ಸ್ಪ್ಲೆಂಡರ್, ಆಕ್ಟೀವಾ ಮೊದಲೇ ಮೈಲೇಜ್ ರಾಜರು... ಈಗ EV ಪರಿವರ್ತನೆಗೆ RTO ಅನುಮೋದನೆ
ದೇಶದಲ್ಲಿ ಎಲೆಕ್ಟ್ರಿಕ್ ವಾಹನ ತಯಾರಕರ ನಡುವೆ ಕೆಲವೇ ಕಂಪನಿಗಳು ಹಳೆಯ ಪೆಟ್ರೋಲ್ ಚಾಲಿತ ವಾಹನಗಳನ್ನು ಇವಿಗಳಾನ್ನಾಗಿ ಪರಿವರ್ತಿಸುತ್ತಿವೆ. ಅಂತಹ ಬ್ರಾಂಡ್‌ಗಳಲ್ಲಿ ಮುಂಬೈ ಮೂಲದ EV ಸ್ಟಾರ್ಟ್-ಅಪ್ GoGoA1 ಎಂಬ ಕಂಪನಿ ಕೂಡ ಒಂದು. ಈ ಕಂಪನಿಯು ಯಾವುದೇ ಸಮಸ್ಯೆಗಳಿಲ್ಲದೇ ಅತ್ಯುತ್ತಮವಾಗಿ ಇಂಧನ ಚಾಲಿತ ವಾಹನಗಳನ್ನು ಇವಿಗಳಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದೆ.
ಸದ್ಯಕ್ಕಿರುವ ಹಳೆಯ ಪೆಟ್ರೋಲ್ ಚಾಲಿತ ವಾಹನಗಳನ್ನು ಮಾರಲು ಇಷ್ಟವಿಲ್ಲದ ಹಾಗೂ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಬಯಕೆಯಿದ್ದವರಿಗೆ GoGoA1 ಉತ್ತಮ ಆಯ್ಕೆಯಾಗಿದೆ. ನಿಮ್ಮ ವಾಹನವನ್ನು ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸಿಕೊಂಡು ನಿಮ್ಮ ಬಳಿಯೇ ಉಳಿಸಿಕೊಳ್ಳುವ ಒಂದು ಅವಕಾಶವಾಗಿದೆ. ಮೂಲಗಳ ಪ್ರಕಾರ ಇದೀಗ ಕಂಪನಿ 50ಕ್ಕೂ ಹೆಚ್ಚು ವಾಹನ ಮಾದರಿಗಳ ಪರಿವರ್ತನೆಗೆ ಆರ್‌ಟಿಓ ಅನುಮೋದನೆ ಪಡೆದಿದೆ ಎಂದು ತಿಳಿದುಬಂದಿದೆ.

ಕಂಪನಿಯು ಆರಂಭದಲ್ಲಿ ಒಂದಷ್ಟು ವಾಹನಗಳನ್ನು ಇವಿಗಳಾಗಿ ಪರಿವರ್ತಿಸಿದ ಉತ್ಪನ್ನಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾಗಾಗಿ GoGoA1 ಈಗ ತನ್ನ ಕಾರ್ಯಾಚರಣೆಗಳನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನೋಡುತ್ತಿದೆ. ಈ ಹಿಂದೆ ಕಂಪನಿ ಪ್ರಾರಂಭವಾದಾಗ, EV ಪರಿವರ್ತನೆ ಕಿಟ್‌ಗಳು ಕೆಲವೇ ವಾಹನಗಳಿಗೆ ಲಭ್ಯವಿದ್ದವು. ಇದೀಗ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ GoGoA1 ಹೆಚ್ಚಿನ ವಾಹನಗಳ ಕಿಟ್‌ಗಳ ತಯಾರಿ ಮೇಲೆ ಕೇಂದ್ರೀಕರಿಸುತ್ತಿದೆ.
50 ಕ್ಕೂ ಹೆಚ್ಚು ಮಾದರಿಗಳಿಗೆ ಕಿಟ್ ಅನುಮೋದನೆ: 50 ಕ್ಕೂ ಹೆಚ್ಚು ಮಾದರಿಗಳಿಗೆ RTO EV ಪರಿವರ್ತನೆ ಕಿಟ್‌ಗಳನ್ನು ಅನುಮೋದಿಸಲಾಗಿದೆ. ಆದ್ದರಿಂದ, ಬಳಕೆದಾರರು ತಮ್ಮ ಪರಿವರ್ತಿತ ದ್ವಿಚಕ್ರ ವಾಹನಗಳಿಗೆ ಅನುಮೋದನೆ ಪಡೆಯಲು RTO ಕಚೇರಿಗಳಲ್ಲಿ ಸಮಯ ಕಳೆಯುವ ಅಗತ್ಯವಿಲ್ಲ. ಜೊತೆಗೆ ಮೂಲ ವೇದಿಕೆಯನ್ನು ಪರಿಪೂರ್ಣಗೊಳಿಸಿದ ನಂತರ, EV ಪರಿವರ್ತನೆ ಕಿಟ್‌ಗಳನ್ನು ವಿವಿಧ ದ್ವಿಚಕ್ರ ವಾಹನ ಮಾದರಿಗಳಿಗೆ ಸಿದ್ಧಗೊಳಿಸಬಹುದು ಎಂದು ಕಂಪನಿ ಹೆಳಿಕೊಂಡಿದೆ.

GoGoA1 EV ಪರಿವರ್ತನೆ ಕಿಟ್‌ಗಳು ಈಗ 50 ಕ್ಕೂ ಹೆಚ್ಚು ಜನಪ್ರಿಯ ಮಾದರಿಗಳಿಗೆ ಲಭ್ಯವಿವೆ, EV ಪರಿವರ್ತನೆ ಕಿಟ್‌ಗಳು ಹೀರೋ-ಹೋಂಡಾ, ಹೋಂಡಾ ಮತ್ತು ಹೀರೋ ಮೋಟೋಕಾರ್ಪ್‌ನಂತಹ ಪ್ರಮುಖ ದ್ವಿಚಕ್ರ ವಾಹನ ಬ್ರಾಂಡ್‌ಗಳಿಗೆ ಲಭ್ಯವಿದೆ. ಹೋಂಡಾ ಆಕ್ಟಿವಾ ಸ್ಕೂಟರ್‌ನ 5 ವಿಭಿನ್ನ ರೂಪಾಂತರಗಳು ಸೇರಿದಂತೆ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳಿಗೆ EV ಪರಿವರ್ತನೆ ಕಿಟ್‌ಗಳು ಲಭ್ಯವಿರುವುದಾಗಿ ಕಂಪನಿ ಹೇಳಿಕೊಂಡಿದೆ.
ಬೆಲೆ: GoGoA1 ಇವಿ ಪರಿವರ್ತನೆ ಕಿಟ್‌ಗಳ ಬೆಲೆಯ ಕುರಿತು ಅವರ ವೆಬ್‌ಸೈಟ್‌ನಲ್ಲಿ ವಿವರವಾಗಿ ತಿಳಿಸಲಾಗಿದೆ. ಉದಾಹರಣೆಗೆ ಹೋಂಡಾ ಆಕ್ಟೀವಾ ಇವಿ ಪರಿವರ್ತನೆಗೆ ಇವರು 19,000 ರೂ. ಪಡೆಯುತ್ತಾರೆ. ಹಾಗೆಯೇ ಬ್ಯಾಟರಿ, ಐಒಟಿ ಹಾಗೂ ಚಾರ್ಜರ್‌ಗಳಿಗೆ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಇನ್ನು ಮೋಟಾರ್ ಸೈಕಲ್‌ಗಳ ಬಗ್ಗೆ ಹೇಳೊದಾದ್ರೆ ಪರಿವರ್ತನೆಗಾಗಿ 29,999 ರೂ. ಹಾಗೂ ಬ್ಯಾಟರಿ, ಐಒಟಿ ಹಾಗೂ ಚಾರ್ಜರ್‌ಗಳಿಗೆ ಪ್ರತ್ಯೇಕವಾಗಿ ಹೆಚ್ಚುವರಿ ಪಾವತಿಸಬೇಕಾಗುತ್ತದೆ.

ಕೆಲ ರಾಜ್ಯಗಳಲ್ಲಿ ವಾಣಿಜ್ಯ ಬಳಕೆಗೆ ಬಳಸುತ್ತಿರುವ ದ್ವಿಚಕ್ರ ವಾಹನಗಳ ಶೇ100 ರಷ್ಟು ವಿದ್ಯುದ್ದೀಕರಣವನ್ನು ಸರ್ಕಾರ ಕಡ್ಡಾಯಗೊಳಿಸಿದ್ದು, ಈ ಗುರಿಯನ್ನು 2027 ರ ವೇಳೆಗೆ ಸಾಧಿಸಬೇಕಾಗಿದೆ. ಈ ನಿಟ್ಟಿನಲ್ಲಿ GoGoA1 ಮುಂಬರುವ ವರ್ಷಗಳಲ್ಲಿ ಭಾರಿ ಬೇಡಿಕೆಯನ್ನು ನಿರೀಕ್ಷಿಸುತ್ತಿದೆ. ಸಾಮೂಹಿಕ ಪ್ರಮಾಣದ EV ಪರಿವರ್ತನೆಗಳು ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು GoGoA1 ಭಾವಿಸುತ್ತಿದೆ.
ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ಕೇಂದ್ರ ಸಾರಿಗೆ ಸಚಿವಾಲಯ ಹಾಗೂ ಅಲ್ಲಿನ ಆರ್‌ಟಿಓ ಅನುಮೋದನೆ ನೀಡಿರುವುದಾಗಿ ತಿಳಿಸಿದೆ. ಆದ್ರೆ ರಾಜ್ಯದಿಂದ ರಾಜ್ಯಕ್ಕೆ ಆರ್‌ಟಿಓ ನಿಯಮಗಳು ಬದಲಾಗಲಿವೆ. ಈ ಬಗ್ಗೆ ಹೆಚ್ಚಿನ ವಿವರಗಳು ಹಾಗೂ ತಮ್ಮ ವಾಹನಕ್ಕೆ ಪರಿವರ್ತನೆ ಬೇಕೆಂದಂರೆ ಆಸಕ್ತ ಗ್ರಾಹಕರು ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಿ ಸಂಪರ್ಕಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications