Honda Unicorn: ಭರ್ಜರಿ ವಿಶೇಷತೆಯೊಂದಿಗೆ ನವೀಕರಿಸಿದ 'ಹೋಂಡಾ ಯುನಿಕಾರ್ನ್' ಬೈಕ್ ಲಾಂಚ್

ಭಾರತದಲ್ಲಿ ಹೋಂಡಾ (Honda) ಜನಪ್ರಿಯ ದ್ವಿಚಕ್ರ ಕಂಪನಿಯಾಗಿ ಗುರುತಿಸಿಕೊಂಡಿದೆ. ದಶಕಗಳಿಂದ ಆಕ್ಟಿವಾ ಸ್ಕೂಟರ್ ಮಾರಾಟ ಮಾಡಿ, ಜನಮನ್ನಣೆ ಪಡೆದಿದ್ದು, ಇದೀಗ ಪ್ರಯಾಣಿಕ ಮೋಟಾರ್ ಸೈಕಲ್ ವಿಭಾಗಕ್ಕೆ ಮತ್ತಷ್ಟು ಕೊಡುಗೆ ನೀಡಲು ನವೀಕರಿಸಿದ (2023) 'ಯುನಿಕಾರ್ನ್' ಬೈಕ್‍ನ್ನು ಲಾಂಚ್ ಮಾಡಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.

ನೂತನ ಹೋಂಡಾ ಯುನಿಕಾರ್ನ್ ಬೈಕ್‍ನ್ನು ದೇಶಾದ್ಯಂತ ಏಪ್ರಿಲ್ 1ರಿಂದ ಜಾರಿಗೆ ಬಂದಿರುವ OBD 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಲಾಗಿದೆ. ಸರಳವಾಗಿ ಹೇಳಬೇಕಾದರೆ, ಇದರಲ್ಲಿ ಅಳವಡಿಸುವ ಸಾಧನ (diagnostics system) ಹೆಚ್ಚಿನ ಹೊಗೆ ಬರುತ್ತಿದ್ದರೆ, ಅದರ ಮಾಹಿತಿಯನ್ನು ಚಾಲಕನಿಗೆ ನೀಡುತ್ತದೆ. ಈ ಬೈಕ್ ರೂ.1,09,800 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

Honda Unicorn: ಭರ್ಜರಿ ವಿಶೇಷತೆಯೊಂದಿಗೆ ನವೀಕರಿಸಿದ ಹೋಂಡಾ ಯುನಿಕಾರ್ನ್ ಬೈಕ್ ಲಾಂಚ್

ಹೋಂಡಾ ಯುನಿಕಾರ್ನ್ ಬೈಕ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 160 ಸಿಸಿ ಏರ್ ಕೋಲ್ಡ್ ಎಂಜಿನ್ ಹೊಂದಿದ್ದು, 13 hp ಗರಿಷ್ಠ ಪವರ್ ಹಾಗೂ 14.58 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 5 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗಲಿದ್ದು, 50 kmpl ಮೈಲೇಜ್ ನೀಡುತ್ತದೆ ಎಂದು ಅಂದಾಜಿಸಲಾಗಿದೆ.

ಹೊಸ ಯುನಿಕಾರ್ನ್ ಬೈಕ್‍ನ ಸಸ್ಪೆನ್ಷನ್ ಸೆಟಪ್ ಬಗ್ಗೆ ಮಾತನಾಡುವುದಾದರೆ, ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಸ್, ರೇರ್ ಹೈಡ್ರಾಲಿಕ್ ಮೊನೊಶಾಕ್ ಸೆಟಪ್ ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಹೇಳುವುದಾದರೆ, ಫ್ರಂಟ್ ಡಿಸ್ಕ್ ಬ್ರೇಕ್ ಹಾಗೂ ರೇರ್ 130 ಎಂಎಂ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. ಜೊತೆಗೆ ಸಿಂಗಲ್ ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಒಳಗೊಂಡಿದೆ.

Honda Unicorn: ಭರ್ಜರಿ ವಿಶೇಷತೆಯೊಂದಿಗೆ ನವೀಕರಿಸಿದ ಹೋಂಡಾ ಯುನಿಕಾರ್ನ್ ಬೈಕ್ ಲಾಂಚ್

ಈ ಹೋಂಡಾ ಯುನಿಕಾರ್ನ್ ಬೈಕ್, ಹಳೆಯ ತಲೆಮಾರಿನ ಬೈಕ್‍ಗಳಂತೆ ಕಿಕ್ ಸ್ಟಾರ್ಟ್ ಜೊತೆಗೆ ಎಲೆಕ್ಟ್ರಿಕ್ ಸ್ಟಾರ್ಟ್ ಫೀಚರ್ ಅನ್ನು ಹೊಂದಿದ್ದು, ಆಕರ್ಷಕ ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಅವುಗಳೆಂದರೆ, ಪರ್ಲ್ ಇಗ್ನಿಯಸ್ ಬ್ಲಾಕ್, ಇಂಪೀರಿಯಲ್ ರೆಡ್ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಮತ್ತು ಪರ್ಲ್ ಸೈರನ್ ಬ್ಲೂ. ಈ ಬೈಕ್ 17 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದ್ದು, 140 kg ತೂಕವಿದೆ.

ಹೋಂಡಾ ಕಂಪನಿ ನವೀಕರಿಸಿದ 'ಯುನಿಕಾರ್ನ್' ಬೈಕ್ ಕೊಂಡುಕೊಳ್ಳುವ ಗ್ರಾಹಕರಿಗೆ ಭರ್ಜರಿ ವಾರಂಟಿ ಪ್ಯಾಕೇಜ್ ನೀಡುತ್ತಿದೆ. ಈ ಮೋಟಾರ್‌ಸೈಕಲ್ ಗೆ ವಿಶೇಷವಾಗಿ 10 ವರ್ಷ ವಾರಂಟಿ ಪ್ಯಾಕೇಜ್ ಅನ್ನು ನೀಡುತ್ತಿದೆ. ಅದರಲ್ಲಿ 3 ವರ್ಷ ಸ್ಟ್ಯಾಂಡರ್ಡ್ ಹಾಗೂ 7 ವರ್ಷ ಹೆಚ್ಚುವರಿಯಾಗಿ ವಿಸ್ತರಿಸಿಕೊಳ್ಳಬಹುದಾದ ವಾರಂಟಿ ಆಯ್ಕೆಯನ್ನು ಕೊಡುತ್ತಿದೆ. ಇದರಿಂದ ಮಾರಾಟ ಪ್ರಮಾಣ ಮತ್ತಷ್ಟು ವೃದ್ದಿಯಾಗಬಹುದು ಎಂದು ಕಂಪನಿ ನಂಬಿದೆ.

Honda Unicorn: ಭರ್ಜರಿ ವಿಶೇಷತೆಯೊಂದಿಗೆ ನವೀಕರಿಸಿದ ಹೋಂಡಾ ಯುನಿಕಾರ್ನ್ ಬೈಕ್ ಲಾಂಚ್

ಕಳೆದ ಕೆಲವು ದಿನಗಳ ಹಿಂದೆ, ಹೋಂಡಾ ಕಂಪನಿ OBD 2 ಎಮಿಷನ್ ಮಾನದಂಡಗಳ ಅನ್ವಯ ನವೀಕರಿಸಿದ ಡಿಯೋ ಸ್ಕೂಟರ್ ಅನ್ನು ಬಿಡುಗಡೆ ಮಾಡಿತ್ತು. ಈ ವರ್ಷದ ಆರಂಭದಲ್ಲಿ ಶೈನ್ 100 ಬೈಕ್ ಅನ್ನು ಲಾಂಚ್ ಮಾಡಿತ್ತು. ಇದರ ಹೊರತಾಗಿಯೂ ಕಂಪನಿಗೆ ಭಾರತದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗದೇ ಹಿನ್ನೆಡೆ ಅನುಭವಿಸುತ್ತಿದೆ.

ಮೇ ತಿಂಗಳ (2023) ಹೋಂಡಾ ಕಂಪನಿ ಮಾರಾಟ ವರದಿಯನ್ನು ಗಮನಿಸಿದಾಗ ಒಟ್ಟು 3,11,114 ಯುನಿಟ್‌ ದ್ವಿಚಕ್ರ ವಾಹನ ಮಾರಾಟ ಮಾಡಲು ಶಕ್ತವಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (3,20,844 ಯುನಿಟ್) ಶೇಕಡ 3.02% ಕುಸಿತ ಕಂಡಿದೆ. ಸದ್ಯ, ವಿಶೇಷ ವಾರಂಟಿಯೊಂದಿಗೆ ನವೀಕರಿಸಿದ ಯುನಿಕಾರ್ನ್ ಬೈಕ್ ಬಿಡುಗಡೆ ಮಾಡಿದ್ದು, ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

Article Published On: Thursday, June 15, 2023, 12:32 [IST]
English summary
Honda launches unicorn obd2 compliance details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+