Honda SP 160: ಗ್ರ್ಯಾಂಡ್ ಎಂಟ್ರಿ ಕೊಡಲಿದೆ ಹೋಂಡಾ ಎಸ್‌ಪಿ 160 ಬೈಕ್, ಭರ್ಜರಿ ಬಿಡ್ರಿ!
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (Honda Motorcycle & Scooter India) ತನ್ನ ದ್ವಿಚಕ್ರ ವಾಹನಗಳಿಂದಲೇ ದೇಶದಲ್ಲಿ ಸಖತ್ ಫೇಮಸ್ ಆಗಿದೆ. ಇತ್ತೀಚೆಗೆ, ಮಾರುಕಟ್ಟೆಯಲ್ಲಿ ಶೈನ್ 100 ಬೈಕ್ ಮತ್ತು ಡಿಯೋ 125 ಸ್ಕೂಟರ್ ಬಿಡುಗಡೆಯೊಂದಿಗೆ ದೊಡ್ಡಮಟ್ಟದಲ್ಲಿ ಸುದ್ದಿ ಮಾಡಿತ್ತು.
ಮುಂದಿನ ತಿಂಗಳು ಹೋಂಡಾ ಕಂಪನಿ, ಯುನಿಕಾರ್ನ್ (Unicorn) ಮೋಟಾರ್‌ಸೈಕಲ್ ಆಧರಿಸಿದ ಹೊಚ್ಚ ಹೊಸ ಎಸ್‌ಪಿ 160 (Honda SP 160) ಬೈಕ್ ಲಾಂಚ್ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ನೂತನ ಹೋಂಡಾ ಎಸ್‌ಪಿ 160 ಮೋಟಾರ್‌ಸೈಕಲ್ ಕೊಂಚ ಪ್ರೀಮಿಯಂ ಆಗಿರುವುದರಿಂದ ಯುನಿಕಾರ್ನ್ ಬೈಕ್ ಗಿಂತ ದುಬಾರಿಯಾಗಿರಲಿದ್ದು, ರೂ.1.15 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುವ ಸಾಧ್ಯತೆಯಿದೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಹೋಂಡಾ ಯುನಿಕಾರ್ನ್ ರೂ.1.10 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಲಭ್ಯವಿದೆ. ಮುಂಬರಲಿರುವ ಹೋಂಡಾ ಎಸ್‌ಪಿ 160 ಬೈಕ್, 162.7 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಪಡೆದಿರುವ ನೀರಿಕ್ಷೆಯಿದ್ದು, 12.9 bhp ಗರಿಷ್ಠ ಪವರ್ ಹಾಗೂ 14 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 5 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಾಗಲಿದೆ.
ವಿನ್ಯಾಸದ ವಿಚಾರಕ್ಕೆ ಬರುವುದಾದರೆ, ನೂತನ ಹೋಂಡಾ ಎಸ್‌ಪಿ 160 ಬೈಕ್ ಅತ್ಯಾಕರ್ಷಕ ಲುಕ್ ಹೊಂದಿರಲಿದೆ. ಜೊತೆಗೆ ಹೊಸ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದ್ದು, ವಿನೂತನ ವೈಶಿಷ್ಟ್ಯಗಳನ್ನು ಪಡೆದಿರಲಿದೆ. 12 ಲೀಟರ್ ಫ್ಯುಯೆಲ್ ಟ್ಯಾಂಕ್, 17 ಇಂಚಿನ ಅಲಾಯ್ ವೀಲ್ಸ್ ಗಳೊಂದಿಗೆ ಎರಡು ರೂಪಾಂತರಗಳ ಆಯ್ಕೆಯಲ್ಲಿ ದೇಶದ ಗ್ರಾಹಕರಿಗೆ ದೊರೆಯಬಹುದು.
ನೂತನ ಹೋಂಡಾ ಎಸ್‌ಪಿ 160 ಬೈಕ್ ಬಿಡುಗಡೆಯಾದ ಮೇಲೆ ದೊಡ್ಡಮಟ್ಟದಲ್ಲಿ ಪ್ರತಿಸ್ಪರ್ಧಿಗಳನ್ನು ಎದುರುಗೊಳ್ಳಬೇಕಾಗಿದೆ. ಯಮಹಾ FZ V4.0, ಸುಜುಕಿ ಜಿಕ್ಸರ್ 155 ಮತ್ತು ಎಂಟ್ರಿ ಲೆವೆಲ್ ಬಜಾಜ್ ಪಲ್ಸರ್ 150ಗೆ ಪೈಪೋಟಿ ನೀಡಬೇಕಾಗಿದೆ. ಅಲ್ಲದೆ, ಈ ಹೋಂಡಾ ಎಸ್‌ಪಿ 160 ಮೋಟಾರ್‌ಸೈಕಲ್ ಮುಂದಿನ ತಿಂಗಳು ಬಿಡುಗಡೆಯಾಗುತ್ತದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿರುವುದು ಬಿಟ್ಟರೆ, ಕಂಪನಿ ಕಡೆಯಿಂದ ಅಧಿಕೃತ ವಿವರ ದೊರೆತಿಲ್ಲ.
ಕಳೆದು ತಿಂಗಳು ನವೀಕರಣಗಳೊಂದಿಗೆ ಬಿಡುಗಡೆಯಾದ 'ಹೋಂಡಾ ಯುನಿಕಾರ್ನ್' ಬೈಕ್ ಬಗ್ಗೆ ಮಾತನಾಡುವುದಾದರೆ, ಇದರ ಎಂಜಿನ್ ಅನ್ನು ದೇಶಾದ್ಯಂತ ಜಾರಿಗೆ ಬಂದಿರುವ OBD 2 ಎಮಿಷನ್ ಮಾನದಂಡಗಳಿಗೆ ಅನ್ವಯ ಮೇಲ್ದರ್ಜೆಗೇರಿಸಲಾಗಿದೆ. ಇದರ 160 ಸಿಸಿ ಏರ್ ಕೋಲ್ಡ್ ಎಂಜಿನ್, 13 hp ಪವರ್, 14.58 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 5 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.
ಮುಂಭಾಗ ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗ ಹೈಡ್ರಾಲಿಕ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಪಡೆದಿದೆ. ಬ್ರೇಕಿಂಗ್ ವಿಚಾರಕ್ಕೆ ಬರುವುದಾದರೆ, ಮುಂದೆ, ಡಿಸ್ಕ್ ಬ್ರೇಕ್ ಹಾಗೂ ಹಿಂದೆ, 130 ಎಂಎಂ ಡ್ರಮ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದ್ದು, ಜೊತೆಗೆ ಸಿಂಗಲ್ ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ. 17 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಕೂಡ ಇದೆ.
ಹೋಂಡಾ ಯುನಿಕಾರ್ನ್ ಮೋಟಾರ್‌ಸೈಕಲ್ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ. ಕಿಕ್ ಸ್ಟಾರ್ಟ್ ಜೊತೆಯಲ್ಲಿ ಎಲೆಕ್ಟ್ರಿಕ್ ಸ್ಟಾರ್ಟ್ ಹೊಂದಿದೆ. ಪರ್ಲ್ ಇಗ್ನಿಯಸ್ ಬ್ಲಾಕ್, ಇಂಪೀರಿಯಲ್ ರೆಡ್ ಮೆಟಾಲಿಕ್ ಸೇರಿದಂತೆ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇನ್ನು, ಯುನಿಕಾರ್ನ್ ಮೋಟಾರ್‌ಸೈಕಲ್ ಆಧರಿಸಿದ ಹೊಸ ಎಸ್‌ಪಿ 160 ಮುಂದಿನ ತಿಂಗಳು ಲಾಂಚ್ ಆಗಲಿದ್ದು, ಗ್ರಾಹಕರಿಗೆ ಸಾಕಷ್ಟು ನೀರಿಕ್ಷೆಗಳು ಹೆಚ್ಚಾಗಿದೆ.
Source: Autocar India


Click it and Unblock the Notifications