ಆಕರ್ಷಕ ವಿನ್ಯಾಸದ ಹೋಂಡಾ CB350 ಕೆಫೆ ರೇಸರ್ ಬೈಕ್ ಶೀಘ್ರ ಬಿಡುಗಡೆ: ಬೆಲೆ ಎಷ್ಟು?
ಭಾರತದಲ್ಲಿ ಹೋಂಡಾ ಕಂಪನಿಯ ದ್ವಿಚಕ್ರ ವಾಹನಗಳನ್ನು ಪ್ರತಿಯೊಬ್ಬರು ಇಷ್ಟಪಟ್ಟು ಖರೀದಿಸುತ್ತಾರೆ. ಕಳೆದ ತಿಂಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾದ 'ಆಕ್ಟಿವಾ 6G ಹೆಚ್ ಸ್ಮಾರ್ಟ್' ಸ್ಕೂಟರ್‌ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ, ತನ್ನ CB350 ಕೆಫೆ ರೇಸರ್ ಬೈಕ್ ಲಾಂಚ್ ಮಾಡಲು ಸಿದ್ಧತೆ ನಡೆದಿದೆ.
ಈ ನೂತನ ಬೈಕ್ ವಿನ್ಯಾಸದ ದೃಷ್ಟಿಯಿಂದ ಆಕರ್ಷಕ ಲುಕ್ ಹೊಂದಿರಲಿದ್ದು, ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಪಡೆದಿರಲಿದೆ. ಪ್ರಮುಖವಾಗಿ ಈ ಬೈಕ್ ಗ್ಲೊಸಿ ಬ್ಲೂ/ವೈಟ್ ಬಣ್ಣದ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. ಹೆಡ್ ಲ್ಯಾಂಪ್ ನೋಡಲು ಅತ್ಯಾಕರ್ಷವಾಗಿದೆ. ಜೊತೆಗೆ ಸಿಂಗಲ್ ಪಿಸ್ ಲೆದರ್ ಸೀಟ್ ಹೊಂದಿದೆ. ಹ್ಯಾಂಡಲ್‌ಬಾರ್ ಸವಾರರಿಗೆ ಅನುಕೂಲಕರ ರೀತಿಯಲ್ಲಿಯೇ ಇದ್ದು, ಅಲಾಯ್ ವೀಲ್ಸ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್‌ಬಿ ಚಾರ್ಜರ್ ಸೇರಿ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ಹೊಸ ಹೋಂಡಾ CB350 ಕೆಫೆ ರೇಸರ್ ಬೈಕ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 348.36 ಸಿಸಿ 4-ಸ್ಟೋಕ್ SI BS-VI ಎಂಜಿನ್ ಹೊಂದಿದ್ದು, 5,500 rpmನಲ್ಲಿ 21.07 PS ಗರಿಷ್ಠ ಪವರ್ ಹಾಗೂ 3,000 rpmನಲ್ಲಿ 30 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದುಕೊಂಡಿದೆ. ಬೇರೆ ಬೈಕ್ ಗಳಿಗೆ ಹೋಲಿಸಿದರೆ, ಇದರ ಮೈಲೇಜ್ ಕೊಂಚ ಕಡಿಮೆ ಎಂದು ಹೇಳಬಹುದು. 35 kmpl ಇಂಧನ ದಕ್ಷತೆಯನ್ನು ಹೊಂದಿದೆ.
ಪ್ರತಿಯೊಂದು ಬೈಕಿಗೆ ಸಸ್ಪೆನ್ಷನ್ ಬ್ರೇಕಿಂಗ್ ಸಿಸ್ಟಮ್ ಮುಖ್ಯವಾಗುತ್ತದೆ. ಈ ಹೋಂಡಾ CB350 ಕೆಫೆ ರೇಸರ್, ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಸ್, ರೇರ್ ಡ್ಯುಯಲ್ ಸ್ಪ್ರಿಂಗ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ಕುರಿತು ಹೇಳುವುದಾದರೆ ಫ್ರಂಟ್, ರೇರ್ ಡಿಸ್ಕ್ ಬ್ರೇಕ್ ಇದ್ದು, ಡ್ಯುಯಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಆಯ್ಕೆಯನ್ನು ಪಡೆದಿದೆ. ಈ ಎಲ್ಲ ವೈಶಿಷ್ಟ್ಯಗಳಿಂದ ಈ ಬೈಕ್ ಬಲಿಷ್ಠವಾಗಿದೆ ಎಂದು ಹೇಳಬಹುದು.

ಮುಂಬರುವ ಕೆಲವೇ ವಾರಗಳಲ್ಲಿ ನೂತನ ಹೋಂಡಾ CB350 ಕೆಫೆ ರೇಸರ್ ಬೈಕ್ ಭಾರತದ ಮಾರುಕಟ್ಟೆಯಲ್ಲಿ ಅದ್ದೂರಿಯಾಗಿ ಲಾಂಚ್ ಆಗಲಿದೆ. ಬೆಲೆಯು ಕೊಂಚ ದುಬಾರಿಯಾಗಿರಲಿದೆ ಎಂದು ಅಂದಾಜಿಸಲಾಗಿದ್ದು, ಬಹುತೇಕ ರೂ.2.2 ಲಕ್ಷದಿಂದ ರೂ. 2.3 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗಬಹುದು. ಇದು ರಾಯಲ್ ಎನ್‌ಫೀಲ್ಡ್ ಹಂಟರ್ 350ಗೆ ಭಾರೀ ಪೈಪೋಟಿ ನೀಡಬಹುದು ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ.
ಸದ್ಯ, ಆಕ್ಟಿವಾ 6G ಹೆಚ್ ಸ್ಮಾರ್ಟ್ ಅನ್ನು ಲಾಂಚ್ ಮಾಡಿದ್ದು, ಇದು ಹತ್ತಾರು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ರೂ.80,537 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. 109.51 ಸಿಸಿ ಎಂಜಿನ್ ಹೊಂದಿದ್ದು, 7.84 PS ಗರಿಷ್ಠ ಪವರ್ ಹಾಗೂ 8.90 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಅಲ್ಲದೆ, ಬ್ಲ್ಯಾಕ್, ಡೀಸೆಂಟ್ ಬ್ಲೂ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಸೇರಿ ಹಲವು ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ.
ಹೋಂಡಾ ಆಕ್ಟಿವಾ, ಅಲಾಯ್ ವೀಲ್ಸ್, ಕೀಲೆಸ್, ಸೈಲೆಂಟ್ ಸ್ಟಾರ್ಟರ್ ಮತ್ತು ಆಟೋ ಸ್ಟಾರ್ಟ್/ಸ್ಟಾಪ್, ಫ್ರಂಟ್, ರೇರ್ ಡ್ರಮ್ ಬ್ರೇಕ್ಸ್, CBS (ಕಾಂಬಿ ಬ್ರೇಕ್ ಸಿಸ್ಟಮ್), LED ಹೆಡ್ ಲೈಟ್ ಸೇರಿ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. 5.3 ಲೀಟರ್ ಫ್ಯುಯೆಲ್ ಟ್ಯಾಂಕ್ ಪಡೆದಿದ್ದು, 60kpl ಮೈಲೇಜ್ ನೀಡುತ್ತದೆ. ಈ ಸ್ಕೂಟರ್ ಗೆ ಭಾರೀ ಬೇಡಿಕೆ ಇದ್ದು, ಹೋಂಡಾ ಆಕ್ಟಿವಾದ 96,451 ಯುನಿಟ್ ಗಳನ್ನು ಮಾರಾಟ ಮಾಡಲು ಯಶಸ್ವಿಯಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.
Source: Rushlane


Click it and Unblock the Notifications