Honda Dio 125: ಅತ್ಯಂತ ಕಡಿಮೆ ಬೆಲೆಗೆ ಹೊಸ 'ಹೋಂಡಾ ಡಿಯೋ' ಬಿಡುಗಡೆ.. ಭರ್ಜರಿ ವಿಶೇಷತೆಗಳಿವೆ
ದೇಶೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೋಂಡಾ (Honda) ತನ್ನ ಆಕ್ಟಿವಾ ಸ್ಕೂಟರ್ ಮಾರಾಟದಿಂದ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಕಂಪನಿಯು ತನ್ನ 125 ಸಿಸಿ ವಿಭಾಗವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ. ಅದರ ಭಾಗವಾಗಿ ಬಹುನೀರಿಕ್ಷಿತ ಡಿಯೋ 125 (Dio 125) ಸ್ಕೂಟರ್‌ನ್ನು ಬಿಡುಗಡೆ ಮಾಡಿದೆ.
ನೂತನ ಡಿಯೋ 125 ಸ್ಕೂಟರ್ ಲಾಂಚ್ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಟೀಸರ್ ಪೋಸ್ಟ್ ಮಾಡುವ ಮೂಲಕ ಹೋಂಡಾ ಭಾರೀ ನೀರಿಕ್ಷೆ ಹುಟ್ಟುಹಾಕಿತ್ತು. ಅಂತಿಮವಾಗಿ ಭಾರತದಲ್ಲಿ ಈ ಸ್ಕೂಟರ್‌ನ್ನು ಬಿಡುಗಡೆ ಮಾಡಿದೆ. ಹೊಸ ಡಿಯೋ 125 ಸ್ಕೂಟರ್ ಎರಡು ರೂಪಾಂತರಗಳಲ್ಲಿ ಖರೀದಿಗೆ ಸಿಗುತ್ತದೆ. ಅವುಗಳೆಂದರೆ, ಸ್ಟ್ಯಾಂಡರ್ಡ್ ಹಾಗೂ ಸ್ಮಾರ್ಟ್.

ಹೊಸ ಹೋಂಡಾ ಡಿಯೋ 125 ಸ್ಕೂಟರ್ ಬೆಲೆ ಕುರಿತು ಹೇಳುವುದಾದರೆ, ಸ್ಟ್ಯಾಂಡರ್ಡ್ ವೇರಿಯೆಂಟ್ ರೂ.83,400 ಹಾಗೂ ಸ್ಮಾರ್ಟ್ ವೇರಿಯೆಂಟ್ ರೂ. 91,300 ಎಕ್ಸ್ ಶೋರೂಂ (ದೆಹಲಿ) ದರದಲ್ಲಿ ಖರೀದಿಗೆ ಲಭ್ಯವಿದೆ. ಕಂಪನಿಯು ಈ ಸ್ಕೂಟರ್‌ಗಳಲ್ಲಿ OBD2 ಮಾನದಂಡಗಳಿಗೆ ಅನ್ವಯ ಮೇಲ್ದರ್ಜೆಗೇರಿಸಿರುವ ಎಂಜಿನ್ ಅನ್ನೇ ಬಳಕೆ ಮಾಡಿದೆ.
ಇದರ, 125 ಸಿಸಿ ಸಾಮರ್ಥ್ಯದ ಎಂಜಿನ್ 8.3hp ಗರಿಷ್ಠ ಪವರ್ ಹಾಗೂ 10.4 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಆಕ್ಟಿವಾ ಹಾಗೂ ಗ್ರಾಜಿಯಾ ಸ್ಕೂಟರ್‌ಗಳು ಇದೇ ರೀತಿಯ ಕಾರ್ಯಕ್ಷಮತೆಯನ್ನು ಹೊಂದಿವೆ. ಜೊತೆಗೆ ನೂತನ ಹೋಂಡಾ ಡಿಯೋ 125 ಸ್ಕೂಟರ್, 171 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಒಳಗೊಂಡಿದೆ.

ಹೋಂಡಾ ಡಿಯೋ 125 ಸ್ಕೂಟರ್ ಬ್ರೇಕಿಂಗ್ ಸಿಸ್ಟಮ್ ಹಾಗೂ ಸಸ್ಪೆನ್ಷನ್ ಸೆಟಪ್ ಬಗ್ಗೆ ಮಾತನಾಡುವುದಾದರೆ, ಈ ಸ್ಕೂಟರ್ ಫ್ರಂಟ್ ಡಿಸ್ಕ್, ರೇರ್ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್, ರೇರ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಅನ್ನು ಪಡೆದಿದ್ದು, ಅಲಾಯ್ ವೀಲ್ಸ್ ನೊಂದಿಗೆ 12/10 ಇಂಚಿನ ಟೈಯರ್ಸ್ ಹೊಂದಿದೆ.
ನೂತನ ಡಿಯೋ 125 ಸ್ಕೂಟರ್ ಗ್ರಾಹಕರನ್ನು ಆಕರ್ಷಿಸುವ ಭರಪೂರ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸ್ಟಾರ್ಟ್/ಸ್ಟಾಪ್ ಸಿಸ್ಟಮ್, ಸೈಲೆಂಟ್ ಸ್ಟಾರ್ಟರ್, ಡಿಜಿಟಲ್ ಡ್ಯಾಶ್ ಮತ್ತು ಎಲ್‌ಇಡಿ ಹೆಡ್‌ಲೈಟ್, ಐಡಲಿಂಗ್ ಸ್ಟಾಪ್, ಸೈಡ್-ಸ್ಟ್ಯಾಂಡ್ ಇಂಡಿಕೇಟರ್ ಹಾಗೂ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್ ಸೇರಿದಂತೆ ಹಲವು ಫೀಚರ್ಸ್ ಪಡೆದಿದೆ. ಇದಿಷ್ಟೇ ಅಲ್ಲದೆ, 18-ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್, ಫ್ಯುಯೆಲ್ ಕ್ಯಾಪ್ ಓಪನ್ ಮಾಡಲು ಡ್ಯುಯಲ್-ಫಂಕ್ಷನ್ ಸ್ವಿಚ್‌ಯಿದೆ.

ಈ ಸ್ಕೂಟರ್, ಪರ್ಲ್ ಸೈರನ್ ಬ್ಲೂ, ಪರ್ಲ್ ಡೀಪ್ ಗ್ರೌಂಡ್ ಗ್ರೇ, ಪರ್ಲ್ ನೈಟ್ ಸ್ಟಾರ್ ಬ್ಲ್ಯಾಕ್, ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಮ್ಯಾಟ್ ಸಾಂಗ್ರಿಯಾ ರೆಡ್ ಮೆಟಾಲಿಕ್ ಹಾಗೂ ಸ್ಪೋರ್ಟ್ಸ್ ರೆಡ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. 3 ವರ್ಷ ಪ್ರಮಾಣಿತ ವಾರಂಟಿ ಹಾಗೂ 7 ವರ್ಷಗಳವರೆಗೆ ವಿಸ್ತರಿಕೊಳ್ಳಬಹುದಾದ ವಾರಂಟಿಯನ್ನು ಕಂಪನಿ ನೀಡಿದೆ.
ಹೋಂಡಾ ಕಂಪನಿ, ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಡಿಯೋ 125 ಸ್ಕೂಟರ್ ಬಿಡುಗಡೆಗೊಳಿಸುರುವುದು ಗ್ರಾಹಕರಿಗೆ ಖುಷಿ ತಂದಿದೆ. ಈ ಸ್ಕೂಟರ್‌ಗೆ ಭಾರತದ ಮಾರುಕಟ್ಟೆಯಲ್ಲಿ ಸುಜುಕಿ ಅವೆನಿಸ್ ಹಾಗೂ ಯಮಹಾ RayZR 125 ಸ್ಕೂಟರ್‌ಗಳು ಪ್ರತಿಸ್ಪರ್ಧಿಯಾಗಿದ್ದು, ಇವುಗಳಿಗೆ ಪೈಪೋಟಿ ನೀಡುವ ಮೂಲಕ ಹೋಂಡಾ ಡಿಯೋ 125 ಸ್ಕೂಟರ್ ಹೇಗೆ ಭಾರತದ ಗ್ರಾಹಕರನ್ನು ತನ್ನತ್ತ ಸೆಳೆಯುತ್ತದೆ ಎಂಬುದು ಮುಂಬರುವ ದಿನಗಳಲ್ಲಿ ತಿಳಿಯಲಿದೆ.


Click it and Unblock the Notifications