ಆಕಾಶ ಮುಟ್ಟಿದ ಹೋಂಡಾ ದ್ವಿಚಕ್ರ ವಾಹನ ಮಾರಾಟ: ಆನೆ ನಡೆದಿದ್ದೇ ದಾರಿ ಎಂಬಂತಾಗಿದೆ!

ಸಾಲು ಸಾಲು ಹಬ್ಬಗಳಿದ್ದ ಕಾರಣ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಭರ್ಜರಿ ಮಾರಾಟ ಕಂಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 20 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ನವೆಂಬರ್ ತಿಂಗಳಲ್ಲಿ ಒಟ್ಟು 4,47,849 ಯುನಿಟ್‌ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿರುವುದಾಗಿ ಘೋಷಿಸಿದೆ.

ದೇಶೀಯವಾಗಿ ಹೋಂಡಾ ಕಂಪನಿಯು 4,20,677 ಯುನಿಟ್‌ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದರೆ, 27,172 ಯುನಿಟ್ ದ್ವಿಚಕ್ರ ವಾಹನಗಳನ್ನು ರಫ್ತು ಮಾಡಿರುವುದಾಗಿ ತಿಳಿಸಿದೆ. ಈ ಮೂಲಕ ವರ್ಷದ ಅತ್ಯಧಿಕ ಮಾರಟವನ್ನು ನವೆಂಬರ್ ತಿಂಗಳಲ್ಲಿ ನೋಡಿರುವುದಾಗಿ ಕಂಪನಿ ಬಹಿರಂಗಪಡಿಸಿದೆ. ಈ ಮೂಲಕ ದ್ವಿಚಕ್ರ ವಾಹನ ವಿಭಾಗದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

honda-motorcycle-scooter-india-sells-4-47-849-units-in-november

ಇತ್ತೀಚೆಗೆ ಹೊಸ ಬೈಕ್ ಬಿಡುಗಡೆ: ಪ್ರೀಮಿಯಂ ಮಧ್ಯಮ ಗಾತ್ರದ 350cc ಮೋಟಾರ್‌ಸೈಕಲ್ ವಿಭಾಗದಲ್ಲಿ ತನ್ನ ಸ್ಥಾನವನ್ನು ಹೆಚ್ಚಿಸಿಕೊಂಡು, ಹೊಸ ರೆಟ್ರೊ ಕ್ಲಾಸಿಕ್ CB350 ಅನ್ನು ವಿಶೇಷ ಬೆಲೆ ರೂ. 1,99,900 (ಎಕ್ಸ್ ಶೋ ರೂಂ, ದೆಹಲಿ)ಕ್ಕೆ ಹೋಂಡಾ ಬಿಡುಗಡೆ ಮಾಡಿದೆ. ಈ ಮೋಟಾರ್‌ಸೈಕಲ್ ಅನ್ನು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅತ್ಯಾಧುನಿಕ ಕಾರ್ಯಕ್ಷಮತೆಯೊಂದಿಗೆ ವಿನ್ಯಾಸಗೊಳಿಸಿರುವುದಾಗಿ ಕಂಪನಿ ಹೇಳಿದೆ.

ಈ ಹೊಸ ಮೋಟಾರ್‌ಸೈಕಲ್ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಗೆ ನೇರ ಪ್ರತಿಸ್ಪರ್ಧಿಯಾಗಿದ್ದು ರಾಯಲ್‌ ಎನ್‌ಫೀಲ್ಡ್ ಗ್ರಾಹಕರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ. CB350 ಮೋಟಾರ್‌ಸೈಕಲ್ ಅನ್ನು ಹೆಚ್ಚು ಪ್ರೀಮಿಯಂ ಬಿಗ್ ವಿಂಗ್ ಡೀಲರ್‌ ಶಿಪ್ ಮೂಲಕ ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ ಎಂದು ಹೋಂಡಾ ಕಂಪನಿ ತಿಳಿಸಿದೆ. ಹೋಂಡಾ ಇತ್ತೀಚೆಗೆ ಬೆಂಗಳೂರು ಮತ್ತು ನಾಗರ್‌ಕೋಯಿಲ್ (ತಮಿಳುನಾಡು) ನಲ್ಲಿ ಹೊಸ ಬಿಗ್‌ವಿಂಗ್ ಅನ್ನು ಉದ್ಘಾಟಿಸಿದೆ.

honda-motorcycle-scooter-india-sells-4-47-849-units-in-november

ವಿನ್ಯಾಸ: ವಿನ್ಯಾಸದ ವಿಷಯದಲ್ಲಿ ಹೊಸ ಇಂಧನ ಟ್ಯಾಂಕ್, ನವೀಕರಿಸಿದ ಸೈಡ್ ಪ್ಯಾನೆಲ್‌ಗಳು ಹೆಚ್ಚು ರೆಟ್ರೊ ಲುಕ್‌ನಲ್ಲಿ ಕಾಣುವ ಮಡ್‌ಗಾರ್ಡ್‌ಗಳು, ಮುಚ್ಚಿದ ಆರ್‌ಎಸ್‌ಯು ಟೆಲಿಸ್ಕೋಪಿಕ್ ಮುಂಭಾಗದ ಸಂಯೋಜನೆಯೊಂದಿಗೆ ಸಸ್ಪೆನ್ಷನ್ ಮತ್ತು ಹೊಸ ರೆಟ್ರೊ-ಥೀಮ್ ಎಕ್ಸಾಸ್ಟ್ ಹೊಸದಾಗಿ ಬಿಡುಗಡೆಯಾದ CB350 ಮೋಟಾರ್‌ಸೈಕಲ್ ಅನ್ನು ಬಹಳ ರೆಟ್ರೋ ಆಗಿ ಕಾಣುವಂತೆ ಮಾಡಿದೆ.

ಎಂಜಿನ್ ಮತ್ತು ಗೇರ್‌ಬಾಕ್ಸ್: ಹೊಸದಾಗಿ ಬಿಡುಗಡೆಯಾದ ಹೋಂಡಾ CB350 ಹೋಂಡಾ CB350 H'ness ಮತ್ತು ಹೋಂಡಾ CB350 RS ಮೋಟಾರ್‌ಸೈಕಲ್‌ಗಳಂತೆಯೇ 348.36cc, ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದೆ. ಈ ಎಂಜಿನ್ ಅನ್ನು 5,500rpm ನಲ್ಲಿ 20.8bhp ಪವರ್ ಮತ್ತು 3,000rpm ನಲ್ಲಿ 29.4Nm ಟಾರ್ಕ್ ಉತ್ಪಾದಿಸಲು ಟ್ಯೂನ್ ಮಾಡಲಾಗಿದೆ.

honda-motorcycle-scooter-india-sells-4-47-849-units-in-november

ಬೆಲೆ ಮತ್ತು ರೂಪಾಂತರಗಳು: ಹೊಸದಾಗಿ ಬಿಡುಗಡೆಯಾದ ಹೋಂಡಾ CB350 ಮೋಟಾರ್‌ಸೈಕಲ್ DLX ಮತ್ತು DLX Pro ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಹೋಂಡಾ CB350 ನ ಮೂಲ 'DLX' ರೂಪಾಂತರವು ರೂ. 1,99,900 (ಎಕ್ಸ್-ಶೋರೂಂ), ಆದರೆ 'DLX Pro' ರೂಪಾಂತರವು ರೂ. 2,17,800 (ಎಕ್ಸ್-ಶೋರೂಂ) ಬೆಲೆಯಲ್ಲಿದೆ.

ವೈಶಿಷ್ಟ್ಯಗಳು: ವೈಶಿಷ್ಟ್ಯಗಳ ಪಟ್ಟಿಗೆ ಬರುವುದಾದರೆ, ಹೋಂಡಾ CB350 ಮೋಟಾರ್‌ಸೈಕಲ್‌ನ ಟಾಪ್-ಸ್ಪೆಕ್ ಆವೃತ್ತಿಯು ಹೋಂಡಾ ಸ್ಮಾರ್ಟ್ ಫೋನ್ ವಾಯ್ಸ್ ಕಂಟ್ರೋಲ್ ಸಿಸ್ಟಮ್ (HSVCS), ಬ್ಲೂಟೂತ್ ಕನೆಕ್ಟಿವಿಟಿ, ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ (HSTC), ಡ್ಯುಯಲ್ ಚಾನೆಲ್ ABS, ಎಲ್ಇಡಿ ಲೈಟಿಂಗ್, ಅನಲಾಗ್ - ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಬಣ್ಣಗಳು: ಆಕರ್ಷಕ ರೆಟ್ರೊ-ಥೀಮ್ ವಿನ್ಯಾಸದ ಮೇಲೆ, ಹೊಸ ಹೋಂಡಾ CB350 ಮೋಟಾರ್‌ಸೈಕಲ್ 5 ವಿಭಿನ್ನ ಬಾಹ್ಯ ಬಣ್ಣಗಳಲ್ಲಿ ಲಭ್ಯವಿದೆ. ಈ ಆಯ್ಕೆಗಳಲ್ಲಿ ಪ್ರೆಶಿಯಸ್ ರೆಡ್ ಮೆಟಾಲಿಕ್, ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಮ್ಯಾಟ್ ಕ್ರಸ್ಟ್ ಮೆಟಾಲಿಕ್, ಮ್ಯಾಟ್ ಮಾರ್ಷಲ್ ಗ್ರೀನ್ ಮೆಟಾಲಿಕ್ ಮತ್ತು ಮ್ಯಾಟ್ ಡ್ಯೂನ್ ಬ್ರೌನ್ ಬಣ್ಣಗಳು ಸೇರಿವೆ.

Article Published On: Saturday, December 2, 2023, 8:30 [IST]
English summary
Honda motorcycle scooter india sells 4 47 849 units in november
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+