Honda Activa: ಅಗ್ಗದ ಬೆಲೆಗೆ ಹೋಂಡಾ ಆಕ್ಟಿವಾ ಲಿಮಿಟೆಡ್ ಎಡಿಷನ್ ಬಿಡುಗಡೆ, ವಿಶೇಷತೆಗಳೇನು?
ಭಾರತದಲ್ಲಿ ಹೋಂಡಾ ಆಕ್ಟಿವಾ (Honda Activa) ದಶಕಗಳಿಂದ ಜನಪ್ರಿಯ ಸ್ಕೂಟರ್ ಆಗಿದೆ. ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಕ್ಟಿವಾದ ವಿವಿಧ ರೂಪಾಂತರಗಳನ್ನು ಮಾರುಕಟ್ಟೆಯಲ್ಲಿ ಕಾಲಕ್ಕೆ ತಕ್ಕಂತೆ ಬಿಡುಗಡೆ ಮಾಡುತ್ತಿರುತ್ತದೆ. ಸದ್ಯ ಇದೇ ಸ್ಕೂಟರ್ ಅಭಿಮಾನಿಗಳಿಗೆ ಹೋಂಡಾ ಭರ್ಜರಿ ಸಿಹಿಸುದ್ದಿ ನೀಡಿದೆ.
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (Honda Motorcycle & Scooter India - HMSI), ಆಕ್ಟಿವಾ ಲಿಮಿಟೆಡ್ ಎಡಿಷನ್ ಸ್ಕೂಟರ್‌ನ್ನು ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಇದು, ಸ್ಟ್ಯಾಂಡರ್ಡ್ (Standard) ಮತ್ತು ಸ್ಮಾರ್ಟ್ (Smart) ಎಂಬ ಎರಡು ರೂಪಾಂತರದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಕ್ರಮವಾಗಿ ರೂ.80,734 ಹಾಗೂ ರೂ.82,734 ಬೆಲೆಯನ್ನು ಹೊಂದಿದೆ.

ಪ್ರಮುಖವಾಗಿ, ಹೋಂಡಾ ಆಕ್ಟಿವಾ ಲಿಮಿಟೆಡ್ ಎಡಿಷನ್ ಸ್ಕೂಟರ್ ಕೆಲವೊಂದು ಕಾಸ್ಮೆಟಿಕ್ ಬದಲಾವಣೆಗಳನ್ನು ಹೊಂದಿದೆ. ಆಸಕ್ತ ಗ್ರಾಹಕರು, ಈ ಸ್ಕೂಟರ್‌ಗಳನ್ನು ಹೋಂಡಾದ ರೆಡ್ ವಿಂಗ್ ಡೀಲರ್‌ಶಿಪ್‌ಗಳಲ್ಲಿ ಬುಕ್ಕಿಂಗ್ ಮಾಡಬಹುದು. ಆಕ್ಟಿವಾ ಲಿಮಿಟೆಡ್ ಎಡಿಷನ್ ಆವೃತ್ತಿಯು ಒಟ್ಟು 10 - ವರ್ಷದ ವಾರಂಟಿ ಪ್ಯಾಕೇಜ್ ಅನ್ನು ಒಳಗೊಂಡಿದೆ.
ಹೋಂಡಾ ಆಕ್ಟಿವಾ ಲಿಮಿಟೆಡ್ ಎಡಿಷನ್ ಸ್ಕೂಟರ್ ಪರ್ಲ್ ಸೈರನ್ ಬ್ಲೂ ಹಾಗೂ ಮ್ಯಾಟ್ ಸ್ಟೀಲ್ ಬ್ಲ್ಯಾಕ್ ಮೆಟಾಲಿಕ್ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗಲಿದ್ದು, ಬಾಡಿ ಪ್ಯಾನೆಲ್‌ಗೆ ಬ್ಲ್ಯಾಕ್ ಕ್ರೋಮ್ ಅಚ್ಛೇನ್ಟ್ಸ್ & ಸ್ಟ್ರೈಪ್‌ಗಳನ್ನು ಸೇರಿಸಲಾಗಿದೆ. ಆಕ್ಟಿವಾ 3ಡಿ ಲೋಗೋ ನೋಡುಗರ ಗಮನ ಸೆಳೆಯುತ್ತದೆ. ರೇರ್ ಗ್ರ್ಯಾಬ್ ರೈಲ್ ಕೂಡ ಬಾಡಿ ಕಲರ್ ಡಾರ್ಕ್ ಫಿನಿಶ್ ಅನ್ನು ಪಡೆದಿದೆ.
ಈ ಸ್ಕೂಟರ್, ಅಲಾಯ್ ವೀಲ್ಸ್ ಹೊಂದಿದೆ. ಸದ್ಯ, ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಆಕ್ಟಿವಾ ಸ್ಕೂಟರ್‌ನಂತೆ ಬಹುತೇಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಜೊತೆಗೆ ಬಿಎಸ್6 ಒಬಿಡಿ ಮಾನದಂಡಗಳನ್ನು ಬೆಂಬಲಿಸುವ 109.51 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಪಡೆದಿದ್ದು, ಇದು 7.37 bhp ಗರಿಷ್ಠ ಪವರ್ ಹಾಗೂ 8.90 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯ ಹೊಂದಿದೆ.
ಹೊಸ ಹೋಂಡಾ ಆಕ್ಟಿವಾ ಲಿಮಿಟೆಡ್ ಬಿಡುಗಡೆ ಕುರಿತು ಮಾತನಾಡಿರುವ ಕಂಪನಿ ಸಿಇಒ ಸುತ್ಸುಮು ಒಟಾನಿ, 'ಆಕ್ಟಿವಾ ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಕಳೆದ ಎರಡು ವರ್ಷಗಳಲ್ಲಿ ಲಕ್ಷಾಂತರ ಜನರನ್ನು ತಲುಪಿದೆ. ದಶಕಗಳಿಂದ ಎಲ್ಲಾ ವಯೋಮಾನದ ಜನರನ್ನು ಆಕರ್ಷಿಸುತ್ತಿದ್ದು, ಹೊಸ ಲಿಮಿಟೆಡ್ ಎಡಿಷನ್ ಬಿಡುಗಡೆ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ನೆರವಾಗುತ್ತದೆ' ಎಂದು ಹೇಳಿದ್ದಾರೆ.
ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಹೋಂಡಾ ಆಕ್ಟಿವಾ 6ಜಿ ಸ್ಟ್ಯಾಂಡರ್ಸ್ ಆವೃತ್ತಿಯು ಬೆಂಗಳೂರಿನಲ್ಲಿ ರೂ.98,951 ಆನ್-ರೋಡ್ ಬೆಲೆಯನ್ನು ಹೊಂದಿದೆ. ಇದರ 109.51 ಸಿಸಿ ಎಂಜಿನ್ 7.73 bhp ಗರಿಷ್ಠ ಪವರ್ ಉತ್ಪಾದಿಸಲಿದ್ದು, 47 kmpl ಮೈಲೇಜ್ ನೀಡುತ್ತದೆ. ಎಂಜಿನ್ ಸ್ಟಾರ್ಟ್-ಸ್ಟಾಪ್ ಸ್ವಿಚ್, ಸೈಲೆಂಟ್ ಸ್ಟಾರ್ಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಹೋಂಡಾ ಆಕ್ಟಿವಾ ಡಿಎಲ್ಎಕ್ಸ್ ಆವೃತ್ತಿಯು ರೂ.78,734 ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಸಿಗಲಿದ್ದು, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಪರ್ಲ್ ಪ್ರೆಶಿಯಸ್ ವೈಟ್, ಪರ್ಲ್ ಸೈರನ್ ಬ್ಲೂ, ರೆಬೆಲ್ ರೆಡ್ ಮೆಟಾಲಿಕ್ ಸೇರಿದಂತೆ ಆರು ಬಣ್ಣದ ಆಯ್ಕೆಯಲ್ಲಿ ದೊರೆಯುತ್ತದೆ. ಜೊತೆಗೆ ಟ್ಯೂಬ್ ಲೆಸ್ ಟೈಯರ್ ಹಾಗೂ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications