ಭಾರತದಲ್ಲಿ ಅತ್ಯಾಧುನಿಕ ವೈಶಿಷ್ಟ್ಯದೊಂದಿಗೆ ಹೋಂಡಾ ಆಕ್ಟಿವಾ 6G ಬಿಡುಗಡೆ

ದೇಶೀಯ ಮಾರುಕಟ್ಟೆಯಲ್ಲಿ ಹೋಂಡಾದ ಆಕ್ಟಿವಾ ಸ್ಕೂಟರ್‌ಗೆ ಸರಿಸಾಟಿಯೇ ಇಲ್ಲ. ಅಷ್ಟರಮಟ್ಟಿಗೆ ಗ್ರಾಹಕರನ್ನು ಸೆಳೆದಿದೆ. ಮಾರಾಟದಲ್ಲೂ ಅತ್ಯುತ್ತಮ ಪ್ರಗತಿಯನ್ನು ದಾಖಲು ಮಾಡಿದ್ದು, ಈ ಆಕ್ಟಿವಾ ನೀಡುವ ಗರಿಷ್ಠ ಮೈಲೇಜ್ ನಿಂದಲೇ ಇದು ಸಾಧ್ಯವಾಗಿದೆ. ಬೇರೆ ಕಂಪನಿಯ ಸ್ಕೂಟರ್‌ಗಳಿಗೆ ಹೋಲಿಸಿದರೆ ಅದರ ಅಗ್ಗದ ಬೆಲೆ ಹಾಗೂ ಫೀಚರ್ಸ್ ಗ್ರಾಹಕರಿಗೆ ಇಷ್ಟವಾಗುತ್ತದೆ.

ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI), ಭಾರತದ ಮಾರುಕಟ್ಟೆಯಲ್ಲಿ ಆಕ್ಟಿವಾ 6Gಯ ಹೊಸ ಟಾಪ್ - ಎಂಡ್ ರೂಪಾಂತರವನ್ನು ಬಿಡುಗಡೆ ಮಾಡಿದೆ. ಹೊಸ ಆಕ್ಟಿವಾ ಸ್ಟ್ಯಾಂಡರ್ಡ್, ಡಿಲಕ್ಸ್ ಮತ್ತು ಸ್ಮಾರ್ಟ್ ಕೀ ವಿತ್ ಅಲಾಯ್ ವೀಲ್ಸ್ ಎಂಬ ಮೂರು ವೇರಿಯಂಟ್‌ನಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗಲಿದೆ. ಇವುಗಳ ಬೆಲೆ ಕ್ರಮವಾಗಿ ರೂ.74,536, ರೂ.77,036 ಮತ್ತು ರೂ.80,537 ರೂ. ಇದ್ದು, ಹೊಸ ಖರೀದಿದಾರರಿಗೆ ಇದರ ಮೇಲೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿವೆ.

ಹೊಸ ಹೋಂಡಾ ಆಕ್ಟಿವಾ 6G ಸ್ಮಾರ್ಟ್ ಕೀ ವಿತ್ ಅಲಾಯ್ ವೀಲ್ಸ್ ವೇರಿಯಂಟ್‌ ಕೊಳ್ಳಲು ಗ್ರಾಹಕರು, ಡಿಲಕ್ಸ್ ವೇರಿಯಂಟ್‌ಗಿಂತ ರೂ.3,001 ಹೆಚ್ಚುವರಿಯಾಗಿ ಪಾವತಿಸಬೇಕು. ಅದರಲ್ಲಿ ಏನು ವಿಶೇಷತೆ ಅಂತ್ತೀರಾ.. ಅದಕ್ಕೆ ಉತ್ತರ ನೀಡುವ ಪ್ರಯತ್ನ ಮಾಡಲಿದೆ. ಇನ್ಮುಂದೆ ಆಕ್ಟಿವಾ 6G ಸ್ಮಾರ್ಟ್ ಕೀ ಮಾದರಿ ಅಲಾಯ್ ವೀಲ್ಸ್ ನಿಂದ ಚಾಲಿತವಾಗಲಿದೆ. ಇದು ಪ್ರಸ್ತುತ ಮಾರಾಟವಾಗುವ ಆಕ್ಟಿವಾ ಸ್ಕೂಟರ್‌ಗೆ ಹೊಸದಾಗಿದೆ. ಜೊತೆಗೆ ಆಕರ್ಷಕ ಸ್ಮಾರ್ಟ್ ಕೀ ಆಯ್ಕೆಯನ್ನು ಹೊಂದಿದೆ.

ಆಕ್ಟಿವಾ 6G ಸ್ಮಾರ್ಟ್ ಕೀ ವೇರಿಯಂಟ್‌, ಅತ್ಯಾಧುನಿಕ 4 ವೈಶಿಷ್ಟ್ಯಗಳನ್ನು ಹೊಂದಿದೆ. ಅವುಗಳೆಂದರೆ, ಸ್ಮಾರ್ಟ್ ಅನ್‌ಲಾಕ್, ಸ್ಮಾರ್ಟ್ ಸ್ಟಾರ್ಟ್, ಸ್ಮಾರ್ಟ್ ಫೈಂಡ್ ಮತ್ತು ಸ್ಮಾರ್ಟ್ ಸೇಫ್. ಸ್ಮಾರ್ಟ್ ಅನ್‌ಲಾಕ್ ಫೀಚರ್ಸ್ ನಿಮ್ಮ ಆಕ್ಟಿವಾ ಹ್ಯಾಂಡಲ್‌ಬಾರ್‌ಗಳು, ಸ್ಟೋರೇಜ್ ಏರಿಯಾ ಮತ್ತು ಫ್ಯೂಲ್ ಫಿಲ್ಲರ್ ಕ್ಯಾಪ್ ಅನ್ನು ಲಾಕ್/ಅನ್‌ಲಾಕ್ ಮಾಡಲು ಸಹಾಯ ಮಾಡುತ್ತದೆ. ಈ ಫೀಚರ್ ಉಪಯೋಗಿಸಲು ಆಕ್ಟಿವ್ ಸ್ಮಾರ್ಟ್ ಕೀ ನಿಮ್ಮ ಆಕ್ಟಿವಾ ಸ್ಕೂಟರ್ ನಿಂದ 2 ಮೀಟರ್ ಒಳಗೆ ಇರಬೇಕು.

ಸ್ಮಾರ್ಟ್ ಸ್ಟಾರ್ಟ್, ಅನ್‌ಲಾಕ್ ವೈಶಿಷ್ಟ್ಯದಂತೆಯೇ ಇರುತ್ತದೆ. ಆದರೆ, ಇದು ಆಕ್ಟಿವಾ 6Gಯ ಸ್ಮಾರ್ಟ್ ಕೀಯನ್ನು ಹೊರತೆಗೆದಂತೆ ಸ್ಕೂಟರ್ ಸ್ಟಾರ್ಟ್ ಮಾಡಲು ನೆರವಾಗುತ್ತದೆ. ಸ್ಮಾರ್ಟ್ ಫೈಂಡ್ ಫೀಚರ್, 10 ಮೀಟರ್‌ಗಳಷ್ಟು ದೂರದಲ್ಲೇ ನಿಮ್ಮ ಆಕ್ಟಿವಾ ಪತ್ತೆಹಚ್ಚಲು ನೆರವಾಗುತ್ತದೆ. ನೀವು ಆಕ್ಟಿವಾ ಸ್ಕೂಟರ್ ನಿಂದ 10 ಮೀಟರ್ ಅಥವಾ ಅದಕ್ಕಿಂತ ಕಡಿಮೆ ದೂರದಲ್ಲಿದ್ದು, ಸ್ಕೂಟರ್ ಪತ್ತೆ ಮಾಡಲು ಸಾಧ್ಯವಾಗದಿದ್ದರೆ, ಸ್ಮಾರ್ಟ್ ಕೀಯಲ್ಲಿರುವ 'answer back' ಬಟನ್ ಒತ್ತಿರಿ. ಅದು ಆಕ್ಟಿವಾದ ನಾಲ್ಕು ವಿಂಕರ್‌ಗಳ ಲೈಟ್ ಎರಡು ಬಾರಿ ಬೆಳಗುವಂತೆ ಮಾಡುತ್ತದೆ.

ಸ್ಮಾರ್ಟ್ ಸೇಫ್ ಎಂಬುದು ಆಂಟಿ-ಥೆಫ್ಟ್ ಸಿಸ್ಟಮ್ (ಕಳ್ಳತನ ವಿರೋಧಿ ವ್ಯವಸ್ಥೆ) ಆಗಿದ್ದು, ಇದು ಸ್ಕೂಟರ್ ಅನ್ನು ಲಾಕ್ ಮಾಡುತ್ತದೆ. ನೀವು ಕೆಲವು ಸೆಕೆಂಡುಗಳ ಕಾಲ ಕೀ ಮೇಲಿನ ಎರಡನೇ ಗುಂಡಿಯನ್ನು ಒತ್ತಿದರೆ, ಸ್ಮಾರ್ಟ್ ಕೀಯು ತನ್ನ ಕೆಲಸವನ್ನು ನಿಲ್ಲಿಸುತ್ತದೆ. ಜೊತೆಗೆ ಆಂಟಿ-ಥೆಫ್ಟ್ ಸಿಸ್ಟಮ್ ಅನ್ನು ಆಕ್ಟಿವ್ ಮಾಡುತ್ತದೆ. ಅಲ್ಲದೆ, ಆಕ್ಟಿವಾ 6G ಆವೃತ್ತಿಯು ಒಟ್ಟು 6 ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಡಿಸೆಂಟ್ ಬ್ಲೂ, ರೆಬೆಲ್ ರೆಡ್ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಬ್ಲಾಕ್, ಪರ್ಲ್ ಪ್ರೆಶಿಯಸ್ ವೈಟ್ ಮತ್ತು ಪಿಯರ್ ಸೈರನ್ ಬ್ಲೂ.

ಹೊಸ ಆಕ್ಟಿವಾ 6G ಎಂಜಿನ್ ಕಾರ್ಯಕ್ಷಮತೆ:
ಭಾರತದ ಬಿಡುಗಡೆಯಾಗಿರುವ ಹೊಸ ಆಕ್ಟಿವಾ 6G ಸ್ಕೂಟರ್ ಅನ್ನು ಅದರ ಹಳೇಯ ಆಕ್ಟಿವಾ ಸ್ಕೂಟರ್ ಗೆ ಹೋಲಿಸಿದರೆ, ಯಾವುದೇ ರೀತಿಯಾಗಿ ಬದಲಾಗಿಲ್ಲ. ಆದರೆ, ಹೊಸ ಅಲಾಯ್ ವೀಲ್ಸ್ ಹೊಂದಿರುವ ಈ ಸ್ಕೂಟರ್, ತೂಕದಲ್ಲಿ ಹಿಂದಿನ ಮಾದರಿಗಿಂತ 1 ಕೆಜಿ ಹಗುರವಾಗಿದೆ. ಇದು 109.51 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್‌ ಹೊಂದಿದ್ದು, 7.73 bhp ಗರಿಷ್ಠ ಪವರ್ ಮತ್ತು 8.9 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಹೋಂಡಾ ಆಕ್ಟಿವಾ 6G ಸ್ಮಾರ್ಟ್ ಕೀ ವೇರಿಯಂಟ್ ಖರೀದಿಗೆ ಬಗ್ಗೆ...
ಭಾರತದ ಮಾರುಕಟ್ಟೆಯಲ್ಲಿ ಅತಿಹೆಚ್ಚು ಮಾರಾಟವಾಗುವ ಆಕ್ಟಿವಾಗೆ ಹೋಂಡಾ ಕಂಪನಿ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಹೇಳಬಹುದು. ನೂತನ ಹೋಂಡಾ ಆಕ್ಟಿವಾ 6G ಸ್ಮಾರ್ಟ್ ಕೀ ವೇರಿಯಂಟ್ ಕೊಂಚ ಹೆಚ್ಚೇ ಸ್ಮಾರ್ಟ್ ಆಗಿದೆ. ಡಿಲಕ್ಸ್ ಮಾದರಿಗೆ ಹೋಲಿಸಿದರೆ ಕೇವಲ 3,001 ರೂ. ಅಧಿಕ ಬೆಲೆಯನ್ನು ಹೊಂದಿದೆ. ನೂತನ ವೇರಿಯಂಟ್ ಈ ತಿಂಗಳ ಕೊನೆಯಲ್ಲಿ ಡೀಲರ್‌ಶಿಪ್‌ಗಳನ್ನು ತಲುಪಲಿದೆ. ಆ ಬಳಿಕ, ಹೊಸ ಖರೀದಿದಾರರನ್ನು ಸೆಳೆಯುವ ಮೂಲಕ ಕಮಲ್ ಮಾಡಬಹುದು.

Most Read Articles

Kannada
English summary
Honda activa 6g smart key launched specs features details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X