ಹೋಂಡಾ ಆಕ್ಟಿವಾ ಪ್ರತಿಸ್ಪರ್ಧಿ 'ಹೀರೋ Xoom 110' ವಿತರಣೆ ಆರಂಭ: ಬೆಲೆಯು ಅಗ್ಗ!

ಭಾರತದಲ್ಲಿ ಹೀರೋ ಮೋಟೊಕಾರ್ಪ್ ತಯಾರಿಸುವ ಬೈಕ್‌ಗಳನ್ನು ಪ್ರತಿಯೊಬ್ಬರು ಲೈಕ್ ಮಾಡುತ್ತಾರೆ. ಆದರೆ, ಸ್ಕೂಟರ್‌ಗಳ ವಿಚಾರಕ್ಕೆ ಬಂದರೆ ಕೊಂಚ ದೂರ ಸರಿಯುತ್ತಾರೆ. ಕಳೆದ ಕೆಲವು ದಿನಗಳ ಹಿಂದೆ, ಸ್ಕೂಟರ್ ಮಾರಾಟ ವಿಭಾಗವನ್ನು ಬಲಪಡಿಸಲು ಹೀರೋ 'ಜೂಮ್' (Hero Xoom) ಸ್ಕೂಟರ್ ಬಿಡುಗಡೆಗೊಳಿಸಿತ್ತು. ಇದೀಗ ವಿತರಣೆಯನ್ನು ಆರಂಭಿಸಿದೆ.

ಮುಂಬೈನ ಮಹಿಮಾ ಪ್ರದೇಶದಲ್ಲಿರುವ ಫೋರ್ಟ್‌ಪಾಯಿಂಟ್ ಆಟೋಮೋಟಿವ್‌ ಹೆಸರಿನ ಡೀಲರ್​ ಶಿಪ್ ಮೊದಲ ಸ್ಕೂಟರ್ ವಿತರಣೆ ಮಾಡಿದೆ ಎಂದು ವರದಿಯಾಗಿದೆ. ಈ ಸ್ಕೂಟರ್, ಬೆಲೆ ರೂ.68,599 ಇದ್ದು, ಆನ್ ರೋಡ್ ಬೆಲೆ ಕೊಂಚ ಹೆಚ್ಚಿದೆ ಎಂದು ಹೇಳಬಹುದು. ನೂತನ ಹೀರೋ ಜೂಮ್ ಎರಡು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, LX, VX ಮತ್ತು ZX. ಎಕ್ಸ್ ಶೋರೂಂ ಬೆಲೆ ಕ್ರಮವಾಗಿ ರೂ.68,599, ರೂ.71,799 ಹಾಗೂ ರೂ.76,699 ಇದೆ.

ಹೋಂಡಾ ಆಕ್ಟಿವಾ ಪ್ರತಿಸ್ಪರ್ಧಿ ಹೀರೋ Xoom 110 ವಿತರಣೆ ಆರಂಭ: ಬೆಲೆಯು ಅಗ್ಗ!

ಈ ಹೊಸ ಹೊಚ್ಚ ಸ್ಕೂಟರ್ ಕೇವಲ ಹೋಂಡಾ ಆಕ್ಟಿವಾ ಮಾತ್ರವಲ್ಲದೆ, ಡಿಯೋಗೆ ನೇರ ಪ್ರತಿಸ್ಪರ್ಧಿಯಾಗಿದ್ದು, ಐದು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. ಅವುಗಳೆಂದರೆ, ಪೋಲೆಸ್ಟಾರ್ ಬ್ಲೂ, ಸ್ಪೋರ್ಟ್ಸ್ ರೆಡ್, ಮ್ಯಾಟ್ ಅಬ್ರಾಕ್ಸ್ ಆರೆಂಜ್, ಪರ್ಲ್ ಸಿಲ್ವರ್ ವೈಟ್ ಮತ್ತು ಬ್ಲ್ಯಾಕ್. ಹೀರೋ ಜೂಮ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 110.9 ಸಿಸಿ, ಏರ್ ಕೋಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 7,250 rpmನಲ್ಲಿ 8.1 hp ಗರಿಷ್ಠ ಪವರ್ ಹಾಗೂ 5,750rpm 8.7 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಹೀರೋ ಜೂಮ್ ಸಸ್ಪೆನ್ಷನ್, ಬ್ರೇಕಿಂಗ್ ವ್ಯವಸ್ಥೆಯನ್ನು ನೋಡುವುದಾದರೆ, ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ರೇರ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಈ ಸ್ಕೂಟರ್ MRF ನೈಲೋಗ್ರಿಪ್ ಟೈರ್‌ ಹಾಗೂ 12-ಇಂಚಿನ ಅಲಾಯ್ ವೀಲ್ಸ್ ನೊಂದಿಗೆ ಗ್ರಾಹಕರಿಗೆ ಖರೀದಿಗೆ ದೊರೆಯಲಿದೆ. ಫ್ರಂಟ್ ಡಿಸ್ಕ್ ಬ್ರೇಕ್ ಹಾಗೂ ರೇರ್ ಡ್ರಮ್ ಬ್ರೇಕ್ ಹೊಂದಿದೆ. ಜೊತೆಗೆ ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್‌ ಅನ್ನು ಪಡೆದುಕೊಂಡಿದೆ. ಇಷ್ಟೇ ಅಲ್ಲದೆ, i3S ಐಡಲ್ ಸ್ಟಾರ್ಟ್-ಸ್ಟಾಪ್ ತಂತ್ರಜ್ಞಾನವನ್ನು ಒಳಗೊಂಡಿರುವುದು ತುಂಬಾ ವಿಶೇಷವಾಗಿದೆ.

ನೂತನ ಹೀರೋ ಜೂಮ್ ಸ್ಕೂಟರ್ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದು ಬಹುತೇಕ ಗ್ರಾಹಕರು, ಈ ಸ್ಕೂಟರ್ ಖರೀದಿಸುವಂತೆ ಪ್ರೇರಿಪಿಸುತ್ತದೆ. ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌, ಎಚ್ - ಆಕಾರದ ಎಲ್ಇಡಿ ಟೈಲ್ ಲೈಟ್ ಅನ್ನು ಪಡೆದಿದೆ. ಅಲ್ಲದೆ, ಅತ್ಯಾಧುನಿಕ ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಹೊಂದಿದ್ದು, ಇದು ಮೈಲೇಜ್ ಸೇರಿದಂತೆ ಹಲವು ಮಾಹಿತಿಯನ್ನು ತೋರಿಸುತ್ತದೆ. ಜೊತೆಗೆ ಬ್ಲೂಟೂತ್ ಕೂಡ ಕನೆಕ್ಟ್ ಆಗಿರುವುದರಿಂದ ಕಾಲರ್ ಐಡಿ, ಇನ್-ಕಮಿಂಗ್ ಕಾಲ್, ಮೆಸೇಜ್, ಮಿಸ್ಡ್ ಕಾಲ್ ಮತ್ತು ಫೋನ್ ಬ್ಯಾಟರಿ ಲೆವೆಲ್ ಅನ್ನು ಕೂಡ ತಿಳಿಯಬಹುದು.

ಈ ಸ್ಕೂಟರ್ ಬರೋಬ್ಬರಿ 45 kmpl ಮೈಲೇಜ್ ನೀಡಲಿದೆ. ದೇಶದ ಪ್ರಮುಖ ನಗರಗಳಲ್ಲಿ ಆನ್ ರೋಡ್ ಬೆಲೆ ಎಷ್ಟಿರಲಿದೆ ಎಂಬುದನ್ನು ತಿಳಿಯುವುದಾದರೆ, ದೆಹಲಿಯಲ್ಲಿ LX ರೂಪಾಂತರವು ರೂ.80,091, VX ರೂಪಾಂತರವು 83,615 ಹಾಗೂ ZX ರೂಪಾಂತರವು ರೂ.85,019 ಬೆಲೆಯನ್ನು ಹೊಂದಿದ್ದರೆ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ LX ರೂಪಾಂತರವು ರೂ.73,099, VX ರೂಪಾಂತರವು 76,299 ಮತ್ತು ZX ರೂಪಾಂತರವು ರೂ.81,299 ಆನ್ ರೋಡ್ ದರವನ್ನು ಹೊಂದಿದೆ.

ಹೀರೋ ಜೂಮ್ ಗೆ ಪ್ರತಿಸ್ಪರ್ದಿ ಎಂದು ಕರೆಯುವ ಹೋಂಡಾ ಆಕ್ಟಿವಾ 6G, ಬೆಂಗಳೂರಿನಲ್ಲಿ ರೂ.93,718 ಆನ್ ರೋಡ್ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, 109.51 ಸಿಸಿ BS6 ಎಂಜಿನ್ ಹೊಂದಿದ್ದು, ಇದು 7.68 bhp ಗರಿಷ್ಠ ಪವರ್ ಹಾಗೂ 8.84 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 47 kmpl ಮೈಲೇಜ್ ನೀಡುತ್ತದೆ. ಮತ್ತೊಂದು ಸ್ಕೂಟರ್ ಹೋಂಡಾ ಡಿಯೋ ರೂ.73,043 ದಿಂದ ರೂ.79,044 ಬೆಲೆಯಲ್ಲಿ ಖರೀದಿಗೆ ಸಿಗಲಿದ್ದು, 55 Kmpl ಇಂಧನ ದಕ್ಷತೆಯನ್ನು ಹೊಂದಿದೆ.

ಸದ್ಯ, ಹೀರೋ ಜೂಮ್ ವಿತರಣೆಗಳು ಆರಂಭವಾಗಿದ್ದು, ಈ ಸ್ಕೂಟರ್, ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಖರೀದಿಸಲು ಮನಸ್ಸು ಮಾಡಬಹುದು. ಅಲ್ಲದೆ, ಇದು ನೋಡಲು ಆಕರ್ಷಕವಾಗಿದ್ದು, ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಹೋಂಡಾ ಆಕ್ಟಿವಾ ಹಾಗೂ ಡಿಯೋ ಸ್ಕೂಟರ್ ಗಳಿಗೆ ಭಾರೀ ಪೈಪೋಟಿ ನೀಡಬಹುದು. ಮುಂಬರುವ ದಿನಗಳಲ್ಲಿ ಗ್ರಾಹಕರಿಂದ ಈ ಸ್ಕೂಟರ್ ಗೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Source: Autocar India

Article Published On: Friday, February 17, 2023, 14:40 [IST]
English summary
Hero xoom 110cc scooter deliveries commence details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+