Hero: ತನ್ನ ಗ್ರಾಹಕರಿಗೆ ಸಡನ್ ಶಾಕ್ ಕೊಟ್ಟ ಹೀರೋ ಕಂಪನಿ

ಭಾರತದಲ್ಲಿ ಜನಪ್ರಿಯ ಟೂ ವೀಲರ್ ಕಂಪನಿ ಯಾವುದೆಂದು ಕೇಳಿದರೇ ತಕ್ಷಣ ಬರುವ ಉತ್ತರ ಹೀರೋ (Hero). ಅಷ್ಟರಮಟ್ಟಿಗೆ ಜನರ ಮನಸ್ಸಿನಲ್ಲಿ ಬೀಡುಬಿಟ್ಟಿದೆ. ಇದೀಗ, ಕಂಪನಿಯು ವಿವಿಧ ಮಾದರಿ ಬೈಕ್ ಹಾಗೂ ಸ್ಕೂಟರ್ ಬೆಲೆ ಏರಿಸಿ, ತನ್ನ ಗ್ರಾಹಕರಿಗೆ ಸಡನ್ ಶಾಕ್ ಕೊಟ್ಟಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.

ಹೀರೋ ಮೋಟೊಕಾರ್ಪ್ ನಿನ್ನೆಯಷ್ಟೇ ತನ್ನೆಲ್ಲ ದ್ವಿಚಕ್ರ ವಾಹನಗಳ ದರ ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದೆ. ಬಹುತೇಕ ಎಲ್ಲ ಮಾದರಿ ಬೆಲೆ ಶೇಕಡ 1.5% ಹೆಚ್ಚಳವಾಗಲಿದ್ದು, ನೂತನ ದರಗಳು ಜುಲೈ 3 ರಿಂದ ಅನ್ವಯವಾಗಲಿದೆ. ಇನ್ ಪುಟ್ ವೆಚ್ಚ ಸೇರಿದಂತೆ ವಿವಿಧ ಕಾರಣಗಳಿಗೆ ಬೆಲೆ ಅಧಿಕಗೊಂಡಿದೆ. ಕಳೆದ ಏಪ್ರಿಲ್ ತಿಂಗಳಲ್ಲಿಯು ಕಂಪನಿಯು 2% ದರ ಹೆಚ್ಚಳ ಮಾಡಿತ್ತು.

Hero: ತನ್ನ ಗ್ರಾಹಕರಿಗೆ ಸಡನ್ ಶಾಕ್ ಕೊಟ್ಟ ಹೀರೋ ಕಂಪನಿ

ಗ್ರಾಹಕರಿಗೆ ಅನುಕೂಲವಾಗುವ ಹಣಕಾಸಿನ ಯೋಜನೆ ಜಾರಿಗೊಳಿಸುವ ಮೂಲಕ ಒಂದಷ್ಟು ಆರ್ಥಿಕ ಹೊರೆಯನ್ನು ಕಡಿಮೆಗೊಳಿಸಲಾಗುವುದು ಎಂದು ಕಂಪನಿ ಹೇಳಿದೆ. ದೇಶದಲ್ಲಿ ಮಾನ್ಸೂನ್ ಮಳೆಗಳು ಪ್ರಾರಂಭವಾಗುತ್ತಿದ್ದು, ಇದು ಜನರ ಹಣಕಾಸಿನ ಸ್ಥಿತಿಯನ್ನು ಸುಧಾರಿಸುತ್ತದೆ. ಈ ಕಾರಣಕ್ಕೆ ಮುಂಬರುವ ಹಬ್ಬದ ಸೀಸನ್ ವೇಳೆಗೆ ತನ್ನ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಾಗುವ ನೀರಿಕ್ಷೆಯಲ್ಲಿ ಹೀರೋ ಮೋಟೊಕಾರ್ಪ್ ಇದೆ.

ಮೊದಲಿಗೆ ಹೀರೋದ ಜನಪ್ರಿಯ ಮಾದರಿ ಸ್ಪ್ಲೆಂಡರ್ ಪ್ಲಸ್ ಬಗ್ಗೆ ಮಾತನಾಡೋಣ. ಇದು, ರೂಪಾಂತರಗಳಿಗೆ ಅನುಗುಣವಾಗಿ ಪ್ರಸ್ತುತ, ರೂ.72,471 ಆರಂಭಿಕ ಬೆಲೆಯನ್ನು ಹೊಂದಿದೆ. 97.2 ಸಿಸಿ ಸಾಮರ್ಥ್ಯದ ಎಂಜಿನ್ ಪಡೆದಿದ್ದು, 60 kmpl ಮೈಲೇಜ್ ನೀಡುತ್ತದೆ. 9.8 ಲೀಟರ್ ಸಾಮರ್ಥ್ಯದ ಪ್ಯೂಯೆಲ್ ಟ್ಯಾಂಕ್ ಹೊಂದಿದೆ. ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್‌ ಮತ್ತು ರೇರ್ ಡ್ಯುಯಲ್ ಶಾಕ್ ಅಬ್ಸಾರ್ಬರ್‌ ಸಸ್ಪೆನ್ಷನ್ ಸೆಟಪ್ ಪಡೆದಿದ್ದು, ಡ್ರಮ್ ಬ್ರೇಕ್‌ ಆಯ್ಕೆಯನ್ನು ಹೊಂದಿದೆ.

ಭಾರತದಲ್ಲಿ ಹೀರೋ Xtreme 160R ವೇರಿಯೆಂಟ್ ಗೆ ತಕ್ಕಂತೆ ಸದ್ಯ, ರೂ.1,17,786 ದಿಂದ ರೂ.1,28,608 ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ 163 ಸಿಸಿ ಎಂಜಿನ್ ಬಳಕೆ ಮಾಡಲಾಗಿದ್ದು, 15.2 PS ಗರಿಷ್ಠ ಪವರ್ ಹಾಗೂ 14 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 55.47 kmpl ಮೈಲೇಜ್ ನೀಡಲಿದ್ದು, ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.

ಹೀರೋ ಕಂಪನಿಯ ಜನಪ್ರಿಯ ಸ್ಕೂಟರ್ ಗಳಲ್ಲಿ ಜೂಮ್ ಪ್ರಮುಖವಾಗಿದೆ. ಪ್ರಸ್ತುತ, ರೂಪಾಂತರಗಳಿಗೆ ಅನುಗುಣವಾಗಿ ರೂ.73,099 ದಿಂದ ರೂ.81,299 ಬೆಲೆಯನ್ನು ಪಡೆದಿದೆ. ಇದರ 110.9 ಸಿಸಿ ಎಂಜಿನ್ 8.16 Ps ಪವರ್ ಹಾಗೂ 8.70 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 45 kmpl ಮೈಲೇಜ್ ನೀಡಲಿದ್ದು, ಡಿಸ್ಕ್ ಬ್ರೇಕ್ ಹಾಗೂ ಟ್ಯೂಬ್ ಲೆಸ್ ಟೈಯರ್ ಅನ್ನು ಪಡೆದಿದೆ.

ಹೀರೋ ಕಂಪನಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವ ಬೈಕ್ ಗಳಲ್ಲಿ ಪ್ಯಾಶನ್ ಪ್ರೊ ಮುಖ್ಯವಾವಾಗಿದೆ. ಸದ್ಯ, ರೂ.76,056 ಎಕ್ಸ್ ಶೋರೂಂ ದರದಲ್ಲಿ ಸಿಗಲಿದೆ. ಇದು, 97.2 ಸಿಸಿ ಸಾಮರ್ಥ್ಯದ ಎಂಜಿನ್ ಹಾಗೂ 4 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದ್ದು, 11 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಪಡೆದಿದೆ.

ಇದಿಷ್ಟೇ ಅಲ್ಲದೆ, ಕಂಪನಿಯು ವಿವಿಧ ಬೈಕ್ ಹಾಗೂ ಸ್ಕೂಟರ್ ಗಳನ್ನು ಭಾರತ ಮಾರುಕಟ್ಟೆಯಲ್ಲಿ ಸೇಲ್ ಮಾಡುತ್ತಿದ್ದು, ಮಾರಾಟದಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಬೆಲೆ ಹೆಚ್ಚಳವಾಗಿರುವುದರಿಂದ ನೂತನ ದರಗಳು ಸೋಮವಾರದಿಂದ ಜಾರಿಗೆ ಬರಲಿವೆ. ಆದರೆ, ಅದು ಕೊಂಚ ಪ್ರಮಾಣವೇ ಇದ್ದು, ಗ್ರಾಹಕರ ಮೇಲೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ.

More from DriveSpark

Article Published On: Saturday, July 1, 2023, 13:12 [IST]
English summary
Hero motocorp price hike bikes scooters details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+