IBW 2023: ಟ್ರಯಂಫ್ ಕಂಪನಿಯಿಂದ 8 ಆಕರ್ಷಕ ಬೈಕ್ ಬಿಡುಗಡೆ, ಆರಂಭಿಕ ಬೆಲೆ 9 ಲಕ್ಷ ರೂಪಾಯಿ
ಟ್ರಯಂಫ್ ಮೋಟಾರ್‌ಸೈಕಲ್ಸ್ (Triumph Motorcycles) ಇಂಡಿಯಾ ಬೈಕ್ ವೀಕ್ (India Bike Week - IBW 2023)ನಲ್ಲಿ ಬೊನ್ನೆವಿಲ್ಲೆ ಸ್ಟೆಲ್ತ್ ಎಡಿಷನ್ (Bonneville Stealth Edition) ಮೋಟಾರ್‌ಸೈಕಲ್‌ಗಳನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.
ಪ್ರಖ್ಯಾತ ಬ್ರಿಟಿಷ್ ವಾಹನ ತಯಾರಕ (British Two Wheeler Mnufacturers) ಕಂಪನಿಯಾಗಿ ಗುರುತಿಸಿಕೊಂಡಿರುವ ಟ್ರಯಂಫ್, ಸದ್ಯ ಈ ಸರಣಿ ಬೈಕ್‌ಗಳನ್ನು ತನ್ನ ತಾಯ್ನಾಡಿನಲ್ಲಿ ಲಾಂಚ್ ಮಾಡಿದೆ. ಅಲ್ಲಿನ ಗ್ರಾಹಕರು ಇವುಗಳಿಗೆ ಮನಸೋತಿದ್ದಾರೆ. ಹೊಸ ಮೋಟಾರ್‌ಸೈಕಲ್‌ಗಳು ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ದೇಶದಲ್ಲಿ ಪ್ರೀಮಿಯಂ ಬೈಕ್‌ಗಳನ್ನು ಇಷ್ಟಪಡುವವರನ್ನು ಖಂಡಿತ ಸೆಳೆಯುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಟ್ರಯಂಫ್ ಕಂಪನಿ ಬಿಡುಗಡೆಗೊಳಿಸಿರುವ ಸ್ಟೆಲ್ತ್ ಸರಣಿಯ 8 ಮೋಟಾರ್‌ಸೈಕಲ್‌ಗಳು, ಭಾರತ ಮಾರುಕಟ್ಟೆಯಲ್ಲಿ ರೂ.9.09 ಲಕ್ಷದಿಂದ ರೂ.12.85 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಬುಕ್ಕಿಂಗ್ ಸಹ ಶುರುವಾಗಿದ್ದು, ಮುಂದಿನ ವರ್ಷದ (2024) ಮಾರ್ಚ್ ತಿಂಗಳಿಂದ ವಿತರಣೆಗಳು ಶುರುವಾಗಲಿದೆ. ಈ ಮಾದರಿಗಳು ದೇಶದಲ್ಲಿ 1 ವರ್ಷದ ಅವಧಿಗೆ ಮಾತ್ರ ಲಭ್ಯವಿರಲಿವೆ.
ಟ್ರಯಂಫ್ ಬೊನ್ನೆವಿಲ್ಲೆ ಸ್ಟೆಲ್ತ್ ಎಡಿಷನ್ ಮೋಟಾರ್‌ಸೈಕಲ್‌ಗಳು ಯಾವುದೆಂದು ನೋಡುವುದಾದರೆ, ಸ್ಪೀಡ್‌ಮಾಸ್ಟರ್‌ರೆಡ್ ಸ್ಟೆಲ್ತ್ ಎಡಿಷನ್, ಬಾಬರ್ ಪರ್ಪಲ್ ಸ್ಟೆಲ್ತ್ ಎಡಿಷನ್, ಬೊನೆವಿಲ್ಲೆ ಟಿ100 ಬ್ಲೂ ಸ್ಟೆಲ್ತ್ ಎಡಿಷನ್, ಬೊನ್ನೆವಿಲ್ಲೆ ಟಿ120 ಬ್ಲೂ ಸ್ಟೆಲ್ತ್ ಎಡಿಷನ್, ಸ್ಪೀಡ್ ಟ್ವಿನ್ 1200 ರೆಡ್ ಸ್ಟೆಲ್ತ್ ಎಡಿಷನ್, ಸ್ಪೀಡ್ ಟ್ವಿನ್ ಸ್ಟೆಲ್ತ್ ಎಡಿಷನ್ ಮತ್ತು ಟಿ120 ಬ್ಲ್ಯಾಕ್ ಸ್ಟೆಲ್ತ್ ಎಡಿಷನ್ ಸೇರಿವೆ.

ಸ್ಟೆಲ್ತ್ ಎಡಿಷನ್ ಪೋರ್ಟ್‌ಫೋಲಿಯೊದ ಪ್ರತಿಯೊಂದು ಬೈಕ್ ಟ್ಯಾಂಕ್‌ಗಳು ಕೈಯಲ್ಲಿ ಚಿತ್ರಿಸಲಾದ (ಹ್ಯಾಂಡ್ - ಪೇಂಟೆಡ್) ವಿನ್ಯಾಸವನ್ನು ಹೊಂದಿವೆ. ಇದು ರಸ್ತೆಯಲ್ಲಿ ಈ ಮೋಟಾರ್‌ಸೈಕಲ್‌ನ್ನು ವಿಭಿನ್ನವಾಗಿ ಕಾಣುವಂತೆ ಮಾಡುತ್ತದೆ. ಈ ಬೈಕ್‌ಗಳು ಕೊಂಚ ಐಷಾರಾಮಿ ಆಗಿವೆ. ಆದರೆ, ಉಳಿದ ಬೊನ್ನೆವಿಲ್ಲೆ ಸರಣಿ ಮೋಟಾರ್‌ಸೈಕಲ್‌ಗಳಂತೆ ಎಂಜಿನ್, ವೈಶಿಷ್ಟ್ಯ ಹಾಗೂ ಬ್ರೇಕಿಂಗ್ ಸಿಸ್ಟಮ್ ಅನ್ನು ಒಳಗೊಂಡಿವೆ.
ಇದೇ ಇಂಡಿಯಾ ಬೈಕ್ ವೀಕ್‌ನಲ್ಲಿ ಬಿಡುಗಡೆಯಾಗಿರುವ 'ಕವಾಸಕಿ ಡಬ್ಲ್ಯೂ 175 ಸ್ಟ್ರೀಟ್' ಬೈಕ್ ಬಗ್ಗೆ ಮಾತನಾಡುವುದಾದರೆ, ಇದು ರೂ.1.35 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. 177 ಸಿಸಿ ಸಿಂಗಲ್-ಸಿಲಿಂಡರ್, ಫ್ಯುಯಲ್-ಇಂಜೆಕ್ಟೆಡ್ ಎಂಜಿನ್ ಹಾಗೂ 5 - ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಮುಂಭಾಗ ಡಿಸ್ಕ್, ಹಿಂಭಾಗ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.
ಅದೇ ತರಹ, ಲಾಂಚ್ ಆಗಿರುವ 'ಎಪ್ರಿಲಿಯಾ ಆರ್‌ಎಸ್ 457 ಬೈಕ್' ಕುರಿತು ಹೇಳುವುದಾದರೆ, ಇದು ರೂ.4.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 457 ಸಿಸಿ ಲಿಕ್ವಿಡ್ - ಕೂಲ್ಡ್, ಪ್ಯಾರಲಲ್ ಟ್ವಿನ್ ಎಂಜಿನ್ ಹಾಗೂ 6 ಸ್ವೀಡ್ ಗೇರ್ ಬಾಕ್ಸ್ ಅನ್ನು ಪಡೆದಿದೆ. ಫ್ರಂಟ್ ಹಾಗೂ ರೇರ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ. 5 - ಇಂಚಿನ TFT ಡಿಸ್ಪ್ಲೇಯನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








