ಮಾರಾಟದಲ್ಲಿ ಸುನಾಮಿ: 3 ಕೋಟಿ ಮಾರಾಟವಾಗಿ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ ಹೋಂಡಾ ಆಕ್ಟಿವಾ

ಹೋಂಡಾ ಆಕ್ಟಿವಾ (Honda Activa) ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಕೂಟರ್ ಆಗಿದೆ. ಸ್ಕೂಟರ್ ಎಂದಾಗ ಮನಸ್ಸಿಗೆ ಮೊದಲು ಬರುವುದು ಆಕ್ಟಿವಾ ಆಗಿದೆ. ಇದು ಅಷ್ಟರ ಮಟ್ಟಿಗೆ ಜನಪ್ರಿಯವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಅದೆಷ್ಟು ಹೊಸ ಸ್ಕೂಟರ್‌ಗಳು ಬಂದರೂ ಆಕ್ಟಿವಾವನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ಆಕ್ಟಿವಾ ಭಾರತದ ಜನರ ಮನಸ್ಸಿನಲ್ಲಿ ವಿಶ್ವಾಸರ್ಹ ಸ್ಕೂಟರ್ ಆಗಿದೆ.

ಅದರ ಸ್ಕೂಟರ್ ಸರಣಿಯಲ್ಲಿ 110cc ಮತ್ತು 125cc ಸ್ಕೂಟರ್‌ಗಳಾಗಿ ಮಾರಾಟವಾಗುತ್ತಿದೆ. ಹೋಂಡಾ ತನ್ನ 22 ವರ್ಷಗಳ ದೀರ್ಘಾವಧಿಯಲ್ಲಿ ಭಾರತೀಯ ಸ್ಕೂಟರ್ ಮಾರುಕಟ್ಟೆಯನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದೆ. ಆಕ್ಟಿವಾ ಬ್ರ್ಯಾಂಡ್‌ನ ಮಾರಾಟವು ಈಗ ಒಟ್ಟು 3 ಕೋಟಿ ಯುನಿಟ್‌ಗಳನ್ನು ದಾಟಿದೆ. ಆಕ್ಟಿವಾ ಅಭೂತಪೂರ್ವ ಜನಪ್ರಿಯತೆಯನ್ನು ಹೊಂದಿದೆ ಮತ್ತು ಇದು ಭಾರತದಲ್ಲಿನ ಅನೇಕ ಖರೀದಿದಾರರ ಮೆಚ್ಚಿನ ಆಯ್ಕೆಯಾಗಿದೆ.

Honda Activa

2001 ರಲ್ಲಿ ಭಾರತದಲ್ಲಿ ಮೊದಲ ಭಾರಿಗೆ ಆಕ್ಟಿವಾ ಸ್ಕೂಟರ್ ಬಿಡುಗಡೆಗೊಂಡಿತು. ಈ ಸ್ಕೂಟರ್ ಮಾರಾಟವು 2000 ಮತ್ತು 2010ರ ದಶಕದ ಆರಂಭದಲ್ಲಿ ಇದ್ದದ್ದಕ್ಕಿಂತ ಈಗ ಗಮನಾರ್ಹವಾಗಿ ಹೆಚ್ಚಾಗಿದೆ. ಹೋಂಡಾ ಆಕ್ಟಿವಾ 2015 ರಲ್ಲಿ ಚೊಚ್ಚಲವಾಗಿ 15 ವರ್ಷಗಳಲ್ಲಿ ಮೊದಲ ಒಂದು ಕೋಟಿ ಮಾರಾಟದ ಮೈಲಿಗಲ್ಲನ್ನು ಸಾಧಿಸಿತು.

ಹೋಂಡಾ ಮೋಟಾರ್‌ಸೈಕಲ್ಸ್ ಮತ್ತು ಸ್ಕೂಟರ್ಸ್ ಇಂಡಿಯಾ (ಎಚ್‌ಎಂಎಸ್‌ಐ) ತನ್ನ ಮೊದಲ ಕೋಟಿ ಯೂನಿಟ್‌ಗಳ ಮಾರ್ಕ್ ಅನ್ನು ತಲುಪಲು ತೆಗೆದುಕೊಂಡಿರುದಕ್ಕಿಂತ ಕಡಿಮೆ ಸಮಯದಲ್ಲಿ ಎರಡೂ ಕೋಟಿ ಮ್ಮೈಲಿಗಲ್ಲು ಸಾಧಿಸಿದೆ. ಮೊದಲ ಜನರೇಷನ್ ಹೋಂಡಾ ಆಕ್ಟಿವಾ 2001 ರಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು. ಮೊದಲ ಜನರೇಷನ್ ಮಾದರಿಯು ಭಾರತದಲ್ಲಿ ಹೊಸ ಸಂಚಲನವನ್ನು ಮೂಡಿಸಿತು.

Honda Activa

ಅದರ ಹಿಂದಿನ ಮಾದರಿಯು 2008 ರಲ್ಲಿ ದೊಡ್ಡ 110cc ಎಂಜಿನ್‌ನೊಂದಿಗೆ ಆಗಮಿಸಿತು. ಹೋಂಡಾ ಆಕ್ಟಿವಾ 3G 2014 ರಲ್ಲಿ ಬಂದಿತು. ನಂತರ ಆಕ್ಟಿವಾ 125 ಕೂಡ ಬಂತು. ನಂತರದಲ್ಲಿ ಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ಡಿಆರ್‌ಎಲ್‌ಗಳು 2017 ರಲ್ಲಿ ಆಕ್ಟಿವಾ 5G ಯೊಂದಿಗೆ ಮೊದಲ ಬಾರಿಗೆ ಎಂಟ್ರಿಕೊಟ್ಟಿತು. ಆಕ್ಟಿವಾ 6G ಆಕ್ಟಿವಾ ಸ್ಕೂಟರ್ ಮಾದರಿಯು 2019 ರಲ್ಲಿ ಬಂದಿತು.

ನಂತರ ಅದು BS6 ಅಪ್ಡೇಟ್ ಪಡೆದುಕೊಂಡಿತು ಮತ್ತು ಇತರರಲ್ಲಿ ಮೂಕ ಸ್ಟಾರ್ಟರ್ ಅನ್ನು ಒಳಗೊಂಡಿತ್ತು. ಈಗ, ಹೋಂಡಾ 6G ಕೈಬಿಟ್ಟಿತು. ಇದನ್ನು 2023ರ ಕ್ಟಿವಾ ಎಂದು ಕರೆಯುತ್ತದೆ. ಆಕ್ಟಿವಾ ಬಾರೀ ಜನಪ್ರಿಯ ಸ್ಕೂಟರ್ ಆಗಿರುವುದರಿಂದ ಹೋಂಡಾ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರಿಗೆ ಆಕ್ಟಿವಾ ಎಂಬ ಹೆಸರನ್ನು ನೀಡಬಹುದು.

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಅಧ್ಯಕ್ಷ, ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಅಟ್ಸುಶಿ ಒಗಾಟಾ ಅವರು ಮಾತನಾಡಿ. ಹೋಂಡಾ ಆಕ್ಟಿವಾ ಅವರ ಅದ್ಭುತ ಪ್ರಯಾಣದ ಬಗ್ಗೆ ನಾವು ತುಂಬಾ ಹೆಮ್ಮೆಪಡುತ್ತೇವೆ. ಕೇವಲ 22 ವರ್ಷಗಳಲ್ಲಿ 3 ಕೋಟಿ ಗ್ರಾಹಕರ ಮೈಲಿಗಲ್ಲನ್ನು ಸಾಧಿಸಿರುವುದು ನಮ್ಮ ಗ್ರಾಹಕರು ನಮ್ಮ ಮೇಲೆ ಇಟ್ಟಿರುವ ಅಚಲ ಬೆಂಬಲ ಮತ್ತು ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಮಾರಾಟ ಮತ್ತು ಮಾರ್ಕೆಟಿಂಗ್ ನಿರ್ದೇಶಕರಾದ ಶ್ರೀ ಯೋಗೇಶ್ ಮಾಥುರ್ ಮಾತನಾಡಿ, ಬ್ರಾಂಡ್ ಆಕ್ಟಿವಾ ಮತ್ತು HMSI ಮೇಲಿನ ನಂಬಿಕೆಗಾಗಿ 3 ಕೋಟಿ ಭಾರತೀಯ ಕುಟುಂಬಗಳಿಗೆ ಧನ್ಯವಾದಗಳು.ಆಕ್ಟಿವಾ ಆರಂಭದಿಂದಲೂ ಹಲವಾರು ಅವತಾರ್‌ಗಳನ್ನು ಬದಲಾಯಿಸಿದೆ. ಬದಲಾಗುತ್ತಿರುವ ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ನಿರಂತರವಾಗಿ ಅಪ್‌ಗ್ರೇಡ್ ಮಾಡುತ್ತಿದೆ ಎಂದು ಹೇಳಿದರು.

Article Published On: Tuesday, June 27, 2023, 18:43 [IST]
English summary
Honda activa records 3 crore sales milestone in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+