Hero Karizma: ಹೀರೋ ಕರಿಜ್ಮಾ ಎಕ್ಸ್ಎಂಆರ್ ಉತ್ಪಾದನೆ ಆರಂಭ, ಇದೇ ತಿಂಗಳು ವಿತರಣೆ.. ಅಬ್ಬರ ಶುರು!
ದೇಶದಲ್ಲಿ ನಂಬರ್ 1 ದ್ವಿಚಕ್ರ ವಾಹನ ಸಂಸ್ಥೆಯಾಗಿ ಹೀರೋ ಮೋಟೊಕಾರ್ಪ್ (Hero MotoCorp) ಗುರುತಿಸಿಕೊಂಡಿದೆ. ಕಂಪನಿಯ ಬೈಕ್ ಹಾಗೂ ಸ್ಕೂಟರ್‌ಗಳು ಅತ್ಯತ್ತಮ ವಿನ್ಯಾಸ, ವೈಶಿಷ್ಟ್ಯ ಹೊಂದಿರುವುದರಿಂದ ಪ್ರತಿಯೊಬ್ಬ ಗ್ರಾಹಕರಿಗೆ ಇಷ್ಟವಾಗುತ್ತದೆ. ಕಳೆದ ತಿಂಗಳು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದ ಕರಿಜ್ಮಾ ಎಕ್ಸ್ಎಂಆರ್ ಬಗ್ಗೆ ಮಹತ್ವದ ಮಾಹಿತಿ ದೊರೆತಿದೆ.
ಹೀರೋ ಮೋಟೊಕಾರ್ಪ್ ತನ್ನ ತಯಾರಿಕಾ ಘಟಕದಲ್ಲಿ ಮೊದಲ ಕರಿಜ್ಮಾ ಎಕ್ಸ್ಎಂಆರ್ (Karizma XMR) ಉತ್ಪಾದನಾ ಮಾದರಿಯನ್ನು ಹೊರತಂದಿದೆ. ಆ ಫೋಟೋವನ್ನು ಕಂಪನಿಯು ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದೆ. ಇದನ್ನು ಗಮನಿಸಿದರೆ, ಈಗಾಗಲೇ ನೂತನ ಕರಿಜ್ಮಾ ಬೈಕ್ ಉತ್ಪಾದನೆ ಆರಂಭವಾಗಿದೆ ಎಂದು ಸುಲಭವಾಗಿ ಹೇಳಬಹುದು.

ಹೊಸ ಹೀರೋ ಕರಿಜ್ಮಾ ಎಕ್ಸ್ಎಂಆರ್ ಬೈಕ್, ರೂ.1.73 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಆಸಕ್ತ ಗ್ರಾಹಕರು, ರೂ.3000 ಟೋಕನ್ ಮೊತ್ತ ಪಾವತಿಸುವ ಮೂಲಕ ಬುಕ್ಕಿಂಗ್ ಮಾಡಬಹುದು. ಈ ಮೋಟಾರ್ ಸೈಕಲ್ ವಿತರಣೆ ಬಹುತೇಕ ಈ ತಿಂಗಳ ಕೊನೆಯಲ್ಲಿ ಆರಂಭವಾಗುವ ಎಲ್ಲ ಲಕ್ಷಣಗಳಿದ್ದು, ಖರೀದಿದಾರರು ಕಾತರದಿಂದ ಕಾಯುತ್ತಿದ್ದಾರೆ.
ಹೀರೋ ಕರಿಜ್ಮಾ ಎಕ್ಸ್ಎಂಆರ್ ಮೋಟಾರ್ ಸೈಕಲ್ ಎಂಜಿನ್ ಬಗ್ಗೆ ಮಾತನಾಡುವುದಾದರೆ, ಇದು 210 ಸಿಸಿ ಸಿಂಗಲ್ - ಸಿಲಿಂಡರ್ ಲಿಕ್ವಿಡ್ ಕೂಲ್ಡ್ DOHC ಎಂಜಿನ್ ಹೊಂದಿದ್ದು, 9,250 rpmನಲ್ಲಿ 25.15 bhp ಪವರ್, 7,250 rpmನಲ್ಲಿ 20.4 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 6 - ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದಿದೆ.
ಈ ಬೈಕ್, ವಿನ್ಯಾಸದ ಬಗ್ಗೆ ಹೇಳುವುದಾದರೆ, ಹೆಚ್ಚಿನ ಸಂಖ್ಯೆಯಲ್ಲಿ ಯುವ ಖರೀದಿದಾರರನ್ನು ಆಕರ್ಷಿಸುವ ಡಿಸೈನ್ ಪಡೆದಿದೆ. ಮುಂಭಾಗ ವೈ- ಆಕಾರದ ಎಲ್ಇಡಿ DRL, ಅತ್ಯಾಧುನಿಕ LED ಹೆಡ್‌ಲೈಟ್ ಸೆಟಪ್ ಹೊಂದಿದೆ. ಅಡ್ಜಸ್ಟ್ಏಬಲ್ ವಿಂಡ್‌ಸ್ಕ್ರೀನ್, ರೇರ್ ವ್ಯೂ ಮಿರರ್ಸ್, ಮಸ್ಕ್ಯುಲರ್ ಫ್ಯುಯಲ್ ಟ್ಯಾಂಕ್, ಸ್ಪ್ಲಿಟ್ ಸೀಟ್ ಸೆಟಪ್ ಮತ್ತು ಹಿಂಭಾಗ ಕೂಡ ಎಲ್ಇಡಿ ಲೈಟಿಂಗ್ ಇದೆ.
ಹೀರೋ ಕರಿಜ್ಮಾ ಎಕ್ಸ್ಎಂಆರ್ ಮೋಟಾರ್ ಸೈಕಲ್ ವೈಶಿಷ್ಟ್ಯದ ಬಗ್ಗೆ ತಿಳಿಯುವುದಾದರೆ, ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಫುಲ್ ಡಿಜಿಟಲ್ LCD ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಟರ್ನ್ - ಬೈ - ಟರ್ನ್ ನ್ಯಾವಿಗೇಶನ್ ಸೇರಿದಂತೆ ಹತ್ತಾರು ಫೀಚರ್ಸ್ ಹೊಂದಿದೆ. ಜೊತೆಗೆ ಮೂರು ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಅವುಗಳೆಂದರೆ, ಐಕಾನಿಕ್ ಯೆಲ್ಲೋ, ಟರ್ಬೊ ರೆಡ್ ಮತ್ತು ಮ್ಯಾಟ್ ಫ್ಯಾಂಟಮ್ ಬ್ಲಾಕ್.
ಈ ಬೈಕ್, ಸಸ್ಪನ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗ ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗ ಮೊನೊಶಾಕ್ ಸೆಟಪ್ ಒಳಗೊಂಡಿದೆ. ಬ್ರೇಕಿಂಗ್ ಸಿಸ್ಟಮ್ ವಿಚಾರಕ್ಕೆ ಬರುವುದಾದರೆ, ಫ್ರಂಟ್ ಹಾಗೂ ರೇರ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದ್ದು, ಗರಿಷ್ಠ ಸುರಕ್ಷತೆಗಾಗಿ, ಡ್ಯುಯಲ್ - ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಪಡೆದಿದೆ. ಇದರೊಟ್ಟಿಗೆ 17 - ಇಂಚಿನ ಆಕರ್ಷಕ ಅಲಾಯ್ ವೀಲ್ಸ್ ಒಳಗೊಂಡಿದೆ.
ಇನ್ನು, ಯುವಕರ ಹಾಟ್ ಫೆವರೇಟ್ ಹೀರೋ ಕರಿಜ್ಮಾ ಎಕ್ಸ್ಎಂಆರ್ ಮೋಟಾರ್ ಸೈಕಲ್ ಉತ್ಪಾದನೆ ಶುರುವಾಗಿದ್ದು, ಈ ತಿಂಗಳ ಕೊನೆಯಲ್ಲಿ ವಿತರಣೆ ಆರಂಭವಾಗಲಿದೆ. ಇದು, ಗ್ರಾಹಕರಿಗೆ ಸಾಕಷ್ಟು ಖುಷಿ ತಂದಿದೆ. ಈ ಹೀರೋ ಕರಿಜ್ಮಾ ಎಕ್ಸ್ಎಂಆರ್ ಬೈಕಿಗೆ ದೇಶೀಯ ಮಾರುಕಟ್ಟೆಯಲ್ಲಿ ಸುಜುಕಿ ಜಿಕ್ಸರ್ SF 250, ಯಮಹಾ R15 V4, ಹಾಗೂ ಬಜಾಜ್ ಪಲ್ಸರ್ RS200 ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








