ಆಕರ್ಷಕ ಹೋಂಡಾ XL750 Transalp ಅಡ್ವೆಂಚರ್ ಬೈಕ್ ವಿಶೇಷತೆಗಳು

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ತನ್ನ ಹೊಸ ಹೋಂಡಾ XL750 ಟ್ರಾನ್ಸಾಲ್ಪ್ಎಂಬ ಅಡ್ವೆಂಚರ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ ಈ ಹೊಸ ಹೋಂಡಾ XL750 ಟ್ರಾನ್ಸಾಲ್ಪ್ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.10.99 ಲಕ್ಷವಾಗಿದೆ.

ಈ ಹೊಸ ಹೋಂಡಾ XL750 ಟ್ರಾನ್ಸಲ್ಪ್ (Honda XL750 Transalp) ಬೈಕ್ ಅನ್ನು ಜಪಾನ್‌ನಲ್ಲಿ ತಯಾರಿಸಲಾಗುತ್ತದೆ. ಹೋಂಡಾದಿಂದ ಹೆಚ್ಚಿನ ಸಾಮರ್ಥ್ಯದ ಬೈಕುಗಳಂತೆ XL750 ಅನ್ನು CBU ಮಾರ್ಗದ ಮೂಲಕ ಭಾರತಕ್ಕೆ ತರಲಾಗುತ್ತದೆ.ಭಾರತದಲ್ಲಿನ ಬ್ರ್ಯಾಂಡ್‌ನ ಪ್ರೀಮಿಯಂ ಬಿಗ್‌ವಿಂಗ್ ಟಾಪ್‌ಲೈನ್ ಡೀಲರ್‌ಶಿಪ್‌ಗಳ ಮೂಲಕ ಪ್ರತ್ಯೇಕವಾಗಿ ಮಾರಾಟವಾಗಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, Honda XL750 ಟ್ರಾನ್ಸಾಲ್ಪ್ ಗಾಗಿ ಬುಕಿಂಗ್ ಅನ್ನು ಪ್ರಸ್ತುತ ಮೊದಲ 100 ಗ್ರಾಹಕರಿಗೆ ಮಾತ್ರ ತೆರೆಯಲಾಗಿದೆ.

Honda XL750 Transalp

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯ ಪ್ರಕಾರ, ಹೋಂಡಾ XL750 Transalp ಬೈಕಿನ ವಿತರಣೆಯನ್ನು ಈ ವರ್ಷದ ನವೆಂಬರ್ ತಿಂಗಳಿನಲ್ಲಿ ಪ್ರಾರಂಭವಾಗುತ್ತವೆ. ಹೊಸ ಹೋಂಡಾ XL750 Transalp ಅಡ್ವೆಂಚರ್ ಬೈಕುಗಳ ಹೆಚ್ಚಿನ ಯುನಿಟ್ ಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುತ್ತದೆಯೇ ಎಂಬುದು ಇನ್ನೂ ತಿಳಿಯಬೇಕಿದೆ.

ಬಣ್ಣಗಳ ಆಯ್ಕೆ:ಈ ಹೊಸ ಹೋಂಡಾ XL750 Transalp ಬೈಕ್ ರಾಸ್ ವೈಟ್ ಮತ್ತು ಮ್ಯಾಟರ್ ಬ್ಯಾಲಿಸ್ಟಿಕ್ ಬ್ಲ್ಯಾಕ್ ಎಂಬ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಹೋಂಡಾ XL750 ಟ್ರಾನ್ಸಾಲ್ಪ್ ಹಿಮಾಲಯದ ಕಠಿಣ ಭೂಪ್ರದೇಶಗಳನ್ನು ಹಾದುಹೋಗುತ್ತದೆ. ಇನ್ನು ಸಿಟಿಯ ಟ್ರಾಫಿಕ್ ನಲ್ಲಿ ಕೂಡ ಈ ಬೈಕ್ ಅನ್ನು ಸುಲಭವಾಗಿ ಓಡಿಸಬಹುದು.

Honda XL750 Transalp

ನಿಕಲ್-ಸಿಲಿಕಾನ್ ಕಾರ್ಬೈಡ್ ಕೋಟಿಂಗ್, ವೋರ್ಟೆಕ್ಸ್ ಫ್ಲೋ ಡಕ್ಟ್ಸ್, ಥ್ರೊಟಲ್-ಬೈ-ವೈರ್ ಟೆಕ್, ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ (HSTC), ಎಂಜಿನ್ ಬ್ರೇಕಿಂಗ್ ಮತ್ತು ಮಲ್ಟಿಪಲ್ ರೈಡ್ ಮೋಡ್‌ಗಳು ಈ ಎಂಜಿನ್‌ನ ವೈಶಿಷ್ಟ್ಯಗಳಾಗಿವೆ. ಹೊಸ ಹೋಂಡಾ XL750 ಟ್ರಾನ್ಸಲ್ಪ್ ಬೈಕ್ ಸ್ಪೋರ್ಟ್, ಸ್ಟ್ಯಾಂಡರ್ಡ್, ರೈನ್, ಗ್ರಾವೆಲ್ ಮತ್ತು ಯೂಸರ್ ಎಂಬ ರೈಡ್ ಮೋಡ್‌ಗಳನ್ನು ಹೊಂದಿವೆ.

ಫೀಚರ್ಸ್: ಈ ಬೈಕಿನಲ್ಲಿರುವ ಹೆಚ್ಚುವರಿ ಫೀಚರ್ಸ್, 5.0-ಇಂಚಿನ TFT ಡಿಸ್ ಪ್ಲೇ, ಹೋಂಡಾ ಸ್ಮಾರ್ಟ್ ವಾಯ್ಸ್ ಕಂಟ್ರೋಲ್ ಸಿಸ್ಟಮ್ (HSVCs), ತುರ್ತು ನಿಲುಗಡೆ ಸಿಗ್ನಲ್, ಆಟೋಮ್ಯಾಟಿಕ್ ಟರ್ನ್ ಸಿಗ್ನಲ್ ರದ್ದುಗೊಳಿಸುವಿಕೆ ಮತ್ತು ಹೆಚ್ಚಿನದನ್ನು ಒಳಗೊಂಡಿದೆ. ಅಲ್ಲದೆ, TFT ಡಿಸ್ ಪ್ಲೇ ಸ್ಪೀಡೋಮೀಟರ್, ಟ್ಯಾಕೋಮೀಟರ್, ಗೇರ್-ಸ್ಥಾನ ಇಂಡಿಕೇಟರ್, ಫ್ಯೂಯಲ್ ಗೇಜ್, ಇಂಧನ ಬಳಕೆ ಮತ್ತು ಇತರ ಎಂಜಿನ್ ಮಾಹಿತಿಗಳನ್ನು ತೋರಿಸುತ್ತದೆ.

Honda XL750 Transalp

ಎಂಜಿನ್: ಹೊಸ ಹೋಂಡಾ XL750 ಟ್ರಾನ್ಸಲ್ಪ್ ಬೈಕಿನಲ್ಲಿ 755cc, ಟ್ವಿನ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್‌ನೊಂದಿಗೆ 270-ಡಿಗ್ರಿ ಕ್ರ್ಯಾಂಕ್‌ನಿಂದ ಚಾಲಿತವಾಗಿದೆ. ಈ ಎಂಜಿನ್ 90.51 bhp ಮತ್ತು 75 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ ನೊಂದಿಗೆ ಜೋಡಿಸಲಾಗಿದೆ.

ಸಸ್ಪೆನ್ಷನ್ ಮತ್ತು ಬ್ರೇಕಿಂಗ್ ಸಿಸ್ಟಂ: ಹೋಂಡಾ XL750 ಟ್ರಾನ್ಸಾಲ್ಪ್ ಬೈಕ್ ಸಸ್ಪೆನ್ಷನ್ ಬಗ್ಗೆ ಹೇಳುವುದಾದರೆ, ಈ ಹೊಸ ಬೈಕಿನಲ್ಲಿ ಹಗುರವಾದ ಸ್ಟೀಲ್ ಡೈಮಂಡ್ ಫ್ರೇಮ್, ಮುಂಭಾಗದಲ್ಲಿ 43mm SFF-CA USD ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಪ್ರೊ-ಲಿಂಕ್ ಮೊನೊ ಸಸ್ಪೆನ್ಷನ್‌ನೊಂದಿಗೆ ಬರುತ್ತದೆ. ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಡ್ಯುಯಲ್ 310 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 256 ಎಂಎಂ ಸಿಂಗಲ್ ಡಿಸ್ಕ್ ಬ್ರೇಕ್ ಸೇರಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, November 1, 2023, 11:30 [IST]
English summary
Honda xl750 transalp adventure motorcycle top things details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+