Hero: ಹೀರೋ ದೊಡ್ಡ ಘೋಷಣೆ, 'ಈಗ ಖರೀದಿಸಿ - 2024ಕ್ಕೆ ಪಾವತಿಸಿ'

ದೇಶದ ನಂಬರ್ 1 ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೀರೋ ಮೋಟೊಕಾರ್ಪ್ (Hero MotoCorp) ಜನಪ್ರಿಯವಾಗಿದೆ. ಅದರ ಬೈಕ್ ಹಾಗೂ ಸ್ಕೂಟರ್ ಆಕರ್ಷಕ ವಿನ್ಯಾಸ, ವೈಶಿಷ್ಟ್ಯದೊಂದಿಗೆ ಕಡಿಮೆ ಬೆಲೆಗೆ ದೊರೆಯುವುದರಿಂದ ಹೆಚ್ಚಿನ ಮಂದಿ ಖರೀದಿಸುತ್ತಾರೆ.

ದಸರಾ ಮತ್ತು ದೀಪಾವಳಿ ಹಿನ್ನೆಲೆ, ಹೀರೋ ಮೋಟೋಕಾರ್ಪ್, ಗ್ರಾಂಡ್ ಇಂಡಿಯನ್ ಫೆಸ್ಟಿವಲ್ ಆಫ್ ಟ್ರಸ್ಟ್ (Grand Indian Festival of Trust - GIFT) ಎರಡನೇ ಆವೃತ್ತಿಯನ್ನು ಅದ್ದೂರಿಯಾಗಿ ಆರಂಭಿಸಿದೆ. ಕಂಪನಿಯ ಹೊಸ ದ್ವಿಚಕ್ರ ವಾಹನ ಖರೀದಿಸುವ ಗ್ರಾಹಕರಿಗೆ ವಿಶೇಷ ಆಫರ್ ಘೋಷಿಸಿದೆ. ಅರ್ಹ ಖರೀದಿದಾರರು ನಗದು ರಿಯಾಯಿತಿ (cash discounts), ವಿನಿಮಯ ಬೋನಸ್‌ (exchange bonuses) ಸೇರಿದಂತೆ ಹೆಚ್ಚಿನ ಕೊಡುಗೆ ಪಡೆಯಲಿದ್ದಾರೆ.

Hero: ಹೀರೋ ದೊಡ್ಡ ಘೋಷಣೆ, ಈಗ ಖರೀದಿಸಿ - 2024ಕ್ಕೆ ಪಾವತಿಸಿ

ವಿಶೇಷ ಕೊಡುಗೆಯ ಭಾಗವಾಗಿ, ಹೀರೋ ಕೆಲವೊಂದು ಜನಪ್ರಿಯ ಸ್ಕೂಟರ್‌ಗಳಿಗೆ ನವೀನ ಬಣ್ಣದ ಆಯ್ಕೆಯನ್ನು ನೀಡುತ್ತಿದೆ. ಜೂಮ್ ಎಲ್ಎಕ್ಸ್ (Xoom LX) ರೂಪಾಂತರ ಪರ್ಲ್ ವೈಟ್ ಸಿಲ್ವರ್‌, ಪ್ಲೆಷರ್ ಎಲ್ಎಕ್ಸ್ (Pleasure LX) ವೇರಿಯೆಂಟ್ ಮ್ಯಾಟರ್ ವರ್ನಿಯರ್ ಗ್ರೇ, ಪ್ಲೆಷರ್ ವಿಎಕ್ಸ್ (Pleasure VX) ಮ್ಯಾಟ್ ಬ್ಲ್ಯಾಕ್, ಪರ್ಲ್ ಸಿಲ್ವರ್ ಕಲರ್ ಅನ್ನು ಪಡೆದಿದೆ. ಜೊತೆಗೆ ಡೆಸ್ಟಿನಿ ಪ್ರೈಮ್ ಸ್ಕೂಟರ್ ಸಹ ಹೊಸ ಬಣ್ಣವನ್ನು ಒಳಗೊಂಡಿದೆ.

ಹೀರೋ ಕಂಪನಿಯ ಬೈಕ್ ವಿಚಾರಕ್ಕೆ ಬರುವುದಾದರೇ, ಅವುಗಳು ಕೂಡ ನೂತನ ಬಣ್ಣಗಳ ಆಯ್ಕೆಯನ್ನು ಹೊಂದಿವೆ. ಅದರಲ್ಲೂ ಸ್ಪ್ಲೆಂಡರ್ ರೂಪಾಂತರಗಳು ಆಕರ್ಷಕ ಬಣ್ಣಗಳನ್ನು ಪಡೆದಿವೆ. ಇದರಿಂದ ಕಂಪನಿಯು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯಲು ಸಾಧ್ಯವಾಗಲಿದೆ. ಪ್ಯಾಷನ್ (Passion) ವೇರಿಯೆಂಟ್ಸ್ ಹೊಸದಾದ ಬ್ಲ್ಯಾಕ್ ಗ್ರೇ ಮತ್ತು ಮ್ಯಾಟ್ ಆಕ್ಸಿಸ್ ಗ್ರೇ ಬಣ್ಣದ ಆಯ್ಕೆಯನ್ನು ಹೊಂದಿವೆ.

ಹೀರೋ ಮೋಟೋಕಾರ್ಪ್ ಗ್ರಾಂಡ್ ಇಂಡಿಯನ್ ಫೆಸ್ಟಿವಲ್ ಆಫ್ ಟ್ರಸ್ಟ್ ಆವೃತ್ತಿ ಭಾಗವಾಗಿ ಹಲವು ಹಣಕಾಸು ಪ್ರಯೋಜನಗಳನ್ನು ಘೋಷಿಸಿದೆ. ಕಂಪನಿಯ ಯಾವುದೇ ನೂತನ ದ್ವಿಚಕ್ರ ವಾಹನ ಖರೀದಿಗೆ ಮೇಲೆ ರೂ.5,500 ಕ್ಯಾಶ್ ಬೋನಸ್ ಹಾಗೂ ರೂ.3,000 ರವರೆಗೆ ಎಕ್ಸ್ಚೇಂಜ್ ಬೋನಸ್‌ ನೀಡಲಿದೆ. ಜೊತೆಗೆ ಈಗ ಖರೀದಿಸಿ, 2024ರಲ್ಲಿ ಪಾವತಿಸಿ (Buy Now, Pay in 2024) ಎಂಬ ಯೋಜನೆಯನ್ನು ಪ್ರಕಟಿಸಿದೆ.

ಇದರೊಟ್ಟಿಗೆ ಗ್ರಾಹಕರಿಗೆ ಶೇಕಡ 6.99% ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರೆಯಲ್ಲಿದ್ದು, ಆಧಾರ್ ಆಧಾರಿತ ಲೋನ್‌, ನಗದು ಇಎಂಐ ಲಾಭವನ್ನು ಪಡೆಯಬಹುದು. ಈಗ ಹೀರೋ ಮಾರಾಟಗೊಳಿಸುವ ಪ್ರಮುಖ ದ್ವಿಚಕ್ರ ವಾಹನಗಳ ಬಗ್ಗೆ ಮಾತನಾಡೋಣ. ಸ್ಪ್ಲೆಂಡರ್ ಪ್ಲಸ್ ಬೈಕ್ ರೂ.74,491 - 75,811 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಈ ಸ್ಪ್ಲೆಂಡರ್ ಪ್ಲಸ್, 97.2 ಸಿಸಿ ಸಾಮರ್ಥ್ಯದ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 8.02 PS ಗರಿಷ್ಠ ಪವರ್ ಹಾಗೂ 8.05 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ದೊರೆಯಲಿದ್ದು, 80.6 kmpl ಮೈಲೇಜ್ ನೀಡುತ್ತದೆ. ಮುಂಭಾಗ ಹಾಗೂ ಹಿಂಭಾಗ ಡ್ರಮ್ ಬೈಕ್ ಅನ್ನು ಹೊಂದಿದೆ.

ಇತ್ತೀಚೆಗೆ, ಹೀರೋ ಗ್ರಾಹಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಡೆಸ್ಟಿನಿ 125 ಸ್ಕೂಟರ್‌ನ ಪ್ರೈಮ್ ರೂಪಾಂತರವನ್ನು ಬಿಡುಗಡೆಗೊಳಿಸಿತ್ತು. ಇದು, ರೂ.71,499 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. 124.6 ಸಿಸಿ, ಏರ್ ಕೊಲ್ಡ್ ಎಂಜಿನ್ ಹೊಂದಿದ್ದು, 9 bhp ಪವರ್ ಹಾಗೂ 10.36 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸೆಮಿ ಡಿಜಿಟಲ್ ಕನ್ಸೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, October 20, 2023, 15:58 [IST]
English summary
Hero festive offers gift scheme buy now pay in 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+