು ಹೊಂದಿದೆ. ಮನೆಯ ವಾತಾವರಣದಲ್ಲಿ, ಪ್ಲಸ್‌ ರೂಪಾಂತರವನ್ನು 5 ಗಂಟೆ 15 ನಿಮಿಷಗಳು ಮತ್ತು ವಿಡಾ ಪ್ರೊ ವೇರಿಯಂಟ್‌ಗೆ 5 ಗಂಟೆ 55 ನಿಮಿಷಗಳು ಚಾರ್ಜಿಂಗ್ ಮಾಡಬಹುದು. ಫಾಸ್ಟ್ ಚಾರ್ಜರ್‌ನೊಂದಿಗೆ, ಪೂರ್ಣ ಚಾರ್ಜ್‌ಗೆ ತೆಗೆದುಕೊಳ್ಳುವ ಸಮಯವು V1 ಪ್ಲಸ್‌ಗೆ ಸುಮಾರು 2 ಗಂಟೆಗಳು ಮತ್ತು V1 Pro ಗೆ 2 ಗಂಟೆ 20 ನಿಮಿಷಗಳಾಗಿದೆ.

ಫೀಚರ್ಸ್: ಈ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್‌ನ ಎರಡೂ ರೂಪಾಂತರಗಳ ಸಾಮಾನ್ಯ ಫೀಚರ್ಸ್ ಗಳು ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ. ಇದರೊಂದಿಗೆ OTA ಬೆಂಬಲದೊಂದಿಗೆ 7-ಇಂಚಿನ TFT ಡಿಸ್ ಪ್ಲೇ, ಬ್ಲೂಟೂತ್, 4G, Wi-Fi, ಆಂಟಿ-ಥೆಫ್ಟ್ ಅಲಾರ್ಮ್, ಜಿಯೋಫೆನ್ಸ್, ಟ್ರ್ಯಾಕ್ ಮೈ ಬೈಕ್, ವೆಹಿಕಲ್ ಡಯಾಗ್ನೋಸ್ಟಿಕ್ಸ್, ಕ್ರೂಸ್ ಕಂಟ್ರೋಲ್, SOS ಅಲರ್ಟ್, ಪುನರುತ್ಪಾದಕ ಬ್ರೇಕಿಂಗ್ ಮತ್ತು ರಿವರ್ಸ್ ಫಂಕ್ಷನ್ ಅನ್ನು ಹೊಂದಿದೆ.

Article Published On: Thursday, February 23, 2023, 20:00 [IST]
English summary
Find here some top highlights of hero vida electric scooter details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+