ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವ ಬೈಕ್‌ಗಳಿವು...
ಹೋಂಡಾ ಮೋಟಾರ್‌ಸೈಕಲ್ ತನ್ನ ಶೈನ್ 100 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಹೊಸ ಹೋಂಡಾ ಶೈನ್ 100 ದೇಶದ ಅತ್ಯಂತ ಕೈಗೆಟುಕುವ ಬೈಕ್‌ಗಳಲ್ಲಿ ಒಂದಾಗಿದೆ. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಮಾರಾಟವಾಗುತ್ತಿರುವ ಟಾಪ್ 5 ಅತ್ಯಂತ ಕೈಗೆಟುಕುವ ಬೈಕ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.
ಹೀರೋ HF 100: ಸಂಪೂರ್ಣ ಸರಳತೆಯು ಹೀರೋ HF 100 ಅನ್ನು ಪ್ರಸ್ತುತ ಭಾರತದಲ್ಲಿ ಮಾರಾಟದಲ್ಲಿರುವ ಅತ್ಯಂತ ಕೈಗೆಟುಕುವ ಮೋಟಾರ್‌ಸೈಕಲ್ ಆಗಿದೆ. ಈ ಹೀರೋ HF 100 ಬೈಕಿನಲ್ಲಿ 97cc ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 8 hp ಮತ್ತು 8.05 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಈ ಬೈಕ್ i3S ಸ್ಟಾಪ್-ಸ್ಟಾರ್ಟ್ ತಂತ್ರಜ್ಞಾನವನ್ನು ಹೊಂದಿಲ್ಲ, ಕಿಕ್-ಸ್ಟಾರ್ಟರ್‌ನೊಂದಿಗೆ ಕೇವಲ ಒಂದೇ ರೂಪಾಂತರದಲ್ಲಿ ಲಭ್ಯವಿದೆ.

ಈ ಹೀರೋ HF 100 ಬೈಕಿನ ಬೆಲೆಯು ರೂ.54,962 ಆಗಿದೆ. ಕೈಗೆಟುಕುವ ಬೆಲೆ, ಹೆಚ್ಚಿನ ಮೈಲೇಜ್ ಮತ್ತು ಕಡಿಮೆ ನಿರ್ವಹಣೆಯಿಂದ ಜನಪ್ರಿಯವಾದ ಸ್ಪ್ಲೆಂಡರ್ ಬೈಕ್ ಈಗ ದುಬಾರಿಯಾಗಿದೆ. ಸ್ಪ್ಲೆಂಡರ್ ಬೈಕಿನ ಪ್ರಾರಂಭಿಕ ಬೆಲೆಯು ರೂ.72,420 ಆಗಿದೆ. ಸ್ಪ್ಲೆಂಡರ್ ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ಅತ್ಯಂತ ದುಬಾರಿ 100cc ಕಮ್ಯೂಟರ್ ಬೈಕ್ ಆಗಿದೆ. ಆದರೆ ಸ್ಪ್ಲೆಂಡರ್ ಅನ್ನು ದಶಕಗಳ ವಿಶ್ವಾಸಾರ್ಹತೆಯು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವನ್ನು ಮುಂದುವರಿಸಲು ಸಹಾಯ ಮಾಡುತ್ತದೆ.
ಹೀರೋ HF ಡಿಲಕ್ಸ್: ಈ ಹೀರೋ HF ಡಿಲಕ್ಸ್ ಬೈಕಿನ ಪ್ರಾರಂಭಿಕ ಬೆಲೆಯು ರೂ,61,232 ಆಗಿದೆ. 100cc ಬೈಕ್ ಬಿಭಾಗದಲ್ಲಿ ಹೀರೋ ಪಾರುಪತ್ಯ ಸಾಧಿಸುತ್ತಿದೆ. 100cc ವಿಭಾಗದ ಹೀರೋ ಕಂಪನಿಯ ಮತ್ತೊಂದು ಬೈಕ್ ಆದ HF ಡಿಲಕ್ಸ್ 97cc ಎಂಜಿನ್ ಅನ್ನು ಹೊಂದಿದೆ. ಇದೀಗ ಈ ಬೈಕಿನಲ್ಲಿ ಹೀರೋನ i3S ಸ್ಟಾಪ್-ಸ್ಟಾರ್ಟ್ ತಂತ್ರಜ್ಞಾನದೊಂದಿಗೆ ಅಳವಡಿಸಲಾಗಿದೆ. ಟಿವಿಎಸ್ ಸ್ಪೋರ್ಟ್‌ನಂತೆ, ಲೋ ರೂಪಾಂತರಗಳು ಕಿಕ್ ಸ್ಟಾರ್ಟರ್‌ಗಳನ್ನು ಪಡೆಯುತ್ತವೆ.

ಟಿವಿಎಸ್ ಸ್ಪೋರ್ಟ್: ಟಿವಿಎಸ್ ಸ್ಪೋರ್ಟ್ ಬೈಕಿನಲ್ಲಿ 109.7cc ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8.3 hp ಮತ್ತು 8.7 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಟಿವಿಎಸ್ ಸ್ಪೋರ್ಟ್ ದೇಶದಲ್ಲಿ ಮೂರನೇ ಅತ್ಯಂತ ಕೈಗೆಟುಕುವ ಬೈಕ್ ಆಗಿದೆ. ಈ ಬೈಕಿನ ಪ್ರಾರಂಭಿಕ ಬೆಲೆಯು ರೂ,61,50 ಆಗಿದೆ. ಈ ಬೈಕ್ ಆಕರ್ಷಕ ವಿನ್ಯಾಸವನ್ನು ಹೊಂದಿದೆ.
ಹೋಂಡಾ ಶೈನ್ 100: ಹೋಂಡಾ ಮೋಟಾರ್‌ಸೈಕಲ್ ಹೊಸದಾಗಿ ಬಿಡುಗಡೆಗೊಳಿಸಿದ ಶೈನ್ 100cc ಬೈಕ್ ಅನ್ನು ಒಂದೇ ರೂಪಾಂತರದಲ್ಲಿ ನೀಡಲಾಗುತ್ತಿದೆ. ಈ ಹೊಸ ಹೋಂಡಾ ಶೈನ್ 100cc ಬೈಕ್ ಬೆಲೆಯು ರೂ.64,900 ಗಳಾಗಿದೆ. ಹೋಂಡಾದ ಹೊಸ ಶೈನ್ 100cc ತನ್ನ 100cc, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7.61 ಬಿಹೆಚ್‍ಪಿ ಮತ್ತು 8.05 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ಪಿಸ್ಟನ್-ಕೂಲಿಂಗ್ ಆಯಿಲ್ ಜೆಟ್ ಮತ್ತು ಆಫ್‌ಸೆಟ್ ಪಿಸ್ಟನ್ ಜೊತೆಗೆ ಆಟೋಮ್ಯಾಟಿಕ್ ಚಾಕ್ ಸಿಸ್ಟಮ್‌ನೊಂದಿಗೆ ಸ್ಟಾರ್ಟ್ ಸೊಲೆನಾಯ್ಡ್ ಅನ್ನು ಹೊಂದಿದೆ. ಈ ಬೈಕ್ ಡೈಮಂಡ್ ಫ್ರೇಮ್ ಅನ್ನು ಒಳಗೊಳ್ಳುತ್ತದೆ ಮತ್ತು ಟೆಲಿಸ್ಕೋಪಿಕ್ ಫೋರ್ಕ್ ಮುಂಚೂಣಿಯಲ್ಲಿ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್‌ನೊಂದಿಗೆ ಬರುತ್ತದೆ. ಇದು ಸಂಯೋಜಿತ ಬ್ರೇಕಿಂಗ್ ಸಿಸ್ಟಮ್ ಜೊತೆಗೆ ಮುಂಭಾಗ ಮತ್ತು ಹಿಂಭಾಗದ ಆಕ್ಸಲ್‌ಗಳಲ್ಲಿ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.
ಬಜಾಜ್ ಪ್ಲಾಟಿನಾ 100: ಪ್ಲಾಟಿನಾ 100 ಬಜಾಜ್‌ನ ಅತ್ಯಂತ ಕೈಗೆಟುಕುವ ಮಾದರಿಯಾಗಿದೆ, ಜೊತೆಗೆ ಭಾರತೀಯ ಮಾರುಕಟ್ಟೆಯಲ್ಲಿ 5ನೇ ಅತ್ಯಂತ ಕೈಗೆಟುಕುವ ಬೈಕ್ ಆಗಿದೆ. ಬಜಾಜ್‌ನ ಸಿಗ್ನೇಚರ್ DTS-i ತಂತ್ರಜ್ಞಾನವನ್ನು ಒಳಗೊಂಡಿರುವ 102cc ಮೋಟಾರ್‌ನಿಂದ ಚಾಲಿತವಾಗಿದೆ ಮತ್ತು ಇಂಧನ-ಇಂಜೆಕ್ಷನ್ ಅನ್ನು ಪಡೆಯದ ಏಕೈಕ ಬೈಕ್ ಇದಾಗಿದೆ. ಈ ಎಂಜಿನ್ 7.9 hp ಮತ್ತು 8.3 Nm ಟಾರ್ಕ್ ಉತ್ಪಾದಿಸುತ್ತದೆ.


Click it and Unblock the Notifications