Honda SP 160: ಹೋಂಡಾ ಎಸ್‌ಪಿ 160 ಬೈಕ್ ಬಿಡುಗಡೆ, ನೀರಿಕ್ಷೆಗೂ ಮೀರಿದ ವಿಶೇಷತೆಗಳಿವೆ
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (Honda Motorcycle & Scooter India) ದೇಶೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರ ವಾಹನ ಮಾರಾಟ ಮಾಡಿ, ಸೇಲ್ಸ್‌ನಲ್ಲಿ ಹೀರೋ ಬಳಿಕ, ಎರಡನೇ ಸ್ಥಾನದಲ್ಲಿದೆ. ಇತ್ತೀಚೆಗೆ, ಶೈನ್ 100 ಬೈಕ್, ಡಿಯೋ 125 ಸ್ಕೂಟರ್ ಬಿಡುಗಡೆಯೊಂದಿಗೆ ಭಾರೀ ಸದ್ದು ಮಾಡಿತ್ತು.
ಸದ್ಯ, ಹೋಂಡಾ ತನ್ನ ದ್ವಿಚಕ್ರ ವಾಹನ ಲೈನ್-ಅಪ್‌ಗೆ ಹೊಸ ಸೇರ್ಪಡೆಯಾಗಿ ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಎಸ್‌ಪಿ 160 (Honda SP 160) ಮೋಟಾರ್‌ಸೈಕಲ್ ಲಾಂಚ್ ಮಾಡಿದೆ. ಇದು, ಸಿಂಗಲ್ (single) ಹಾಗೂ ಟ್ವಿನ್ ಡಿಸ್ಕ್ (twin disc) ರೂಪಾಂತರ ಆಯ್ಕೆಯಲ್ಲಿ ಭಾರತದ ಗ್ರಾಹಕರಿಗೆ ಖರೀದಿಗೆ ಲಭ್ಯವಿದ್ದು, ಕ್ರಮವಾಗಿ, ರೂ.1.17 ಲಕ್ಷ ಹಾಗೂ ರೂ.1.22 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿವೆ. ಈ ತಿಂಗಳ ಕೊನೆಯಲ್ಲಿ ವಿತರಣೆಗಳು ಶುರುವಾಗಲಿದೆ.

ಹೋಂಡಾ ಎಸ್‌ಪಿ 160 ಬೈಕ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ದೊಡ್ಡದಾದ ಮೋಟಾರ್ ಹೊಂದಿದ್ದು, ಬಾಡಿ ಪ್ಯಾನೆಲ್ ಡಿಸೈನ್ 'ಎಸ್‌ಪಿ 125' ಬೈಕಿಗೆ ಹೋಲಿಕೆಯಾಗಿದೆ. ಆದರೂ, ವಿ - ಆಕಾರದ ಆಕರ್ಷಕ ಎಲ್‌ಇಡಿ ಹೆಡ್‌ಲೈಟ್, ಸ್ವಲ್ಪ ಅಗಲವಾದ ಫ್ಯುಯೆಲ್ ಟ್ಯಾಂಕ್, ಸಿಂಗಲ್ ಪೀಸ್ ಸೀಟ್, ಸಿಂಗಲ್ ಗ್ರಾಬ್ ರೈಲ್, ಕ್ರೋಮ್ ಶೀಲ್ಡ್ ನೊಂದಿಗೆ ಸೈಡ್-ಸ್ಲಂಗ್ ಎಕ್ಸಾಸ್ಟ್ ಮಫ್ಲರ್ ಅನ್ನು ಹೊಂದಿದೆ.
ಹೋಂಡಾ ಎಸ್‌ಪಿ 160 ಮೋಟಾರ್‌ಸೈಕಲ್ ಯುವ ಗ್ರಾಹಕರನ್ನು ತನ್ನತ್ತ ಸೆಳೆಯುವ ಆರು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. ಅವುಗಳೆಂದರೆ, ಮ್ಯಾಟ್ ಡಾರ್ಕ್ ಬ್ಲೂ ಮೆಟಾಲಿಕ್, ಪರ್ಲ್ ಸ್ಪಾರ್ಟನ್ ರೆಡ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಪರ್ಲ್ ಇಗ್ನೈಟ್ ಬ್ಲ್ಯಾಕ್, ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್ ಹಾಗೂ ಪರ್ಲ್ ಡೀಪ್ ಗ್ರೌಂಡ್ ಗ್ರೇ.

ನೀರಿಕ್ಷೆಯಂತೆಯೇ ಯುನಿಕಾರ್ನ್ ಮೋಟಾರ್‌ಸೈಕಲ್ ಆಧರಿಸಿದ ಎಂಜಿನ್ ಅನ್ನು ಹೋಂಡಾ ಎಸ್‌ಪಿ 160 ಬೈಕ್ ಹೊಂದಿದೆ. ಇದರ, 162.7 ಸಿಸಿ ಏರ್ ಕೋಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್, 13.46 bhp ಗರಿಷ್ಠ ಪವರ್ ಹಾಗೂ 14.58 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಆದರೆ, ಯುನಿಕಾರ್ನ್ ಗಿಂತ ಎಸ್‌ಪಿ 160 ಬೈಕ್ 0.5 Nm ಟಾರ್ಕ್ ಹೆಚ್ಚುವರಿಯಾಗಿ ಹೊರಹಾಕುತ್ತದೆ. 5-ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಲಭ್ಯವಿದೆ.
ಹೋಂಡಾ ಎಸ್‌ಪಿ 160 ಬೈಕ್ ಸಸ್ಪೆನ್ಷನ್ ಸೆಟಪ್ ಬಗ್ಗೆ ತಿಳಿಯುವುದಾದರೆ, ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಸ್, ರೇರ್ ಮೊನೊ-ಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಹೇಳುವುದಾದರೆ, ಫ್ರಂಟ್ 276ಎಂಎಂ, ರೇರ್ 220ಎಂಎಂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಇದರೊಟ್ಟಿಗೆ ಸಿಂಗಲ್ ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಆಯ್ಕೆಯನ್ನು ಪಡೆದಿದೆ. ಬೇಸ್ ಆವೃತ್ತಿ ರೇರ್, 130ಎಎಂ ಡ್ರಮ್ ಬ್ರೇಕ್ ಹೊಂದಿದೆ.
ಈ ಹೊಸ ಬೈಕ್, 17 ಇಂಚಿನ ಅಲಾಯ್ ವೀಲ್ಸ್ ಹೊಂದಿದ್ದು, ಫ್ರಂಟ್ 80/100 ಹಾಗೂ ರೇರ್ 130/70 ಅಳತೆಯ MRF ನೈಲೋಗ್ರಿಪ್ ಟೈರ್‌ನ್ನು ಪಡೆದಿದೆ. ಡಿಜಿಟಲ್ LCD ಇನ್ಸ್ಟ್ರುಮೆಂಟ್ ಕನ್ಸೋಲ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್, ಹಝರ್ಡ್ ಸ್ವಿಚ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ಸ್ಟ್ರುಮೆಂಟ್ ಕನ್ಸೋಲ್, ಸ್ಪೀಡೋಮೀಟರ್, ಓಡೋಮೀಟರ್, ಫ್ಯುಯೆಲ್ ಬಗ್ಗೆ ಮಾಹಿತಿ ಒದಗಿಸುತ್ತದೆ.
ನೂತನ ಹೋಂಡಾ ಎಸ್‌ಪಿ 160 ಬೈಕ್ ಗೆ ಬಜಾಜ್ ಪಲ್ಸರ್ P150, ಟಿವಿಎಸ್ ಅಪಾಚೆ RTR 160 ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಕೈಗೆಟುಕುವ ಬೆಲೆಯಲ್ಲಿ ನೀರಿಕ್ಷೆಗೂ ಮೀರಿದ ವೈಶಿಷ್ಟ್ಯದೊಂದಿಗೆ ಈ ಬೈಕ್ ಬಿಡುಗಡೆಯಾಗಿದ್ದು, ಕೆಲವೇ ದಿನಗಳಲ್ಲಿ ವಿತರಣೆಯು ಶುರುವಾಗಲಿದೆ. ಆ ಬಳಿಕ, ದೇಶೀಯ ಗ್ರಾಹಕರನ್ನು ಈ ಬೈಕ್ ಹೇಗೆ ಆಕರ್ಷಿಸುತ್ತದೆ ಎಂಬುದು ತಿಳಿಯಲಿದೆ. ಅಲ್ಲಿಯವರೆಗೆ ಕಾಯಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications