Honda SP 160 ಬೈಕ್ ಬಿಡುಗಡೆ... ಹೆಚ್ಚಿನ ಮಾಹಿತಿಗೆ ವಾಕರೌಂಡ್ ವಿಡಿಯೋ ನೋಡಿ...
ಹೋಂಡಾ ಮೋಟಾರ್‌ಸೈಕಲ್ ಸ್ಕೂಟರ್ ಇಂಡಿಯಾ (Honda Motorcycle & Scooter India) ದೇಶೀಯ ಮಾರುಕಟ್ಟೆಯಲ್ಲಿ ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಎಸ್‌ಪಿ 160 (Honda SP 160) ಮೋಟಾರ್‌ಸೈಕಲ್ ಬಿಡುಗಡೆ ಮಾಡಿದೆ. ಇದು, ಸಿಂಗಲ್ (single) ಹಾಗೂ ಟ್ವಿನ್ ಡಿಸ್ಕ್ (twin disc) ರೂಪಾಂತರ ಆಯ್ಕೆಯಲ್ಲಿ ಭಾರತದ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ.
ಇದರ ಬೆಲೆಗಳು ಕ್ರಮವಾಗಿ, ರೂ.1.17 ಲಕ್ಷ ಹಾಗೂ ರೂ.1.22 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿವೆ. ಈ ತಿಂಗಳ ಕೊನೆಯಲ್ಲಿ ವಿತರಣೆಗಳು ಶುರುವಾಗಲಿದೆ. ಹೋಂಡಾ ಎಸ್‌ಪಿ 160 ಬೈಕ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ದೊಡ್ಡದಾದ ಮೋಟಾರ್ ಹೊಂದಿದ್ದು, ಬಾಡಿ ಪ್ಯಾನೆಲ್ ಡಿಸೈನ್ 'ಎಸ್‌ಪಿ 125' ಬೈಕಿಗೆ ಹೋಲಿಕೆಯಾಗಿದೆ. ಈ ಬೈಕ್ ಕುರಿತು ವಿವರಾವಾದ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.
ಹೊಸ ಬೈಕ್ ವಿ - ಆಕಾರದ ಆಕರ್ಷಕ ಎಲ್‌ಇಡಿ ಹೆಡ್‌ಲೈಟ್, ಸ್ವಲ್ಪ ಅಗಲವಾದ ಫ್ಯುಯೆಲ್ ಟ್ಯಾಂಕ್, ಸಿಂಗಲ್ ಪೀಸ್ ಸೀಟ್, ಸಿಂಗಲ್ ಗ್ರಾಬ್ ರೈಲ್, ಕ್ರೋಮ್ ಶೀಲ್ಡ್ ನೊಂದಿಗೆ ಸೈಡ್-ಸ್ಲಂಗ್ ಎಕ್ಸಾಸ್ಟ್ ಮಫ್ಲರ್ ಅನ್ನು ಹೊಂದಿದೆ. ಹೋಂಡಾ ಎಸ್‌ಪಿ 160 ಮೋಟಾರ್‌ಸೈಕಲ್ ಯುವ ಗ್ರಾಹಕರನ್ನು ತನ್ನತ್ತ ಸೆಳೆಯುವ ಆರು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ.
ಅವುಗಳೆಂದರೆ, ಮ್ಯಾಟ್ ಡಾರ್ಕ್ ಬ್ಲೂ ಮೆಟಾಲಿಕ್, ಪರ್ಲ್ ಸ್ಪಾರ್ಟನ್ ರೆಡ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಪರ್ಲ್ ಇಗ್ನೈಟ್ ಬ್ಲ್ಯಾಕ್, ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್ ಹಾಗೂ ಪರ್ಲ್ ಡೀಪ್ ಗ್ರೌಂಡ್ ಗ್ರೇ. ನೀರಿಕ್ಷೆಯಂತೆಯೇ ಯುನಿಕಾರ್ನ್ ಮೋಟಾರ್‌ಸೈಕಲ್ ಆಧರಿಸಿದ ಎಂಜಿನ್ ಅನ್ನು ಹೋಂಡಾ ಎಸ್‌ಪಿ 160 ಬೈಕ್ ಹೊಂದಿದೆ.

ಇದರ, 162.7 ಸಿಸಿ ಏರ್ ಕೋಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್, 13.46 bhp ಗರಿಷ್ಠ ಪವರ್ ಹಾಗೂ 14.58 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಆದರೆ, ಯುನಿಕಾರ್ನ್ ಗಿಂತ ಎಸ್‌ಪಿ 160 ಬೈಕ್ 0.5 Nm ಟಾರ್ಕ್ ಹೆಚ್ಚುವರಿಯಾಗಿ ಹೊರಹಾಕುತ್ತದೆ. 5-ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.


Click it and Unblock the Notifications