ಇದೇ ಅಲ್ವಾ ಧಮ್ ಅಂದ್ರೆ.. Hero ವಿಡಾ ಎಲೆಕ್ಟ್ರಿಕ್ ಸ್ಕೂಟರ್: ವಿಶ್ವ ಗಿನ್ನೆಸ್ ದಾಖಲೆಗೆ ಸೇರ್ಪಡೆ
ಹೀರೋ (Hero) ಮೋಟೊಕಾರ್ಪ್ 'ವಿಡಾ' ಸ್ಕೂಟರ್ ಮೂಲಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಕಾಲಿಟ್ಟಿದ್ದು, ಯಶಸ್ವಿಯಾಗಿ ಮುನ್ನುಗುತ್ತಿದೆ. ಇತ್ತೀಚೆಗೆ ಈ ಸ್ಕೂಟರ್ ಬೆಲೆಯನ್ನು ದೊಡ್ಡ ಮಟ್ಟದಲ್ಲಿ ಇಳಿಕೆ ಮಾಡಿ, ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿತ್ತು. ಸದ್ಯ, ಕಂಪನಿಯು ವಿಡಾ ಸ್ಕೂಟರ್ ಮೂಲಕವೇ ವಿಶ್ವ ಗಿನ್ನೆಸ್ ದಾಖಲೆ ಮಾಡಿದೆ.
ಕೇವಲ 24 ಗಂಟೆಯಲ್ಲಿ ರಾಜಸ್ಥಾನದ ಜೈಪುರದ ಹೀರೋ ಸೆಂಟರ್ ಫಾರ್ ಇನ್ನೋವೇಶನ್ ಅಂಡ್ ಟೆಕ್ನಾಲಜಿ (ಸಿಐಟಿ)ಯಲ್ಲಿರುವ ಟ್ರ್ಯಾಕ್‍ನಲ್ಲಿ 6 ರೈಡರ್‌ಗಳ ನೆರವಿನಿಂದ ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್, 1,780 ಕಿಲೋಮೀಟರ್ ದೂರವನ್ನು ಕ್ರಮಿಸಿದ್ದು, ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ. ಏಪ್ರಿಲ್ 20ರಂದು ಬೆಳಗ್ಗೆ 6:45ಕ್ಕೆ ಆರಂಭವಾಗುವ ರೈಡ್ 21ರಂದು ಕೊನೆಗೊಂಡಿದೆ. ಜೈಪುರದಲ್ಲಿ ಬೇಸಿಗೆಯಲ್ಲಿ 40 ಡಿಗ್ರಿ ತಾಪಮಾನವಿರುತ್ತದೆ. ಟ್ರಾಕ್ ನಲ್ಲಿ 50 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದರೂ ಯಶಸ್ವಿಯಾಗಿ ರೈಡ್ ಮುಗಿಸಿದ್ದಾರೆ.

ಟ್ರ್ಯಾಕ್‍ನಲ್ಲಿ ರೈಡ್ ಮುಗಿಯುವ ಹೊತ್ತಿಗೆ ಹೀರೋ ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್ ತನ್ನ (350 ಕಿಲೋಮೀಟರ್) ಹಿಂದಿನ ದಾಖಲೆಯಲ್ಲಿ ಬ್ರೇಕ್ ಮಾಡಿತ್ತು. 24 ಗಂಟೆಗಳ ರೈಡ್ ಗೆ ಬಳಸಿದ್ದ ಸ್ಕೂಟರ್ ಬ್ಯಾಟರಿಯನ್ನು ಸಂಪೂರ್ಣ ಚಾರ್ಜ್ ಮಾಡಿದ್ದ ಬ್ಯಾಟರಿಯೊಂದಿಗೆ ಬದಲಾಯಿಸಲು ಕೇವಲ 20 ಸೆಕೆಂಡ್‌ಗಳನ್ನು ತೆಗೆದುಕೊಳ್ಳಲಾಯಿತು. ಇಲ್ಲಿ ವಿಡಾ ಸರಣಿಯ ಯಾವ ಸ್ಕೂಟರ್ ಬಳಕೆ ಮಾಡಲಾಗಿದೆ ಎಂದು ಕಂಪನಿ ಬಹಿರಂಗಪಡಿಸಿಲ್ಲ.
ಹೀರೋ ಮೋಟೊಕಾರ್ಪ್, ದೇಶೀಯ ಮಾರುಕಟ್ಟೆಯಲ್ಲಿ ವಿಡಾ ಸರಣಿಯ V1 ಪ್ರೊ ಹಾಗೂ V1 ಪ್ಲಸ್ ಸ್ಕೂಟರ್ ಗಳನ್ನೂ ಮಾರಾಟ ಮಾಡುತ್ತಿದ್ದು, V1 ಪ್ಲಸ್ ರಿಯಲ್ ವರ್ಲ್ಡ್ ರೇಂಜ್ 85 ಕಿಲೋಮೀಟರ್ ಇದ್ದು, V1 ಪ್ರೊ, ಅದಕ್ಕಿಂತ 10 ಕಿಲೋಮೀಟರ್ ಹೆಚ್ಚಿನ ರೇಂಜ್ ನೀಡುತ್ತದೆ. ಬೆಲೆ ಇಳಿಕೆಯಾಗಿರುವುದರಿಂದ ವಿಡಾ ವಿ1 ಪ್ಲಸ್ ರೂ.1,19,900 ಹಾಗೂ ವಿಡಾ ವಿ1 ಪ್ರೊ ಬೆಲೆ ರೂ.1,39,900 ದರವನ್ನು ಹೊಂದಿದೆ.

ವಿಡಾ ವಿ1 ಪ್ಲಸ್ ರೂಪಾಂತರ 3.44 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, ವಿಡಾ ವಿ1 ಪ್ರೊ ರೂಪಾಂತರ 3.94 kWh ಬ್ಯಾಟರಿ ಪ್ಯಾಕ್ ಪಡೆದಿದೆ. ಇವೆರೆಡು ವೇರಿಯೆಂಟ್ 80 kmph ಟಾಪ್ ಸ್ವೀಡ್ ಹೊಂದಿದ್ದು, ಇಕೋ, ರೈಡ್, ಮತ್ತು ಸ್ಪೋರ್ಟ್ ಎಂಬ ಮೂರು ರೈಡಿಂಗ್ ಮೋಡ್ ಆಯ್ಕೆಗಳನ್ನು ಪಡೆದಿವೆ.
ಹೀರೋ ವಿಡಾ ವಿ1 ಪ್ಲಸ್ ರೂಪಾಂತರ 3.4 ಸೆಕೆಂಡ್ ಹಾಗೂ ವಿಡಾ ವಿ1 ಪ್ರೊ 3.2 ಸೆಕೆಂಡುಗಳಲ್ಲಿ 0 ಯಿಂದ 40 kmph ವೇಗವನ್ನು ಪಡೆಯಲಿದೆ. ಮ್ಯಾಟ್ ವೈಟ್, ಮ್ಯಾಟ್ ಸ್ಪೋರ್ಟ್ಸ್ ರೆಡ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ವಿಡಾ ಸ್ಕೂಟರ್, ಬೆಂಗಳೂರು, ದೆಹಲಿ ಮತ್ತು ಜೈಪುರದಲ್ಲಿ ಸದ್ಯ, ಗ್ರಾಹಕರಿಗೆ ಸಿಗಲಿದ್ದು, ಪುಣೆ, ಅಹಮದಾಬಾದ್, ಹೈದರಾಬಾದ್, ಚೆನ್ನೈ ಮತ್ತು ಕೊಚ್ಚಿಯಲ್ಲಿ ಶೋರೂಂ ತೆರೆಯಲು ಪ್ಲಾನ್ ಮಾಡಿದೆ.
ಹೀರೋ V1 ಪ್ರೊ ಹಾಗೂ V1 ಪ್ಲಸ್ ರೂಪಾಂತರಗಳು ಹತ್ತು ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿವೆ. ಪ್ರಮುಖವಾಗಿ TFT ಟಚ್‌ಸ್ಕ್ರೀನ್, ಕ್ರೂಸ್ ಕಂಟ್ರೋಲ್, ಕೀಲೆಸ್ ಕಂಟ್ರೋಲ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಜಿಯೋ ಫೆನ್ಸಿಂಗ್, ರಿವರ್ಸ್ ಮೋಡ್, ಸಿಂಗಲ್ ಡಿಸ್ಕ್ ಬ್ರೇಕ್ ಸೆಟಪ್, 26 ಲೀಟರ್ ಸಾಮರ್ಥ್ಯದ ಸೀಟ್ ಸ್ಟೋರೇಜ್ ಸೇರಿದಂತೆ ಹಲವು ಫೀಚರ್ಸ್ ಪಡೆದಿವೆ.
ಇನ್ನು, ರಾಜಸ್ಥಾನದ ಜೈಪುರದ ಹೀರೋ ಸೆಂಟರ್ ಫಾರ್ ಇನ್ನೋವೇಶನ್ ಅಂಡ್ ಟೆಕ್ನಾಲಜಿ (ಸಿಐಟಿ)ಯಲ್ಲಿರುವ ಟ್ರ್ಯಾಕ್‍ನಲ್ಲಿ ವಿಡಾ 1,780 ಕಿಲೋಮೀಟರ್ ದೂರವನ್ನು ಕ್ರಮಿಸಿ, ಗಿನ್ನೆಸ್ ದಾಖಲೆ ಮಾಡಿರುವುದು ಈ ಸ್ಕೂಟರ್ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಗ್ರಾಹಕರನ್ನು ಈ ಸ್ಕೂಟರ್ ಖರೀದಿಸುವಂತೆ ಪ್ರೇರಿಪಿಸಬಹುದು. ಜೊತೆಗೆ ಕಂಪನಿಯ ಮಾರಾಟವು ದ್ವಿಗುಣವಾಗಲಿದೆ.


Click it and Unblock the Notifications