Ultraviolette: ಬೆಂಗಳೂರಿನ ಅಲ್ಟ್ರಾವೈಲೆಟ್ F77 ಸ್ಪೇಸ್ ಎಡಿಷನ್ ಕೇವಲ 90 ಸೆಕೆಂಡುಗಳಲ್ಲಿ ಸೋಲ್ಡ್ ಔಟ್

ಭಾರತದಲ್ಲಿ ಅಲ್ಟ್ರಾವೈಲೆಟ್ (Ultraviolette) ಐಷಾರಾಮಿ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಸಂಸ್ಥೆಯಾಗಿ ಖ್ಯಾತಿ ಗಳಿಸಿದೆ. ಸೋಮವಾರ ಎಫ್77 ಸ್ಪೇಸ್ ಎಡಿಷನ್ (F77 Space Edition) ಇ-ಬೈಕ್‌ನ್ನು ದೇಶೀಯ ಮಾರುಕಟ್ಟೆಯಲ್ಲಿ ಅದ್ದೂರಿಯಾಗಿ ಲಾಂಚ್ ಮಾಡಿತ್ತು. ನಿನ್ನೆ (ಮಂಗಳವಾರ) ಬುಕ್ಕಿಂಗ್ ಕೂಡ ಶುರು ಮಾಡಿತ್ತು.

ಸದ್ಯ, ದೊರೆತ್ತಿರುವ ಮಾಹಿತಿ ಪ್ರಕಾರ, ಬುಕ್ಕಿಂಗ್ ವಿಂಡೋ ತೆರೆದ ಕೇವಲ 90 ಸೆಕೆಂಡುಗಳಲ್ಲಿ ಎಲ್ಲ ಎಫ್77 ಸ್ಪೇಸ್ ಎಡಿಷನ್ ಬೈಕ್‌ಗಳು ಮಾರಾಟವಾಗಿವೆ ಎಂದು ಅಲ್ಟ್ರಾವೈಲೆಟ್ ಅಧಿಕೃತವಾಗಿ ಘೋಷಣೆ ಮಾಡಿದೆ. ಚಂದ್ರಯಾನ - 3 ಗೌರವಾರ್ಥ ಈ ಮೋಟಾರ್‌ಸೈಕಲ್ ಬಿಡುಗಡೆಗೊಳಿಸಿದ್ದ ಕಂಪನಿ, ಕೇವಲ 10 ಯುನಿಟ್ ಮಾತ್ರ ತಯಾರಿಸಲಾಗುತ್ತದೆ ಎಂದು ತಿಳಿಸಿತ್ತು.

Ultraviolette: ಬೆಂಗಳೂರಿನ ಅಲ್ಟ್ರಾವೈಲೆಟ್ F77 ಸ್ಪೇಸ್ ಎಡಿಷನ್ ಕೇವಲ 90 ಸೆಕೆಂಡುಗಳಲ್ಲಿ ಸೋಲ್ಡ್ ಔಟ್

ನೂತನ ಅಲ್ಟ್ರಾವೈಲೆಟ್ ಎಫ್77 ಸ್ಪೇಸ್ ಎಡಿಷನ್ ಎಲೆಕ್ಟ್ರಿಕ್ ಬೈಕ್‌ನ್ನು ದೀರ್ಘಕಾಲ ಬಳಕೆ ಬರುವಂತೆ ಮಾಡಲು ಕಂಪನಿಯು ಸಾಕಷ್ಟು ಅತ್ಯಾಧುನಿಕವಾಗಿ ವಿನ್ಯಾಸಗೊಳಿಸಿದೆ. ಅದರಲ್ಲೂ ವಿಮಾನ ತಯಾರಿಕೆಯಲ್ಲಿ ಉಪಯೋಗಿಸುವ ಅಲ್ಯೂಮಿನಿಯಂನಿಂದ ತಯಾರಿಸುತ್ತಿದೆ. ಇದರಿಂದ ಈ ಬೈಕ್, ಇತರೆ ಅಲ್ಟ್ರಾವೈಲೆಟ್ ಎಫ್77 ಸರಣಿ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಗಳಿಗೆ ಹೋಲಿಸಿದರೆ, ಕೊಂಚ ದುಬಾರಿ ದರ ಪಡೆದಿದೆ.

ಬರೋಬ್ಬರಿ ರೂ.5.6 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಹೊಸ ಅಲ್ಟ್ರಾವೈಲೆಟ್ ಎಫ್77 ಸ್ಪೇಸ್ ಎಡಿಷನ್ ಇ-ಬೈಕ್ ಸಿಗಲಿದೆ. ಈ ಮೋಟಾರ್‌ಸೈಕಲ್ ನಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 30.2 kW ಅಥವಾ 40.5 hp ಗರಿಷ್ಠ ಪವರ್ ಹಾಗೂ 100 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಮೂಲಕ ಪವರ್ ಫುಲ್ ಎಲೆಕ್ಟ್ರಿಕ್ ಬೈಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಹೊಚ್ಚ ಹೊಸ ಅಲ್ಟ್ರಾವೈಲೆಟ್ ಎಫ್77 ಸ್ಪೇಸ್ ಎಡಿಷನ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್, ಯಾವ ಕಾರಿಗೂ ಕಮ್ಮಿ ಇಲ್ಲದಂತೆ ಭಾರತದ ರಸ್ತೆಗಳಲ್ಲಿ ಸಂಪೂರ್ಣ ಚಾರ್ಜಿನಲ್ಲಿ 307 km ರೇಂಜ್ ನೀಡುತ್ತದೆ. ಕೇವಲ 2.9 ಸೆಕೆಂಡುಗಳಲ್ಲಿ 0 - 60 km/hr ವೇಗವನ್ನು ಪಡೆಯಲಿದ್ದು, 152 km/hr ಟಾಪ್ ಸ್ವೀಡ್ ಹೊಂದಿದೆ.

ಸಾಮಾನ್ಯ ಅಲ್ಟ್ರಾವೈಲೆಟ್‌ ಎಫ್77 ಎಲೆಕ್ಟ್ರಿಕ್ ಬೈಕ್, ಆರಂಭಿಕ ಬೆಲೆ ರೂ.3.8 ಲಕ್ಷ (ಎಕ್ಸ್ ಶೋರೂಂ)ದಿಂದ ಶುರುವಾಗಲಿದೆ. ಈ ಮೋಟಾರ್‌ಸೈಕಲ್ ಮೂರು ಟ್ರಿಮ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಶ್ಯಾಡೋ, ಲೈಟ್ನಿಂಗ್ ಮತ್ತು ಲೇಸರ್. ರೂಪಾಂತರಗಳಿಗೆ ಅನುಗುಣವಾಗಿ ಸಂಪೂರ್ಣ ಚಾರ್ಜಿನಲ್ಲಿ 307 km ರೇಂಜ್ ಕೊಡುತ್ತದೆ. ಕೇವಲ 7.8 ಸೆಕೆಂಡುಗಳಲ್ಲಿ 0-100 km/hr ವೇಗವನ್ನು ಪಡೆಯಲಿದೆ.

ಈ ಅಲ್ಟ್ರಾವೈಲೆಟ್‌ ಎಫ್77 ಇ-ಬೈಕ್ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. 5 ಇಂಚಿನ TFT ಇನ್ಸ್ಟ್ರುಮೆಂಟಲ್ ಕನ್ಸೋಲ್‌, LED ಲೈಟಿಂಗ್, ನ್ಯಾವಿಗೇಷನ್ ಸೇರಿಂದಂತೆ ವಿವಿಧ ಫೀಚರ್ಸ್ ಒಳಗೊಂಡಿದ್ದು, ಫ್ರಂಟ್, ರೇರ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. ಇದರೊಟ್ಟಿಗೆ ಸಸ್ಪೆನ್ಷನ್ ಸೆಟಪ್ ಸಹ ಅತ್ಯಾಧುನಿಕವಾಗಿದೆ.

ಪ್ರಸ್ತುತ, ಅಲ್ಟ್ರಾವೈಲೆಟ್‌ ಬೆಂಗಳೂರಿನ ತನ್ನದೇ ಉತ್ಪಾದನಾ ಘಟಕದಲ್ಲಿ ತಯಾರಿಸುವ ಎಫ್77 ಎಲೆಕ್ಟ್ರಿಕ್ ಬೈಕ್‌ಗಳನ್ನು 2016ರಿಂದ ಅಭಿವೃದ್ಧಿಪಡಿಸುವುದನ್ನು ಆರಂಭಿಸಿತ್ತು. 2019ರಲ್ಲಿ ಮೊದಲ ಬಾರಿಗೆ ಪ್ರದರ್ಶನ ಮಾಡಿತ್ತು. ಆದರೆ, ಬಿಡುಗಡೆ ಮಾಡಿರಲಿಲ್ಲ. ಕೊರೊನಾ ಅವಧಿಯಲ್ಲಿ ಈ ಮೋಟಾರ್‌ಸೈಕಲ್ ಸಾಕಷ್ಟು ನವೀಕರಣಗಳನ್ನು ಪಡೆದುಕೊಂಡಿತ್ತು. ಅಂತಿಮವಾಗಿ ಕಳೆದ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, August 23, 2023, 15:21 [IST]
English summary
Just 90 seconds ultraviolette f77 space edition e bike sold out
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+