Hero Vida V1: ಹೀರೋ ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್‌ಗೆ ದೊಡ್ಡ ರಿಯಾಯಿತಿ.. ಈಗ ಬಿಟ್ಟರೆ ಮತ್ತೆ ಸಿಗಲ್ಲ!

ದೇಶದ ನಂಬರ್ 1 ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೀರೋ ಮೋಟೊಕಾರ್ಪ್ (Hero MotoCorp) ಖ್ಯಾತಿಗಳಿಸಿದೆ. ಕಂಪನಿಯು ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್‌ನ್ನು (Vida V1 Electric Scooter) ಯಶಸ್ವಿಯಾಗಿ ಮಾರಾಟ ಮಾಡುತ್ತಿದ್ದು, ಈ ವರ್ಷಾಂತ್ಯದಲ್ಲಿ ದೊಡ್ಡ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಹೀರೋ ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್‌ (Hero Vida V1 Electric Scooter) ಒಟ್ಟು ರೂ.31,000 ವರೆಗೆ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಅದರಲ್ಲಿ ರೂ.6,500 ಸ್ಟಿಕ್ಕರ್ ಪ್ರೈಸ್ ಡಿಸ್ಕೌಂಟ್, ರೂ.5,000 ಎಕ್ಸ್ಚೇಂಜ್ ಬೋನಸ್, ರೂ.7,500 ಲಾಯಲ್ಟಿ ಬೋನಸ್, ರೂ.2,500 ಕಾರ್ಪೊರೇಟ್ ಡಿಸ್ಕೌಂಟ್, ರೂ.1,125 ಸಬ್‌ಸ್ಕ್ರಿಪ್ಷನ್ ಪ್ಲಾನ್, ರೂ.8,259 ಎಕ್ಸ್ಟೆಂಡ್ ಬ್ಯಾಟರಿ ವಾರಂಟಿಯನ್ನು ಒಳಗೊಂಡಿದೆ.

Hero Vida V1: ಹೀರೋ ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್‌ಗೆ ದೊಡ್ಡ ರಿಯಾಯಿತಿ.. ಈಗ ಬಿಟ್ಟರೆ ಮತ್ತೆ ಸಿಗಲ್ಲ!

ಇದಲ್ಲದೆ, ಹೀರೋ ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿ ಮೇಲೆ ಗ್ರಾಹಕರಿಗೆ ವಿವಿಧ ಹಣಕಾಸು ಪ್ರಯೋಜನಗಳು ಲಭ್ಯವಾಗಲಿದೆ. ಶೇಕಡ 5.99% ಬಡ್ಡಿದರದಲ್ಲಿ ಸಾಲ ಸೌಲಭ್ಯಗಳು ದೊರೆಯಲಿದ್ದು, ಜೀರೋ ಪ್ರೊಸೆಸಿಂಗ್ ಫೀ, ಇಎಂಐ ಆಯ್ಕೆಗಳು ಕೂಡ ಸಿಗುತ್ತವೆ. ಅದು ರೂ.2,429 ಆರಂಭವಾಗಲಿದ್ದು, ಹೀರೋ ಕಂಪನಿಯೊಂದಿಗೆ ಪಾಲುದಾರಿಕೆ ಹೊಂದಿರುವ ಸಂಸ್ಥೆಗಳಿಂದ ಬೇಗನೇ ಸಾಲ ಸೌಲಭ್ಯಗಳು ಲಭಿಸಲಿವೆ. ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂನ್ನು ಸಂಪರ್ಕಿಸಿರಿ.

ಕಳೆದ ನವೆಂಬರ್ ತಿಂಗಳು, ಹೀರೋ ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್‌ಗಳು ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗಿವೆ. ಕಂಪನಿಯು 3,030 ಯುನಿಟ್ ಸೇಲ್ ಮಾಡಿದ್ದು, ಹೋದ ವರ್ಷದ ಇದೇ ಅವಧಿಗೆ ಹೋಲಿಸಿದರೆ (1,935 ಯುನಿಟ್) ವರ್ಷದಿಂದ ವರ್ಷಕ್ಕೆ ಶೇಕಡ 57% ಪ್ರಗತಿ ಸಾಧಿಸಿದೆ. ಬೆಂಗಳೂರಿನಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ರೂ.1,60,200 ಆನ್-ರೋಡ್ ಬೆಲೆಯಲ್ಲಿ ಹೊಂದಿದೆ ಎಂದು ವರದಿಯಾಗಿದೆ.

Hero Vida V1: ಹೀರೋ ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್‌ಗೆ ದೊಡ್ಡ ರಿಯಾಯಿತಿ.. ಈಗ ಬಿಟ್ಟರೆ ಮತ್ತೆ ಸಿಗಲ್ಲ!

ಹೀರೋ ವಿಡಾ ವಿ1 ಸ್ಕೂಟರ್ 2 ರೂಪಾಂತರಗಳ ಆಯ್ಕೆಯಲ್ಲಿ ಖರೀದಿದಾರರಿಗೆ ಸಿಗುತ್ತದೆ. ವಿಡಾ ವಿ1 ಪ್ಲಸ್ ವೇರಿಯೆಂಟ್ 3.44 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ವಿಡಾ ವಿ1 ಪ್ರೊ ವೇರಿಯೆಂಟ್ 3.94 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದೆ. ಸಂಪೂರ್ಣ ಚಾರ್ಜ್ ನಲ್ಲಿ ವಿಡಾ ವಿ1 ಪ್ಲಸ್ 143 km ರೇಂಜ್, ಟಾಪ್ ಎಂಡ್ ಮಾದರಿ ವಿಡಾ ವಿ1 ಪ್ರೊ 165 km ರೇಂಜ್ ನೀಡುತ್ತದೆ.

ಹೀರೋ ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್ ವೇರಿಯೆಂಟ್ಸ್ 80 kmph ಟಾಪ್ ಸ್ವೀಡ್ ಪಡೆದಿದ್ದು, ಇಕೋ, ರೈಡ್, ಮತ್ತು ಸ್ಪೋರ್ಟ್ ಎಂಬ 3 ರೈಡಿಂಗ್ ಮೋಡ್ ಆಯ್ಕೆಗಳನ್ನು ಹೊಂದಿವೆ. ವಿಡಾ ವಿ1 ಪ್ಲಸ್ 3.4 ಸೆಕೆಂಡುಗಳಲ್ಲಿ 0 - 40 kmph ವೇಗವನ್ನು ಹೊಂದಲಿದ್ದು, ವಿಡಾ ವಿ1 ಪ್ರೊ 3.2 ಸೆಕೆಂಡುಗಳಲ್ಲಿ 0- 4 0 kmph ಸ್ವೀಡ್ ಅನ್ನು ಪಡೆಯಲಿದೆ.

Hero Vida V1: ಹೀರೋ ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್‌ಗೆ ದೊಡ್ಡ ರಿಯಾಯಿತಿ.. ಈಗ ಬಿಟ್ಟರೆ ಮತ್ತೆ ಸಿಗಲ್ಲ!

ಹೀರೋ ವಿಡಾ ವಿ1 ರೂಪಾಂತರಗಳು TFT ಟಚ್‌ಸ್ಕ್ರೀನ್, ಕ್ರೂಸ್ ಕಂಟ್ರೋಲ್, ಕೀಲೆಸ್ ಕಂಟ್ರೋಲ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಜಿಯೋ ಫೆನ್ಸಿಂಗ್, ರಿವರ್ಸ್ ಮೋಡ್ ಸೇರಿದಂತೆ ವಿವಿಧ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿವೆ. ಜೊತೆಗೆ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮ್ಯಾಟ್ ವೈಟ್, ಮ್ಯಾಟ್ ಸ್ಪೋರ್ಟ್ಸ್ ರೆಡ್, ಗ್ಲೋಸ್ ಬ್ಲ್ಯಾಕ್ ಒಳಗೊಂಡಂತೆ ಹಲವು ಬಣ್ಣಗಳ ಆಯ್ಕೆಯಲ್ಲೂ ಗ್ರಾಹಕರಿಗೆ ಸಿಗುತ್ತವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, December 18, 2023, 16:23 [IST]
English summary
Hero vida v1 electric scooter have big discount rs 31000 in december
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+