Karizma XMR Vs Karizma R: ಹಳೇ ಕರೀಜ್ಮಾ ಪವರ್ ಹೊಸ ಕರೀಜ್ಮಾಗಿದೆಯೇ? ಬನ್ನಿ ಹೋಲಿಕೆ ಮಾಡೋಣ
ಹೀರೋ ಕಂಪನಿಯ ಬಹುನಿರೀಕ್ಷಿತ ಹೊಸ ಕರೀಜ್ಮಾ XMR 210 ಈಗ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ಬೈಕಿನ ಪರಿಚಯಾತ್ಮಕ ಬೆಲೆಗಳು ರೂ. 1,72,900 (ಎಕ್ಸ್ ಶೋರೂಂ) ನಿಂದ ಪ್ರಾರಂಭವಾಗುತ್ತವೆ. ಹಲವು ವರ್ಷಗಳ ನಂತರ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಈ ಹೊಸ ಕರಿಜ್ಮಾ ಹಳೆಯ ಮಾದರಿಗಿಂತ ಯಾವೆಲ್ಲಾ ಅಪ್‌ಡೇಟ್‌ಗಳನ್ನು ಪಡಿದಿದೆ ನೋಡೋಣ.
ಹೊಸ ಹೀರೋ ಕರಿಜ್ಮಾ XMR Vs ಕರಿಜ್ಮಾ R ಎಂಜಿನ್: ಹೊಸ ಕರಿಜ್ಮಾ XMR ಹೊಚ್ಚಹೊಸ 210cc, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇದು 25.5 bhp ಪವರ್ ಮತ್ತು 18.7Nm ಟಾರ್ಕ್ ಹೊರಹಾಕುತ್ತದೆ. DOHC ಕಾನ್ಫಿಗರೇಶನ್ ಮತ್ತು 4 ವಾಲ್ವ್‌ಗಳನ್ನು ಒಳಗೊಂಡಿದೆ.

ಹಳೆಯ ಕರಿಜ್ಮಾ R, 223cc, ಏರ್-ಕೂಲ್ಡ್, 4-ಸ್ಟ್ರೋಕ್ ಎಂಜಿನ್ 17.2bhp ಮತ್ತು 18.33Nm ಟಾರ್ಕ್ ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸಜ್ಜುಗೊಂಡಿರುವ ಹಳೆಯ ಕರಿಜ್ಮಾ R ಮೊದಲ ಮೂರು ಗೇರ್‌ಗಳಿಗೆ ಕಡಿಮೆ ಗೇರಿಂಗ್ ಮತ್ತು ನಾಲ್ಕನೇ ಮತ್ತು ಐದನೆಯ ಎತ್ತರದ ಅನುಪಾತಗಳನ್ನು ಹೊಂದಿತ್ತು. ಇದರ ನಗರದ ಮೈಲೇಜ್ ಸುಮಾರು 30 ಕಿ.ಮೀ ಎಂದು ಹೇಳಲಾಗಿದೆ.
ಸಸ್ಪೆನ್ಷನ್ ವಿಷಯದಲ್ಲಿ 2023 ಕರಿಜ್ಮಾ XMR, ಮುಂಭಾಗದಲ್ಲಿ USD ಟೆಲಿಸ್ಕೋಪಿಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಹೊಂದಿದೆ. ಬೈಕ್ ಎರಡು ತುದಿಗಳಲ್ಲಿ ಪೆಟಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದ್ದು, ಸ್ಟ್ಯಾಂಡರ್ಡ್ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್) ಅನ್ನು ಹೊಂದಿರುವುದಾಗಿ ಇತ್ತೀಚಿನ ಬಿಡುಗಡೆಯಲ್ಲಿ ತಿಳಿದುಬಂದಿದೆ.

ಹಳೆಯ ಹೀರೋ ಕರಿಜ್ಮಾ R ಟೆಲಿಸ್ಕೋಪಿಕ್ ಫೋರ್ಕ್, ಒಂದೇ ಡೌನ್‌ಟ್ಯೂಬ್ ಫ್ರೇಮ್ ಅನ್ನು ಅಳವಡಿಸಿಕೊಂಡಿದೆ. ಹಿಂಭಾಗದಲ್ಲಿ ಪ್ರೀ ಲೋಡ್- ಅಡ್ಜಸ್ಟಬಲ್ ಟ್ವಿನ್ ಶಾಕ್ ಅಬ್ಸಾರ್ಬರ್‌ಗಳನ್ನು ನೀಡಲಾಗಿತ್ತು. ಬ್ರೇಕಿಂಗ್ ವಿಷಯಕ್ಕೆ ಬಂದರೆ 276mm ಫ್ರಂಟ್ ಡಿಸ್ಕ್ ಮತ್ತು 130mm ಹಿಂಭಾಗದ ಡ್ರಮ್ ಬ್ರೆಕ್ ಅನ್ನು ನೀಡಲಾಗಿತ್ತು.
ಹೊಸ ಹೀರೋ ಕರಿಜ್ಮಾ XMR Vs ಕರಿಜ್ಮಾ R - ವಿನ್ಯಾಸ, ವೈಶಿಷ್ಟ್ಯಗಳು: ಹೊಸ 2023 ಹೀರೋ ಕರಿಜ್ಮಾ XMR 210 ಆಕ್ರಮಣಕಾರಿ ಮುಂಭಾಗ ಮತ್ತು ತೀಕ್ಷ್ಣವಾದ ಮಸ್ಕುಲರ್ ಲುಕ್‌ನೊಂದಿಗೆ ಸ್ಪೋರ್ಟಿ ವಿನ್ಯಾಸವನ್ನು ಪಡೆದುಕೊಂಡಿದೆ. ಎಲ್‌ಇಡಿ ಹೆಡ್‌ಲೈಟ್, ಎಲ್‌ಇಡಿ ಡಿಆರ್‌ಎಲ್‌ಗಳು, ಮಸ್ಕುಲರ್ ಫ್ಯೂಯಲ್ ಟ್ಯಾಂಕ್, ದೊಡ್ಡ ವಿಂಡ್‌ಸ್ಕ್ರೀನ್ ಮತ್ತು ಅಂದವಾದ ಮಿರರ್‌ಗಳೊಂದಿಗೆ ಉತ್ತಮ ಉಪಸ್ಥಿತಿಯನ್ನು ಹೊಂದಿದೆ.

ಹಾಗೆಯೇ ಹೊಸ ಕರೀಜ್ಮಾ ಕ್ಲಿಪ್-ಆನ್ ಹ್ಯಾಂಡಲ್‌ಬಾರ್ ಮತ್ತು ಸ್ಪ್ಲಿಟ್ ಸೀಟ್ ಸೆಟಪ್ ಅನ್ನು ಒಳಗೊಂಡಿದೆ. ಹಿಂಭಾಗವು ಕಾಂಪ್ಯಾಕ್ಟ್ ಅಪ್‌ಸ್ವೆಪ್ಟ್ ಎಕ್ಸಾಸ್ಟ್, LED ಟೈಲ್‌ಲೈಟ್‌ಗಳು ಮತ್ತು ಅಚ್ಚುಕಟ್ಟಾದ ಹಿಂಭಾಗವನ್ನು ಪಡೆದಿದೆ. ಹೊಸ ಕರಿಜ್ಮಾ XMR ಯುಎಸ್‌ಬಿ ಚಾರ್ಜಿಂಗ್ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ಕೂಡ ಒಳಗೊಂಡಿದೆ. ಜೊತೆಗೆ ಸೆಂಟರ್ ಟ್ಯಾಕೋಮೀಟರ್ ಮತ್ತು ಸ್ಪೀಡೋಮೀಟರ್ ಒಳಗೊಂಡಿರುವ ಫುಲ್ಲಿ ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ಜೊತೆಗೆ ಬರುತ್ತದೆ.
ವಿನ್ಯಾಸ ವೈಶಿಷ್ಟ್ಯಗಳ ವಿಷಯದಲ್ಲಿ ಹಳೆಯ ಕರೀಜ್ಮಾವನ್ನು ನೋಡುವುದಾದರೆ, ಆಗಿನ ಕಾಲಕ್ಕೆ ಅದು ಟೂರಿಂಗ್ ಸಾಮರ್ಥ್ಯವನ್ನು ಹೊಂದಿತ್ತು. ಇನ್ನು ಹೋಂಡಾ VFR 800 ನಿಂದ ವಿನ್ಯಾಸ ಸ್ಫೂರ್ತಿಯನ್ನು ಪಡೆದುಕೊಂಡಿತ್ತು. ಅದರ ಚೂಪಾದ ಫ್ರೇಮ್‌ಗಳು ಸ್ಪಷ್ಟವಾದ ಸ್ಪೋರ್ಟಿ ಲುಕ್ ನೀಡಿದ್ದವು. ಬೈಕ್ ಎಲೆಕ್ಟ್ರಿಕ್ ಸ್ಟಾರ್ಟರ್, ಅನಲಾಗ್ ಟ್ಯಾಕೋಮೀಟರ್ ಮತ್ತು ಸ್ಪೀಡೋಮೀಟರ್ ಮತ್ತು ಡಿಜಿಟಲ್ ಫ್ಯುಯೆಲ್ ಗೇಜ್ ಅನ್ನು ಹೊಂದಿತ್ತು.

ಒಟ್ಟಾರೆ ಎರಡರ ನಡುವಿನ ಪ್ರಮುಖ ವ್ಯತ್ಯಾಸಗಳು ಇವಾಗಿದ್ದು, ಬೈಕ್ ರಸ್ತೆಗಳಿದ ನಂತರ ಇನ್ನೂ ವಿವರವಾದ ವ್ಯತ್ಯಾಸಗಳನ್ನು ನಾವು ಪರಿಶೀಲಿಸಬಹುದು. ಆದ್ರೂ ಅಂದಿನ ಕಾಲಕ್ಕೆ ಕರೀಜ್ಮಾ ಯುವಕರ ಹಾಟ್ ಫೇವರೆಟ್ ಬೈಕ್ ಆಗಿತ್ತು. ಇಂದಿಗೂ ಹಳೆಯ ಕರಿಜ್ಮಾ ಬೈಕ್‌ಗಳನ್ನು ಅಲ್ಲಲ್ಲಿ ನಾವು ನೋಡಬಹುದು. ಈ ಹಳೆಯ ಹಾಗೂ ಹೊಸ ಬೈಕ್‌ಗಳ ನಡುವಿನ ವ್ಯತ್ಯಾಸದ ಕುರಿತು ಕಮೆಂಟ್‌ನಲ್ಲಿ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications