ಭಾರೀ ಬೇಡಿಕೆಯ ನಡುವೆ ಕರಿಜ್ಮಾ XMR ಗ್ರಾಹಕರಿಗೆ ಶಾಕ್ ನೀಡಿದ ಹೀರೋ ಮೋಟೋಕಾರ್ಪ್

ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್ (Hero Motocorp) ತನ್ನ ಬಹುನಿರೀಕ್ಷಿತ ಕರಿಜ್ಮಾ XMR ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತು. ಈ ಹೊಸ ಹೀರೋ ಕರಿಜ್ಮಾ XMR (Hero Karizma XMR) ಬೈಕ್ ರೂ.1,72,900 ಬೆಲೆಯಲ್ಲಿ ಬಿಡುಗಡೆಗೊಂಡಿತು, ಇದು ಪರಿಚಯಾತ್ಮಕ ಬೆಲೆಯಾಗಿದೆ.

ಹೊಸದಾಗಿ ಬಿಡುಗಡೆಯಾದ ಹೊಸ ಹೀರೋ ಕರಿಜ್ಮಾ XMR ಬೆಲೆ ಏರಿಕೆಯನ್ನು ಹೀರೋ ಮೋಟೋಕಾರ್ಪ್ ಕಂಪನಿಯು ಘೋಷಿಸಿದೆ. ಹೀರೋ ಕರಿಜ್ಮಾ ಎಕ್ಸ್‌ಎಂಆರ್ ಬೈಕ್ ಹೊಸ ಬೆಲೆಯು ಇತ್ತೀಚಿನ ಬೆಲೆ ಏರಿಕೆ ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಹೀರೋ ಮೋಟೋಕಾರ್ಪ್ ಕಂಪನಿಯ ಪ್ರಕಾರ, ಹೀರೋ ಕರಿಜ್ಮಾ XMR ಬೈಕ್ ಹೊಸ ಬೆಲೆಯು ರೂ.1,79,900 ಆಗಿದೆ. ಇದು ಬೈಕಿನ ಪರಿಚಯಾತ್ಮಕ ಬೆಲೆಗಿಂತ 7,000 ರೂ.ಗಳ ಹೆಚ್ಚಳವಾಗಿದೆ.

Hero Karizma XMR

ಕರಿಜ್ಮಾ ಬಿಡುಗಡೆಯಾದ 20 ವರ್ಷಗಳ ನಂತರ ಕರಿಜ್ಮಾ XMR ಆಗಮನವಾಗಿದೆ. ಈ ಹೊಸ ಹೀರೋ ಕರಿಜ್ಮಾ XMR ಬೈಕಿನಲ್ಲಿ ಲಿಕ್ವಿಡ್-ಕೂಲ್ಡ್, DOHC, 210cc, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 9,250rpm ನಲ್ಲಿ 25.1 bhp ಪವರ್ ಮತ್ತು 7,250rpm ನಲ್ಲಿ 20.4Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಜೋಡಿಸಲಾಗಿದೆ. ಇದು ಹಿಂದಿನ ಚಕ್ರಕ್ಕೆ ಪವರ್ ಕಳುಹಿಸುತ್ತದೆ. ಹೊಸ ಹೀರೋ ಕರಿಜ್ಮಾ ಸಸ್ಪೆಕ್ಷನ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಸ್ಪೋರ್ಟ್ಸ್ ಸ್ಟೀಲ್ ಟ್ರೆಲ್ಲಿಸ್ ಫ್ರೇಮ್ ಸೆಟಪ್ ಜೊತೆಗೆ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಒರಟಾದ ಪ್ರದೇಶವನ್ನು ಸಮರ್ಥವಾಗಿ ನಿಬಾಯಿಸಲು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಒಳಗೊಂಡಿದೆ.

Hero Karizma XMR

ಇನ್ನು ಪ್ರಮುಖವಾಗಿ ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ. ಇದರ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ. ಇನ್ನು ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ, ಡ್ಯುಯಲ್-ಚಾನೆಲ್ ABS ಅನ್ನು ನೀಡಲಾಗಿದೆ. ಈ ಹೊಸ ಕರಿಜ್ಮಾ XMR ಬೈಕಿನಲ್ಲಿ 17-ಇಂಚಿನ ಆಕರ್ಷಕ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿವೆ.

ಹೊಸ ಹೀರೋ ಕರಿಜ್ಮಾ XMR ಅದರ ಹಿಂದಿನ ಮಾದರಿಗಿಂತ ಸಾಕಷ್ಟು ಭಿನ್ನವಾಗಿ ಕಾಣುತ್ತದೆ. ಕರಿಜ್ಮಾ ಹೆಸರನ್ನು ಹೊಂದಿರುವ ಹಿಂದಿನ ಬೈಕ್‌ಗಳಂತೆ ಸಂಪೂರ್ಣ ಫೇರ್ಡ್ ಸೆಟಪ್ ಅನ್ನು ಹೊಂದಿದೆ. ಈ ಆಕರ್ಷಕ ಬೈಕ್ ವಿನ್ಯಾಸವು ನೋಡುಗರ ಗಮನಸೆಳೆಯುವಂತಿದೆ. ಹೀರೋ XMR ಬೈಕಿನ ಮುಂಭಾಗದಲ್ಲಿ Y- ಆಕಾರದ LED DRL ಗಳೊಂದಿಗೆ ಕೋನೀಯ ಪೂರ್ಣ-ಅಗಲ LED ಹೆಡ್‌ಲೈಟ್ ಸೆಟಪ್ ಅನ್ನು ಹೊಂದಿದೆ.

Hero Karizma XMR

LED ಹೆಡ್‌ಲೈಟ್ ಸೆಟಪ್ ಮೇಲೆ ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್ ಮತ್ತು ಹಿಂಬದಿಯ ವ್ಯೂ ಮಿರರ್‌ಗಳು ಹ್ಯಾಂಡಲ್‌ಬಾರ್‌ಗಳಿಗಿಂತ ಹೆಚ್ಚಾಗಿ ಫೇರಿಂಗ್‌ಗೆ ಜೋಡಿಸಲ್ಪಟ್ಟಿವೆ. ಹೊಸ ಹೀರೋ ಕರಿಜ್ಮಾದ ಬದಿಗಳು ಫೇರಿಂಗ್ ಅಪ್ ಫ್ರಂಟ್‌ನಿಂದ ಪ್ರಾಬಲ್ಯ ಹೊಂದಿದ್ದು, ಇದು XMR ಮತ್ತು 210 ಬ್ಯಾಡ್ಜ್ ಹೊಂದಿದೆ. ಈ ಹೊಸ ಬೈಕ್ ಮಸ್ಕ್ಯುಲರ್ ಫ್ಯುಯಲ್ ಟ್ಯಾಂಕ್ ಮತ್ತು ಸ್ಪ್ಲಿಟ್ ಸೀಟ್ ಸೆಟಪ್ ಅನ್ನು ಸಹ ಕಾಣಬಹುದು.

ಇದರೊಂದಿಗೆ ಹಗುರವಾದ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು, ಎಕ್ಸಾಸ್ಟ್ ಮತ್ತು ಸ್ಲಿಮ್ ಹಿಂಭಾಗದ ಎಲ್ಇಡಿ ಲೈಟಿಂಗ್ ಅನ್ನು ಸಹ ಕಾಣಬಹುದು. ಈ ಹೊಸ ಹೀರೋ ಕರಿಜ್ಮಾ XMR 210 ಬೈಕಿನಲ್ಲಿ ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಫುಲ್ ಡಿಜಿಟಲ್ LCD ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದು ಟರ್ನ್-ಬೈ-ಟರ್ನ್ ನ್ಯಾವಿಗೇಶನ್‌ನಂತಹ ಫೀಚರ್ಸ್ ಗಳನ್ನು ಹೊಂದಿವೆ.

ಈ ಹೊಸ ಹೊಸ ಹೀರೋ ಕರಿಜ್ಮಾ XMR ಬೈಕ್ ಐಕಾನಿಕ್ ಯೆಲ್ಲೋ, ಟರ್ಬೊ ರೆಡ್ ಮತ್ತು ಮ್ಯಾಟ್ ಫ್ಯಾಂಟಮ್ ಬ್ಲಾಕ್ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಈ ಹೊಸ ಬೈಕ್ ಐಕಾನಿಕ್ ಕರಿಜ್ಮಾ ಹೆಸರಿನಲ್ಲಿ ಬಂದಿರುವುದರಿಂದ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಸೃಷ್ಠಿಸಿದೆ. ಇನ್ನು ಈ ಹೊಸ ಬೈಕಿನ ಪರಿಚಯಾತ್ಮಕ ಬೆಲೆಯು ಅಗ್ಗವಾಗಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, September 26, 2023, 14:09 [IST]
English summary
Hero karizma xmr price hike announced new price details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+