Firefox Avalon: 14 ಸಾವಿರ ರೂ. ಬೈಸಿಕಲ್ ಖರೀದಿಸಿದ್ರೆ 5 ಸಾವಿರ ರೂ. ಸ್ಮಾರ್ಟ್ ವಾಚ್ ಉಚಿತ

ಪ್ರೀಮಿಯಂ, ಸ್ಮಾರ್ಟ್ ಹಾಗೂ ಉತ್ತಮ ಗುಣಮಟ್ಟದ ಬೈಸಿಕಲ್‌ಗಳ ತಯಾರಿಕೆಗೆ ಜನಪ್ರಿಯವಾಗಿರುವ ಪ್ರಸಿದ್ಧ ಬೈಸಿಕಲ್ ಕಂಪನಿಯಾದ ಫೈರ್‌ಫಾಕ್ಸ್, ಭಾರತದಲ್ಲಿ ಹೊಸ ಬೈಸಿಕಲ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಕೈಗೆಟುಕುವ ಹೊಸ ಬೈಸಿಕಲ್‌‌ನತ್ತ ಗ್ರಾಹಕರನ್ನು ಸೆಳೆಯುವ ಸಲುವಾಗಿ ಕಂಪನಿಯು ಉಚಿತ ಸ್ಮಾರ್ಟ್‌ವಾಚ್ ಅನ್ನು ನೀಡುವುದಾಗಿ ಘೋಷಿಸಿದೆ.

ಅಡ್ವೆಂಚರ್ ಉತ್ಸಾಹಿಗಳಿಗಾಗಿ ಟ್ರೆಮೊರ್ ಎಕ್ಸ್ ಸೀರಿಸ್ ಮತ್ತು ಮಹಿಳೆಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಅವಲೋನ್ ಎಂಬ ಮಾದರಿಯನ್ನು ಕಂಪನಿ ಪರಿಚಯಿಸಿದೆ. ಈ ಸರಣಿಯಲ್ಲಿ ಕಂಪನಿಯು ಹಲವಾರು ರೂಪಾಂತರಗಳನ್ನು ಈಗಾಗಲೇ ಮಾರಾಟ ಮಾಡುತ್ತಿದೆ. ಇದರೊಂದಿಗೆ ಅವಲಾನ್ ಹಾಗೂ ಟ್ರೆಮೊರ್ ಎಕ್ಸ್ ಮಾದರಿಯ ಬೈಸಿಕಲ್‌ಗಳನ್ನು ಈಗ ಬಿಡುಗಡೆ ಮಾಡಿದೆ.

Firefox Avalon

Firefox Avalon ಮಹಿಳೆಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬೈಸಿಕಲ್ ಆಗಿದ್ದು, ಇದರ ಪರಿಚಯಾತ್ಮಕ ಬೆಲೆ ರೂ. 14 ಸಾವಿರವಿದೆ. ಈ ಬೈಸಿಕಲ್ ಖರೀದಿಸಿದರೆ ರೂ. 4,999 ಮೌಲ್ಯದ ನಾಯ್ಸ್ ಬ್ರಾಂಡ್ 'ಬೀಟ್' ಸ್ಮಾರ್ಟ್ ವಾಚ್ ಅನ್ನು ಉಚಿತವಾಗಿ ನೀಡಲಾಗುವುದು. Avalon ಖರೀದಿಸುವ ಪ್ರತಿಯೊಬ್ಬರಿಗೂ ಈ ಸ್ಮಾರ್ಟ್ ವಾಚ್ ಅನ್ನು ಉಚಿತವಾಗಿ ನೀಡಲು ಕಂಪನಿ ನಿರ್ಧರಿಸಿದೆ.

ಇದರಲ್ಲಿ ಟ್ರೆಮೊರ್ ಎಕ್ಸ್ ಆರಂಭಿಕ ಬೆಲೆಯು ರೂ. 10,000 ವಿದೆ. ಫೈರ್ ಫಾಕ್ಸ್ ಈ ಬೈಸಿಕಲ್ ಅನ್ನು ಅತ್ಯಂತ ಕಡಿಮೆ ತೂಕದ ಬೈಸಿಕಲ್ ಆಗಿ ವಿನ್ಯಾಸಗೊಳಿಸಿದೆ. ಇದನ್ನು ಹೆಚ್ಚಾಗಿ ಅಡ್ವೆಂಚರ್ ಪ್ರಯಾಣವನ್ನು ಇಷ್ಟಪಡುವವರಿಗಾಗಿ ಫೈರ್‌ಫಾಕ್ಸ್ ವಿಶೇಷವಾಗಿ ವಿನ್ಯಾಸಗೊಳಿಸಿದೆ. ವಿವರವಾಗಿ ಹೇಳುವುದಾದರೆ ಕಂಪನಿಯು ಇದನ್ನು ಗುಡ್ಡಗಾಡು ಮತ್ತು ಒರಟು ರಸ್ತೆಗಳನ್ನು ನಿಭಾಯಿಸಲು ವಿನ್ಯಾಸಗೊಳಿಸಿದೆ.

Firefox Avalon

ಮಹಿಳೆಯರಿಗಾಗಿಯೇ ವಿಶೇಷವಾಗಿ ತಯಾರಿಸಿದ ಅವಲಾನ್ ಸೈಕಲ್ ವಿವಿಧ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತದೆ. ನಗರ ಪ್ರದೇಶದ ಮಹಿಳೆಯರಿಗೆ ಈ ಸೈಕಲ್ ತುಂಬಾ ಸಹಕಾರಿಯಾಗಲಿದೆ ಎಂದು ಕಂಪನಿ ಹೆಳಿಕೊಂಡಿದೆ. ಇದು ಕಡಿಮೆ ತೂಕದಲ್ಲಿ ಬರುವುದರಿಂದ ಆರಾಮದಾಯಕ ಸವಾರಿ ಮಾಡಬಹುದು. ಇದರೊಂದಿಗೆ ಶಿಮಾನೊ ಶಿಫ್ಟರ್‌ಗಳು ಮತ್ತು 700 ಸಿ ಟೈರ್‌ಗಳು ಅತ್ಯುತ್ತಮ ಗ್ರಿಪ್ ನೀಡುತ್ತವೆ.

ಅದೇ ರೀತಿ ಫೈರ್‌ಫಾಕ್ಸ್ ಟ್ರೆಮೊರ್ ಎಕ್ಸ್ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಇದು ಸಿಂಗಲ್ ಸ್ಪೀಡ್ ವೇರಿಯಂಟ್ ಮತ್ತು 21S ಶಿಮಾನೋ ಡ್ರೈವ್ ಟ್ರೈನ್ ಎರಡರಲ್ಲೂ ಲಭ್ಯವಿರುತ್ತದೆ. ಇದರ ಹೊರತಾಗಿ, ಟ್ರೆಮೊರ್ ಎಕ್ಸ್ 24 ಇಂಚು, 26 ಇಂಚು, 27.5 ಇಂಚು ಮತ್ತು 29 ಇಂಚುಗಳ ಚಕ್ರಗಳಲ್ಲಿ ಲಭ್ಯವಿದೆ ಎಂಬುದನ್ನು ಇಲ್ಲಿ ಗಮನಿಸಬೇಕಾದ ಸಂಗತಿ.

ಇವುಗಳ ಜೊತೆಗೆ, ಉತ್ತಮ ಬ್ರೇಕಿಂಗ್ ಸೌಕರ್ಯವನ್ನು ಒದಗಿಸಲು Avalon ನಲ್ಲಿ V- ಬ್ರೇಕ್ ಅನ್ನು ಒದಗಿಸಲಾಗಿದೆ. ಟ್ರೆಮೊರ್ ಎಕ್ಸ್ ಸಾಂಪ್ರದಾಯಿಕ ಡಿಸ್ಕ್ ಬ್ರೇಕ್‌ಗಳೊಂದಿಗೆ ಬರುತ್ತದೆ ಎಂಬುದನ್ನು ಗಮನಿಸಬೇಕು. ಹೊಸದಾಗಿ ಬಿಡುಗಡೆಯಾದ Avalon ಮತ್ತು Tremor X ಎರಡೂ ಬೈಕ್‌ಗಳನ್ನು ಆನ್‌ಲೈನ್‌ನಲ್ಲಿ ಮತ್ತು ಕಂಪನಿಯ ಅಧಿಕೃತ ಶೋರೂಂ ಮೂಲಕ ಖರೀದಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತೇವೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್, ರಿವ್ಯೂ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ನೀವು ಮರೆಯದಿರಿ.

Article Published On: Saturday, June 24, 2023, 13:12 [IST]
English summary
Firefox avalon tremor x launched free smart watch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+